ಲಬಂಗಿ – Labangi
ಲಬಂಗಿ
ನಿರೀಕ್ಷೆಯಲ್ಲಿ ಅಧ್ಯಾಯ -1
ನಾನೊಬ್ಬ ಸಾಮಾನ್ಯ ಮನುಷ್ಯ-ಹಸುರೆಲೆಯಂತೆ. ಕಾಲಿಟ್ಟರೆ ಶಬ್ಧವೂ ಆಗಲಾರದು-ಹುಲ್ಲಿನೆಳೆಯಂತೆ. ಅಂಗೈಯಲ್ಲಿಟ್ಟು ಕೊಂಡು ಊದಿದರೆ ಹಾರಿ ಹೋಗುವೆ-ಸತ್ತ ಪ್ರಾಣಿಯ ಕಣ್ಣುಗಳಂತೆ ಕಣ್ಣುಗಳೂ ತೆರೆದಿವೆ, ಆದರೂ ಏನೂ ನೋಡಲಾರದವನಂತೆ, ಏನೂ ಬಯಸಲಾರದವನಂತೆ.
ನಿಜ ಹೇಳುವೆ, ನಾನು ರೋಲ್ಸ್ ರಾಯ್ಸ್ ಕಾರನ್ನು ಬಯಸಲಿಲ್ಲ. ದೆಹಲಿಯ ಕುರ್ಚಿಯ ಕನಸನ್ನು ನಾನೆಂದೂ ಕಾಣಲಿಲ್ಲ. ಬದುಕಿನ ಹಣಕ್ಕೆ – ಐಶ್ವರ್ಯಕ್ಕೆ ಎಂದೂ ಮಹತ್ವವನ್ನು ಕೊಡಲಿಲ್ಲ. ಆದರೆ, ಒಂದೇ ಒಂದು ಸಣ್ಣ ತಪ್ಪು ಮಾಡಿಬಿಟ್ಟೆ! ಅದರ ಘೋರ ಬೆಲೆಯನ್ನು ನಾನು ತೀರಿಸಬೇಕಾಗಿದೆ. ನನ್ನ ಶರೀರ ಜರಡಿಯಾಗಿದೆ. ನನ್ನ ಪಕ್ಕೆಲುಬುಗಳನ್ನು ನೀವು ಕಿಟಕಿಯ ಸಲಾಕೆಗಳಂತೆ ಎಣಿಸಬಲ್ಲಿರಿ, ನನ್ನ ಹೊಟ್ಟೆ ಕುಸಿದು ಹಾಳು ಬಾವಿಯೊಂದರ ನೆನಪನ್ನು ತರುತ್ತದೆ.
ನಾನೀಗ ನನ್ನ ವಿಶಾಲ ಎದೆಯ ಬಗ್ಗೆ ಹೇಳುವೆ. ಮೊದಲು ಇದರಲ್ಲಿ ರಕ್ತನಾಳಗಳಿದ್ದವು, ಮಾಂಸ-ಗ್ರಂಥಿಗಳಿದ್ದವು, ರಕ್ತವಿತ್ತು. ಈಗ ಇದು ಕೇವಲ ಭಗ್ನಾವಶೇಷ; ರಕ್ತನಾಳಗಳ ಭಗ್ನಾವಶೇಷ, ರಕ್ತದ ಭಗ್ನಾವಶೇಷ, ಹುಳುಗಳಿಂದ ತುಂಬಿದ ಭಗ್ನಾವಶೇಷ.
ಒಂದರ ಅನಂತರ ಇನ್ನೊಂದು ಹುಳು ಬಂದಿತು. ಇಲ್ಲ, ಒಂದೆರಡು ಹುಳುಗಳಷ್ಟೇ ಬಂದವು. ಆಮೇಲೆ ಮನೆ ಮಾಡಿಕೊಂಡವು, ಅನಂತರ ಎಂಬತ್ತನಾಲ್ಕು ಆಸನಗಳನ್ನು ಅನುಭವಿಸಿದವು. ನಿರೋಧ್ ಬಗ್ಗೆ ಅವಕ್ಕೇನೂ ತಿಳಿದಿರಲಿಲ್ಲ. ಕೆಲವೇ ದಿನಗಳಲ್ಲಿ ನನ್ನ ಶರೀರ ಹುಳುಗಳಿಂದ ವ್ಯಾಕುಲಗೊಂಡಿತು. ನನ್ನ ಅಂತಿಮ ಮಾಂಸ-ಗ್ರಂಥಿಯನ್ನೂ ಅವು ಸಿಗರೇಟಿನ ಕೊನೆಯ ದಮ್ ನಂತೆ ಸೇರಿದವು.
ಭಗ್ನಾವಶೇಷಗಳಲ್ಲಿ ಬದುಕುವ ಈ ಪರೋಪಜೀವಿಗಳ ಬಗ್ಗೆ ಮೊದಲು ನಾನು ದ್ವೇಷ ತಾಳುತ್ತಿದ್ದೆ. ಈಗ ಪ್ರೀತಿಸುತ್ತೇನೆ. ನಾನು ಟಿ.ಬಿ. ಪೇಶೆಂಟ್ ಎಂದು ವೈದ್ಯರು ಹೇಳುತ್ತಾರೆ. ನಾನು ಕೊನೆಯ ಹಂತದಲ್ಲಿದ್ದೇನೆ. ಹೆಚ್ಚು ದಿನ ಬದುಕಲಾರೆ ಎಂದೇ ವೈದ್ಯರು ಹೇಳುತ್ತಾರೆ. ಬದುಕಿನ ಬಗ್ಗೆ ಈಗ ಭರವಸೆಯಿಲ್ಲ! ಬಹುಶಃ ಈ ಕಾರಣಕ್ಕಾಗಿಯೇ ಶಿಕ್ಷೆ ಕೊನೆಗೊಳ್ಳುವುದಕ್ಕೂ ಮೊದಲೇ ನನ್ನನ್ನು ಜೈಲಿನಿಂದ ಹೊರಗೆಸೆಯಲಾಗಿದೆ.
ಇಂದು ಮುಂಜಾನೆ ನಾನು ಮುಂಬಯಿಗೆ ಬಂದೆ. ಬಾಂಬೆ ದಿ ಬ್ಯೂಟಿಫುಲ್! ಲಯನ್ಸ್ ಕ್ಲಬ್ ನ ಬೋರ್ಡ್ ನಿಮ್ಮನ್ನು ಸ್ವಾಗತಿಸುತ್ತದೆ. ಏರ್-ಇಂಡಿಯಾದ ಮಹಾರಾಜ, ಬಾಗಿ ನಿಮಗೆ ನಮಸ್ಕರಿಸುತ್ತಾನೆ. ಶಿವಸೇನೆಯ ಹುಲಿಯ ತೆರೆದ ದವಡೆಗಳಲ್ಲಿ ಆಹ್ವಾನವಿದೆ. ನಾನು ದವಡೆಯಂಥ ಒಂದು ಆಸ್ಪತ್ರೆಗೆ ನುಗ್ಗುತ್ತೇನೆ. ನಾನು ಮರಳಿ ಹೋಗಲಾರೆನೆಂದು ನನಗನ್ನಿಸುತ್ತದೆ. ಹುಲಿಯ ದವಡೆಗಳಲ್ಲಿ ನುಗ್ಗಿ ಮರಳಿ ಬರುವ ಪ್ರಯೋಗವನ್ನು ಇದುವರೆಗೆ ಯಾರೂ ಮಾಡಿಲ್ಲ. ಸರ್ಕಸ್ಸಿನ ಆಟಗಾರನೊಬ್ಪ ಈ ಪ್ರಯೋಗ ಮಾಡಿದ್ದ. ಆದರೆ, ಅವನು ತನ್ನ ತಲೆಯನ್ನಷ್ಟೇ ಒಳಗೆ ಹಾಕಿದ್ದ ನಾನಂತೂ ನನ್ನ ಇಡೀ ಶರೀರವನ್ನೇ ಒಳಗೆ ತಳ್ಳುತ್ತಿರುವೆ. ಜಯ ಭಜರಂಗ ಬಲೀ !
ನನ್ನೆದುರು ಓರ್ವ ವೈದ್ಯರು ನಿಂತಿದ್ದಾರೆ. ಕೆಮ್ಮಿನ ತೀವ್ರ ಆಫಾತಗಳು ನನ್ನ ಶರೀರದ ಅಂಗಾಂಗಗಳನ್ನೇ ಕಂಪಿಸಿ ಬಿಟ್ಟಿವೆ. ಸ್ನಾಯುಗಳ ಭಗ್ನಾವಶೇಷದಲ್ಲಿ ಧೂಳು ಹಾರುತ್ತಿದೆ.
“ಪ್ಲೀಸ್ ಡಾಕ್ಟರ್, ನಾನು ತುಂಬಾ ದೂರದಿಂದ ಬಂದಿದ್ದೇನೆ. ಇಲ್ಲಿಗೆ ಅಪರಿಚಿತ. ನನ್ನನ್ನು ಸೇರಿಸಿಕೊಂಡರೆ ನಿಮ್ಮ ಉಪಕಾರವನ್ನು ಮರೆಯೋಲ್ಲ”- ನಾನು ಪ್ರಾರ್ಥಿಸುತ್ತೇನೆ.
“ಜಾಗ ಇಲ್ಲ”- ಉತ್ತರ ಬರುತ್ತದೆ.
ಎಷ್ಟೊಂದು ಕ್ರೂರ! ಎಷ್ಟೊಂದು ಭಯಾನಕ! ಸಾವಿನ ಅಂಚಿನಲ್ಲಿ ಮುಂದುವರಿದು ಬರುತ್ತಿರುವ ಒಬ್ಪ ಮನುಷ್ಯನಿಗೆ ಆಸ್ಪತ್ರೆಯ ಒಂದು ಮಂಚವೂ ಖಾಲಿಯಿಲ್ಲ. ಇದ್ದರೂ, ಅಂಥ ವ್ಯಕ್ತಿಯ ಜೇಬಿನಲ್ಲಿ ಶಕ್ತಿಯಿಲ್ಲ – ನಾನು ನನ್ನ ಜೇಬುಗಳಿಗೆ ಕೈಹಾಕುತ್ತೇನೆ. ಎರಡು ಕೈಗಳೂ ತೊಡೆಗಳ ತಣ್ಣನೆ ಮಾಂಸದ ಮುದ್ದೆಯ ಮೇಲೆ ಸ್ಥಿರವಾಗುತ್ತವೆ. ಇಲ್ಲಿ ‘ಗ್ಲೂಟಿಯಸ್-ಮ್ಯಾಕ್ಸಿಮಸ್’ನ ಕೇಂದ್ರಬಿಂದುವಿದೆ. ಇಲ್ಲಿ ಫಿಮರ್ ಮತ್ತು ಪೈಲ್ವಿಸ್ ಎಂಬ ಮೂಳೆಗಳಿವೆ. ಇಲ್ಲಿ ಕುರಿಯುವ ಲಾವಾರಸವೂ ಇದೆ. ಇಷ್ಟಿದ್ದಾಗ್ಯೂ ಏನೂ ಇಲ್ಲ.
ಹುಲಿಯ ದವಡೆಗಳಿಂದ ಸುರಕ್ಷಿತವಾಗಿ ಹೊರಬಂದು ನಾನು ಸಾರ್ವಜನಿಕ ಆಸ್ಪತೆಯೊಂದರೆಡೆಗೆ ಹೆಜ್ಜೆಗಳನ್ನು ಹಾಕುತ್ತೇನೆ. ಮಾರ್ಗದಲ್ಲಿ ಎರಡು ಸಲ ವಾಂತಿಯಾಗುತ್ತದೆ. ರಕ್ತದ ಮತ್ತೆರಡು ಭಗ್ನಾವಶೇಷಗಳು ಕಣ್ಣೆದುರು ಮೂಡುತ್ತವೆ. ಈ ಭಗ್ನಾವಶೇಷಗಳು ಭವ್ಯವಾಗಿಲ್ಲ. ಬಿಸಿಯೂ ಆಗಿಲ್ಲ, ಇವು ಮಮ್ತಾಜಳ ಸಮಾಧಿಯಂತೆ ಶೀತಲ. ಇಲ್ಲಿ ಕೂತು ಒಂದು ಟ್ರಾಜೆಡಿ ಹಾಡನ್ನು ಹಾಡುವ
ಮನಸ್ಸಾಗುತ್ತದೆ. ಸಮಯಾವಕಾಶವಿಲ್ಲ. ಬಹು ಕಷ್ಟದಿಂದ ನಾನು ಆಸ್ಪತ್ರೆಯ ಗೇಟಿನವರೆಗೆ ಹೋಗುತ್ತೇನೆ.
ಮೊದಲ ದೃಷ್ಟಿಯಲ್ಲೇ ಮನಸ್ಸಿನಲ್ಲಿ ಪ್ರಶ್ನೆ, ಉದ್ಭವಿಸುತ್ತದೆ ಇದು ಅಸ್ಪತ್ರೆಯೋ ಅಥವಾ ‘ರೋಗಿ ಶವ’ಗಳ ಸ್ಮಶಾನವೋ? ಶವಗಳು ಇಲ್ಲಿ ಆರೋಗ್ಯ ಹೊಂದಲು ಬರುತ್ತವೆಯೋ ಅಥವಾ ಮೃತ್ಯುವನ್ನು ಭೇಟಿಯಾಗಲು ಬರುತ್ತವೆಯೋ? ಸ್ವಚ್ಛತೆಯ ಬಗ್ಗೆ ಇಲ್ಲಿ ಕೇಳುವಂತೆಯೇ ಇಲ್ಲ. ಕೊಳಕು-ಹೊಲಸು ವಾತಾವರಣದಿಂದಾಗಿ ಉಸಿರು ಕಟ್ಟುತ್ತಿದೆ. ಅನಂತರ, ಶವಗಳು, ಸಾಯಲೋಸುಗ ಇಲ್ಲಿಯ ತನಕ ಬರುವ ಕಷ್ಟವನ್ನೇಕೆ ಮಾಡುತ್ತವೆ ಎಂಬ ಪ್ರಶ್ನೆ ಎದುರಾಗುತ್ತದೆ.
“ಔಟ್ ಪೇಶೆಂಟ್ ವಾರ್ಡ್ ಯುವ ಕಡೆಗಿದೆ?” ಒಬ್ಪ ವಾರ್ಡ್ ಬಾಯನ್ನು ತಡೆಯುತ್ತಾ ಪ್ರಶ್ನಿಸುತ್ತೇನೆ. ಉತ್ತರವಾಗಿ ಅವನು ತನ್ನ ಜೇಬಿಗೆ ಕೈ ಹಾಕುತ್ತಾನೆ. ಕೈಗೆ ಒಂದು ಸಣ್ಣ ಬಾಕ್ಸ್ ಬರುತ್ತದೆ. ಬಾಕ್ಸ್ ತೆರೆದು ಬೀಡಿಯೊಂದನ್ನು ಅವನು ತುಟಿಯೊಳಗೆ ಸಿಗಿಸಿಕೊಳ್ಳುತ್ತಾನೆ. ಬೀಡಿ ಹೊತ್ತಿಸುತ್ತಾನೆ. ಆಮೇಲೆ ಹೊಗೆಯ ಗುಮ್ಮಟ ಉಗುಳಿ ಬೆರಳಿನಿಂದ ಸಂಜ್ಞೆ ಮಾಡುತ್ತಾನೆ. ಇಬ್ಪರು ನರ್ಸ್ಗಳು ಕಿಲಕಿಲನೆ ನಗುತ್ತಾ ನನ್ನೇದುರಿಂದ ಹಾದು ಹೋಗುತ್ತಾರೆ.
ಡಾಕ್ಟರ್ ಸಾತ್ ವಲೇಕರ್ ಎದುರು ನಾನು ನನ್ನ ಎಕ್ಸ್-ರೇ ಮತ್ತು ರಿಪೋರ್ಟ್ಗಳನ್ನಿಡುತ್ತೇನೆ ‘ಕಟಕ್’ ಜೈಲಿನಿಂದ ಬಿಡುಗಡೆಯುದಾಗ ಅಲ್ಲಿಯ ವೈದ್ಯರು ನನಗೆ ನನ್ನ ರಿಪೋರ್ಟ್ ಕೈಗೆ ಹಾಕುತ್ತಾ ಮುಂಬಯಿಗೆ ಹೋಗುವಂತೆ ಸಶಕ್ತವಾಗಿ ಹೇಳಿದ್ದರು. ನಾನು ಮುಂಬಯಿಯಲ್ಲಿದ್ದೇನೆ; ಸಾರ್ವಜನಿಕ ಆಸ್ಪತ್ರೆಯ ವೈದ್ಯರೆದುರು ನಿಂತಿದ್ದೇನೆ. ನನ್ನ ಮುಖದ ಭಾವನ ಕರುಣಾಜನಕವಾಗಿದೆ. ನನ್ನ ಶರೀರದಲ್ಲಿ ಜಮಾಯಿಸಿದ ರಕ್ತದ ಬಿಸಿ ಕಲೆಗಳು ಕಬ್ದಿಣದ ಎದೆಯನ್ನು ಕರಗಿಸಿದರೂ ನನಗಾಶ್ಚರ್ಯವಾಗುವುದಿಲ್ಲ. ನಾನು ನಿಕ್ಕರ್ ಮಾತ್ರ ಧರಿಸಿದ್ದೇನೆ.
ಡಾಕ್ಟರ್ ಸಾತ್ ವಲೇಕರ್ ನನ್ನ ಎಕ್ಸ್-ರೇ ಮತ್ತು ರಿಪೋರ್ಟ್ ಗಳ ಮೇಲೆ ಒಮ್ಮೆ ದೃಷ್ಟಿ ಹಾಯಿಸಿ ನನ್ನನ್ನು ನಖ-ಶಿಖಾಂತ ಗಮನಿಸುತ್ತಾರೆ. ಆಮೇಲೆ ಪ್ರೀತಿಯಿಂದ, ಸಹಜವಾಗಿ “ಈಗಂತೂ ಏನೂ ಆಗಲ್ಲ! ಒಂದು ವಾರದ ಅನಂತರ ಬಾ” ಎನ್ನು.ತ್ತಾರೆ.
ನನಗೆ ಆಶ್ವರ್ಯವಾಗುವುದಿಲ್ಲ. ದುಃಖವೂ ಆಗುವುದಿಲ್ಲ. ಯಾಕೆ? ಈ ವೈದ್ಯರ ಹೃದಯ ಕಲ್ಲಲ್ಲ, ಇಲ್ಲದಿದ್ದರೆ ನೀರಾಗುತ್ತಿತ್ತು! ಈ ವೈದ್ಯರ ಹೃದಯ ಕಬ್ಬಿಣವೂ ಅಲ್ಲ. ಇಲ್ಲದಿದ್ದರೆ ಕರಗುತ್ತಿತ್ತು! ಈ ವೈದ್ಯರ ಹೃದಯ ಸಾಮಾನ್ಯ ಮನುಷ್ಯನ ಹೃದಯದಂತಿದೆ. ಸಾಮಾನ್ಯ ಮನುಷ್ಯವ ಹೃದಯದ ಪರಿವರ್ತನೆ ಈ ಯುಗದಲ್ಲಂತೂ ಅಸಾಧ್ಯ.
ಹತಾಶನಾಗಿ ವೈದ್ಯರ ಮುಖವನ್ನೇ ನೋಡುತ್ತೇನೆ. ಆ ಮುಖದಲ್ಲಿ ಲೇಶ ಮಾತ್ರವೂ ದುಃಖವಿಲ್ಲ. ಯಾಕಿರಬೇಕು? ಅವನು ನನ್ನ ಸಹೋದರನಲ್ಲ, ಅಪ್ಪನಲ್ಲ, ನಮ್ಮ ಸಂಬಂಧ, ವೈದ್ಯ ಮತ್ತು ರೋಗಿಯದಷ್ಟೇ. ಅವನು ನಮ್ರತೆಯಿಂದ ಉತ್ತರಿಸಿ ತನ್ನ ಕರ್ತವ್ಯವನ್ನು ಪಾಲಿಸಿದ್ದಾನೆ.
ನನ್ನ ಕಣ್ಣುಗಳೆದುರು ಕತ್ತಲು ಕವಿಯುತ್ತಿದೆ. ಈ ಕತ್ತಲು ಎಣ್ಣೆಯಲ್ಲಿ ಅದ್ದಿದ ಹತ್ತಿಯಂತೆ ನುಣುಪು ಅಥವಾ ಆಕ್ಟೋಪಸ್ನ ಹಿಡಿತದಂತೆ ಭಯಾನಕ ಬೇರೊಂದು ಆಸ್ಪತ್ರೆಗೆ ಸೇರಲು ಹೋಗಬೇಕಾದ ಅಗತ್ಯವಿಲ್ಲ. ಇಚ್ಛೆಯೂ ಇಲ್ಲ ಮುಂಬಯಿ ನಗರದಲ್ಲಿ ಆರೋಗ್ಯ ವ್ಯಕ್ತಿಗಳಿಗಿಂತ ಅನಾರೋಗ್ಯ ವ್ಯಕ್ತಿಗಳ ಸಂಖ್ಯೆಯೇ ಹೆಚ್ಚು. ನನ್ನಂತಂತೇ ಎಲ್ಲರ ಸ್ಥಿತಿ ಮೆದು. ನನ್ನಂತೆಯೇ ಎಲ್ಲರೂ ಕೊನೆಯುಸಿರೆಳೆಯುತ್ತಿದ್ದಾರೆ. ಸ್ಪೆಶಲ್ ಕ್ಯಾಬಿನ್ನಿನಲ್ಲಿ, ಜನರಲ್ ವಾರ್ಡ್ನಲ್ಲಿ…. ಇದು ಎಲ್ಲರ ಬದುಕು ಅಂತ್ಯವಾಗುವುದರಲ್ಲಿದೆ. ಇಂದು ಮುಂಬಯಿ ನಗರ ನಾಶವಾಗುವುದರಲ್ಲಿದೆ.
ಇಲ್ಲಿ ನನಗೆ ಮನೆಯಿಲ್ಲ. ಸಂಬಂಧಿಕರಿಲ್ಲ. ನಿಜ ಹೇಳಬೇಕೆಂದರೆ ಸಂಬಂಧಿಕರಿದ್ದಾರೆ, ಆದರೆ ಅವರು ನನ್ನವರಾಗಿಲ್ಲ. ನನ್ನ ಒಡಹುಟ್ಟಿದ ಸಹೋದರನಿಗೆ ‘ನನಗೆ ಸ್ಪಲ್ಪ ಹಣ ಸಿಕ್ಕರೆ ನಾನು ಪಂಚಗನಿಗೆ ಹೋಗಿ ಬಿಡುತ್ತೇನೆ’ ಎಂದು ಪ್ರಾರ್ಥಿಸಿದೆ. ಅವನ ಹತ್ತಿರ ಹಣವೆಲ್ಲಿದೇ? ಇದ್ದರೂ ನನಗೇಕೆ ಕೊಡುತ್ತಾನೇ?
ನನ್ನ ಸಹೋದರ ವಿವಾಹಿತ ಅತನಿಗೆ ಓರ್ವ ಪತ್ನಿ ಮತ್ತು ಮೂವರು ಮಕ್ಕಳಿದ್ದಾರೆ. ಈಗಿನವಳು ಅವನ ಮೂರನೆಯ ಹೆಂಡತಿ. ಈ ಮೊದಲಿನ ಇಬ್ಪರು ಬಂಜೆಯರಾಗಿದ್ದರಿಂದ ಅವರನ್ನು ಹೊರಹಾಕಲಾಗಿತ್ತು. ಈ ಮೂರನೆಯ ಹೆಂಡತಿಯು ಮದುವೆಯಾದ ಒಂಬತ್ತು ತಿಂಗಳಿಗೆ ಸರಿಯಾಗಿ ಒಮ್ಮೆಲೇ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿ ಹೆಂಡತಿಯಾಗಿ ತನ್ನ ಇಂಟರ್ ನ್ಯಾಶನಲ್ ಅಧಿಕಾರವನ್ನು ಖಾಯಂ ಮಾಡಿದ್ದಳು.
ಸಂಜೆ ಕರಗುವುದರಲ್ಲಿದೆ, ಹೊಗೆ ಕಾರುವ ಮಿಲ್ಗಳ ಚಿಮಣಿಗಳು ಆಕಾಶವನ್ನೆಲ್ಲಾ ಮಲಿನಗೊಳಿಸಿದೆ; ಸಮುದ್ರವನ್ನು ಮಣ್ಣಾಗಿಸಿದೆ. ಮನಗಳನ್ನಲ್ಲಾ ಮಣ್ಣಾಗಿಸಿದೆ, ಮನೆಯಲ್ಲಿ ವಾಸಿಸುವ ಮನುಷ್ಯರನ್ನು ಮಲಿನಗೊಳಿಸಿದೆ.
ಊರುಗೋಲಿಲ್ಲದ ಕುಂಟನಂತೆ ನಡೆಯುತ್ತಾ, ಬೀಳುತ್ತಾ, ಎಡವುತ್ತಾ ನಾನು ಮರಳಿ ಬೋರೀ ಬಂದರ್ ಸ್ಟೇಷನ್ನಿಗೆ ಬರುತ್ತೇನೆ. ಬೆಳಗ್ಗೆ ಇಲ್ಲಿಂದಲೇ ಹೊರಟು ನನ್ನ ದಿನಚರಿಯನ್ನು ಪ್ರಾರಂಭಿಸಿದ್ದೆ. ಸೂರ್ಯನೊಂದಿಗೆ ನಗರದಲ್ಲಿ ಅಲೆದಿದ್ದೆ. ಸೂರ್ಯ ಅಸ್ತನಾದಾಗ ನಾನೂ ನನ್ನ ಸುತ್ತಾಟನ್ನು ಮಾರೈಸಿ, ಅಸ್ತನಾಗಲು ಯೋಗ್ಯ ಸ್ಥಳವನ್ನು ಹುಡುಕುತ್ತಿದ್ದೇನೆ.
ನನ್ನ ಬಲಗಡೆ ಹದಿಮೂರನೆಯ ಪ್ಲಾಟ್ ಫಾರಂ ಇದೆ. ಎಡಗಡೆಗೆ ಹನ್ನೆರಡನೆಯ ಪ್ಲಾಟ್ ಪಾರಂ ಇದೆ. ಇನ್ನು ನಡೆಯುವ ಶಕ್ತಿ ನನ್ನಲ್ಲಿಲ್ಲ. ಆದರೂ ಇನ್ನೂ ಕೆಲವು ಹೆಜ್ಜೆಗಳನ್ನು ಹಾಕುತ್ತಾ ತಲೆಯ ಮೇಲೆ ನೇತಾಡುತ್ತಿದ್ದ ಗಡಿಯಾರದ ಕೆಳಗಿನ ಬೆಂಜೊಂದರಲ್ಲಿ ನಾನು ಬೀಳುತ್ತೇನೆ. ತಲೆ ಲೋಹದ ಹಿಡಿಕೆಗೆ ಬಡಿದಿದ್ದರಿಂದಾಗಿ ಹಣೆಯ ಭಾಗ ಉಬ್ಪಿ ಕಂದು ಬಣ್ಣಕ್ಕೆ ತಿರುಗುತ್ತದೆ. ಕಂಪಿಸುವ ಕೈಗಳಿಂದ ಕಂದು ಬಣ್ಣವನ್ನು ಸ್ಪರ್ಶಿಸಲು ಪ್ರಯತ್ನಿಸುತ್ತೇನೆ. ಆದರೆ ಸಾಧ್ಯವಾವುಗುದಿಲ್ಲ. ನನ್ನ ಕೈ ನಿಶ್ಯಕ್ತಿಯಿಂದಾಗಿ ನನ್ನೆದೆಯ ಮೇಲೆ ನಿಶ್ಚಲವಾ”
ಬಿದ್ದಿದೆ.
ನಾನು ಗೋಪಾಲಪುರಕ್ಕೆ ಹೋಗಬೇಕಾಗಿದೆ. ನನ್ನ ಜೇಬುಗಳು ಖಾಲಿ. ಹೇಗೆ ಹೋಗುವುದು? ನನ್ನಲ್ಲಿ ನಡೆಯಲು ಶಕ್ತಿಯಿಲ್ಲ. ಹೇಗೆ ಹೋಗಲಿ? ನನ್ನ ಕಾಲುಗಳ ಮೇಲೆ ನಿಂತುಕೊಳ್ಳಲೂ ಶಕ್ತಿಯಿಲ್ಲ!
ನನ್ನ ಸಾವು ಇಲ್ಲಿಯೇ ಸಂಭವಿಸುವುದೇ? ಇಲ್ಲ! ನಾನಿಲ್ಲಿ ಸಾಯಬೇಕಿಲ್ಲ ಈ ಕಲ್ಲು ಭೂಮಿಯಲ್ಲಿ ನನ್ನ ಪ್ರಾಣ ತ್ಯಜಿಸಬೇಕಿಲ್ಲ. ನಾನು, ಮಿನಿಸ್ಕರ್ಟ್ ನಲ್ಲಿ ಬೀಗುವ ಹುಡುಗಿಯ ಶ್ವೇತ ಕಾಲುಗಳಂತಹ ನದಿ ತೀರಕ್ಕೆ ಹೋಗಿ ಕೊನೆಯುಸಿರೆಳೆಯುವೆ. ‘ಗುಡು ಬೈ ಮೈ ಡಿಯರ್’ –ನನ್ನ ಶ್ವೇತ ಜೀವ, ತೇವ ಕಣ್ಣುಗಳಿಂದ ಆಕಾಶದ ಅನಂತದಲ್ಲಿ ಲೀನವಾಗಬೇಕು. ನಾನು ತೀರದ ಮರಳಲ್ಲಿ ಬಿದ್ದಿರುವೆ. ಆಗ ನಾನು ಒಂಟಿಯಾಗಿರುವೆ – ಒಂಟಿ.
ಯಾರಿಗೂ ನಾಟಕೀಯವಾಗಿ ಕಣ್ಣೀರು ಸುರಿಸಬೇಕಾಗಿಲ್ಲ, ನನ್ನ ಅಂತಿಮ ಸಂಸ್ಕಾರ ಮಾಡುವ ಅಗತ್ಯವಾಗುವುದಿಲ್ಲ. ಕೋಬರ್ ಎಂಬ ‘ಸೊಳ್ಳೆ’ಯೊಂದು ಸತ್ತು ಹೋಗಿದೆ ಎಂದು ಯಾರಿಗೂ ಗೊತ್ತಾಗುವುದೂ ಇಲ್ಲ (‘ಸೊಳ್ಳೆ’ಶಭ್ದ ನನ್ನದಲ್ಲ). ಮತ್ತೆ ಗೊತ್ತಾದರೆ? ಅದಕ್ಕೂ ಮೊದಲೇ ನನ್ನ ಶವ ನದಿಯಲ್ಲಿ ಹರಿದುಹೋಗಿ ಜಲಚರಗಳ ಮಧ್ಯೆ ಹಂಚಿ ಹೋಗಿ ಬಿಡಬಹುದು. ನನ್ನ ಶರೀರದ ಒಂದು ಚೂರು ಅಂಶವೂ ಯಾರಿಗೂ ಸಿಗದಿರಬಹುದು.
ಒಂದು ವೇಳೆ ಕೈಯೊಂದು ಮೇಲೆ ತೇಲಿ ಬಂದರೆ? ಆ ಕೈ ಯಾರ ನಾಶ ಮಾಡಬಲ್ಲದು? ‘ಸಹೋದರರೇ, ಸಹೋದರಿಯರೆ? ನನ್ನ ಕಪಾಲದಲ್ಲಿ ಮೂರನೆಯ ಕಣ್ಣಿದೆ, ನಾನು ನಿಮ್ಮ ಮುಖದೊಳಗೆ ಅಡಗಿರುವ ಮುಖವನ್ನು ನೋಡಬಲ್ಲೆ’ನೆಂದು ಆ ಕೈ ತನ್ನ ತುಟಿ ಎರಡು ಮಾಡಿಯಂತು ಹೇಳುವುದಿಲ್ಲ.
ಒಂದು ವೇಳೆ ಕಣ್ಣೊOದು ಮೇಲೆ ತೇಲಿ ಬಂದರೆ? ಅದು ಕೇವಲ ಕರುಣೆಯ ದೃಷ್ಟಿಯಿಂದ ಮಾತ್ರ ನೋಡುತ್ತಿರುತ್ತೆ. ಕೊಲೆಯಾದ ಕುರಿಯ ಕಣ್ಣೆಂದು ಯಾರಾದರೂ ತಿಳಿಯಬಹುದು. ಇನ್ನು ಯಾರಾದರೂ ಆದ ಬೇರೆ ಮೀನಿನ ಕಣ್ಣೆಂದು ಹೇಳಬಹುದು, ಮತ್ತೊಬ್ಬ, ಈ ಕಣ್ಣಿಗೆ ತನ್ನದೇ ಆದ ಬೇರೆ ಅಸ್ತಿತ್ವವಿದೆ ಎಂದು ಯೋಚಿಸಬಹುದು. ಮತ್ತೆ ನನ್ನ ಕಣ್ಣಿನ ವಿವಶ ಶವ, ಜೀವಂತ ಶವ ಕೇಳಲಾರದಂತಹ ಮತ್ತು ನೋಡಲಾರದಂತಹ ತಮಾಷೆಯನ್ನು ನೋಡುತ್ತಿರುತ್ತದೆ.
ಒಂದು ವೇಳೆ ನಾಲಿಗೆ, ಮೇಲೆ ತೇಲಿ ಬಂದರೆ? ಬಹುಶಃ ಅದು ಈಜುತ್ತಾ- ಈಜುತ್ತಾ ಅಡಗಿಕೊಳ್ಳುತ್ತಾ-ಬಚ್ಚಿಟ್ಟುಕೊಳ್ಳುತ್ತಾ ತೀರಕ್ಕೆ ಬರಬಹುದು. ತೀರದ ಮರಳಿನಲ್ಲಿ ಆಳವಾದ ಹೊಂಡವೊಂದನ್ನು ತೋಡಬಹುದು. ಆ ಹೊಂಡದಲ್ಲಿ ಮೆಲ್ಲನೆ ತಾನೇ ಸ್ವತಃ ಮಲಗಿ ನಿದರಿಸಬಹುದು. ಬಿರುಗಾಳಿ ಆ ಹೊಂಡವನ್ನು ಸಮತಲಗೊಳಿಸುವ ಕೆಲಸ ಮಾಡಬಹುದು. ಈ ರೀತಿ ನಾಲಿಗೆ, ಶವದ ನಾಲಿಗೆಯನ್ನು, ಯಾರೆಯೇ ಹೂತು ಹೋಗಿಬಿಡುತ್ತದೆ. (ಈ ದೇಶದಲ್ಲಿ ಸುಖವಾಗಿರಬೇಕೆಂದರೆ ನಾಲಿಗೆಯನ್ನು ಹೂತು ಬಿಡಿ-ಈ ಸುವರ್ಣ ಸೂಕ್ತಿ ಯಾವ ಮಹಾತ್ಮನದ್ದಲ್ಲ, ನನ್ನದೇ.)
ಒಂದು ವೇಳೆ ಕಾಲೊಂದು ಮೇಲೆ ತೇಲಿ ಬಂದರೆ? ಬಹುಶಃ ಓಟ ಕೀಳಬಹುದು. ಮೊದಲು ನೀರಿನ ಮೇಲೆ, ಆಮೇಲೆ ಮರಳು, ಮಣ್ಣು ಮತ್ತು ಒಣಗಿದ ಎಲೆಗಳ ಮೇಲೆ, ಹರಿಯುವ ಝರಿಗಳ ಮೇಲೇ, ಉಬ್ಪು-ತಗ್ಗುದಿಣ್ಣೆಗಳ ಮೇಲೆ. ಅವಂತರ ಅಕಸ್ಮಾತ್ ನಿಶ್ಚಲಗೊಂಡು ಬಿಡಬಹುದು. ಅದು ಸ್ವಲ್ಪ ಹೊತ್ತು ನಿಟ್ಟುಸಿರುಬಿಟ್ಟು. ಕಣ್ತುಂಬ ಹಸುರು ಕಾಟೇಜನ್ನು ನೋಡಬಹುದು. ಹಸುರು ಕಾಟೇಜು ಬೆಂಗಾಡಾಗಿರುತ್ತದೆ. ಕಾಲು, ನಿರಾಸೆಯಿಂದ ಅಲ್ಲೆ ಕುಸಿದು ಬೀಳುವುದು (ಹಸುರು ಕಾಟೇಜ್ನ ಹೆಸರು ಮತ್ತು ಅದರ ಚರಿತ್ರೆಯನ್ನು ತಿಳಿಯಲು ಮುಂದೆ ಓದಿ).
ಒಂದು ವೇಳೆ ತಲೆ ಮೇಲೆ ತೇಲಿ ಬಂದರೇ? ಬಹುಶಃ ಜನರಗೆ ತಿಳಿಯಬಹುದು, ಪೊಲೀಸರು ವಿಚಾರಣೆ ಮಾಡಬಹುದು, ಪತ್ರಿಕೆಗಳಲ್ಲಿ ‘ಮನೆಯಿಂದ ತಪ್ಪಿಸಿಕೊಂಡು ಓಟಕಿತ್ತ ಹಿಪ್ಪಿಗಳಂತೆ ಬದುಕುತಿದ್ದ ಓರ್ವ ಯುವಕನ ಬದುಕಿನ ಕರುಣಾಮಯ ಅಂತ್ಯ,’ ಎಂಬ ಹೆಡ್ ಲೈನ್ ಕಾಣಬಹುದು’.
ನಾನು ಗೋಪಾಲಪುರಕ್ಕೆ ಹೋಗಬೇಕಿಲ್ಲ. ಯಾರಾದರೂ ಮಿತ್ರರು-ದಾನಿಗಳು ಟಿಕೇಟಿನ ದುಡ್ಡನ್ನು ದಾನವಾಗಿ ಕೊಟ್ಟರೂ ಇದು ಸಾಧ್ಯವಿಲ್ಲ. ನನಗೆ ಆಸರೆ ನೀಡಿ ಯಾರಾದರೂ ರೈಲಿನ ಕಂಪಾರ್ಟ್ಮೆಂಟಿನಲ್ಲಿ ಕೂರಿಸಲು ಸಿದ್ಧರಾದರೂ ಇದು ಸಾಧ್ಯವಿಲ್ಲ. ಇನ್ನು ಅಲ್ಲಿಗೆ ಮರಳಿ ಹೋಗುವುದರಲ್ಲಿ ಯಾವ ಆರ್ಥವಿಲ್ಲ. ನನ್ನ ಬಳಿ ಅಷ್ಟು ಸಮಯವೂ ಇಲ್ಲ.
ನಾನು ನನ್ನ, ಸಾವನ್ನು, ನೋಡಬಲ್ಲೆ. ಯಾರೂ ನನ್ನಲ್ಲಿ ಮೃತ್ಯುವಿನ ಆಕಾರವನ್ನು ಕೇಳಬೇಡಿ. ಅದು ಕ್ಷಣ-ಕ್ಷಣವೂ ಬದಲಾಗುತ್ತಿದೆ. ಯಾರೋ ಸಾವನ್ನು ಕೆಲಿಡೋಸ್ಕೋಪ್ನಲ್ಲಿ ಹಾಕಿಬಿಟ್ಟಂತೆ ತೋರುತ್ತದೆ. ಸಾವಿನ ಬಣ್ಣವನ್ನು ನನ್ನಲ್ಲಿ ಕೇಳಬೇಡಿ. ಸಾವಿಗೆ ಬಣ್ಣವಿರುವುದಿಲ್ಲ. ಯಾವ ಜಾಗದಲ್ಲಿ ಅದಿರುವುದೋ ಅದೇ ಜಾಗದಲ್ಲಿ ಬಣ್ಣವನ್ನು ಸಾವು ಸುಲಭವಾಗಿ ಧರಿಸುತ್ತದೆ. ಆಕಾಶದಲ್ಲಿ ತಿರುಗುವ ಸಾವಿನ ಬಣ್ಣ ನೀಲಿಯಾದರೆ, ಹಸುರಿನಲ್ಲಿ ಅಲೆಯುವ ಸಾವಿನ ಬಣ್ಣ ಹಸುರು. ಚೈನಾಮೆನ್ ಮೇಲೆ ಸವಾರಿ ಯಾದ ಸಾವಿನ ಬಣ್ಣ ಹಳದಿಯಾದರೆ, ನೀಗ್ರೋವಿನ ಮೇಲೆ ಸವಾರಿಯಾದ ಸಾವಿನ ಬಣ್ಣ ಕಪ್ಪು. ಕಾಮನಬಿಲ್ಲಿನಲ್ಲಿ ಮಲಗಿದ ಸಾವಿನ ಬಣ್ಣ ಅನೇಕ.
ನಾನು ಸಾವನ್ನು ಸ್ಪಷ್ಟವಾಗಿ ನೋಡಬಲ್ಲೆ. ಸಾವು ಸಮೀಪದಲ್ಲಿದೆ, ಆದರೆ ಹತ್ತಿರದಲ್ಲಿಲ್ಲ. ಸಾವು ಅಂತರದಲ್ಲಿದೆ, ಆದರೆ ದೂರವಿಲ್ಲ. ನಿಜ ಹೇಳಬೇಕೆಂದರೆ ನನ್ನ ಸಾವು ನನ್ನಿಂದ ಎರಡು ಗಂಟೆ ದೂರದಲ್ಲಿದೆ. ನಾನು ನಿಜವನ್ನೇ ಹೇಳುವೆ, ಆಶ್ವರ್ಯಪಡಬೇಡಿ. ನನ್ನ ಅಪ್ಪನೂ, ಅವರ ಸಾವಿಗೂ ಮುಂಚೆ ಸರಿಯಾದ ಸಮಯವನ್ನು ಹೇಳಿದ್ದರು.
ಅಪ್ಪ: ಕೋಬರ್! ಗಂಟೆ ಎಷ್ಟು?
ನಾನು: ಹತ್ತಾಗಿ ಐದು ನಿಮಿಷ.
ಅಪ್ಪ: ಇನ್ನು ಅರ್ಧ ಗಂಟೆಯಾದ ಮೇಲೆ ನಾನು ನಿಮ್ಮ ಮಧ್ಯೆ ಇರಲ್ಲ. ನಿನ್ನ ಅಮ್ಮ ಎಲ್ಲಿ?
ನಾನು: ಹರಿಕಥೆ ಕೇಳ್ತಿದ್ದಾಳೆ.
ಅಪ್ಪ: ತತ್ಕ್ಷಣ ಕರ್ಕೊಂಡ್ ಬಾ! ಇಲ್ಲದಿದ್ರೆ..
ನಾನು ನಂಬಲಿಲ್ಲ. ಸನ್ನಿಪಾತದಿಂದಾಗಿ ಏನೇನೋ ಹರಟುತ್ತಿರಬಹುದುದೆಂದುಕೊಂಡೆ! ಬಹುಶಃ ಮೂರ್ಛಾವಸ್ಥೆಯಲ್ಲಿ ವಟಗುಟ್ಟುತ್ತಲೂ ಇರಬಹುದು! ಕಳೆದ ಏಳು ವರ್ಷಗಳಿಂದ ಅವರು ಹಾಸಿಗೆ ಹಿಡಿದಿದ್ದರು. ಅವರ ದೇಹ ಕ್ಷಯದಿಂದಾಗಿ ನಷ್ಟವಾಗಿತ್ತು. ಕೈ-ಕಾಲುಗಳು ಕಡ್ಡಿಯಂತಾಗಿದ್ದವು.
ಅರ್ಧ ಗಂಟೆಯ ನಂತರ ವಾಸ್ತವವಾಗಿಯೂ ನನ್ನ ಅಪ್ಪ ಸತ್ತು ಹೋದರು. ತಲೆ ಒಂದೆಡೆ ವಾಲಿತ್ತು. ಕಣ್ಣುಗಳು ತೆರೆದೇ ಇದ್ದವು. ನನಗೇನೂ ತೋಚಲಿಲ್ಲ. ಈ ಘಟನೆ ಸಂಭವಿಸಿ ಆರು ವರ್ಷಗಳಾಗಿವೆ. ಆರು ವರ್ಷಗಳ ಅನಂತರ ಇಂದು ಎಲ್ಲಾ ಅರ್ಥವಾಗುತ್ತಿದೆ. ನಿಮಗೂ ತಿಳಿಸುವೆ.
ಮೃತ್ಯುಶಯ್ಯೆಯಲ್ಲಿ ಮಲಗಿದ ಮನುಷ್ಯನ ಎರಡೂ ಕಣ್ಣುಗಳ ಮಧ್ಯೆ, ಹಣೆಯಲ್ಲಿ ಮೂರನೆಯ ಕಣ್ಣೊಂದು ಉದ್ಧವಿಸುತ್ತದೆ. ಆ ಕಣ್ಣು ಅದೃಶ್ಯವಾಗಿರುತ್ತದೆ. ಈ ಕಣ್ಣಿನಿಂದಾಗಿ ಅವನ ದೃಷ್ಟಿ ಬದಲಾಗುತ್ತದೆ. ಅದು ಮನುಷ್ಯರನ್ನು ಇಬ್ಪದಿಯಿಂದಲೂ ನೋಡಬಲ್ಲದು. ಮನುಷ್ಯರ ಬಾಹ್ಯ ರೂಪದೊಳಗೆ ಬಾಲ ಮುದುರಿ ಕೂತ ಸೈತಾನನನ್ನು ಅದು ಸುಲಭವಾಗಿ ಪರಿಶೀಲಿಸಬಲ್ಲದು. ಪ್ರಯತ್ನಿಸದೆ ಮನುಷ್ಯನ ವಿಚಾರಗಳನ್ನು ಅದು ಓದಬಲ್ಲದು.
ನನ್ನೆದುರು ಪ್ಲಾಟ್ ಫಾರಂನಲ್ಲಿ ನಡೆದುಹೋಗುತ್ತಿರುವ ಹೆಣ್ಣು-ಗಂಡುಗಳನ್ನು ಅವರ ಅಸಲು-ರೂಪದಲ್ಲಿ ನಾನು ನೋಡಬಲ್ಲೆ. ಬೆಕ್ಕಿನಂತಹ, ತೋಳದಂತಹ ಮುಖ ಒಬ್ಪನದ್ದಾದರೆ, ಇನ್ನೊಬ್ಪನ ಚರ್ಮ ಘೇಂಡಾಮೃಗದಂತೆ. ಒಬ್ಪನ ಕಣ್ಣು ಮೊಸಳೆಯಂತಿದ್ದರೆ, ಇನ್ನೊಬ್ಪನ ಕೈ ಕರಡಿಯಂತೆ, ಮಗದೊಬ್ಬನ ಅಂಗೈ ಚಿರತೆಯಂತೆ. ಒಬ್ಬ ಕತ್ತೆಯಂತೆ ಮನದಲ್ಲೇ ರೋಧಿಸುತ್ತಿದ್ದರೆ ಇನ್ನೊಬ್ಪ ಸಿಂಹದಂತೆ ದವಡೆ ಅಗಲಿಸುತ್ತಿದ್ದಾನೆ. ಒಬ್ಪ ಜೊಲ್ಲು ಸುರಿಸುತ್ತಿದ್ದರೆ, ಇನ್ನೊಬ್ಪ ಬುಲ್ಡಾಗ್ನಂತೆ ಬೊಗಳುತ್ತಿದ್ದಾನೆ, ಮಗದೊಬ್ಪ ಕೋಣನಂತೆ ನಗುತ್ತಿದ್ದಾನೆ. ಈ ಎಲ್ಲಾ ರೂಪಗಳೂ ಎಷ್ಟಾ ಭಯಾನಕ, ಕ್ರೂರ ಮತ್ತು ಕ್ಪತಿಮವಾಗಿವೆಯೆಂದರೆ, ದೇವರು ನಿಮಗೆ ಮೂರನೆಯ ಕಣ್ಣನ್ನು ಉಡುಗೊರೆಯಾಗಿ ಕೊಟ್ಟರೂ ಇವನ್ನೆಲ್ಲಾ ನೋಡುವ ಧೈರ್ಯ ನೀವು ಮಾಡಲಾರಿರಿ! ಈ ರೂಪಗಳೆಲ್ಲಾ ಎಷ್ಟು ಕುರೂಪವಾಗಿವೆಯೆಂದರೆ ನೀವು ಚೀರಿ ಬಿಡುತ್ತೀರಿ!
ಎರಡೂ ಕೈಗಳ ಮೊಣಕೈಗಳ ಮೇಲೆ ಶರೀರದ ಭಾರ ಹಾಕಿ, ಶರೀರವನ್ನು ಸ್ವಲ್ಪ ಹಿಂದಕ್ಕೆ ತಳ್ಳುವಲ್ಲಿ ನನಗೆ ಯಶಸ್ಸು ಸಿಗುತ್ತದೆ. ಈಗ ನನ್ನ ಬೆನ್ನಿಗೆ ಪ್ಲಾಟ್ ಫಾರಂನ ಬೆಂಚು ಆಸರೆಯಾಗಿದೆ. ಕಾಲು ಚಾಚಿ ನನ್ನ, ತಲೆಯನ್ನು. ಬೆಂಚಿಗೆ ಆನಿಸುತ್ತೇನೆ. ಸ್ವಲ್ಪ ಹಾಯೆನಿಸುತ್ತದೆ.
ನನ್ನ ಕಣ್ಣುಗಳೆದುರು ಗಡಿಯಾರವನ್ನು ನೇತು ಹಾಕಲಾಗಿದೆ. ಗಡಿಯಾರದ ಮೇಲೆ ಉಕ್ಕಿನ ಛಾವಣಿ ತೇಲುತ್ತಿದೆ, ಉಕ್ಕಿನ ಕಂಬಗಳು ಒಂದು ಕಡೆಯಿಂದ ಇನ್ನೊಂದು ಕಡೆಗೆ ಓಡುತ್ತಿವೆ. ಉಕ್ಕಿನ ಗೂಡುಗಳಲ್ಲಿ ಕೆಲವು ಕಡೆ ಪಾರಿವಾಳಗಳು ಕೂತಿರುವುದನ್ನು ಕಾಣಬಹುದು. ಉಕ್ಕಿನ ಛಾವಣಿಯ ನಡುವೆ ಸ್ವಲ್ಪಸ್ವಲ್ಪವೇ ಅಂತರದಲ್ಲಿ ಹಾಕಿದ ಗಾಜುಗಳು ಪ್ಲಾಟ್ ಫಾರಂನ ಬೆಳಕಿನಲ್ಲಿ ಹೊಳೆಯುತ್ತಿವೆ.
ನಾನು ನನ್ನ ದೃಷ್ಟಿಯನ್ನು ಛಾವಣಿಯಿಂದ ಸರಿಸಿ ಪ್ಲಾಟ್ ಫಾರಂನ ಮೇಲೆ ಹರಡುತ್ತೇನೆ. ಅಮೃತಸರ ಎಕ್ಸ್ ಪ್ರೆಸ್ ನ ಪಶುಗಳ ಜೋಡಿಗಳು, ಸಪರಿವಾರ ಒಂದೊಂದಾಗಿ ಕೂಲಿಯಾಳುಗಳ ಬಳಿ ಬರುತ್ತಿವೆ. ಯಾವ ಕಂಪಾರ್ಟ್ಮೆಂಟ್ ಎಲ್ಲಿ ನಿಲ್ಲುವುದೆಂದು ಕೂಲಿಯಾಳುಗಳಿಗೆ ಗೊತ್ತಿದೆ. ಅವರು ಚಾಪೆ-ಹಾಸಿಗೆಗಳ ರಾಶಿ ಹಾಕಿ ಪಕ್ಕದಲ್ಲೇ ಕೂರುತ್ತಾರೆ. ಪಶುಗಳು ವ್ಯಗ್ರತೆಯಿಂದ ಅಮೃತಿಸರ ಎಕ್ಸ್ ಪ್ರೆಸ್ ನ ನಿರೀಕ್ಷಣೆ ಮಾಡುತ್ತಿವೆ.
ನನಗೆ ಯಾರ ನಿರೀಕ್ಷಣೆಯಿಲ್ಲ. ಜೈಲಿನಿಂದ ಮುಕ್ತನಾದ ಮೇಲೆ ನನ್ನವರು ಅನ್ನುವವರು ಯಾರೂ ಇಲ್ಲ. ಲಬಂಗಿಯಿಲ್ಲ, ಕುಟ್ಟಿಯಿಲ್ಲ, ಝಾಬಾ ಇಲ್ಲ, ಆದರೂ ಗಾಜಿನಂತಹ ಝಾಬಾನ ಕಣ್ಣುಗಳನ್ನು ನನ್ನೆದುರು ಕಾಣಬಲ್ಲೆ. ಅವನ ಅಗಲವಾದ, ಚಪ್ಪಟೆಯಾದ ಮೂಗನ್ನು ನಾನು ಮರೆಯಲಾರೆ. ಗುಂಗುರು ಕೂದಲುಗಳು, ಜೇನುಹುಟ್ಟಿನಂತಹ ಗಡ್ಡ, ಗಟ್ಟಿಮುಟ್ಟಾದ ಶರೀರ ಮತ್ತು ಬಾಕ್ಸರ್ ಮೊಹಮ್ಮದ್ ಅಲಿಯಂತಹ ಅವನ ನಡಿಗೆ ನನಗಿಂದಿಗೂ ನನಪಿದೆ.
‘ಕೋಬರ್, ನೀನು ಸೊಳ್ಳೆ’ ಎಂದು ಅವನು ಹೇಳುತ್ತಿದ್ದ. ಝಾಬಾನಿಗೆ ಸೊಳ್ಳೆ ಮತ್ತು ಮನುಷ್ಯರ ನಡುವೆ ಹೆಚ್ಚು ಅಂತರವಿದೆಯೆಂದು ಅನ್ನಿಸುತ್ತಿರಲಿಲ್ಲ. ಬಹುಶಃ ಅದಕ್ಕಾಗಿಯೇ ಅವನು ‘ಮನುಷ್ಯ’ ಶಬ್ದಕ್ಕೆ ಬದಲು ‘ಸೊಳ್ಳೆ’ ಶಬ್ದವನ್ನು ನಿಸ್ಸಂಕೋಚದಿಂದ ಪ್ರಯೋಗಿಸುತ್ತಿದ್ದ. ‘ಮತ್ತೆ ಸೊಳ್ಳೆಗಳು ಬೇರೆ ಜಂತುಗಳ ಆಸರೆಯಲ್ಲಿ ಬದುಕಲು ಪ್ರಯತ್ನಿಸುತ್ತವೆ. ಕೋಬರ್, ನೀನೂ ಸಹ ಒಂದು ದುರ್ಬಲ ಸೊಳ್ಳೆ. ಕಾರಣ, ನೀನೂ ಆಸರೆಗಾಗಿ ಅಲೆಯುತ್ತೀಯಾ’ ಎಂದು ನನ್ನ ಬಗ್ಗೆ ಹೇಳುತ್ತಿದ್ದ.
ಬಾವ ಮಾತು ತಪ್ಪಲ್ಲ. ಝಾಬಾನ ಮಾತು ನಿಜವೂ ಅಲ್ಲ. ನಾನು ಆಸರೆ ಹುಡುಕುವುದಿಲ್ಲ. ಆದರೆ, ಯಾವಾಗಲಾದರೂ ಯಾವುದಾದರೂ ಆಸರೆ ಎದುರಿಗೆ ಬಂದರೆ ಅದನ್ನು ಅಗತ್ಯವಾಗಿ ಒಪ್ಪಿಕೊಳ್ಳುತ್ತೇನೆ. ಲಬಂಗಿಯನ್ನು ನಾನು ಒಪ್ಪಿಕೊಂಡಿದ್ದೆ. ಲಬಂಗಿಗೂ ಮೊದಲು ಕುಟ್ಟಿಯೊಂದಿಗೆ ನನ್ನ ಪರಿಚಯವಾಗಿತ್ತು. ಕುಟ್ಟಿ ಮತ್ತು ನಾನು, ಝಾಬಾನನ್ನು, ಅಪೋಲೋ ಬಂದರಿನಲ್ಲಿ ಸಂಧಿಸಿದ್ದೆವು. ಹೀಗೆಯೇ ಪರಸ್ಪರ ಪರಚಯವೂ ಬೆಳೆದಿತ್ತು.
ನಾನು, ಝಾಬಾ ಮತ್ತು ಕುಟ್ಟಿ… ಕುಟ್ಟಿ, ಬಾ ಮತ್ತು ನಾನು, ವಿಶ್ವದ ಅತ್ಯಂತ ಸುಂದರ ಗೋಪಾಲಪುರ ಸಮುದ್ರತೀರ, ಸುವರ್ಣಕೇಶಗಳಂತಹ ಮರಳು, ಮರಳಿನ ಮೇಲೆ ಇಂದಿಗೂ ಇರುವ ಬ್ರಿಟೀಷ್ ಸಾಮ್ರಾಜ್ಯದ ಭಗ್ನಾವಶೇಷಗಳು, ಗೋಡೆಗಳಿಲ್ಲದ ಬಂಗಲೆಗಳು, ಅರ್ಧ ಬಂಗಲೆಗಳು, ತುಂಡರಿಸಿದ ಬಂಗಲೆಗಳು, ತೀರದ ಮರಳಲ್ಲಿ ಹೂತುಹೋದ ಬಂಗಲೆಗಳು ಮತ್ತು ‘ಥೈಸ್’.
‘ಥೈಸ್’ ನಮ್ಮ ಒಂದು ಅಂತಿಸ್ತಿನ ಹಸುರು ಕಾಟೇಜಿನ ಹೆಸರು, ಕುಟ್ಟಿ ಹೀಗೆಂದು ಹೆಸರನ್ನಿಟ್ಟಿದ್ದಾನೆ. ಬಾ ‘ವೇವ್ಸ್ ಆಫ್ಟರ್ ವೇವ್ಸ್’ ಎಂಬ ಹೆಸರನ್ನು ಬಯಸಿದ್ದರೆ ನಾನು ‘ವರಾಹ ಸದನ’ ಎಂಬ ಹೆಸರನ್ನು ಬಯಸಿದ್ದೆ. ‘ಕಾಟೇಜ್’ನ ಹೆಸರಿನ ಬಗ್ಗೆ ತಿಂಗಳುಗಟ್ಟಲೆ ಚರ್ಚೆ ನಡೆದಿತ್ತು. ಅದೊಂದು ದಿನ ಬೆಳಗ್ಗೆ ಎದ್ದಾಗ ಮನೆಯ ಹೊರಗೆ ‘ಥೈಸ್’ ಎಂಬ ಹಲಗೆಯನ್ನು ಕಂಡೆವು, ಕುಟ್ಟಿ ತನ್ನ ಪ್ರಿಯ ಹೆಸರಿನ ಹಲಗೆ ಹಾಕಿ ಹೆಸರನ್ನು ಅಮರಗೊಳಿಸಿದ್ದ. ಅವನು ಇದಕ್ಕೆ ನಮ್ಮ ಮನೆಯ ಒಡತಿ ‘ದುಲಈ’ಯ ಅನುಮತಿ ಪಡೆಯುವ ಅಗತ್ಯವನ್ನೂ ಮನಗಾಣಲಿಲ್ಲ.
ಇಲ್ಲಿಯ ಬಡಪ್ರದೇಶದ ಜನ, ವಿಶೇಷವಾಗಿ ಬೆಸ್ತರು ಆಶ್ಚರ್ಯದಿಂದ ನಮ್ಮ ಕಾಟೇಜ್ನ ಹೊರಗೆ ನೇತಾಡುತ್ತಿದ್ದ ಹಲಗೆಯನ್ನು ನೋಡುತ್ತಿದ್ದರು. ನಮ್ಮನ್ನು ಕಂಡಾಗ ಅವರ ಈ ಆಶ್ಚರ್ಯ ಮತ್ತೂ ಹೆಚ್ಚಾಗುತ್ತಿತ್ತು. ಪ್ರಾರಂಭದ ದಿನಗಳಲ್ಲಿ ಬ್ರಹ್ಮಮರ ಠಾಣೆಯ ಪೊಲೀಸರೂ ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಇಲ್ಲಿಯ ಸಿ.ಐ.ಡಿ.ಗಳಿಗೆ ನಾವು ಅಂತಾರಾಷ್ಪ್ರೀಯ ಗುಪ್ತದಳದ ಸದಸ್ಯರೆಂಬ ಸಂದೇಹವಿತ್ತು.
ಕೆಲವೇ ವಾರಗಳಲ್ಲಿ ಈ ಸಂಶಯ ಹಾರಿಹೋಯಿತು. ಪ್ರತಿಯಾಗಿ ನಂಬಿಕೆ ಹುಟ್ಟಿತ್ತು. ನಾವು ಸಾಮಾನ್ಯ ಜೇಬುಗಳ್ಳರೆಂದು ಅವರ ಅನಿಸಿಕೆಯಾಗಿತ್ತು. ಆದರೆ ಇದುವರೆಗೆ ಅವರಿಗೆ ಈ ಬಗ್ಗೆ ಒಂದೂ ಸಾಕ್ಷ್ಯಾಧಾರ ಸಿಕ್ಕಿರಲಿಲ್ಲ. ಆದರೂ ಒಬ್ಪ ಡೆಪ್ಟಿ ನಮಗೆ ‘ಗಡಿಯಾರದ ಕಳ್ಳರು’ ಎಂದು ಬಿರುದು ಕೊಟ್ಟಿದ್ದ. ಕೆಲವು ಪೊಲೀಸರು ನಮಗೆ ‘ಬೆಣ್ಣೆ ಕಳ್ಳ’ರೆಂದು ಗುರುತಿಸುತ್ತಿದ್ದರು. ಇಲ್ಲಿಗೆ ಬಂದಿದ್ದ
ಮೆಳ್ಳಗಣ್ಣಿನ ಒಬ್ಪ ಜರ್ಮನ್ ಟೂರಿಸ್ಟ್ ನಮಗೆ ‘ತ್ರೀ ಮಸ್ಕೆಟೀಯರ್ಸ್’ ಎಂದು ಸ್ಟೈಲಾಗಿ ನಗುತ್ತಿದ್ದ.
ಆದಿನಗಳಲ್ಲಿ ನಮ್ಮ ಪರಿಸ್ಥಿತಿ ಗುಜರಾತಿ ಬೇಳೆಯ ಹಾಗೆ ದುರ್ಬಲವಾಗಿತ್ತು. ಪ್ರತೀಕ್ಷಣವೂ ನಮ್ಮೆದುರು ಹೊಸ ಸಮಸ್ಯೆಯೊಂದು ಇರುತ್ತಿತ್ತು. ಮರುಕ್ಷಣವೇ ನಾವೂ ಪರಸ್ಪರ ನೋಡಿಕೊಳ್ಳುತ್ತಿದ್ದೆವು. ಸರ್ಕಾರಿ ಅಧಿಕಾರಿಗಳ ಟೇಬಲ್ಗಳ ಮೇಲೆ ಜಮಾಯಿಸುವ ಪೈಲ್ಗಳಂತೆ, ಸಮಸ್ಯೆಗಳ ರಾಶಿಯೇ ನಮ್ಮೆದುರು ಉದ್ಭವಿಸುತ್ತಾ ಸಾಗುತ್ತಿತ್ತು. ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಹುಡುಕುವುದು ಕಷ್ಟವಾಗಿತ್ತು. ಹೀಗಾಗಿ, ತತ್ಕ್ಷಣ ಸಮಾಧಾನ ಬಯಸುವ ಸಮಸ್ಯೆಗಳಿಗೆ ‘ಟಾಪ್ ಪ್ರಯೋರಿಟಿ’ಯನ್ನು, ಕೊಡುತ್ತಿದ್ದೆವು. ಉದಾಹರಣೆಗೆ ನಾಳೆಯ ಊಟದ ವೃವಸ್ಥೆಯಾಗುವುದೋ? ಇಲ್ಲವೋ? ಇದಕ್ಕೆ ಸಮಾಧಾನ ಯಾರಿಗೂ ತಿಳಿದಿರಲಿಲ್ಲ. ಈ ಸಮಸ್ಯೆ ನಿತ್ಯ ರಾತ್ರಿ ನಿರ್ಲಜ್ಜತೆಯಿಂದ ಬಂದು ನಮ್ಮ ಹೊಟ್ಟೆಯಮೇಲೆ ಸವಾರಿಮಾಡುತ್ತಿತ್ತು. ಮುಂದಿನ ತಿಂಗಳ ಮನೆ ಬಾಡಿಗೆಗೆ ದುಡ್ಡು ಎಲ್ಲಿಂದ ಬರುತ್ತೆ? ಐದು ತಿಂಗಳುಗಟ್ಟಲೆ ರಹಸ್ಯವಾಗಿಯೇ ಉಳಿದುಬಿಡುತ್ತಿತ್ತು. ಯಾವ ಹಜಾಮ ನಮ್ಮ ತಿಂಗಳುಗಟ್ಟಲೆಯ ಹಳೆಯ ಗಡ್ಡವನ್ನು ಸಾಲದಲ್ಲಿ ಬೋಳಿಸಲು ಸಿದ್ಧನಾಗುತ್ತಾನೆಂಬುದನ್ನು ಹಜಾಮರ ಜಾತಕ ನೋಡಿದಾಗಲೇ ಹೇಳಬಹುದಿತ್ತು. ನನ್ನ ಗಡ್ಡದ ಕೂದಲುಗಳು ಎದೆಯ ಕೂದಲುಗಳ ಮೇಲೆ ಹರಡಿದ್ದವು. ಝಾಬಾನ ಗಡ್ಡ ಜೇನು ಹುಟ್ಟಿನ ಆಕಾರ ತಾಳುತ್ತಿದ್ದರೆ ಕುಟ್ಟಿಯ ಗಡ್ಡದ ಕೂದಲುಗಳು ನುಣುಪಾಗಿರುವುದರಿಂದ ಗಾಳಿಯಲ್ಲಿ ಹಾರಾಡುತ್ತಿದ್ದವು. ಬಟ್ಟೆಗಳ ಬಗ್ಗೆ ನಮಗೆ ಹೆಚ್ಚು ಚಿಂತೆ ಇರಲಿಲ್ಲ. ನಾಲ್ಕು ಜೇಬುಗಳುಳ್ಳ ಚಡ್ಡಿಗಳನ್ನು ಧರಿಸಿದ್ದ ನಾವು ಹಿಪ್ಪಿಗಳಂತೆ ಕಾಣುತ್ತಿದ್ದೆವು. ನಾವು ಭಾರತದ ಹಿಪ್ಪಿಗಳೆಂದು ಹೆಳಬಹುದಿತ್ತು. ನಾವು ಅಂದರೆ ನಾನು ಮತ್ತು ಕುಟ್ವಿ ಝಾಬಾ ಅಮೇರಿಕನ್ ನೀಗ್ರೋ ಆಗಿದ್ದ.
ಮನೆ ಬಾಡಿಗೆ ಒಪ್ಪಂದ….. ಅಧ್ಯಾಯ – 2
ಒಂದು ರಾತ್ರಿ ನಿತ್ಯದಂತೆ ಚಿಲಿಮೆಯನ್ನು ದಂ ಎಳೆಯುತ್ತಿದ್ದೆವು. ಬಾ ದಂ ಎಳೆದು ಚಿಲಿಮೆಯನ್ನು ನನ್ನ ಕೈಗೆ ಹಾಕುತ್ತಿದ್ದ. ನಾನು ದಂ ಎಳೆದು ಚಿಲಿಮೆಯನ್ನು ಕುಟ್ಟಿಯೆಡೆಗೆ ಚಾಚುತ್ತಿದ್ದೆ. ಸರದಿಯಂತೆ ದಂ ಎಳೆಯುತ್ತಾ ಗಂಭೀರವಾಗಿ ಮೂವರೂ ಯೋಚಿಸುತ್ತಿದ್ದೆವು.
ಮಾರನೆಯ ದಿನವೇ ಐದು ತಿಂಗಳ ಬಾಡಿಗೆಯನ್ನು ತೀರಿಸಿದ್ದೆವು. ನಮ್ಮ ಕಾಟೇಜ್ನ ಬಾಡಿಗೆ ಹೆಚ್ಚಿರಲಿಲ್ಲ. ತಿಂಗಳಿಗೆ ಕೇವಲ ಹತ್ತು ರೂಪಾಯಿಗಳು. ಆದರೆ ನಮಗೆ ಹತ್ತು ಪೈಸೆಯ ‘ಭಾರತ್-ಬ್ಲೇಡ್’ ಕೊಳ್ಳಲೂ ಸಾಧ್ಯವಿರಲಿಲ್ಲ. ಅಲ್ಲದೆ ಈ ಮೊದಲೇ ನಮ್ಮ ಮನೆಯ ಒಡತಿ ದುಲ ಈ ನಮಗೆ ಹದಿನೈದು ದಿನಗಳ ಮೊದಲೇ ಎಚ್ಚರಿಸಿದ್ದಳು. ‘ಚತುರ್ದಶಿಗೂ ಮೊದ್ಲು ಐವತ್ತು ರೂಪಾಯಿಗಳ ವ್ಯವಸ್ಥೆ ಮಾಡದಿದ್ರೆ ನಿಮ್ಮ ಮೂವರ ವಸ್ತುಗಳನ್ನೆಲ್ಲಾ ವಶಪಡಿಸಿಕೊಂಡು, ನಮ್ಮನ್ನು ಕಾಟೇಜ್ನಿಂದ ಹೊರ ಹಾಕ್ತೀನೀ’ ಎಂದು ಕಠಿಣವಾಗಿ ಹೇಳಿದ್ದಾಳೆ. ನಮ್ಮ ಬಳಿ ಮೂವಿಕ್ಯಾಮರಾ, ಫೋಟೋಗ್ರಾಫಿಯ ಉಪಕರಣಗಳು, ಒಂದು ಗಿಟಾರ್ ಮುಂತಾದ ಅನೇಕ ಬೆಲೆಬಾಳುವ ವಸ್ತುಗಳಿದ್ದವು. ಇವನ್ನು ನಾವು ಮಾರಲು ಬಯಸುತ್ತಿರಲಿಲ್ಲ.
ದುಲ ಈ ದಾರಾಸಿಂಹನ ಆಕಾರದಂತಿರದಿದ್ದರೆ ಬಹುಶಃ ನಾವು ಈ ಹೆಂಗಸಿಗೆ ಹೆದರುತ್ತಿರಲಿಲ್ಲ. ದುಲ ಈ ತನ್ನ, ಶಕ್ತಿಯ ಸ್ಯಾಂಪಲ್ ನ್ನು ಈ ಮೊದಲು ನಮಗೆ ಉಣಬಡಿಸದಿದ್ದರೆ ಬಹಶಃ ಅವಳ ಎಚ್ಚರಿಕೆಯ ಮಾತನ್ನು ನಾವು ನಕ್ಕು ಅಲ್ಲಗಳೆದುಬಿಡುತ್ತಿದ್ದೆವು!
ಅಂದು “ದುಲ ಈ”ಯ ಮಧ್ಯದ ಬಾಟಲಿಯೊಂದು ಅವಳ ರೂಮಿನಿಂದ ಕಣ್ಮರೆಯಾಯಿತು. ಮೊದಲು ತಾನೇ ಕೈತಪ್ಪಿ ಎಲ್ಲೋ ಇಟ್ಟಿರಬೇಕೆಂದುಕೊಂಡಳು. ಆದರೆ ಮನೆಯನ್ನಲ್ಲಾ ಶೋಧಿಸಿದರೂ ಸಿಗದಿದ್ದಾಗ ಅವಳಿಗೆ ನಮ್ಮ ಮೇಲೆ ಅನುಮಾನ ಉಂಟಾಯಿತು.
ಅವಳು ಮೆಟ್ಟಿಲುಗಳನ್ನಿಳಿದು ಕೆಳೆಗೆ ಬಂದು, ನಮ್ಮನ್ನು ಒಂದು ಸಾಲಿನಲ್ಲಿ ನಿಲ್ಲಿಸಿದಳು. ನಮಗೊಂದೂ ತೋಚಲಿಲ್ಲ. ನಾವು ಪರಸ್ಪರ ಆಶ್ಜರ್ಯದಿಂದ ಒಬ್ಬರ ಮುಖವನ್ನು ಒಬ್ರು ನೋಡಿಕೊಂಡೆವು. ಆಗಲೇ ಅವಳು ಸರದಿಯಂತೆ, ನಮ್ಮ ತಲೆಯನ್ನು ತೆಂಗಿನಕಾಯಿಯಂತೆ ಹಿಡಿದು ಬಾಯಿಯನ್ನು ಮೂಸಿ ನೋಡಿದಳು. ಕಳ್ಳ ಸಿಕ್ಕಿಬಿದ್ದ. ಝಾಬಾನ ಬಾಯಿಯಿಂದ ಮದ್ಯದ ವಾಸನೆ ಬರುತ್ತಿತ್ತು.
ಸರಿ, ದುಲಈ ಏನನ್ನು ಹೇಳಲು ಬಯಸಲಿಲ್ಲ. ಬಾನ ತಲೆ ಅವಳ ಹಿಡಿತದಲ್ಲಿತ್ತು. ಅವಳು ಅವನ ತಲೆಯನ್ನು ಮೇಲಕ್ಕೆತ್ತಿದಳು. ಝಾಬಾನ ಕಾಲುಗಳು ನೆಲದಿಂದ ಒಂದು ಅಡಿ ಮೇಲಕ್ಕೆ ಹೋದವು. ಅವನು ಚೀರಿದ, ಆದರೂ ಅವಳು ಬಿಡಲಿಲ್ಲ. ಪ್ರತಿಯಾಗಿ, ಅವನ ತಲೆಯನ್ನು ಇನ್ನೂ ಮೇಲಕ್ಕೆತ್ತಿ ಅವನಿಡೀ ಶರೀರವನ್ನು ಗೋಣಿಚೀಲದಂತೆ ಕೆಳಗೆ ಧೊಪ್ಪನೆ ಹಾಕಿ, ಏನೂ ಆಗಿಲ್ಲವೆಂಬಂತೆ ಕೈಸವರಿಕೊಂಡು ವಾಪಸ್ ಮೇಲಕ್ಕೆ ಹೊರಟುಹೋದಳು. ಝಾಬಾ ಅಂದು ಹಳ್ಳಿಯಲ್ಲಿ ಮದ್ಯ ಸೇವಿಸಿ ಬಂದಿದ್ದ. ದುಲಈಗೆ ಅನಂತರ ಮದ್ಯದ ಬಾಟಲಿ ಸಿಕ್ಕಿತ್ತು. ಅವಳು ಬಂದು ಝಾಬಾನಲ್ಲಿ ಕ್ಷಮೆಕೋರಿದಳು.
ಬಾ, ತಾನು ದಾರ್ಶನಿಕನೆಂದು ವಾದಮಾಡುತ್ತಿರಲಿಲ್ಲ. ಆರ್ಟ್ ಫಿಲಂ ಮಾಡುವುದು ಅವನ ಹಾಬಿಯಾಗಿತ್ತು. ಆದರೂ ಅವನು ತನ್ನ ಹಾವ ಭಾವದಿಂದ, ತಾನು ದಾರ್ಶನಿಕ ಎಂದು ಸಾರುವಂತಿತ್ತು. ಮೊದಲು ಅವನು ದಾರ್ಶನಿಕ, ಅನಂತರ ಫೋಟೋಗ್ರಾಫರ್ ಎಂದು ಅನ್ನಿಸುತ್ತಿತ್ತು. ಮೊದಲು, ಅವನು ಫೋಟೋಗ್ರಾಫರ್ ಆಗಿದ್ದರೆ ನಮಗೆ ಯಾವ ತೊಂದರೆ ಇರುತ್ತಿರಲಿಲ್ಲ. ಹಾಂ. ರಾತ್ರಿ ಅವನ ಮೂಗಿನ ಹೊಳ್ಳೆಗಳು ಮಾಡುವ ಶಬ್ದವನ್ನು ಮೇಲಂತಸ್ತಿನಲ್ಲಿದ್ದ ದುಲಈಯು ಸಹಾ ಸಹಿಸಲು ಸಾಧ್ಯವಿರಲಿಲ್ಲ. ದುಲಈ ಅವನಿಗೆ ಗೋರಿಲ್ಲಾ ಎಂದರೆ ಬಾ ಅವಳಿಗೆ ಸೊಳ್ಳೆ ಎನ್ನುತ್ತಿದ್ದ.
“ಸೊಳ್ಳೆ” ಶಬ್ದ ಕಿವಿಗೆ ಬೀಳುತ್ತಲೇ ಕುಟ್ಟಿ ಚಿಲುಮೆ ಬಿಟ್ಟು ಎದ್ದು ನಿಂತು ‘ಐಡಿಯಾ’ ಎಂದು ಚಿಟಿಕೆಹೊಡೆದ. ಅವನ ಕಣ್ಣುಗಳು ಹೊಳೆದವು. “ಪ್ಲೇಟೋವಿನ ಐಡಿಯಾ!”
ನಾನು ಮತ್ತು ಝಾಬಾ ಅವನ ಮುಖವನ್ನೇ ನೋಡಿದೆವು. ಅವನ ಐಡಿಯಾ ನಮಗಿನ್ನೂ ಅರ್ಥವಾಗಿರಲಿಲ್ಲ.
ಕುಟ್ಟಿ ತೆರೆದೆದೆಗೆ ಟಿ-ಶರ್ಟ್ ತೊಟ್ಟ, ತಲೆಕೂದಲಿಗೆ ನೀರುಹಾಕಿಕೊಂಡು ಬಾಚಿಕೊಂಡ; ಗಾಳಿಯಲ್ಲಿ ಹಾರುವ ಗಡ್ಡವನ್ನು ನೇವರಿಸಿಕೊಳ್ಳುತ್ತಾ ಮೆಟ್ಟಿಲುಗಳನ್ನೇರಿ ಹೋದ. ನಾವಿಬ್ಬರೂ ಅವನು ಹೋಗುವುದನ್ನೇ ನೋಡುತ್ತಾ ನಿಂತುಬಿಟ್ಟೆವು.
ದುಲಈ ವಿಧವೆಯಾಗಿದ್ದಳು, ಬಾಲವಿಧವೆಯೋ ಅಥವಾ ರಕ್ತನೆಕ್ಕಿದ ಹೆಣ್ಣು ಹುಲಿಯೋ ಎಂಬುದು ನಮಗೆ ತಿಳಿದಿರಲಿಲ್ಲ. ಅವಳು ಸುಮಾರು ನಲವತ್ತು ವರ್ಷದ ಸಿಡುಬಿನ ಕಲೆಯ ಹೆಂಗಸಾಗಿದ್ದಳು. ಚೂಪನೆ ಕೈಗಳು, ನೀರಿನ ತೊಟ್ಟಿಯಂತಹ ಉಕ್ಕಿನ ದೇಹ, ಮದ್ಯಸೇವಿಸಿ ಕೆಂಪಾದಂತಹ ಕಣ್ಣುಗಳು, ಮೆಣಸಿನಕಾಯಿಯಂತಹ ಮೂಗು “ಜೈ ಅಂಬೆ, ಜೈಜಗದಂಬೆ, ಜೈಕಾಳಿಮಾತಾ. ಜೈಜೈ ದುರ್ಗಾಮಾತಾ” ಎಂದು ಅವಳನ್ನು ಸ್ತುತಿಮಾಡಬಹುದಿತ್ತು – ಹೀಗಿದ್ದಳು ದುಲಈ.
ನಮ್ಮ ಈ ದುರ್ಗಿ ಒಂಬತ್ತುಗಜದ ಸೀರೆ ಸುತ್ತಿಕೊಂಡು ಕೈಯಲ್ಲಿ ದೊಣ್ಣೆ ಹಿಡಿದು, ಉಳಿದ ಐದು ಮನೆಗಳ ಬಾಡಿಗೆ ವಸೂಲಿಗೆ ಕಾಟೇಜ್ನಿಂದ ಹೊರ ಹೊರಟಾಗ ಸಮುದ್ರದೆಡೆಯಿಂದ ಬೀಸುವ ಗಾಳಿಯೂ ಕ್ಷಣಕಾಲ ನಿಶ್ಚಲವಾಗಿಬಿಡುತ್ತಿತ್ತು. ಒಂದು ಗಂಟೆಯ ಅನಂತರ ಕುಟ್ಟಿ ಮರಳಿಬಂದಾಗ ಅವನ ತುಟಿಗಳಲ್ಲಿ ಹುತಾತ್ಮನ ಮುಗುಳ್ನಗೆ ಮತ್ತು ಹಣೆಯಲ್ಲಿ ಬೆವರಿತ್ತು. ಕುರಿಯಂತೆ ಕೊಲೆಯಾಗಲ್ಪಟ್ಟಿದ್ದ, ಆದಾಗ್ಯೂ ಸಿಂಹದಂತೆ ಹೆಜ್ಜೆಗಳನ್ನು ಹಾಕುತ್ತಿದ್ದ. ಅವನು ನಮ್ಮೆದುರು ಸುಮಾರಾಗಿ ಸೆಟೆದುನಿಂತ- ಎರಡುಕ್ಷಣ! ಮರುಕ್ಷಣವೇ ತಲೆಸುತ್ತಿಬಂದು ಬಿದ್ದ, ಅದೃಷ್ಟವಶಾತ್ ಕೆಳಗೆ ಹಾಸಿದ್ದ ಹಾಸಿಗೆಮೇಲೆ ಬಿದ್ದಿದ್ದ. ನಮಗೆ ಹೆಚ್ಚು ಆಫಾತವಾಗಲಿಲ್ಲ.
“ಏನಾಯ್ತು?” ಅವನ ತಲೆಬಳಿ ಬಾಗಿ ನಾನು ಪ್ರಶ್ನಿಸಿದೆ.
“ಎಲ್ಲಾ ಸರಿಯಾಯ್ತು”, ಚಾವಣಿಯನ್ನೇ ಗಮನಿಸುತ್ತಾ ಅವನು ಹೇಳಿದ. “ಇವತ್ತಿನಿಂದ ನಾವು ಬಾಡಿಗೆ ಕೊಡಬೇಕಿಲ್ಲ. ಅಗ್ರಿಮೆಂಟ್ ಆಗಿಬಿಟ್ಟಿದೆ.”
“ಅಗ್ರಿಮೆಂಟ್!” ಝಾಬಾ ಅಲ್ಲಾವುದ್ದೀನನ ಜಿನ್ನನಂತೆ ಕುಟ್ಟಿಯ ಕಾಲುಗಳ ಬಳಿನಿಂತಿದ್ದ, “ಎಲ್ಲಿದೆ ಅಗ್ರಿಮೆಂಟ್?”
ಉತ್ತರದಲ್ಲಿ ಕುಟ್ಟಿ, ತನ್ನ ತುಟಿಗಳಮೇಲೆ ಬೆರಳಿಟ್ಟುಕೊಂಡ. ‘ನಾಲಿಗೆ ಅಗ್ರಿಮೆಂಟ್’ ಆಗಿದೆ ಎನ್ನುವಲ್ಲಿ ಬಹುಶಃ ಅವನಿಗೆ ಸಂಕಟವಾಗುತ್ತಿರಬೇಕು!
ನನಗೆ ಆಶ್ಚರ್ಯವಾಯಿತು. ದುಲಈ, ಗೋಪಾಲಪುರದ ಇತಿಹಾಸದಲ್ಲಿ ಇದುವರೆಗೆ ಯಾರಿಗೂ ಒಂದು ನಯಾಪೈಸೆಯನ್ನು ಬಿಟ್ಟಿದ್ದು ನನಗೆ ನೆನಪಿಲ್ಲ. ಅವಳ ಕಣ್ಣುಗಳಲ್ಲಿ ಒಮ್ಮೆಯೂ ದಯೆಯ ಭಾವನೆ ಮೂಡಿದ್ದನ್ನು ನಾನು ನೋಡಿರಲಿಲ್ಲ. ಹೀಗಿದ್ದಾಗ್ಯೂ ಈ ಅದ್ಭುತ ಚಮತ್ಕಾರ ಘಟಿಸಿತ್ತು. ಈ ಚಮತ್ಕಾರವನ್ನು ಕುಟ್ಟಿಯ ಮುಖ ಹೇಳುತ್ತಿತ್ತು.
ನಾನು ನನ್ನ ಮನಸ್ಸಿನಲ್ಲಿ ಉದ್ಭವಿಸುತ್ತಿದ್ದ ಪ್ರಶ್ನೆಗಳಿಗೆ ಉತ್ತರ ಹುಡುಕಲು ಅವನ ಕಣ್ಣುಗಳನ್ನೇ ನೋಡಿದೆ. ಅವನು ಕಣ್ಣುಹೊಡೆದ. ನನ್ನ ಕಣ್ಣುಗಳು ಅಗಲವಾದವು. ಹೆಂಗಸರ ದೌರ್ಬಲ್ಯದ ಲಾಭಪಡೆಯುವುದನ್ನು ಕುಟ್ಟಿ ಚೆನ್ನಾಗಿ ಬಲ್ಲ ಎಷ್ಟಾದರೂ ದುಲಈ ಓರ್ವ ಹೆಣ್ಣಾಗಿದ್ದಳು, ಅಲ್ಲದೇ ವಿಧವೆಬೇರೆ, ಕುಟ್ಟಿಯ ಯೋಜನೆ ಕೈಗೂಡಿತ್ತು.
“ಅರ್ಥವಾಯ್ತಾ ಕೋಬರ್?” ಮರುದಿನ ನೀರಿನ ಲೋಟಹಿಡಿದು ಸಮುದ್ರದ ತೀರಕ್ಕೆ ಹೋಗುತ್ತಾ ಕುಟ್ಟಿ ರಹಸ್ಯ ಬಿಚ್ಚಿದ. “ಈ ಬಾರಿಯಂತೂ ನಾನು ಬಾಡಿಗೆಯ ಸಮಸ್ಯೆಯನ್ನು ಬಗೆಹರಿಸಿದ್ದೇನೆ, ಆದರೆ ಭವಿಷ್ಯದಲ್ಲಿ ನಾವು ‘ಸರದಿ’ಯನ್ನು ಮಾಡಿಕೊಳ್ಳಬೇಕಾಗುತ್ತೆ.”
“ಅಂದ್ರೆ?”
“ಈ ತಿಂಗ್ಳು ನಾನು ಹೋದೆ, ಮುಂದಿನ ತಿಂಗ್ಳು, ಝಾಬಾ ಹೋಗ್ತಾನೆ, ಮೂರನೇ ತಿಂಗ್ಳು ನಿನ್ನ ಸರದಿ”
ನಮ್ಮೊಂದಿಗೆ ಬರುತ್ತಿದ್ದ ಝಾಬಾ ಆಶ್ಚರ್ಯದಿಂದ ಕುಟ್ಟಿಯನ್ನು ನೋಡಿ ಮೆಲ್ಲನೆ ಪ್ರಶ್ನಿಸಿದ. “ಎಲ್ಲಿಗೆ ಹೋಗಬೇಕು?”
“ದುಲಈ ಹತ್ರ” ನಾನು ಉತ್ತರಿಸಿದೆ.
“ಅವಳ ಹತ್ರ ನನಗೇನು ಕೆಲಸ?”
“ಕೆಲಸವಂತೂ ನಮ್ಮ ಮೂರೂ ಜನಕ್ಕೆ ಸೇರಿದೆ. ಆ ಮೂವರಲ್ಲಿ ನೀನೂ ಒಬ್ಪ”. ಕುಟ್ಟಿ ಹೇಳುತ್ತಲೇ ಹೋಗುತ್ತಿದ್ದ. “ಅಂದ್ರೆ”, ನಿನಗೂ ನಿನ್ನ ಮಹಾನ್ ಫಿಲಾಸಫಿಯ ಲಾಭವನ್ನು ದುಲಈಗೆ ಕೊಡಬೇಕಾಗುತ್ತೆ”
ಝಾಬಾನಿಗೆ ಅವನ ಮಾತು ಅರ್ಥವಾಗಲಿಲ್ಲ. ಆದರೂ ಅಜ್ಞಾತ ಸಂಚಿನ ವಾಸನೆ ತನಗೆ ಬರುತ್ತಿದೆ ಎಂದು ಅವನ ಮುಖ ಹೇಳುತ್ತಿತ್ತು ಬಹುಶಃ ಅದಕ್ಕಾಗಿಯೇ ಮಾರನೆಯ ತಿಂಗಳು ಅವನು ದುಲಈ ಬಳಿಗೆ ಹೋಗಲು ಒಪ್ಪಲಿಲ್ಲ. ಭಯಾನಕವಾಗಿ ತಿರಸ್ಕರಿಸಿದ! ಅವನ ಮುಖ ಕೆಂಪಾಗಿತ್ತು. ಕುಟ್ಟಿ ಅವನಿಗೆ ತಿಳಿಹೇಳಿದ. “ದುಲಈಯಿಂದ ನಾದ್ಮ\ ಸಾಕಷ್ಟು ಕಲಿಯುವುದಿದೆ, ತಿಳಿಯುವುದಿದೆ. ಅವಳು ಕುತೂಹಲದ ಹೆಣ್ಣು, ಜಗತ್ತಿನ ಎಲ್ಲಾ ವಿಷಯಗಳ ಬಗ್ಗೆಯೂ ಅವಳಿಗೆ ಆಸಕ್ತಿ ಇದೆ ಎಂಬುದನ್ನು, ನಾನು ಅವಳೊಂದಿಗೆ ಒಂದು ಗಂಟೆ ಇದ್ದು ಅರ್ಥಮಾಡಿಕೊಂಡೆ”.
“ಎನ್ ತಿಳೀತು? ಎನ್ ತಿಳೀತು” ಝಾಬಾ ಕಳವಳದಿಂದ ಎರಡುಬಾರಿ ಪ್ರಶ್ನಿಸಿದ.
“ದುಲಈಗೆ ಫಿಲಾಸಫಿಯಲ್ಲೂ ಆಸಕ್ತಿ ಇದೆ. ನಿಜ ಹೇಳಬೇಕೆಂದರೆ ಒಂಟಿತನದಿಂದ ಅವಳು ಬೇಸತ್ತಿದ್ದಾಳೆ, ನಾವಿಲ್ಲಿ ಹನ್ನೊಂದು ತಿಂಗಳಿನಿಂದ ಇದ್ದರೂ ಅವಳ ಭಾವನೆಗಳ ಬಗ್ಗೆ ಸಹಾನುಭೂತಿ ತೋರಿಸುವ ಅಗತ್ಯ ನಮ್ಮ ಗಮನಕ್ಕೆ ಬರಲಿಲ್ಲ ಪ್ರಯತ್ನವನ್ನೂ ಮಾಡಲಿಲ್ಲ. ನಿನ್ನ ಮಾತಿನಲ್ಲೇ ಹೇಳಬೇಕೆಂದರೆ, ಸೊಳ್ಳೆಗಳು ಎರಡು ಒಳ್ಳೆಯ ಮಾತಿಗೆ ಹಾತೊರೆಯುತ್ತವೆ. ಅವು ಆಸರೆ ಹುಡುಕ್ತಾ ತಿರುಗುತ್ತವೆ. ದುಲಈಗೂ ಆಸರೆಯ ಅಗತ್ಯವಿದೆ. ಸರಿಯಾದ ಅವಕಾಶ ಬಂದಿದೆ. ನಾವು ಅವಕಾಶವನ್ನು ಕಳೆದುಕೊಂಡರೆ ಬೇರೆಯಾರೂ ನಮಗೆ ಮನೆ ಬಾಡಿಗೆಗೆ ಕೊಡಲ್ಲಾ ಅಲ್ಲದೇ, ಏಳುತಿಂಗಳ ಬಾಡಿಗೆ ವಸೂಲಿಗಾಗಿ ದುಲಈ ದೊಣ್ಣೆಹಿಡಿದು ಬರುತ್ತಾಳೆ” ಕುಟ್ಟಿ ಸಹಜವಾಗಿಯೇ ಹೇಳಿದ.
ಝಾಬಾನನ್ನು ಮಾತಿನಲ್ಲಿ ಬಂಧಿಸಿಕೊಂಡು, ಅವನನ್ನು ಕುಟ್ಟಿ ಮೇಲೆ ಹತ್ತಿಸಿಕೊಂಡುಹೋದ ನಾನು ನಿಂತಲ್ಲೇ ನೋಡುತ್ತಾ ನಿಂತುಬಿಟ್ಟೆ ನೋಡು ನೋಡುತ್ತಿದ್ದಂತೆಯೇ, ಕುಟ್ಟಿ ದುಲಈಯ ಕೋಣೆಯ ಬಾಗಿಲನ್ನು ತೆರೆದು ಝಾಬಾನನ್ನು ಒಳಗೆ ತಿಳ್ಳಿಬಟ್ಟ. ನನ್ನಿಂದ ನಗು ತಡೆಯಲಾಗಲಿಲ್ಲ, ಕಿಲಕಿಲನೆ ನಕ್ಕೆ. ಕೆಳಗೆ ಬಂದು ಕುಟ್ಟಿಯೂ ನಗಲಾರಂಭಿಸಿದ. ನಕ್ಕು-ನಕ್ಕು ಇಬ್ಪರಿಗೂ ಸುಸ್ತಾಯಿತು.
“ಕತ್ತೆ ಮಗನೇ!” ಇನ್ನೂ ಹತ್ತು ನಿಮಿಷವೂ ಆಗಿರಲಿಲ್ಲ ಆಗಲೇ ದುಲಈ ಘರ್ಜನೆ ಕೇಳಿಸಿತು. ನಮಗೆ ಆಶ್ವರ್ಯವಾಯಿತು. ಕುಟ್ಟಿ ಮೆಟ್ಟಿಲುಗಳನ್ನೇರಿ ಹೋದ. ಅಲ್ಲಿಂದಲೇ ತಲೆ ಮೇಲೆತ್ತಿ ನೋಡಿದ. ಹೊಸ್ತಿಲಲ್ಲಿ ದುಲಈ ನಿಂತಿದ್ದಳು.
“ಏನಾಯ್ತು ದುಲಈ?” ಕುಟ್ಟಿ ಮುಗ್ದನಾಗಿ ಪ್ರಶ್ನಿಸಿದ. “ಏನಾಗೋದು! ಸ್ವಲ್ಪ
ಮೇಲೆ ಬಂದು ನೋಡು! ನಿನ್ನ ಗೋರಿಲ್ಲ ನನ್ನ ಕೋಣೆಲಿ ವಾಂತಿ ಮಾಡಿ ಬಿಟ್ಟ.”
“ವಾಂತಿ!” ನಾವಿಬ್ಪರೂ ಪರಸ್ಪರ ಮುಖ ನೋಡಿಕೊಂಡು ಕೂಡಲೇ ಮೇಲೆ ಹತ್ತಿ ಹೋದೆವು.
ಎರಡೂ ಮೊಣಕಾಲುಗಳ ಮಧ್ಯೆ ತಲೆ ಅಡಗಿಸಿಕೊಂಡು ಝಾಬಾ ಕುಕ್ಕುರುಗಾಲಲ್ಲಿ ಕೂತು ಕಂಪಿಸುತ್ತಿದ್ದ. ಅವನ ಗಾಜಿನಂತಹ ಕಣ್ಣುಗಳು ಬಹುಶಃ ತಾನು ಭೂತವನ್ನೇ ನೋಡಿದೆ ಎಂದು ಸಾರುತ್ತಿದ್ದವು. ಹಾಗಂತ, ಅವನ ಜೇನುಗೂಡಿನಂತಹ ಗಡ್ಡ ಮತ್ತು ಶ್ರೀ ಸತ್ಯಸಾಯಿಬಾಬಾರಂತಹ ತಲೆಗೂದಲುಗಳನ್ನು ನೋಡಿ ಹೆಣ್ಣು ಭೂತ ಓಟಕಿತ್ತರೂ ಆಶ್ಜರ್ಯವಿರಲಿಲ್ಲ. ಆದರೆ, ಕುಟ್ಟಿಗೆ ಒಳಗೊಳಗೇ ನಗು ಬರುತ್ತಿತ್ತು. ಬಹು ಕಷ್ಟದಿಂದ ಅವನು ನಗುವನ್ನು ನುಂಗಿಕೊಳ್ಳುತ್ತಲಿದ್ದ. ವಾಸ್ತವವಾಗಿ, ಈಗ ಝಾಬಾನ ಪರಿಸ್ಥಿತಿ ಕಂಡರೆ ಸಹಾನುಭೂತಿಯುಂಟಾಗುತ್ತಿತ್ತು. ನಮ್ಮನ್ನು ನೋಡಿ ಅವನು ಅತ್ತು ಬಿಡುತ್ತಾನೆಂದು ನನಗನ್ನಿಸಿತು.
ನಾನು ಅವನನ್ನು ಹಿಡಿದುಕೊಂಡು ನಿಲ್ಲಿಸಿದೆ. ತಿಳಿವಳಿಕೆಯ ಮಗುವಿನಂತೆ ಅವನು ಮೌನಿಯಾಗಿ ಎದ್ದು ನಿಂತ. ಬಹು ಎಚ್ಜರಿಕೆಯಿಂದ ಕೆಳಗಿಳಿಸಿಕೊಂಡು ಬಂದೆ. ಅವನು ಒಂದು ಶಬ್ದವನ್ನೂ ಉಚ್ಚರಿಸದೆ ಕಂಬಳಿ ಹೊದ್ದು ಹಾಸಿಗೆ ಮೇಲೆ ಮಲಗಿಬಿಟ್ಟ. ಅವನು ವಾಸ್ತವವಾಗಿಯೂ ಭೂತದರ್ಶನ ಮಾಡಿದ್ದನೇ? ನನಗೊಂದೂ ಹೊಳೆಯುತ್ತಿರಲಿಲ್ಲ. ಮೂಲೆಯಲ್ಲಿದ್ದ ಟೇಬಲ್ ಮೇಲೆ ಕೈಯೂರಿ ಕೂತೆ.
ಸ್ವಲ್ಪ ಹೊತ್ತಿನ ಅನಂತರ ಕುಟ್ಟಿ ಬಂದ. ಇಬ್ಪರು ಕಾಟೇಜಿನಿಂದ ಹೊರಬಂದೆವು, ಮೆಲ್ಲನೆ ಹೆಜ್ಜೆ ಹಾಕುತ್ತಾ ಸಮುದ್ರ ತೀರಕ್ಕೆ ಬಂದೆವು. ಕುಟ್ಟಿ ಇನ್ನೂ ಮೌನಿಯಾಗಿದ್ದ. ನನ್ನಿಂದ ತಡೆಯಲಾಗಲಿಲ್ಲ. “ಏನಾಯ್ತು?” ಎಂದು ಪ್ರಶ್ನಿಸಿದೆ. ಕುಟ್ಟಿ ನನ್ನ ಪ್ರಶ್ನೆಗೆ ನೇರವಾಗಿ ಉತ್ತರಿಸದೆ ಹೇಳಿದ, “ಈ ವಿಷಯ ಮುಂದಿನ ತಿಂಗಳು ನೀನು ಹೋದಾಗ ಅರ್ಥವಾಗುತ್ತೆ”.
ಪ್ಲಾಟ್ ಫಾರಂನಲ್ಲಿ ನನ್ನೆದುರು ನಖಶಿಖಾಂತ ಮುಚ್ಜಿದ ಶವವೊಂದನ್ನು ಸ್ಪ್ರೆಚರ್ ನಲ್ಲಿ ಒಯ್ಯವುದನ್ನು ನಾನು ನೋಡುತ್ತಿದ್ದೇನೆ. ರೈಲು ದುರ್ಘಟನೆಯಲ್ಲಿ ಅರಚಿಹೋದ ದುರದೃಷ್ಟನೊಬ್ಪನ ಶವ ಗೇಟಿನಡೆಗೆ ಹೋಗುತ್ತಿದೆ. ಗಾಳಿಯ ಹೊಡೆತಕ್ಕೆ ಬಟ್ಟೆ ಸ್ವಲ್ಪ ಸರಿದಾಗ ನಾನು ಕಂಪಿಸುತ್ತೇನೆ. ಸ್ಪ್ರೆಚರ್ ನಲ್ಲಿ ಮಾಂಸದ ತುಂಡುಗಳಿವೆ.
ನಾನು ಯೋಚನಾ ಮಗ್ನನಾಗುತ್ತೇನೆ. ಈ ಸ್ಪ್ರೆಚರನ್ನು ಅಂಬ್ಯುಲೆನ್ಸ್ಗೆ ಹಾಕಲಾಗುತ್ತದೆ. ಸ್ಪ್ರಚರ್ನೊಂದಿಗೆ ಅದನ್ನು ಹೊರುವ ಎರಡು ತೋಳಗಳೂ ಅಂಬ್ಯುಲೆನ್ಸ್ ನಲ್ಲಿ ಕೂರುತ್ತವೆ. ಗಡಗಡನೆ ಶಬ್ದ ಮಾಡುತ್ತಾ ಅಂಬ್ಯುಲೆನ್ಸ್ ಹೊರಟಾಗ ಎರಡು ತೋಳಗಳೂ ಶವದ ಜೋಬುಗಳನ್ನು ತಡವರಿಸುತ್ತವೆ. ಇರುವ ದುಡ್ಡನ್ನು ಬಾಚಿಕೊಳ್ಳುತ್ತವೆ. ಕೈಗಡಿಯಾರವನ್ನು ಕಳಚಿಕೊಳ್ಳುತ್ತವೆ. ಉಂಗುರವನ್ನು ತೆಗೆದುಕೊಳ್ಳುತ್ತವೆ. ಪೆನ್ ಕೂಡ ಬಿಡುವುದಿಲ್ಲ. ಬೀಡಿ ಮತ್ತು ಬೆಂಕಿಪೊಟ್ಟಣವನ್ನೂ ದೋಚುತ್ತವೆ.
ಅನಂತರ ಎರಡು ತೋಳಗಳೂ ತಮ್ಮ ರಕ್ತಸಿಕ್ತವಾದ ಕೈಗಳನ್ನು ಅದೇ ಪ್ರೇತ ವಸ್ತ್ರಕ್ಕೆ ಒರಸಿ, ಪ್ರೇತವಸ್ತ್ರವನ್ನು ಸರಿಯಾಗಿ ಹೊದಿಸುತ್ತವೆ. ಮೊದಲ ಬಾರಿಗೆ ಈ ದೃಶ್ಯ ಕಂಡು ನನಗೆ ಆಘಾತವಾಗಿತ್ತು. ಒಂದು ವೇಳೆ ನೀವೂ ಮೊದಲ ಬಾರಿಗೆ ಈ ವಾಸ್ತವಾಂಶವನ್ನು ಓದುತ್ತಿದ್ದರೆ ನಿಮಗೂ ಆಶ್ಚರ್ಯವಾಗಬಹುದು. ಆದರೆ ಇದೇನೂ ಹೊಸ ವಿಷಯವಲ್ಲ.
ನಾನು ತಲೆಯ ಮೇಲಿನ ಗಡಿಯಾರವನ್ನು ಗಮನಿಸುತ್ತೇನೆ. ನನ್ನ ಬದುಕಿನ ಹದಿನೈದು ನಿಮಿಷಗಳು ಜಾರಿ ಹೋಗಿವೆ. ಸಾವು ಮತ್ತು ನನ್ನ ನಡುವೆ ಈಗ ಒಂದು ಗಂಟೆ ನಲವತ್ತೈದು ನಿಮಿಷಗಳ ಅಂತರ ಉಳಿದಿದೆ! ದುಲಈಯ ಹಸುರು ಕಾಟೇಜ್ ‘ಥೈಸ್’ ಮತ್ತು ನನ್ನ ನಡುವೆ ಸುಮಾರು ಐವತ್ತು ಗಂಟೆಗಳ ಅಂತರವಿರಬಹುದು! ಇಷ್ಟೂಂದು ಧೀರ್ಘ ಅಂತರ ನಮ್ಮ ನಡುವೆ ಎಂದೂ ಆಗಿರಲಿಲ್ಲ. ಈ ಅಂತರ ನನಗೆಂದೂ ಇಷ್ಟೊಂದು ದೀರ್ಘವೆನಿಸಲಿಲ್ಲ. ಈಗ ಸ್ವಲ್ಪ ಹೆಚ್ಚೇ ದೂರವೆನಿಸುತ್ತದೆ. ಕ್ಷಣ ಕ್ಷಣವೂ ಮತ್ತೂ ಹೆಚ್ಜು ವಿಸ್ತಾರವಾಗುತ್ತಿದೆ. ಝಾಬಾ ದೂರವಾಗುತ್ತಿದ್ದಾನೆ. ದುಲಈ ದೂರವಾಗುತ್ತಿದ್ದಾಳೆ, ಕುಟ್ಟಿ.
ಕೈಕೊಟ್ಟ ಉಪಾಯ ಅಧ್ಯಾಯ -3
ಕುಟ್ಟಿ ಕಥೆಗಾರನಾಗಿದ್ದರೂ ಅವನಿಗೆ ಯಾರಾದರೂ ಸಾಹಿತಿ ಎಂದರೆ ಇಷ್ಟವಾಗುತ್ತಿರಲಿಲ್ಲ. ಝಾಬಾ ದಾರ್ಶನಿಕನಲ್ಲದಿದ್ದರೂ ಯಾರಾದರೂ ಅವನಗೆ ಫಿಲಾಸಫರ್ ಎಂದರೆ ಸಂತೋಷವಾಗುತ್ತಿತ್ತು. ವಾಸ್ತವವಾಗಿ ಝಾಬಾ ಒಬ್ಪ ಮೂವೀ-ಕ್ಯಾಮೆರಾಮೆನ್ ಆಗಿದ್ದ. ಸದಾ ಅವನು ಕ್ಯಾಮೆರಾದ ಆ್ಯಂಗಲ್ನಿಂದ ನೋಡುತ್ತಿದ್ದ. ಹಾಗೇ ಯೋಚಿಸುತ್ತಿದ್ದ ಮತ್ತು ವಿಚಾರಗಳಲ್ಲೇ ಕಳೆದು ಹೋಗಿರುತ್ತಿದ್ದ. ನಾನೇನು ಯೋಚಿಸುತ್ತಿದ್ದೆ ಎಂಬುದನ್ನು ಅವನು ಇದುವರೆಗೂ ವ್ಯಕ್ತಪಡಿಸಲಿಲ್ಲ. ಎಲ್ಲಿಯವರೆಗೆ ತನ್ನ ವಿಚಾರಗಳು ಪರಿಪಕ್ವಗೊಳ್ಳುವುದಿಲ್ಲವೋ ಅಲ್ಲಿಯವರೆಗೆ ತಾನದನ್ನು ವ್ಯಕ್ತಗೊಳಿಸುವುದಿಲ್ಲವೆಂಬುದು ಅವನ ವಿಚಾರವಾಗಿತ್ತು. ಆದಷ್ಟು ಶೀಘ್ರ, ಫೋಟೋಗ್ರಫಿಯ ಕ್ಷೇತ್ರದಲ್ಲಿ ಮಹಾನ್ ಶೋಧವೊಂದನ್ನು ಮಾಡುವ ಆಸೆಯನ್ನು ಅವನಿಟ್ಟುಕೊಂಡಿದ್ದ!.
ನಾನು ಸಾಹಿತಿಯೂ ಅಲ್ಲ, ಫೋಟೋಗ್ರಾಫರನೂ ಅಲ್ಲ. ಆದರೂ ನನ್ನಲ್ಲಿ ಈ ಎರಡೂ ಕ್ಷೇತ್ರಗಳ ಬಗ್ಗೆ ಅಗತ್ಯ ಅರಿವು ಇದಯೆಂಬುದಂತೂ ನಿಜ. ಇವರಿಬ್ಪರೆದುರು ನನ್ನ ವಿಚಾರಗಳನ್ನು ನಿಸ್ಸಂಕೋಚವಾಗಿ ಹೇಳಬಲ್ಲವನಾಗಿದ್ದೆ. ಇಬ್ಪರೂ ನನ್ನ ಮಾತನ್ನು ಕೇಳುತ್ತಿದ್ದರು. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ನಮ್ಮ ವಿಚಾರಗಳಲ್ಲಿ ಭಿನ್ನತೆಯಿದ್ದಾಗ್ಯೂ ನಮ್ಮ ವಿಚಾರಗಳಲ್ಲಿ ಸಮಾನತೆಯಿತ್ತು.
ನನ್ನ ವಿಷಯ-ಡೈರೆಕ್ಷನ್, ಅಂದರೆ ನಿರ್ದಶನ, ವೂನಾದ ಫಿಲ್ಮ್ ಇನ್ಸ್ಟಿಟ್ಯೂಟ್ನ ಡಿಪ್ಲೋಮಾ ನನ್ನ ಬಳಿಯಿದೆ. ಕುಟ್ಟಿಯೊಂದಿಗೆ ನನ್ನ ಪ್ರಥಮ ಪರಿಚಯ ಅಲ್ಲೇ ಆಗಿತ್ತು. ಫಿಲ್ಮ್ ಇದಸ್ಟಿಟ್ಯೂಟ್ನಲ್ಲಿ “ಸ್ಕ್ರೀನ್-ಪ್ಲೇಯ ಅಧ್ಯಯನಕ್ಕಾಗಿ ಮದ್ರಾಸಿನಿಂದ ಅವನು ಓಡಿ ಬಂದಿದ್ದ. ಅವನೊಂದಿಗೆ ಅವನ ತಂದೆಯೂ ಬಂದಿದ್ದ. ಕುಟ್ಟಿ ಮರಳಿ ಹೋಗಲಿಲ್ಲ. ಅವನ ವೃದ್ಧ ತಂದೆ ಚಿಂತಿತರಾಗಿ ಹೊರಟು ಹೋದರು. ಅಂದಿನಿಂದ ನಾವಿಬ್ಪರು ಮಿತ್ರರಾಗಿದ್ದೆವು.
ನಾವು ಝಾಬಾನ ಪರಿಚಯಕ್ಕೆ ಬಂದಿದ್ದೂ, ಕೇಳಲು ಯೋಗ್ಯವಾದಂತಹದ್ದು. ಆ ದಿನಗಳಲ್ಲಿ ನಾವು ಒಂದು ಚಿಕ್ಕ ಫಿಲ್ಮ್ ಶೂಟಿಂಗ್ಗಾಗಿ ಪೂನಾದಿಂದ ಬೊಂಬಾಯಿಗೆ ಬಂದಿದ್ದೆವು. ಒಂದೇ ದಿನದ ಕೆಲಸವಾಗಿತ್ತು. ನಾವು ಅಪೋಲೋ ಬಂದರಿನ ಸೂರ್ಯೋದಯದ ವಾತಾವರಣವನ್ನು ಚಿತ್ರೀಕರಿಸಬೇಕಿತ್ತು. ವಾತಾವರಣವೆಂದರೆ ಸೂರ್ಯೋದಯದ ವೇಳೆಗೆ ಅಪೋಲೋ ಬಂದರಿನಲ್ಲಿ ಸುತ್ತು ಹಾಕುವ ಸ್ಥೂಲ ಶರೀರಗಳು, ಪಾರಿವಾಳಗಳಿಗೆ ಕಾಳು ಹಾಕುವ ಧರ್ಮಾತ್ಮರು, ಮುಂಜಾನೆಯ ಸೈಕಲ್ಸವಾರರು ಇತ್ಯಾದಿ-ಇತ್ಯಾದಿ ಚಿತ್ರಗಳನ್ನು ಚಿತ್ರೀಕರಿಸಬೇಕಿತ್ತು.
ಸೂರ್ಯೋದಯಕ್ಕೂ ಮೊದಲು ಕ್ಯಾಮರಾ ಹಿಡಿದು ಸಿದ್ಧರಾಗಿದ್ದೆವು. ದುರದೃಷ್ಟರಿಂದಾಗಿ ಅಂದು ಮೋಡಗಳಿಂದಾಗಿ ಸೂರ್ಯ ಕಾಣಲಿಲ್ಲ. ಮಾರನೆಯ ದಿನ ನಾವು ಮರಳಿ ಅಪೋಲೋ ಬಂದರಿಗೆ ಬಂದೆವು. ಮೂರನೆಯ ದಿನವೂ ಆಕಾಶದಲ್ಲಿ ಮೋಡಗಳು ಆವೃತವಾಗಿದ್ದವು. ಕುಟ್ಟಿಗೆ ಸಿಟ್ಟು ಬಂದು ‘ಸ್ಕ್ರಿಪ್ಟ್ ಬದಲಾಯಿಸಿ ಬಿಡ್ತೀನಿ! ಸಬ್ಜೆಕ್ಟೇ ಬದಲಾಯಿಸಿ ಬಿಡ್ತೀನಿ! ನಾನು ಪ್ರಕೃತಿಗೆ ಸೊಪ್ಪು ಹಾಕಲ್ಲ’ ಎಂದ. ಆದರೆ ಅವನಿಗೆ ವಿಷಯ ಬದಲಾವಣೆ ಮಾಡುವ ಅಗತ್ಯವುಂಟಾಗಲಿಲ್ಲ.
ಸೂರ್ಯನ ಪ್ರಥಮ ಕಿರಣಗಳು ಮೋಡಗಳನ್ನು ಭೇದಿಸಿ ನಮ್ಮ ಕಾಲುಗಳ ಬಳಿ ಆಡುತ್ತಿದ್ದ ಪಾರಿವಾಳಗಳ ರೆಕ್ಕೆಗಳ ಮೇಲೆ ಬಿದ್ದವು. ನಮ್ಮ ಕಣ್ಣುಗಳು ಹೊಳೆದವು. ನಮ್ಮೊಂದಿಗೆ ಬಂದಿದ್ದ ಇನ್ಟ್ಯೂಟ್ನ ಕ್ಯಾಮೆರಾಮೆನ್ ವ್ಯೂ- ಫೌಂಡರ್ ನಲ್ಲಿ ದೃಷ್ಟಿ ಹರಿಸಿದ. ವೈಡ್ ಆ್ಯಂಗಲ್ ಲೆನ್ಸ್ ನ ಅಗತ್ಯ ಅವನಿಗಾಗಲಿಲ್ಲ. ತತ್ ಕ್ಷಣ ‘ಕಿಟ್’ ತೆರೆದ. ಲೆನ್ಸ್ ನ್ನು ಹೊರತುಪಡಿಸಿ ಫೋಟೋಗ್ರಫಿಯ ಎಲ್ಲಾ ವಸ್ತುಗಳು ಅದರಲ್ಲಿದ್ದವು.
ಈ ಬಾರಿ ಕುಟ್ಟಿಯ ಸಿಟ್ಟಿನ ಕಟ್ಟೆ ಒಡೆಯಿತು. ನನ್ನ ಕಣ್ಣುಗಳೂ ಕೆಂಪಗಾದವು, ಮೂರು ದಿನಗಳ ಅನಂತರ ಸೂರ್ಯ ಕಾಣಿಸಿದ್ದ. ಆದರೆ ಅಗತ್ಯದ ಲೆನ್ಸ್ ಮಾಯವಾಗಿತ್ತು. ನಾವು ಸಿಟ್ಟಿನಿಂದ ಕ್ಯಾಮರಾಮೆನ್ನನ್ನು ನೋಡಿದೆವು. ಅವನು “ಲೆನ್ಸ್ ಕಿಟ್ನಲ್ಲೇ ಇತ್ತು, ಯಾರೋ ತೆಗೆದುಕೊಂಡಿರಬೇಕು!” ಎಂದ.
ನಾನು ನನ್ನ ದೃಷ್ಟಿಯನ್ನು ಹೊರಳಿಸಿದೆ. ಅಪೋಲೋ ಬಂದರಿನ ತೀರದಲ್ಲಿ ಮೂರ್ನಾಲ್ಕು ಜನ ನಡುವಯಸ್ಸಿನ ವಕ್ದಿಗಳು ಕೂತಿದ್ದರು. ಓರ್ವ ನರ್ಸ್ ಬೇಬಿ ಸೈಕಲನ್ನು ತಳ್ಳುತ್ತಾ ನಮ್ಮೆಡೆಗೆ ಬರುತ್ತಿದ್ದಳು. ಸ್ವಲ್ಪ ದೂರದಲ್ಲಿ ದಡದ ಮೇಲೆ ಕೂತಿದ್ದ ಓರ್ವ ನೀಗ್ರೋವಿನ ಮೇಲೆ ನನ್ನ ದೃಷ್ಟಿ ಬಿತ್ತು. ಬಿಳಿ ಟೀ-ಶರ್ಟ್, ಬ್ಲೂಜೀನ್ಸ್, ಸೊಂಟಕ್ಕೆ ದಪ್ಪ ಬೆಲ್ಟ್ ಮತ್ತು ಬೆನ್ನ ಮೇಲೆ ಗಿಟಾರ್ ಹಾಕಿಕೊಂಡು ವೈಡ್ ಆ್ಯಂಗಲ್ ಲೆನ್ಸನ್ನು ಕೈಯಲ್ಲಿ ಆಡಿಸುತ್ತಾ ಅವನು ಮೌನಿಯಾಗಿ ಕೂತಿದ್ದ.
ನಾನು ಕುಟ್ಟಿಯೊಂದಿಗೆ ಅವನ ಬಳಿ ಓಡಿ ಬಂದೆ.
“ಈ ಲೆನ್ಸ್ ಯಾರದ್ದು?” ಕುಟ್ಟಿ ಅವನ ಹೆಗಲ ಮೇಲೆ ಕೈಯಿಟ್ಟು ನೇರವಾಗಿ ಪ್ರಶ್ನಿಸಿದ.
ಮೊದಲು ಅವನಿಗೆ ಆಶ್ಚರ್ಯವಾಯಿತು. ತನ್ನ ಗಂಭೀರ ವಿಚಾರಗಳಿಗೆ ವಿಘ್ನವುಂಟುಮಾಡಿದ್ದಕ್ಕಾಗಿ ಸ್ವಲ್ಪ ಕೋಪವನ್ನು ವ್ಯಕ್ತಪಡಿಸಿದ. ಆದರೆ ಆಮೇಲೆ ನಗುತ್ತಾ “ಲೆನ್ಸ್ ನನ್ನ ಕೈಯಲ್ಲಿದೆ, ಹೀಗಾಗಿ ನನ್ನದೇ ಆಗಿರಬೇಕು!” ಎಂದ.
ನೀಗ್ರೋವಿನ ಶರೀರದ ರಚನೆಯನ್ನು ಕಂಡು ಕುಟ್ಟಿ ಹೆಚ್ಚು ಚರ್ಚಿಸುವುದು ಉಚಿತವಲ್ಲವೆಂದು ತಿಳಿದ. ಕೂಡಲೇ ತಾಜ್ಮಹಲ್ ಹೋಟೆಲ್ನ ಗೇಟಿಗೆ ಓಡಿ ಬಂದು, ದೊಣ್ಣೆಯೊಂದಿಗೆ ಅಲ್ಲಿ ನಿಂತಿದ್ದ ಪೊಲೀಸನನ್ನು ಕರೆದುಕೊಂಡು ಮರಳಿ ಬಂದ. ಪೋಲೀಸೂ ಅವನನ್ನು ನಮ್ಮಂತೆಯೇ ಪ್ರಶ್ನಿಸಿದ. ನೀಗ್ರೋ ಕೂಡ ನಮಗೆ ಉತ್ತರಿಸಿದಂತೆಯೇ ಉತ್ತರಿಸುತ್ತಾ “ನನ್ನ ಹೆಸರು ಝಾಬಾ. ನಾನೊಬ್ಪ ಫೋಟೋಗ್ರಾಫರ್” ಎಂದು ತನ್ನ ಪರಿಚಯ ಹೇಳಿದ. ಅನಂತರ ತನ್ನ ಶೌಲ್ಡರ್ ಬ್ಯಾಗ್ ತೆರೆದು ಒಳಗಿನಿಂದ ಎರಡು ಲ್ಯೆಕಾ ಕ್ಯಾಮೆರಾ, ಸುಮರ್-ಎಟ್ನ ಒಂದು ಮೂವಿ ಕ್ಯಾಮೆರಾ ಮತ್ತು ಇನ್ನೂ ಕೆಲವು ಲೆನ್ಸ್ಗಳನ್ನು ಹೊರತೆಗೆದು ಸಾಕ್ಷಿರೂಪದಲ್ಲಿ ನಮಗೆ ತೋರಿಸಿದ. ನಾನು ಮತ್ತು ಕುಟ್ಟಿ. ಆಶ್ಚರ್ಯದಿಂದ ಅವನನ್ನೇ ನೋಡುತ್ತಾ ನಿಂತು ಬಿಟ್ಟೆವು.
“ನಾನು ನಿಮಗೇನಾದರೂ ಸಹಾಯ ಮಾಡಬಲ್ಲೆನೆ?” ನಾವು ವ್ಯಗ್ರರಾಗಿದ್ದನ್ನು ಕಂಡು ಅವನು ವಿನಯದಿಂದ ಪ್ರಶ್ನಿಸಿದ.
“ನಮಗೆ ವೈಡ್ ಆ್ಯಂಗಲ್ ಲೆನ್ಸ್ ಬೇಕಾಗಿತ್ತು – ಕೆಲವು ನಿಮಿಷ ಮಾತ್ರ” ಎಂದ ಕುಟ್ಟಿ.
ಸ್ವಲ್ಪವೂ ಯೋಚಿಸದೆ ನೀಗ್ರೋ ನಮ್ಮ ಕೈಗೆ ಲೆನ್ಸ್ ಹಾಕಿದ. ನಾವು ಗದ್ಗದಿತರಾದೆವು. ಶಾಟ್ ಹೊಡೆದಾದ ಮೇಲೆ ಅವನ ಬಳಿಗೆ ಬಂದು ಧನ್ಯವಾದಗಳನ್ನು ಅರ್ಪಿಸಿದವು. ಕುಟ್ಟಿ ಅವನ ಬಗ್ಗೆ ಅದಷ್ಟು ಮರುಳನಾದನೆಂದರೆ ಅವನನ್ನು ಜತೆಯಲ್ಲಿ ಚಹಾ ತೆಗೆದುಕೊಳ್ಳಲು ಆಹ್ತಾನಿಸಿದ. ನೀಗ್ರೋ ಮುಗುಳ್ನಕ್ಕು ಒಪ್ಪಿಕೊಂಡ.
ನಾವು ಮೂವರೂ ಬಳಿಯೇ ಇದ್ದ ಮದ್ರಾಸಿ ಹೋಟೆಲ್ಗೆ ಚಹಾ ಕುಡಿಯಲು ಹೋದೆವು. ಚಹಾ ಕುಡಿಯುತ್ತಾ ನೀಗ್ರೋ “ತಾನು ‘ಇಂಟರ್ನ್ಯಾಶನಲ್ ಲೀವಿಂಗ್’ನ ಸಾಂಸ್ಕೃತಿಕ ಕಾರ್ಯಕ್ರಮದ ಯೋಜನೆಯಡಿ ಮೂರು ತಿಂಗಳಿಗಾಗಿ ಅಮೇರಿಕಾದಿಂದ ಭಾರತಕ್ಕೆ ಬಂದಿದ್ದಾಗಿಯೂ, ಅದರೆ ಈಗ ಮರಳಿ ಅಮೇರಿಕಾಕ್ಕೆ ಹೋಗುವ ಆಸೆಯಿಲ್ಲವೆಂದೂ” ಹೇಳಿದ. ನಾವು ಅವನನ್ನು ನಮ್ಮೊಂದಿಗೆ ಮಾನಾಡಿ ಕರೆತಂದೆವು. ಈ ಘಟನೆ ನಡೆದು ಮೂರು ವರ್ಷಗಳೇ ಆಗಿವೆ. ಆಮೇಲೆ ನಾವು ಒರಿಸ್ಸಾದ ಸಮುದ್ರ ತೀರಕ್ಕೆ ಬಂದು, ಗೋಪಾಲಪುರದ ಹಳ್ಳಿಯಲ್ಲಿ ಬೀಡುಬಿಟ್ಟೆವು.
ನಾನು, ಕುಟ್ಟಿ ಮತ್ತು ಝಾಬಾ, ನಾವು ಮೂವರೂ ‘ಥೈಸ್’ ಎಂಬ ಹಸುರು ಕಾಟೇಜ್ನಲ್ಲಿ ವಾಸಿಸುತ್ತಿದ್ದೆವು. ಕೆಳ ಅಂತಿಸ್ತಿನಲ್ಲಿ ನಾವು ವಾಸಿಸುತ್ತಿದ್ದರೆ ಮೇಲ್ಭಾಗದಲ್ಲಿ ಮನೆ ಒಡತಿ ದುಲಈ ವಾಸಿಸುತ್ತಿದ್ದಳು. ಅವಳು ಮೃಗಾಲಯದ ಸಿಂಹಿಣಿಯಂತೆ ಒಂದು ಗೋಡೆಯಿಂದ ಇನ್ನೊಂದು ಗೋಡೆಯವರೆಗೆ ಸುತ್ತು ಹಾಕುತ್ತಿದ್ದಾಗ ಅವಳ ಹೆಜ್ಜೆಯ ಧ್ವನಿಯನ್ನು ನಾವು ಸ್ಪಷ್ಟವಾಗಿ ಕೇಳಬಹುದಿತ್ತು. ಒಮ್ಮೊಮ್ಮೆ ನಾವು ನಿದ್ರಿಸುತ್ತಿದ್ದಾಗ ಛಾವಣಿಯಿಂದ ಜಲ್ಲಿಕಲ್ಲುಗಳು ಬೀಳುತ್ತಿದ್ದುವು. ಆಗ ನಾವು ಸುಲಭವಾಗಿ ಅಂದಾಜು ಮಾಡಬಹುದಿತ್ತು . . . ದುಲಈ ಎರಡು ಪೆಗ್ ಮಧ್ಯವನ್ನು ಹೆಚ್ಚು ಸೇವಿಸಿದ್ದಾಳೆ, ಹೀಗಾಗಿ ಅವಳು ಕುಣಿಯುತ್ತಿದ್ದಾಳೆ. ಕಾರಣವಿಲ್ಲದೆ ಕಿರುಚುತ್ತಿದ್ದಳು. ನಾವು ಮೌನವಾಗಿ ಹೊರಗೆ ಓಡಿ ಬರುತ್ತಿದ್ದೆವು. ಸಮುದ್ರ ತೀರ ನಮ್ಮ ಕಾಟೇಜಿನ ಎದುರಿಗಿತ್ತು. ಸಮುದ್ರ-ತೀರಕ್ಕೆ ಬಂದು ಅಡ್ಯಾಡಿ, ಮರಳಿನ ಮೇಲೆ ಗಂಟೆಗಟ್ಟಲೆ ಕೂತು ಗಂಭೀರವಾಗಿ ಯೋಚಿಸುತ್ತಿದ್ದೆವು.
ನಮ್ಮನ್ನು ಹೆಚ್ಚು ವ್ಯಾಕುಲಗೊಳಿಸುತ್ತಿದ್ದುದು, ‘ಹಣ’. ನಮ್ಮ ಕೂಡಿಟ್ಟ ಹಣ ಖರ್ಜಾಗಿ ಅದಷ್ಟೋ ತಿಂಗಳುಗಳೇ ಸಂದಿದ್ದವು. ಇದಕ್ಕೆ ಯಾರನ್ನು ದೂಷಿಸುವುದೆಂದು ನಾನಿನ್ನೂ ನಿರ್ಧರಿಸಲು ಸಾಧ್ಯವಾಗಿರಲಿಲ್ಲ. ಒಮ್ಮೊಮ್ಮೆ ನಾನು ಝಾಬಾನನ್ನು, ದೂಷಿಸುತ್ತಿದ್ದೆ. ಒಂದು ವೇಳೆ ಅವನು ಗೋಪಾಲಪುರದ ಸಮುದ್ರತೀರದಲ್ಲಿ ಎಕ್ಸ್ಪೆರಿಮೆಂಟಲ್ ಫಿಲ್ಮ್ ತಯಾರಿಸುವ ವಿಚಾರ ಮಾಡದಿರುತ್ತಿದ್ದರೆ ಇಂದು ಹಣದ ವಿಚಾರದಲ್ಲಿ ನಾವಿಷ್ಟು ವ್ಯಗ್ರರಾಗಬೇಕಿರಲಿಲ್ಲ!
ಒಮ್ಮೊಮ್ಮೆ ನಾನು ಕುಟ್ಟಿಯನ್ನೂ, ದೋಷಿಯೆನ್ನಲು ಹಿಂಜರಿಯುತ್ತಿರಲಿಲ್ಲ. ಒಂದು ವೇಳೆ ಅವನು ಗೋಪಾಲಮರದ ಅದ್ಭುತ ಸಮುದ್ರತೀರದಲ್ಲಿ ಪುಸ್ತಕ ಓದದಿದ್ದಿದ್ದರೆ ನಾವಿಲ್ಲಿಯವರೆಗೆ ಬರುತ್ತಲೇ ಇರಲ್ಲಿಲ್ಲ! ಡಿಪ್ಲೋಮಾ ಪರೀಕ್ಷೆಯ ಅನಂತರ ಕುಟ್ಟಿ ನಮ್ಮನ್ನು ಇಲ್ಲಿಗೆ ಎಳೆದು ತಂದಿದ್ದ. ಮತ್ತೆ ಈ ಜಾಗ ನಮಗೆಷ್ಟು ಹಿಡಿಸಿತಂದರೆ, ಇದುವರೆಗೂ ಯಾರೂ ಇಲ್ಲಿಂದ ಮರಳಿ ಹೋಗುವ ಮಾತನ್ನು ಆಡುತ್ತಿರಲಿಲ್ಲ. ಮರಳಿ ಹೋಗದಿದ್ದುದ್ದಕ್ಕೆ ಮತ್ತೊಂದು ಕಾರಣ ನಮ್ಮ ಎಕ್ಸ್ವೆರಿಮೆಂಟಲ್ ಫಿಲ್ಮ್ ಕೂಡ ಆಗಿತ್ತು. ಫಿಲ್ಮ್ನ ಮೂರು ರೀಲುಗಳನ್ನು ನಾವಾಗಲೇ ತಯಾರಿಸಿಬಿಟ್ಟಿದ್ದೆವು. ಇನ್ನೊಂದು ರೀಲು ಉಳಿದಿತ್ತು. ಅದು ಆದ ಅನಂತರ ನಮ್ಮದೊಂದು ಚಿಕ್ಕ ಎಕ್ಸ್ವೆರಿಮೆಂಟಲ್ ಮೂವಿ ಸಿದ್ದವಾಗುವುದರಲ್ಲಿತ್ತು ಝಾಬಾ ಅದರ ಸ್ವಾಮ್ಯವನ್ನು ಅಮೆರಿಕನ್ ಟಿ.ವಿ.ಗೆ ಸಾವಿರಾರು ಡಾಲರ್ ಗಳಿಗೆ ಮಾರುವ ಆಸೆಯನ್ನಿಟ್ಟುಕೊಂಡಿದ್ದ. ಜತೆಗೇ, ನಾವೂ ಮೂವರೂ ಕೀರ್ತಿಯ ಶಿಖರವನ್ನೇರುವವರಿದ್ದೆವು. ಆದರೆ ಇವೆಲ್ಲಾ ಕೇವಲ ಸುಂದರ ಭವಿಷ್ಯದ ಕನಸಾಗಿತ್ತು. ಈಗ, ಕುರೂಪಿ ವರ್ತಮಾನ ಡ್ರಾಗನ್ನಂತೆ ಬೆಂಕಿ ಕಾರುತ್ತಿತ್ತು. ಆದಾಯದ ಯಾವ ಮಾರ್ಗವೂ ನಮ್ಮ ಬಳಿ ಇರಲಿಲ್ಲ. ಎಲ್ಲಿಂದಲೂ ಹಣ ಬರುವ ಭರವಸೆಯೂ ಇರಲಿಲ್ಲ.
ಹಳ್ಳಿಯ ಮಧ್ಯಕ್ಕೆ ಬಂದು ಕುಟ್ಟಿ ನನಗೆ ಸಂಜ್ಞೆಮಾಡಿದ. ನಾನು ಅರ್ಥಮಾಡಿಕೊಂಡೆ. ಅವನು ಬೀಳಲು ಸಿದ್ಧನಾಗಿದ್ದ. ನಾನು ಎಚ್ಚರಗೊಂಡೆ. ತನಗೆ ವಾಸ್ತವವಾಗಿಯೂ ತಲೆಸುತ್ತುತ್ತಿದೆ ಎಂಬಂತೆ ಅವನು ಬಳಿಯೇ ನಿಂತಿದ್ದ ವ್ಯಕ್ತಿಯೊಬ್ಬನ ಮೇಲೆ ಬಿದ್ದ. ನಾನು ಹಾರಿ ಅವನನ್ನು ಹಿಡಿದುಕೊಂಡು ಮೆಲ್ಲನೆ ನೆಲದ ಮೇಲೆ ಮಲಗಿಸಿದೆ. ಕುಟ್ಟಿ ಒದ್ದಾಡಲಾರಂಬಿಸಿದ. ಅವನ ತುಟಿಗಳ ಮಧ್ಯೆ ಜೊಲ್ಲು ಸ್ರವಿಸಲಾರಂಭಿಸಿತು. ನಾಲ್ಕು ಕಡೆಯಿಂದ ಜನ ದೌಡಾಯಿಸಿ ಬಂದರು.
ನಾನು ಹಣಕ್ಕಾಗಿ ಕೈ ಚಾಚಬೇಕೆಂದಿದ್ದೆ, ಆಗಲೇ ನನ್ನನ್ನು ದೂರಕ್ಕೆ ತಳ್ಳುತ್ತಾ ಬಂದ ಇಬ್ಪರು ತಮ್ಮ ಚಪ್ಪಲಿಗಳನ್ನು ಕುಟ್ಟಿಯ ಮೂಗಿಗೆ ಹಿಡಿದರು. ಒಬ್ಬ ಮೋಚಿಯೂ ಈ ಗುಂಪಿನಲ್ಲಿದ್ದ, ಅವನು ಓಡಿ ಮುಂದೆ ಬಂದು ಕೂಡಲೇ ನಾಲ್ಕೈದು ಬೇರೆ-ಬೇರೆ ವಿಧದ ಚಪ್ಪಲಿಗಳನ್ನು ಕುಟ್ಟಿಯ ಮೂಗಿನ ಬಳಿ ಹಿಡಿದು ಪರೀಕ್ಷಿಸಲಾರಂಭಿಸಿದ.
ಈ ಹಳ್ಳಿಯ ಪರೋಪಕಾರಿ ಜನ, ಸೇವೆ ಮಾಡುವ ಇಂಥ ಒಳ್ಳೆಯ ಅವಕಾಶವನ್ನು ಅದು ಹೇಗೆ ಕಳೆದುಕೊಳ್ಳುತ್ತಾರೆ! ಪ್ರತಿಯೊಬ್ಪರಿಗೂ ತನ್ನ ಚಪ್ಪಲಿ ಬಗ್ಗೆ ದೃಢನಂಬಿಕೆಯಿತ್ತು. ಪ್ರತಿಯೊಬ್ಪನೂ ತನ್ನ-ತನ್ನ ಚಪ್ಪಲಿಯನ್ನು ಕುಟ್ಟಿಯ ಮೂಗಿನ ಬಳಿ ಹಿಡಿಯಲು ಸ್ಪರ್ಧೆಗಿಳಿದಂತಿತ್ತು.
ನಾನೇನಾದರೂ ಹೇಳಲು ಪ್ರಯತ್ನಿಸಿದರೆ ಅಕ್ಕ-ಪಕ್ಕದಲ್ಲಿದ್ದ ಜನ ನನ್ನನ್ನು ತಡೆದು, “ನೋಡಪ್ಪಾ, ಇದು ಮೂರ್ಛೆರೋಗ, ಹೆದರ ಬೇಡ, ಸಮಾಧಾನ ಮಾಡ್ಕೋ. ಇನ್ನೂ ನನ್ನ ಚಪ್ಪಲಿ ನನ್ನ ಕಾಲಲ್ಲೇ ಇದೆ” ಎಂದು ನನಗೇ ಸಮಾಧಾನ ಮಾಡುತ್ತಿದ್ದರು.
ಕುಟ್ಟಿ ಹೆದರಿದ ಎಮ್ಮೆ ಕೊಂಬು ಎಮ್ಮೆಗೇ ಭಾರವಾಗುತ್ತೆ ಅಂತ ನಾವು ಕನಸಿನಲ್ಲೂ ಯೋಚಿಸಿರಲಿಲ್ಲ. ಆದರೂ ಜನಸೇವಕರು ಕುಟ್ಟಿಯ ಮೂಗಿನ ಬಳಿ ಹಿಡಿದ ಚಪ್ಪಲಿಗಳನ್ನು ಹಿಂತೆಗೆದುಕೊಳ್ಳಲು ಸಿದ್ಧರಿರಲಿಲ್ಲ. ಕಡೆಗೆ ಬಹು ಪ್ರಯಾಸದಿಂದ ಅವನು ಕೈ-ಕಾಲು ಬಡಿದು ಎದ್ದು ನಿಂತ.
“ಕಡೆಗೆ ನನ್ನ ಚಪ್ಪಲಿಯೇ ಪ್ರಭಾವ ಬೀರ್ತಲ್ಲ!” ಯಾರೋ ಹೇಳಿದ.
ನಮ್ಮ ಅದೃಷ್ಟದಲ್ಲಿ ‘ಲಕ್ಷ್ಮಿ’ಯನ್ನು ಹೊರತುಪಡಿಸಿ ಬೇರೆಲ್ಲಾ ಇತ್ತು. ಕುಟ್ಟಿಯ ಬಳಿ ಏಳೆಂಟು ಕಾದಂಬರಿಗಳ ಕಥಾವಸ್ತುಗಳಿದ್ದವು. ಒಂದು ಕಥಾವಸ್ತುವಿನ ಬಗ್ಗೆ ಮುನ್ನೂರ ಐವತ್ತು ಪುಟಗಳ ಕಾದಂಬರಿಯನ್ನು ಅವನು ಬರೆದಿದ್ದ. ಆಶ್ಚರ್ಯದ ವಿಷಯವೆಂದರೆ, ಮದ್ರಾಸಿನ ಪ್ರಕಾಶಕನೊಬ್ಬನಿಗೆ ಆ ಕಾದಂಬರಿಯನ್ನು ಪ್ರಕಟಿಸುವ ಇಚ್ಛೆಯೂ ಇತ್ತು ಕುಟ್ಟಿ ಹದಿನೈದು ಪರ್ಸೆಂಟ್ ರಾಯಲ್ಟಿ ಬಯಸುತ್ತಿದ್ದ. ಪ್ರಕಾಶಕ ಎರಡು ಪರ್ಸೆಂಟ್ಗಿಂತ ಹೆಚ್ಚು ಕೊಡಲು ಒಪ್ಪುತ್ತಿರಲಿಲ್ಲ. “ನನ್ನ ಬರವಣಿಗೆಗೆ ಇಷ್ಟು ತುಚ್ಛ ಬೆಲೆಯೇ? ಮೊದಲ ಕಾದಂಬರಿಯಾದರೆ ಏನಾಯ್ತು. ಇದರಿಂದ ನಾನು ಸಾವಿರಾರು ರೂಪಾಯಿಗಳನ್ನು ಸಂಪಾದನೆ ಮಾಡ್ತೀನಿ” ಎಂದು ಕುಟ್ಟಿ ಹೇಳುತ್ತಿದ್ದ.
ಝಾಬಾನ ಬಳಿ ಇಂಥ ಯಾವ ಆಸೆಯೂ ಇರಲಿಲ್ಲ. ಮೂಡ್ ಬಂದಾಗ ಅವನು ‘ನನ್ನ ಬಳಿ ಅಮೂಲ್ಯ ವಿಚಾರಗಳಿವೆ. ಆ ವಿಚಾರಗಳು ಆಕಾರ ಪಡೆದರೆ ಫೋಟೋಗ್ರಫಿಯ ಕ್ಷೇತ್ರದಲ್ಲಿ ಭೂಕಂಪವೇ ಉಂಟಾಗುತ್ತೆ!’ ಎನ್ನುತ್ತಿದ್ದ. ಇದುವರೆಗಂತೂ ಆ ಭೂಕಂಪ ಬಂದಿರಲಿಲ್ಲ, ಬಹುಶಃ ಬರುವಂತೆಯೂ ಇರಲಿಲ್ಲ! ಝಾಬಾನ ಮುಖವೇ ಹಿಮರಿಂದಾವೃತವಾದಂತಿತ್ತು. ಭೂಕಂಪವೇನಾದರೂ ಮರೆತು ಈ ಕಡೆ ಬಂದರೂ ಅವನ ಮುಖ ನೋಡಿ ವಾಪಸ್ ಹೋಗಿ ಬಿಡುತ್ತಿತ್ತು!
ಝಾಬಾನಲ್ಲಿ ಮತ್ತೊಂದು ವಿಶೇಷತೆಯಿತ್ತು. ಅವನಲ್ಲೇ ಕೂತರೂ ನೋಡುವವರಿಗೆ, ಅವನು ನಿದ್ರಿಸುತ್ತಿದ್ದಾನೆಂಬ ಭ್ರಮೆಯುಂಟಾಗುತ್ತಿತ್ತು. ಪ್ರಾರಂಭದ ದಿನಗಳಲ್ಲಿ ಕುಟ್ಟಿ ಮೋಸ ಹೋಗಿ “ಏಯ್ ಏಯ್! ಏಳು, ಏಳು!” ಎನ್ನುತ್ತಿದ್ದ. ಉತ್ತರದಲ್ಲಿ ಗಾಜಿನಂತಹ ತನ್ನ ಕಣ್ಣುಗಳನ್ನು ತೆರೆದು, ಕೆಂಪಗೆ ಮಾಡಿ, ಮತ್ತೆ ಮುಚ್ಚಿಕೊಂಡು ಬಿಡುತ್ತಿದ್ದ. ಕುಟ್ಟಿಗೆ ಅರ್ಥವಾಗುತ್ತಿತ್ತು ಝಾಬಾ ಆಳವಾದ ವಿಚಾರಗಳಲ್ಲಿ ಕಳೆದು ಹೋಗಿದ್ದಾನೆ ಅವನನ್ನು ಛೇಡಿಸಬಾರದು. ಇಲ್ಲದಿದ್ದರೆ, ಅವನು ಆಫ್ರಿಕಾದ ಗೋರಿಲ್ಲಾಗಳಂತೆ ತನ್ನೆರಡೂ ಕೈಗಳ ಮುಷ್ಠಿಯಿಂದ ಎದೆಗೆ ದಡದಡನೆ ಹೊಡೆದುಕೊಂಡು ಕಿರುಚಲು ಪ್ರಾರಂಭಿಸಿ ಬಿಡುತ್ತಾನೆ!
ಇನ್ನು ನನ್ನ ವಿಷಯ! ನನ್ನ ಬಳಿ ನಿರ್ದೇಶನದ ಡಿಪ್ಲೋಮಾ ಸರ್ಟಿಫಿಕೇಟ್ ಇತ್ತು. ಆದರೆ ಅದು ಯಾವ ಉಪಯೋಗಕ್ಕೂ ಬರುತ್ತಿರಲಿಲ್ಲ. ನನಗೊಬ್ಬ ಸಹೋದರನಿದ್ದಾನೆ. ಅವನಿಗೂ ಮತ್ತು ಈ ಡಿಪ್ಲೋಮಾ ಸರ್ಟಿಫಿಕೇಟಿಗೂ ಹೆಚ್ಚು ಅಂತರವಿಲ್ಲ, ಗೋಪಾಲಪುರಕ್ಕೆ ಬಂದಮೇಲೆ ಅವನಿಗೆ ಅನೇಕ ಪತ್ರಗಳನ್ನು ಬರೆದೆ. ಆರು ತಿಂಗಳವರೆಗೆ ಒಂದೇ ಸಮನೆ ಪತ್ರಗಳನ್ನು ಬರೆದಿದ್ದೆ. ಅವನು ಹಣ ಕಳಿಸುವ ಮಾತಿರಲಿ, ನನ್ನ ಪತ್ರಗಳಿಗೆ ಉತ್ತರವನ್ನೂ ಕೊಡಲಿಲ್ಲ. ಹಾಗಂತ, ಏಳನೆಯ ತಿಂಗಳು ಅವನಿಂದ ಒಂದು ಪತ್ರ ಬಂದಿತ್ತು. ಅದರಲ್ಲಿ ಬರೆದಿದ್ದ – ಯಾವಾಗ ನಿನ್ನ, ತಲೆಯಿಂದ ಫಿಲ್ಮ ಲೈನಿನ ಭೂತ ತೊಲಗುತ್ತೋ ಮತ್ತು ನೀನು ನನ್ನ ಆಫೀಸಿನ ಕೆಲಸಗಳನ್ನು ನೋಡಿಕೊಳ್ತೀಯೋ ಅಂದಿನಿಂದ ನಾನು ನಿನಗೆ ಎರಡು ಸಾವಿರ ರೂಪಾಯಿಗಳನ್ನು ಪ್ರತಿ ತಿಂಗಳೂ ಕೊಡ್ತೀನಿ. ಅದಕ್ಕೂ ಮುಂಚೆ?… ಸೊನ್ನೆ.
ಪ್ಲಾಟ್ ಫಾರಂನ ವಿಶಾಲ ಶೂನ್ಯದಂತಹ ಗಡಿಯಾರ ನನ್ನ ಕಣ್ಣುಗಳೆದುರು ಇದೆ. ಸಮಯದ ಮುಳ್ಳುಗಳು ಸಮಯಕ್ಕೆ ಸರಿಯಾಗಿ ಮುಂದುವರಿಯುತ್ತಿವೆ. ಪ್ರತಿ ಕ್ಷಣವೂ ನಾನು ಯೋಚಿಸುತ್ತೇನೆ. ಈ ಮುಳ್ಳುಗಳು ನಿಂತುಬಿಟ್ಟರೆ? ಸಮುದ್ರದ ಅಲೆಗಳು. ಗಾಳಿಯ ಫೂತ್ಕಾರ, ಹಿಮದ ನದಿಗಳು, ಸಮುದ್ರದ ಉಬ್ಪರ-ಎಲ್ಲವೂ ಸ್ತಬ್ಧಗೊಂಡು ಬಿಡುತ್ತವೆ. ಚಂದ್ರ, ಸೂರ್ಯ, ಪೃಥ್ವಿ ಮತ್ತು ಇತರ ಗ್ರಹಗಳು ನಿಶ್ಚಲಗೊಂಡು ಬಿಡುತ್ತವೆ. ಮತ್ತೆ ಮನುಷ್ಯ? ಬಹುಶಃ ಅವನು ನಿಲ್ಲಲಾರ, ನಿಶ್ಚಲಗೊಳ್ಳುವುದನ್ನು ಅವನು ಕಲಿತಿಲ್ಲ. ಅವನಿಗೆ ಆಕಾಶದವರೆಗೂ ತಲೆ ಎತ್ತಬೇಕಾಗಿದೆ, ಆಕಾಶಕ್ಕೆ ವೀಳ್ಯದ ರಸವನ್ನು ಪಿಚಕಾರಿಯಂತೆ ಹಾರಿಸಬೇಕಾಗಿದೆ. ಅವನಿನ್ನೂ ಸಾವನ್ನು ಗೆದ್ದು ದೇವರ ಸಿದಿಗೆ ಎತ್ತಬೇಕಾಗಿದೆ.
ಅಮೃತಿಸರ್ ಎಕ್ಸ್ ಪ್ರೆಸ್ ನ ಪ್ರಯಾಣಿಕರ ಗದ್ದಲದಿಂದ ಹಾಗೂ ಯಾರಿಂದಲೋ ಒದೆ ತಿಂದು ಅರಚುತ್ತಾ ನಾಯಿಯೊಂದು ನನ್ನ ಬಳಿ ಬಂದು ನಿಲ್ಲುತ್ತದೆ. ಅದು ನನ್ನನ್ನೇ ನೋಡುತ್ತಿದೆ. ಬಹುಶಃ ನನ್ನನ್ನು ಪರೀಕ್ಷಿಸುತ್ತಿದೆ. ಬಹುಶಃ ಅದಕ್ಕೇ ತಿಳಿದುಬಿಟ್ಟಿದೆ – ಇನ್ನು ನನ್ನ ಆಯಸ್ಸು ಕೇವಲ ಒಂದು ಗಂಟೆ, ಮೂವತ್ತಾರು ನಿಮಿಷ ಮಾತ್ರವೆಂದು! ಬಹಳ ಬೇಗ ನಾನು ನನ್ನ ಕಣ್ಣುಗಳನ್ನು ಮುಚ್ಚಿ ಮಹಾಪ್ರಯಾಣ ಮಾಡುವವನಿದ್ದೇನೆಂದು ಆ ನಾಯಿಗೆ ತಿಳಿದುಬಿಟ್ಟಿದೆ.
ನಾಯಿ ತನ್ನ ಹಿಂಗಾಲುಗಳ ಮೇಲೆ ಕೂರುತ್ತದೆ. ನಾಲಿಗೆಯನ್ನು ಹೊರಚಾಚಿ ಜೊಲ್ಲು ಸುರಿಸುತ್ತಿದೆ. ಅದರ ಶರೀರದ ಅಂಗಾಂಗಗಳು ಏದುಸಿರು ಬಿಡುತ್ತಿವೆಯೋನೋ ಎಂದನ್ನಿಸುತ್ತಿದೆ.
ಬಾ, ಬಾ… ಬಾ, ಬಾ… ಬಾ…” ನನ್ನ ಒಣ ತುಟಿಗಳು ಕಂಪಿಸುತ್ತವೆ. ನಾನು ಕರೆದರೂ ಅದು ಬರುವುದಿಲ್ಲ. ಅದರ ಕಣ್ಣುಗಳಲ್ಲಿ ಅಪನಂಬಿಕೆಯ ಚಿಕ್ಕ- ಚಿಕ್ಕ ಅನೇಕ ಪರಮಾಣುಗಳು ಸುಳಿಯುತ್ತವೆ. ಬಹುಶಃ ಇನ್ನೊಬ್ಪ ವ್ಯಕ್ತಿಯೂ ಅದನ್ನು ಪ್ರೀತಿಯಿಂದ ಕರೆದಿರಬಹುದು! ಪ್ರೀತಿಯಿಂದ ಅದನ್ನು ಕಾಲುಗಳ ಬಳಿ ಕೂರಿಸಿಕೊಂಡಿರಬಹುದು. ಪ್ರೀತಿಯಿಂದ ಅದರ ಮೈದಡವಿರಬೇಕು! ಆಮೇಲೆ ಪ್ರೀತಿಯಿಂದ ಅದರ ಹೊಟ್ಟೆಯ ಹೊಂಡಕ್ಕೆ ಒದ್ದು “ನಾಯಿ ನನ್ಮಗಂದು” ಎಂದಿರಬಹುದು!
ನನ್ನ ಬಳಿ ಬರುವುದಕ್ಕೂ ಮೊದಲು ಅದು ಯೋಚಿಸಲು ಸಮಯಾವಕಾಶವನ್ನು ಬಯಸುತ್ತದೆ. ನನ್ನನ್ನೂ ನಿರ್ದಯಿಯೆಂದು ತಿಳಿದರೆ ಆಶ್ಚರ್ಯವಿಲ್ಲ. ಆದರೆ ಅದಕ್ಕೇನು ಗೊತ್ತು! ನನ್ನ ಮುಖದ ಮೇಲೆ ಮನುಷ್ಯನ ಮುಖ ಬೆಳೆದುಬಂದಿದೆ. ನನ್ನ ಕಣ್ಣುಗಳ ದೃಷ್ಟಿಯಲ್ಲಿ ಮನುಷ್ಯನ ಕಣ್ಣುಗಳು ಕೂತಿವೆ. ನನ್ನ ಹೃದಯದಲ್ಲಿ ಮನುಷ್ಯನ ಹೃದಯ ಸ್ಪಂದಿಸುತ್ತಿದೆ. ಇಪ್ಪತೆಂಟು ವರ್ಷದ ಈ ಆಯುಸ್ಸಿನಲ್ಲಿ ಎರಡು ಗಂಟೆ ಮನುಷ್ಯನಾಗಲು ನಾನು ನನ್ನನ್ನು ಅದೃಷ್ಟಶಾಲಿಯೆಂದು ತಿಳಿಯುತ್ತೇನೆ. ನಾಯಿ, ಇನ್ನೂ ಯೋಚಿಸುತ್ತಿದೆ
ಕುಟ್ಟಿಯ ‘ಆಕ್ರಮಣ’: ಅಧ್ಯಾಯ-4
‘ಥೈಸ್’ ಟೆರೆಸ್ನಲ್ಲಿ ಕೂತಿದ್ದ ಝಾಬಾ. ಆಳವಾದ ವಿಚಾರದಲ್ಲಿ ಮಗ್ನನಾಗಿದ್ದ. ನಾನು ಮತ್ತು ಕುಟ್ಟಿ ಭಗ್ನಾವಶೇಗಳಲ್ಲಿ ಅಲೆಯುವುದಕ್ಕೆ ಹೋಗಲು ಸಿದ್ಧರಾಗುತ್ತಿದ್ದೆವು. ಇವು ಗೋಪಾಲಪುರದ ಸಮುದ್ರ ತೀರದ ಮಹತ್ತ್ವಪೂರ್ಣ ಅಂಗಗಳಾಗಿದ್ದವು. ಒಂದು ವೇಳೆ ಸಮುದ್ರತೀರದಲ್ಲಿ ಈ ಭಗ್ನಾವಶೇಷಗಳು ಇರದಿದ್ದರೆ ಬಹುಶಃ ಗೋಪಾಲಪುರದ ದಡ ಇಷ್ಟೊಂದು ರೋಮಾOಚನಕಾರಿಯಾಗಿಯೂ ಕಾಣುತ್ತಿರಲಿಲ್ಲ.
“ಏನ್ ಉಟ್ಟುಕೊಳ್ಳಲಿ”? ಕುಟ್ಟಿ ನನ್ನನ್ನು ನೋಡೆದೇ ನನಗೇ ಪ್ರಶ್ನಿಸಿದ. ಅವನ ಬಳಿಯಿದ್ದ ಒಂದೇ ಒಂದು ಟಿ-ಶರ್ಟ್ ಗೆ ಆಗಲೇ ಮೂರೂ ತೇಪೆಗಳು ಬಿದ್ದಿದ್ದವು. ಅವನ ಬಳಿಯಿದ್ದ ಒಂದು ನಿಕ್ಕರನ್ನು ಇಂದು ಸ್ವಚ್ಛಗೊಳಿಸದಿದ್ದರೆ ಅದರ ರಜತ-ಜಯಂತಿಯನ್ನು ಆಚರಿಸಬೇಕಾಗುತ್ತಿತ್ತು.
“ಇವತ್ತಂತು ಮಿನಿ ಲುಂಗಿಯನ್ನು ಉಟ್ಕೋ” ಎಂದು ಸೂಚಿಸಿದೆ. ಕುಟ್ಟಿ ತನ್ನ ಮಿನಿ ಲುಂಗಿ ಅಂದರೆ ಕಾವಿ ಬಣ್ಣದ ಒರಿಯಾ ಟವೆಲನ್ನು ಸೊಂಟಕ್ಕೆ ಸುತ್ತಿಕೊಂಡು ಬನಿಯನ್ ನಿಂದ ಎದೆಯನ್ನು ಮುಚ್ಚಿಕೊಂಡ. ಈ ಉಡುಪಿನಲ್ಲಿ ಅವನು ದಕ್ಷಿನದವನಂತೆ ಕಾಣದೆ ಒರಿಸ್ಸಾದವನಂತೆ ಕಾಣುತ್ತಿದ್ದ. ಇಲ್ಲಿಯ ಜನರ ಉಡುಪು ಇದೇ.
‘ಥೈಸ್ನಿಂದ ಹೊರ ಬಂದು ನಾವು ತಲೆಯೆತ್ತಿದೆವು, ಛಾವಣಿಯ, ತುದಿಯಲ್ಲಿ ಈಗಲೂ ಝಾಬಾ ಅರಿ ಸ್ತಾಟಲ್ ನ, ಮುಖ ಹೊತ್ತು ಕೂತಿದ್ದ. ಕೆಳಗಿನ ಕಿಟಕಿಯಲ್ಲಿ ನಿಂತಿದ್ದ ದುಲಈ ಆಕಳಿಸುತ್ತಿದ್ದಳು. ಮಧ್ಯಾಹ್ನದ ನಿದ್ದೆಯನ್ನು. ಸಂಜೆಗೆ ಪೂರೈಸಿ ಕಿಟಕಿ ಬಳಿ ನಿಂತು ಆಕಳಿಸುವುದು ಅವಳ ಹೊಸ ಅಭ್ಯಾಸವೇನಲ್ಲ.
ನಾವು ಥೈಸ್ಗೆ ಬೆನ್ನು ಮಾಡಿ ಭಗ್ನಾವಶೇಷಗಳೆಡೆಗೆ ಹೊರಟೆವು. ಸೂರ್ಯಾಸ್ತಕ್ಕೂ ಮುಂಚಿನ ಹಳದಿ ಬೆಳಕಿನಲ್ಲಿ ಭಗ್ನಾವಶೇಷಗಳು ಅದ್ಭುತವಾಗಿ ತೋರುತ್ತಿದ್ದವು. ಸ್ವಾತಂತ್ರ್ಯಕ್ಕೂ ಮುಂಚೆ ಇಲ್ಲಿ ಬ್ರಿಟಿಷರ ಕಾಲೋನಿಗಳಿದ್ದವು. ಬ್ರಿಟಿಷರು ಹೊರಟು ಹೋದರು, ಆದರೆ ಪ್ರತಿಬಿಂಬಗಳನ್ನು ಬಿಟ್ಟುಹೋದರು. ಇಲ್ಲಿ ಬಾವಲಿಗಳು ಮತ್ತು ಬೀದಿ ನಾಯಿಗಳಷ್ಟೇ ವಾಸಿಸುತ್ತಿದ್ದವು. ಈ ಹಾಳು ಪ್ರದೇಶಕ್ಕೆ ನುಗ್ಗುವ ಧೈರ್ಯವನ್ನು ನಮ್ಮನ್ನು ಹೊರತುಪಡಿಸಿದರೆ, ವೇಶ್ಯೆಯರು ಮಾತ್ರ ಮಾಡುತ್ತಿದ್ದರು.
ಗೋಪಾಲಪುರ ವೇಶ್ಯೆಯರ ಮತ್ತು ದಲ್ಲಾಳಿಗಳ ಪ್ರದೇಶವಾಗಿತ್ತು. ಇಲ್ಲಿಯ ವಾತಾವರಣ ಎಷ್ಟು ರೋಮಾಂಚನಕಾರಿಯಾಗಿತ್ತೋ, ಇಲ್ಲಿಯ ವೇಶ್ಯೆಯರೂ ಅಷ್ಟೇ ಸುಂದರಿಯರಾಗಿದ್ದರು, ಮತ್ತೆ ಅವರ ರೇಟೂ ಅಗ್ಗ. ಐದರಿಂದ ಹತ್ತು ರೂಪಾಯಿಗೆ ಹದಿನಾರರ ಕನ್ಯೆಯರನ್ನು ಸುಲಭವಾಗಿ ಖರೀದಿಸಬಹುದಿತ್ತು. ಪ್ರಾರಂಭದ ದಿನಗಳಲ್ಲಿ ನಾನು ಮತ್ತು ಕುಟ್ಟಿ ಇಲ್ಲಿಯ ಕನ್ಯೆಯರೊಂದಿಗೆ ಮಜಾ ಮಾಡಿದ್ದೆವು.
ಝಾಬಾನನ್ನು ಬಾಲಬ್ರಹ್ಮಚಾರಿಯೆಂದು ಹೇಳಬಹುದು. ದೂರದಿಂದ ನೋಡಿದರೆ ಅವನು ಸತ್ಯಸಾಯಿಬಾಬಾರಂತೆ ಕಾಣಿಸುತ್ತಿದ್ದ. ಈ ಬಾಲ ಬ್ರಹ್ಮಚಾರಿಯೊಂದಿಗಿದ್ದು ನಾವು ಚಫ್ಪಲಿ ಧರಿಸುವುದನ್ನೂ ಬಿಟ್ಟು ಬಿಟ್ಟಿದ್ದೆವು. ಇಲ್ಲಿ ಅದರ ಅಗತ್ಯವೂ ಉಂಟಾಗುತ್ತಿರಲಿಲ್ಲ. ಕುಟ್ಟಿ ಹೇಳುತ್ತಿದ್ದ, “ಮುಂದೊಂದು ದಿನ ಜನ ಬಟ್ಟೆಯನ್ನೇ ಧರಿಸದ ದಿನಗಳು ಬರುತ್ತವೆ! ಪಶ್ಚಿಮ ದೇಶಗಳಲ್ಲಂತೂ ಅಂಥ ದಿನಗಳು ಉದಯಿಸಿ ಎಷ್ಟೊ ವರ್ಷಗಳಾಗಿವೆ. ಅಲ್ಲಿ ನ್ಯೂಡಿಸ್ಟ್ ಕ್ಯಾಂಪ್ ಮತ್ತು ನ್ಯೂಡಿಸ್ಟ್ ಕಾಲೋನಿಗಳ ಸ್ಥಾಪನೆಯಾಗಿ ಬಿಟ್ಟಿದೆ.
ಆದ್ರೆ ನಮ್ಮ ದೇಶದಲ್ಲಿ ‘ಬೆತ್ತಲೆಯಾದ’ದ ಸೂರ್ಯ ಉದಯಗೊಳ್ಳಲು ಇನ್ನೂ ಸ್ವಲ್ಪ ವರ್ಷಗಳು ಬೇಕಾಗುತ್ತೆ!
ಕಾರಣ ಕೇಳಿದಾಗ ಅವನು ಹೇಳಿದ: “ನಮ್ಮ ಸಾವಿರಾರು ವರ್ಷಗಳ ಪುರಾತನ
ಸಂಸ್ಕೃತಿಯ ಕರುಳುಗಳನ್ನು ಮುದಿ ಮೊಸಳೆಗಳು ಎಳೆದುಕೊಂಡು ಹೋಗಿವೆ” ಕುಟ್ಟಿಯ ಬಳಿ ಮಾತನಾಡಲು ಅನೇಕ ವಿಷಯಗಳಿದ್ದವು. ಅವನ ವಿಷಯಗಳ- ವಿಚಾರಗಳ ಭಂಡಾರವೆಂದೂ ಕೊನೆಗೊಳ್ಳುತ್ತಿರಲಿಲ್ಲ.
ಕಾಟೆಜ್ ಗಳ ಭಗ್ನಾವಶೇಷಗಳ ಬಳಿ ಹೋಗಿ ಒಂದು ಕೆಡವಿದ್ದ ಗೋಡೆಯ ಮೇಲೆ ಕೂತೆವು, ನೆಲದ ಮೇಲೆ ಮರಳಿನ ಮೇಲ್ಮೈ ಜಮಾಯಿಸಿತ್ತು. ಕೆಲವು ಬಂಗ್ಲೆಗಳಿಗೆ ಛಾವಣಿಯೀ ಇರಲಿಲ್ಲ. ಇನ್ನು ಕೆಲವು ಬಂಗ್ಲೆಗಳು ಗೋಡೆ- ರಹಿತವಾಗಿದ್ದವು.
ಸೂರ್ಯಾಸ್ತದ ಅನಂತರದ ಬೆಳಕು ಕರಗುತ್ತಿತ್ತು. ದಡದಲ್ಲಿ ಲಂಗರು ಹಾಕಿದ್ದ ಬೆಸ್ತರ ದೋಣಿಗಳು ಅಲೆಗಳ ಹೊಡೆತಗಳನ್ನು ಸಹಿಸುತ್ತಿದ್ದವು. ಇಂದು ಕುಟ್ಟಿ ವಾಸ್ತವಿಕವಾದ ‘ಮೂಡ್’ನಲ್ಲಿದ್ದ. ಅವನು ಇಂಥ ಮೂಡ್ ನಲ್ಲಿದ್ದಾಗ ತನ್ನ ಒಂದರಡು ಭಾವಿ ಕಾದಂಬರಿಗಳ ವಿಷಯದ ಬಗ್ಗೆ ಚರ್ಚಿಸುತ್ತಾನೆ.
“ಗೆಳೆಯ ಕೋಬರ್! ನಿನಗೆ ಆಶ್ವರ್ಯವಾಗಬಹುದು, ನನ್ನ ಮುಂದಿನ ಕಾದಂಬರಿಯಲ್ಲಿ ಪ್ರೀತಿ, ದ್ವೇಷ, ಕೊಲೆ ಅಥವಾ ಪಾತ್ರಗಳ ಪ್ರವಾಸವಿಲ್ಲ, ಗಂಡ- ಹೆಂಡತಿಯ ದುಃಖ ಅಥವಾ ಸಾಮಾಜಿಕ ಸಮಸ್ಯೆಯಿಲ್ಲ. ಕುಮಾರಿ-ಕನ್ಯೆ ಅಥವಾ ವಿವಾಹಿತ ಮಹಿಳೆಯರ ವ್ಯಭಿಚಾರವಿಲ್ಲ. ಸೆಕ್ಸ್ ಇಲ್ಲ. ವಯಲೆನ್ಸ್ ಇಲ್ಲ. ಹಾರಲ್ ಇಲ್ಲ.”
“ಮತ್ತೆ?” ನಾನು ಅವನನ್ನೇ ನೋಡಿದೆ.
“ಒಂದು ನರಕದ ಕಥೆಯಿದೆ” ಅವನು ನಿಟ್ಟುಸಿರುಬಿಟ್ಟ.
“ನರಕ?”
“ಖಂಡಿತ ನಿಜ, ನಾನೊಂದು ನರಕವನ್ನು ನಿಲ್ಲಿಸಿದ್ದೇನೆ”.
“ಎಲ್ಲೀ?”
“ವಿಚಾರಗಳಲ್ಲಿ”
“ಹೂಂ . . . ?”
“ಅದನ್ನು ನಾನು ಶಬ್ದಗಳಲ್ಲಿ ನಿಲ್ಲಿಸುವೆ” ಕುಟ್ಟಿ ಒಂದೇ ಸಮನೆ ಹೇಳುತ್ತಲೇ ಇದ್ದ, “ನಿನಗೆ ನೆನಪಿರಬಹುದು, ಚರಿತ್ರೆಯಲ್ಲಿ ಇಬ್ಪರು ದಾರ್ಶನಿಕರು ಭೂಮಿಯ ಮೇಲೆ ಸ್ವರ್ಗ ನಿಲ್ಲಿಸುವ ಬಲವಾದ ಪ್ರಯಾಸವನ್ನು ಮಾಡಿದ್ದರು, ಅವರಲ್ಲಿ ಒಬ್ಪ ‘ಹಸನ್-ಬಿನ್-ಸಬ್ಪಾಹು’ ಆಗಿದ್ದ. ಹಸನ್-ಬಿನ್-ಸಬ್ಬಾಹನಿಗೆ ಸಫಲತೆಯೂ ಸಿಕ್ಕಿತ್ತು. ನನಗೂ ಯಶಸ್ಸು ಸಿಗುತ್ತೆ ಅನ್ನೋದು ಗ್ಯಾರಂಟಿ.”
“ಹೇಗೆ?”
“ಇಂದಿನ ಜನತೆಗೆ ಸ್ವರ್ಗಕ್ಕಿಂತ ನರಕದ ಅವಶ್ಯಕತೆಯೇ ಹೆಚ್ಚು. ಇಂದು ಜನ ಸುಖ-ಅನುಕೂಲವನ್ನು ಬಯಸಲ್ಲ. ಶಿಕ್ಷೆಯನ್ನು ಬಯಸುತ್ತಾರೆ. ಅಪರಾಧಿ ಮನಸ್ಸು ಪಾಪದ ಹೊರೆಯನ್ನು ಹೊರಲು ಬಯಸುತ್ತದೆ. ಒಂದು ವೇಳೆ ಅವರಿಗೊಂದು ಆಧುನಿಕ ನರಕವನ್ನು ಉಡುಗೊರೆಯಾಗಿ ಕೊಟ್ಟರೆ ಅವರು ತುಂಬಾ ಖುಷಿಯಿಂದ ಅದರಲ್ಲಿ ನುಗ್ಗಿ, ತಮ್ಮ-ತಮ್ಮ ಕೃತ್ಯಗಳಿಗೆ ಶಿಕ್ಷೆ ಅನುಭವಿಸಿ, ಮೃದು- ಹಗುರ ಹೂವಿನಂತಾಗಿ ಹೊಸ ರೀತಿಯಿಂದ ಜೀವನ ಪ್ರಾರಂಭಿಸಲು ಸಾಧ್ಯ!” ಇಷ್ಟು ಹೇಳಿ ಅಕಸ್ಮಾತ್ ಅವನು ಗೋಡೆಯಿಂದ ನೆಗೆದು ‘ಆಕ್ರಮಣ, ಆಕ್ರಮಣ…’ ಎಂದು ಚೀರುತ್ತಾ ಹಸುರು ಕಾಟೇಜಿನೆಡೆಗೆ ಓಡಿದ. ಅವನು ಓಡುವುದನ್ನು ಕಂಡು ನನ್ನಿಂದ ನಗು ತಡೆಯಲಾಗಲಿಲ್ಲ.
ಇದಕ್ಕೆ ಮೊದಲು ಕೂಡ ಕುಟ್ಟಿಗೆ ವಿಚಾರಗಳ ಅನೇಕ ಆಕ್ರಮಣಗಳಾಗಿದ್ದವು. ಈ ದಿನದಂತೆಯೇ ಆಗಲೂ ಓಡಿ ಹೋಗಿದ್ದ. ಈ ರೀತಿಯ ಮಾನಸಿಕ ಆಕ್ರಮಣ ಅವನಿಗೆ ಯಾವಾಗ, ಯಾವ ಜಾಗದಲ್ಲಾಗುತ್ತದೆ ಎಂದು ಹೇಳುವುದು ಕಷ್ಟವಾಗಿತ್ತು. ಅವನ ಆಕ್ರಮಣಗಳಲ್ಲಿ ಎಷ್ಟು ತಥ್ಯವಿದೆಯೆಂದು ಹೇಳುವುದೂ ಸುಲಭವಾಗಿರಲಿಲ್ಲ. ವಿಜಾರಗಳ ಆಕ್ರಮಣಗಳಿಗೆ ಇಂಥ ನಾಟಕೀಯ ರೂಪವನ್ನು ಅವನೇಕೆ ಕೊಡುತ್ತಿರಬಹುದೆಂಬುದೂ ನನಗೆ ಗೊತ್ತಿರಲಿಲ್ಲ.
ಕೆಲವೇ ದಿನಗಳ ಹಿಂದೆ ಅವನು ಒಬ್ಪ ಬೆಸ್ತರವಳನ್ನು ನೋಡಿದ್ದ. ಹಗಲು- ರಾತ್ರಿಯೆನ್ನದೆ ಅವಳ ಗುಣಗಾನ ಮಾಡುತ್ತಿದ್ದ. ಅವನು ನಮಗೆ, ‘ಇನ್ನೊಂದು ವಾರದೊಳಗೆ ಅವಳನ್ನು ಹಾಳು ಪ್ರದೇಶಕ್ಕೆ ಕರೆದುಕೊಂಡು ಹೋಗದಿದ್ದರೆ ನನ್ನ ಹೆಸರು ಕುಟ್ಟಿಯೇ ಅಲ್ಲ!’ ಎಂದೂ ಹೇಳಿದ್ದ. ಮೂರನೆಯ ದಿನವೇ ಸಂಜೆ ಅವಳೊಂದಿಗೆ ಅವನನ್ನು ಹಾಳು ಪ್ರದೇಶದಲ್ಲಿ ಕಂಡು ನನಗಾಶ್ಚರ್ಯವಾಯಿತು. ನಾನು ಮತ್ತು ಝಾಬಾ ನೋಡುತ್ತಲೇ ನಿಂತುಬಿಟ್ಟೆವು.
ಕುಟ್ಟಿಯಿದ್ದ, ಮುಳುಗುವ ಸೂರ್ಯನ ಬೆಳಕಿತ್ತು. ಬೆಸ್ತರಿಣಿಯಿದ್ದಳು, ಹೇಗಿದ್ದಳು? ರಾತ್ರಿಯ ಅಂಧಕಾರದಂತಿದ್ದಳು. ಅವಳ ಕಣ್ಣುಗಳು ಟಾರ್ಚ್ನ ಬಲ್ಬಿನಂತಿದ್ದವು. ಡನ್ ಲೋಪಿಲೋದಂತಹ ಮಾಂಸಲ ಶರೀರ, ತೆಳು ಸೊಂಟ, ಶರೀರದ ಮೇಲೆ ಒಂಬತ್ತು ಗಜದ ಶೀರೆ, ಆ ಸೀರೆಯಲ್ಲಿ ಯೌವನ ಅಲೆಯೆಬ್ಬಿಸುತ್ತಿತ್ತು.
ಕುಟ್ಟಿಯ ದೃಷ್ಟಿ ದೂರದಿಂದ ನಮ್ಮ ಮೇಲೆ ಬಿತ್ತು. ನಾನು ಮುಗುಳ್ನಕ್ಕೆ, ಝಾಬಾ ಇಬ್ಪರ ಮೇಲೂ ನಖ-ಶಿಖಾಂತ ದೃಷ್ಟಿ ಬೀರಿದ. ಕುಟ್ಟಿ ಹಾಳು ಗೋಡೆಗಳ ಬಳಿ ನಿಂತ. ಅದರೊಳಗೆ ಹೋಗದೆ, ಬೆಸ್ತರಣಿಯೊಂದಿಗೆ ನೇರವಾಗಿ ನಮ್ಮೆಡೆಗೆ ಬಂದ.
“ಕೈಂಚುಕಾ!” ಕುಟ್ಟಿ ಪರಿಚಯಿಸಿದ, “ಝಾಬಾ ಮತ್ತು ಕೋಬರಾ ನನ್ನ ಆತ್ಮೀಯ ಗೆಳೆಯರು. ನಾವು ಒಟ್ಟಿಗೇ ವಾಸಿಸುತ್ತೇವೆ, ಮತ್ತು ಹಂಚಿಕೊಂಡು ಉಣ್ಣುತ್ತೇವೆ.”
ನಾವಿಬ್ಬರೂ ಒಮ್ಮಲೆ “ಹೌ ಡು ಯೂ ಡೂ?” ಎಂದಾಗ ಅವಳು ಮೂರ್ಖಳಂತೆ ಕುಟ್ಟಿಯ ಮುಖವನ್ನೇ ನೋಡಿದಳು. ಕುಟ್ಟಿ ನಮ್ಮನ್ನೇ ನೋಡುತ್ತಿದ್ದ. ಕತ್ತಲಾಗುವುದಕ್ಕೂ ಮೊದಲೇ ನಾವಿಲ್ಲಿಂದ ಹೋಗಿಬಿಡಬೇಕೆಂದು ಅವರ ಕಣ್ಣುಗಳು ಹೇಳುತ್ತಿದ್ದವು.
ನಾವು ಮರಳಿ ಹೋಗಬೇಕೆಂದಿದ್ದೆವು, ಆಗಲೇ ಕುಟ್ಟಿ ನೆಗೆಯುತ್ತಾ ‘ಆಕ್ರಮಣ, ಆಕ್ರಮಣ, ಆಕ್ರಮಣ’, ಎಂದರಚುತ್ತಾ ತನ್ನೆರಡೂ ಕೈಗಳಿಂದ ತನ್ನ ತಲೆಯನ್ನು ಹಿಡಿದುಕೊಂಡು ಓಡಲಾರಂಭಿಸಿದ.
ಬೆಸ್ತರಣಿಗೆ ಏನೊಂದೂ ಅರ್ಥವಾಗಲಿಲ್ಲ.
ಝಾಬಾ ಒಮ್ಮೆ ಅವಳನ್ನು ನೋಡಿ ಕುಟ್ಟಿಯನ್ನು ಹಿಂಬಾಲಿಸುತ್ತ, ‘ಏಯ್, ಮೂರ್ಖ . . . ಹೇಡಿ. ನಿಲ್ಲೋ ಸೂ . . ಮಗನೇ” ಎಂದು ಓಡಿದ.
ಕುಟ್ಟಿ ಒಂದು ವಿಷಯವನ್ನಂತೂ ನಿಜವಾಗಿಯೇ ಹೇಳಿದ್ದ – ‘ನಾವು ಒಟ್ಟಿಗೇ ವಾಸಿಸುತ್ತೇವೆ ಮತ್ತು ಹಂಚಿಕೊಂಡು ಉಣ್ಣುತ್ತೇವೆ’ ಎಂದು. ಈ ಬೆಸ್ತರಣಿಯ ಮೇಲೆ ಅವನಿಗೆಷ್ಟು ಅಧಿಕಾರವಿತ್ತೋ, ಅಅಷ್ಟೇ ಹಕ್ಕು ನನಗೂ ಇತ್ತು, ಝಾಬಾನಿಗೂ ಇತ್ತು. “ಓಡಿ ಹೋದ!” ಎಂದು ಅವಳು ನನ್ನ ನೋಡದೆ ಹೇಳಿ ಮತ್ತೆ ನನ್ನಡೆಗೆ ನೋಡುತ್ತಾ “ಯಾಕೆ ಓಡಿ ಹೋದ? ಏನಾಯ್ತು ಅವನಿಗೆ?” ಎಂದು ಪ್ರಶ್ನಿಸಿದಳು.
ಕತ್ತಲು ಕವಿಯುತ್ತಿತ್ತು, ಬೆಸ್ತರಣಿಯ ಬಟ್ಟೆಯಿಂದ ದುರ್ಗಂಧ ರಾತ್ರಿರಾಣಿಯಂತೆ ಪಸರಿಸುತ್ತಿತ್ತು. ಅವವ ಕಪ್ಪು ಮುಖ ಅಂಧಕಾರದೊಂದಿಗೆ ಏಕಾಕಾರಗೊಳ್ಳಲಾರಂಭಿಸಿತು. ಟಾರ್ಚ್ನ ಬಲ್ಬ್ ಗಳು ಹೊಳೆಯುತ್ತಿದ್ದವು.
“ಕುಟ್ಟಿ ಯಾಕೆ ಓಡಿ ಹೋದ?” ಅವಳು ಮತ್ತೆ ಪ್ರಶ್ನಿಸಿದಳು. ಬಲ್ಪ್ಗಳಲ್ಲಿ ಮುಗ್ಧತೆಯಿತ್ತು.
“ಬಹುಶಃ ಅವನಲ್ಲಿ ಧೈರ್ಯವಿಲ್ಲ” ಮೆಲ್ಲನೆ ನಾನು ಪ್ರಾರಂಭಿಸಿದೆ.
“ಎಂಥಾ ಧೈರ್ಯ?”
“ನಿನ್ನ ಕೈ ಹಿಡಿಯೋ ಧೈರ್ಯ” ಎನ್ನುತ್ತಾ ನಾನು ಅವಳ ಕೈಯನ್ನು ಮೃದುವಾಗಿ ನನ್ನ ಕೈಯಲ್ಲಿ ಹಿಡಿದು ಮೆಲ್ಲನೆ ಒತ್ತಿದೆ. ಆ ಕೂಡಲೇ ಅವಳ ಎಡಗೈನ ಐದು ಬೆರಳುಗಳು ತಮ್ಮ ದಟ್ಟ ಗುರುತುಗಳನ್ನು ನನ್ನ ಗಲ್ಲದಮೇಲೆ ಮೂಡಿಸಿದ್ದವು- ಚಟಾರನೆ ಹೊಡೆದು! ಕ್ಷಣಕಾಲ ನಾನು ಕಣ್ಣುಗಳನ್ನು ಮುಚ್ಜಿಕೊಂಡೆ ಕಣ್ಣುಗಳನ್ನು ತೆರೆದಾಗ ನನ್ನ ಬಳಿ ಕತ್ತಲು ಮಾತ್ರವಿತ್ತು. ಕತ್ತಲಲ್ಲಿ ಅವಳೆಲ್ಲೋ ಕಣ್ಮರೆಯಾಗಿಬಿಟ್ಟಿದ್ದಳು.
ನಾನು ಒಂಟಿಯಾಗಿ ಆಂಧಕಾರದ ಸಮುದ್ರ ತೀರದ ಹಾಳು ಪ್ರದೇಶದಲ್ಲಿ ದೂರದ ಅಲೆಗಳ ಪ್ರತಿಧ್ವನಿಯನ್ನು ಆಲಿಸುತ್ತಾ ಕೂತಿದ್ದೆ. ಬಾ ಬಹುಶಃ ಟೆರೆಸ್ ನಲ್ಲಿ ಕೂತಿರಬಹುದು! ಕುಟ್ಟಿ ಬಹುಶಃ ಆರಾಮ ಕುರ್ಚಿಯಲ್ಲಿ ಒರಗಿ ಹೊಸ ಆಕ್ರಮಣದ ಹೊಸ ವಿಚಾರಗಳನ್ನು, ತನ್ನ ಡೈರಿಯಲ್ಲಿ ನೋಟ್ ಮಾಡಿಕೊಳ್ಳುತ್ತಿರಬಹುದು! ನಾನು ಹಾಳು ಪ್ರದೇಶದಿಂದ ಹೊರ ಬಂದು ತೀರದ ಕಲ್ಲಿನ ಮೇಲೆ ಕೂತೆ. ನನ್ನ ನಿಕ್ಕರ್ ಸ್ವಲ್ಪ ಮೇಲಕ್ಕೆ ಸರಿಯಿತು. ನನ್ನ ತೊಡೆಗಳಿಗೆ ಕಲ್ಲಿನ ತಣ್ಣನೆಯ ಸ್ಪರ್ಶವುಂಟಾದಾಗ ನನಗೆ ಕುಟ್ಟಿಯ ಮಾತೊಂದು ನೆನಪಾಯಿತು.
“ಮನುಷ್ಯನ ಬಹು ಮುಖ್ಯ ಟ್ರಾಜೆಡಿಯೆಂದರೆ. . . “ಅದೊಂದು ದಿನ ಅವನು ಹೇಳಿದ: “ಏನೆಂದರೆ ಅವನ ಸೃಷ್ಟಿ ಮಣ್ಣಿಂದಾಗಿದ್ದಾಗ್ಯೂ ಅವನು ಕಲ್ಲೆಂದು ಕರೆಸಿಕೊಂಡ ಮತ್ತು ದೇವರಸೃಷ್ಟಿ ಕಲ್ಲಿನಿಂದಾಗಿದ್ದಾಗ್ಯೂ ಅವನನ್ನು ನಾವು ಪರಮ ಕೃಪಾಳುವೆಂದು ಹೇಳುತ್ತೇವೆ. ಕಲ್ಲುಗಳು ಪೂಜೆಗೆ ಯೋಗ್ಯವಾದವು. ಮನುಷ್ಯ ಪ್ರಾಚೀನ ಯುಗದಂತೆಯೇ ಇಂದೂ ಅನಾಗರಿಕ. ಯಾವುದೇ ಒಂದು ಜನಾಂಗ ತನ್ನ ಶತ್ರುಗಳನ್ನು ಕೊಲೆಗೈದು ಅವರ ಮಾಂಸವನ್ನು ಹುರಿದೋ, ಸುಟ್ಟೋ ಅಥವಾ ಹಸಿಯಾಗಿಯೋ ತಿಂದಿತು ಎಂಬ ವಿಷಯ ಇಂದೂ ಪತ್ರಿಕೆಗಳಲ್ಲಿ ಓದಲು ಸಿಗುತ್ತದೆ. ಅರಬರ ಶವಗಳಿಂದ ಇನ್ನೂ ರಕ್ತ ಆರಿಲ್ಲ, ಆಫ್ರಿಕಾ ಗೋರಿಲ್ಲಾಗಳ ಅನೇಕ ಶವಗಳನ್ನು ನಿತ್ಯ ಕಾಣಬಹುದು. ಇಂದಿಗೂ ನಾವು ಕೊಲೆಗೈಯುತ್ತೇವೆ, ಆನಂದ ಪಡುತ್ತೇವೆ. ಕೊಲೆಗೈಯುವುದು ನಮ್ಮ ಜನ್ಮಸಿದ್ಧಹಕ್ಕು, ಕೊಲೆ ನಮ್ಮ ಪ್ರಕೃತಿ, ಮತ್ತೆ ಪ್ರಕೃತಿಗೆ ವಿರುದ್ಧವಾಗಿ ಮನುಷ್ಯ ಹೆಜ್ಜೆ ಹಾಕಲಾರ.”
ನನ್ನ ಗಲ್ಲ ಇನ್ನೂ ನೋಯುತ್ತಿತ್ತು. ನಾಟಕದ ಪರದೆಯ ಮೇಲೆ ಕಾಣುವ ನಕಲಿ ಚಂದ್ರ ಇಂದು ಗೋಪಾಲಪುರದ ಸಮುದ್ರದ ಮೇಲೆ ಆಕಾಶದಲ್ಲೆಲ್ಲೋ ಅಂಟಿಕೊಂಡಿದ್ದ. ಬೆಳುದಿಂಗಳು ಚೆಲ್ಲಿತ್ತು. ವಾತಾವರಣ ಹಿತಕರವಾಗಿತ್ತು. ಬೆನ್ನ ಹಿಂದಿನ ಹಾಳು ಪ್ರದೇಶವೂ ಬೆಚ್ಚನೆ ಹಾಸಿಗೆಯಲ್ಲಿ ಮೈಮುರಿದು ಆಕಳಿಸುವ ವೇಶ್ಯೆಯಂತೆ ಮೋಹಕವಾಗಿತ್ತು! ಅದಕ್ಕೂ ಪ್ರಾಯ ಬಂದಿತ್ತು. ಆದರೂ ನನಗೆ ಇದರಲ್ಲಿ ಯಾವುದೇ ಹೊಸತನವಿರಲಿಲ್ಲ.
ನಾನೀಗ ಕಾಮನಬಿಲ್ಲಿನ ಮೂಡ್ ನಲ್ಲಿರಲಿಲ್ಲ. ಹಣಗಳಿಸುವ ಮೂಡ್ ನಲ್ಲಿದ್ದೆ. ಸದಾ ನಮ್ಮ ಮೂಡ್ ನಾಣ್ಯಗಳ ಸಮಸ್ಯೆಯಲ್ಲಿ ಸಿಕ್ಕಿಕೊಂಡಿರುತ್ತಿತ್ತು. ಸದಾ ನಮಗೆ ಬೇಟೆಯನ್ನರಸುವ ಅಗತ್ಯವಿತ್ತು. ನಿಜ ಹೇಳಬೇಕೆಂದರೆ ನನಗೆ ಬೆಸ್ತರಣಿಯಿಂದಲೂ ಸ್ವಲ್ಪ ಭರವಸೆಯಿತ್ತು. ಹೆಚ್ಚಲ್ಲದಿದ್ದರೂ ಮೂರ್ನಾಲ್ಕು ರೂಪಾಯಿ! ಅದೃಷ್ಟ ಖುಲಾಯಿಸಿದ್ದರೆ ಬಂಗಾರದ ಓಲೆ ಅಥವಾ ಒಂದು ಉಂಗುರವನ್ನಾದರೂ ಲಪಟಾಯಿಸಬಹುದಿತ್ತು!
ಹಣ ಪ್ರಾಪ್ತಿಗಾಗಿ ಇದುವರೆಗೆ ನಾವು ಅನೇಕ ತಂತ್ರ-ಮಂತ್ರಗಳನ್ನು ಪರೀಕ್ಷಿಸಿಬಿಟ್ಟಿದ್ದೆವು. ಒಂದಕ್ಕಿಂತ ಒಂದು ಒಳ್ಳೆಯ ಉಪಾಯಗಳನ್ನು ಮಾಡಿದ್ದೆವು. ಆದರೆ ಇವುಗಳಲ್ಲೆಲ್ಲಾ ಸರಳವಾದ ಉಪಾಯ-ಭಿಕ್ಷೆ ಬೇಡುವುದೇ ಉತ್ತಮವೆಂದು ಅನ್ನಿಸಿತ್ತು. ಮತ್ತೆ ಇದು ಅನುಭವದ ಕೆಲಸ. ವಾರದ ಎರಡು ದಿನಗಳನ್ನು ವಿಶೇಷವಾಗಿ ಭಿಕ್ಷೆ ಬೇಡುವುದಕ್ಕಾಗಿಯೇ ನಾವು ಆರಿಸಿಟ್ಟುಕೊಂಡಿದ್ದೆವು. ಆ ದಿನಗಳಲ್ಲಿ ನಾನು ಮತ್ತು ಕುಟ್ಟಿ ದೂರದ ಹಳ್ಳಿಗಳಿಗೆ ಹೋಗುತ್ತಿದ್ದೆವು. ಹೊರಡುವುದಕ್ಕೂ ಮೊದಲು ನಮ್ಮ ರೂಪದಲ್ಲಿ ಸ್ವಲ್ಪ ಪರಿವರ್ತನೆಯನ್ನು
ಮಾಡಿಕೊಳ್ಳುತ್ತಿದ್ದೆವು. ಕುಟ್ಟಿ ಒಮ್ಮೆ ಟವಲ್ ಸುತ್ತಿಕೊಂಡು ಬೆತ್ತಲೆ ಎದೆಯಲ್ಲಿ ನನ್ನೊಂದಿಗೆ ಬಂದರೆ ಇನ್ನೊಮ್ಮೆ ಕೇವಲ ಲಂಗೋಟಿ ಧರಿಸಿ ಬರುತ್ತಿದ್ದ. ಅವನ ಕೈಯಲ್ಲಿದ್ದ ಕೋಲಿನ ಇನ್ನೊಂದು ತುದಿಯನ್ನು ನಾನು ಹಿಡಿದುಕೊಂಡಿರುತ್ತಿದ್ದೆ. ಅವನು ಕುರುಡನಾಗುತ್ತಿದ್ದ. ನಾನು ಅವನಿಗೆ ಆಸರೆಯಾಗುತ್ತಿದ್ದೆ. ಅವನ ನಟನೆ ಕಂಡು, ತೆರೆದ ಕಣ್ಣುಗಳನ್ನು ನೋಡಿ, ಎಂಥಾ ಕಟುಕನ ಮನಸ್ಸೂ ಕರಗುತ್ತಿತ್ತು! ಕೆಲವರು ಹತ್ತು ಪೈಸೆಗೆ ಬದಲು ನಾಲ್ಕಾಣೆಯನ್ನೇ ಅವನ ಕೈಗೆ ಹಾಕಿಬಿಡುತ್ತಿದ್ದರು.
ಗೋಪಾಲಪುರದಿಂದ ನಾವು ನಮ್ಮ ಪ್ರಯಾಣವನ್ನು ಪ್ರಾರಂಭಿಸುತ್ತಿದ್ದೆವು. ಆದರೆ ಇಲ್ಲಿ ನಾವು ಉಳಿಯುತ್ತಿರಲಿಲ್ಲ. ಇಲ್ಲಿ ನಮ್ಮ ಪ್ರತಿಷ್ಠೆ ಅಷ್ಟು ಸರಿಯಿರಲಿಲ್ಲ. ಹಾಗಂತ ಅನೇಕ ಹಳ್ಳಿಗಳಲ್ಲಿ ನಮ್ಮ ಮಾನ ಮಣ್ಣು ಮುಕ್ಕಿತ್ತು. ಆದರೂ ಕೆಲವು ಅಕ್ಕಪಕ್ಕದ ಹಳ್ಳಿಗಳು ಹೇಗಿದ್ದವೆಂದರೆ ಅಲ್ಲಿ ಮಾನ-ಮರ್ಯಾದೆಯ ಪ್ರಶ್ನೆಯೇ ಉದ್ಭವಿಸುತ್ತಿರಲಿಲ್ಲ.
ಗೋಪಾಲಪುರವನ್ನು ದಾಟಿ ನಾವು ಪರಸ್ಪರ ಬಯ್ದಾಡುತ್ತಿದ್ದೆವು. ಹಾಡನ್ನು ಹಾಡುತ್ತಿದ್ದೆವು ಅಥವಾ ಯಾವುದಾದರೂ ಹುಡುಗಿಯನ್ನು ಚುಡಾಯಿಸುತ್ತಾ ಮುಂದುವರಿಯುತ್ತಿದ್ದೆವು. ಮಾರ್ಗದಲ್ಲಿ ಯಾರಾದರೂ ಒಂಟಿಪ್ರಯಾಣಿಕ ಸಿಕ್ಕರೆ ಅವನ ಹಣವನ್ನು ಕೊಳ್ಳೆ ಹೊಡೆಯುತ್ತಿದ್ದೆವು. ಹೀಗೆ ಮುಂದುವರಿಯುತ್ತ, ದೂರದಿಂದಲೇ ಹಳ್ಳಿಯೇನಾದರೂ ಕಂಡರೆ ನಾವು ಎಚ್ಚರಗೊಂಡುಬಿಡುತ್ತಿದ್ದೆವು. ಕುಟ್ಟಿ ಕುರುಡನಂತೆ ನಟಿಸುತ್ತಾ ಕೋಲಿನ ಒಂದು ತುದಿಯನ್ನು ನನ್ನ ಕೈಗೆ ಹಾಕುತ್ತಿದ್ದ. ಅವನನ್ನು ನಾನು ಹಳ್ಳಿಯೆಡೆಗೆ ಕರೆದೊಯ್ಯುತ್ತಿದ್ದೆ. ನನ್ನ ಹಿಂದೆ ಏಳುತ್ತಾ ಬೀಳುತ್ತಾ ಅವನು ಬರುತ್ತಿದ್ದ. ಒಮ್ಮೊಮ್ಮೆಯಂತೂ ಅವನ ಸ್ಟಂಟ್ ನೋಡಿ ನನಗೇ ಕನಿಕರವುಂಟಾಗುತ್ತಿತ್ತು.
ಹಳ್ಳಿಯ ಜನ ನಮ್ಮ ಉದ್ದುದ್ದ ತಲೆಗೂದಲುಗಳು, ಗಾಳಿಗೆ ಚಡಪಡಿಸುವ ಗಡ್ಡ ಮತ್ತು ದರಿದ್ರ ಮುಖವನ್ನು ಕಂಡು ಹಿಟ್ಟೋ ಅಥವಾ ದುಡ್ಡನ್ನೊ ಕೊಡುತ್ತಿದ್ದರು. ಕೆಲವರು ವಿನಯದಿಂದ ‘ಮುಂದೆ ಹೋಗಿ’ ಎಂದರೆ ಕೆಲವರು ಬೈಯುತ್ತಿದ್ದರು. ಆದರೆ ಅಂಥವರು ಕುಟ್ಟಿಯ ಅನುಪಮ ಬೈಗಳ ಕೇಳಿ ಆಶ್ಚರ್ಯಗೊಳ್ಳುತ್ತಿದ್ದರು. ಎರಡೇ ಗಂಟೆಗಳಲ್ಲಿ ಜೋಳಿಗೆ ತುಂಬಿಕೊಂಡು ಮರಳಿ ಬರುತ್ತಿದ್ದೆವು. ಅಪರಿಚಿತ ಹಳ್ಳಿಯಿಂದ ಹೊರಬರುತ್ತಲೇ ಮತ್ತೊಮ್ಮೆ ಬೈಗಳ, ಹಾಡು ಮತ್ತು ತಮಾಷೆ-ಗೇಲಿ ಪ್ರಾರಂಭವಾಗಿಬಿಡುತ್ತಿತ್ತು.
ಝಾಬಾನಿಗೆಂದೂ ಈ ಅದೃಷ್ಟ ಸಿಗಲಿಲ್ಲ. ಆದರೆ ಮುಂದಿನ ವಾರ ಅವನೂ ಸ್ಟಂಟ್-ಮ್ಯಾನ್ ಆಗ ಬೇಕಾಗಿ ಬಂದರೆ ಆಶ್ಜರ್ಯವಿಲ್ಲ. ಮುಂದಿನ ವಾರಕ್ಕಾಗಿ ನಾನೊಂದು ಹೊಚ್ಚ ಹೊಸ ಉಪಾಯವನ್ನೇ ಯೋಚಿಸಿದ್ದೆ. ಈ ಉಪಾಯದ ಯೋಜನೆ ಕೈಗೂಡಿದರೆ ನಮ್ಮ ಅರ್ಧಕ್ಕೆ ನಿಂತ ಫಿಲ್ಮ್ಗೆ ರಾ-ಸ್ಟಾಕ್ ಕೊಳ್ಳಲು ಒಮ್ಮೆಲೆ ನೋಟುಗಳು ಕೈಗೆ ಸಿಗುತ್ತಿದ್ದವು. ಅದರೊಂದಿಗೇ ನಮ್ಮ ದುಃಖದ ದಿನಗಳಿಗೂ ಪೂರ್ಣ ವಿರಾಮ ಬೀಳುವುದರಲ್ಲಿತ್ತು.
ನನ್ನ ಜೀವನಕ್ಕೆ ಪೂರ್ಣ ವಿರಾಮ ಬೀಳುವ ಕಾಲ ಪ್ರಾರಂಭವಾಗಿದೆ. ಗಡಿಯಾರದ ನಿಮಿಷದ ಮುಳ್ಳು ಜಾರುತ್ತದೆ-ಇದು ನನ್ನಿಂದ ಮರೆಯಾಗಿಲ್ಲ. ನನ್ನ ದೃಷ್ಟಿ ಪದೇ ಪದೇ ಗಡಿಯಾರವನ್ನು ನೋಡುತ್ತದೆ. ಬೋರಿ ಬಂದರಿನ ಪ್ಲಾಟ್ ಫಾರಮ್ನಲ್ಲಿ ನೋಡುವಂತಹದ್ದೇನಾದರೂ ಇದ್ದರೆ ಅದು ನನ್ನ ತಲೆಯ ಮೇಲಿರುವ ಈ ಗಡಿಯಾರ ಮಾತ್ರ, ಇದರ ಮುಳ್ಳುಗಳಲ್ಲಿ ನನ್ನ ಬದುಕು ಸಿಕ್ಕಿಕೊಂಡಿದೆ. ಕ್ಷಣ-ಕ್ಷಣವೂ ಮುಂದುವರಿಯುತ್ತಿರುವ ಮುಳ್ಳು ನನ್ನನ್ನು ಸಾವಿನೆಡೆಗೆ ವೇಗವಾಗಿ ತಳ್ಳುತ್ತಿದೆ.
ಸ್ವಲ್ಪ ದೂರದಲ್ಲಿ ನಿಂತಿದ್ದ ನಾಯಿ ನನ್ನ ಬಳಿ ಬಂದು ಕೂತಿದೆ. ನಾನದರ ಕೊಳಕು ಕುತ್ತಿಗೆಯ ಮೇಲೆ ಕೈಯಾಡಿಸುತ್ತೇನೆ. ಅದು ನನ್ನ ನೋಡಿ ಜೊಲ್ಲು ಸುರಿಸುತ್ತದೆ. ಅದು ಹಸಿದಿದೆ-ಭಾರತದ ದರಿದ್ರ ಜನರಂತೆ ಹಸಿದಿದೆ, ನನಗೆ ಕನಿಕರವುಂಟಾಗುತ್ತದೆ. ಅದಕ್ಕೆ ಪ್ರಾರ್ಥಿಸುತ್ತೇನೆ: “ನಾಯಿ! ನನ್ನ ಸಲಹೆಯನ್ನು ಒಪ್ಪಿಕೋ, ಗಂಟೆಯೊಳಗೆ ನೀನು ಇಲ್ಲಿಂದ ಮಹಾ ಪ್ರಸ್ಥಾನ ಮಾಡು. ನನ್ನ ಸಾವು ನಿಶ್ಟಿತ.”
“ಇಲ್ಲ!” ನಾಯಿಯ ಮನಸ್ಸಿನಲ್ಲಿ ಸಾಕಾರಗೊಳ್ಳುತ್ತಿರುವ ವಿಚಾರಗಳನ್ನು ಓದಲು ಪ್ರಯತ್ನಿಸುತ್ತೇನೆ.
“ನಿನ್ನೊಂದಿಗೆ ಬರುವುದಿಲ್ಲ.
“ಯಾಕೆ ಬರಲ್ಲ?”
“ಅಲ್ಲಿ ನನಗೇನಿದೆ?”
ನನ್ನ ತ್ರಿಕಾಲ-ದರ್ಶನದ ಶಕ್ತಿ ಸ್ವಲ್ಪ ಹೆಚ್ಚು ತೀವ್ರವಾಗಿದೆ. ನಾನು ಉತ್ತರಿಸುತ್ತೇನೆ. “ಅಲ್ಲಿ ಹೆಂಡದ ಹೊಳೆಗಳಿವೆ. ಝನಝನಿಸುವ ತಂತಿಗಳಿಂದ ಹರಿಯುವ ದಿಲ್ರುಬಾ ವಾದ್ಯದ ಸಂಗೀತವಿದೆ. ಕಲ್ಪವೃಕ್ಷದ ನೆರಳಿದೆ. ದ್ರಾಕ್ಷಿಯ ತೋಟಗಳಿವೆ. ಹೂಗಳ ಹಾಸಿಗೆಯಿದೆ. ಅಪ್ಸರೆಯರೂ ಇದ್ದಾರೆ.”
“ಮೂರ್ಖ!” ನಾಯಿ ಸ್ವಲ್ಪ ವ್ಯಾಕುಲಗೊಂಡಿತು. “ಧಾರ್ಮಿಕ ಗ್ರಂಥಗಳಲ್ಲಿ ಬರೆದ ಈ ಕಾಲ್ಪನಿಕ ವರ್ಣನೆಯನ್ನು ನೀನೂ ಒಪ್ಪಿಕೊಂಡೆ! ನೀನು ಮನುಷ್ಯ, ಹುಟ್ಟಿನಿಂದಲೇ ಮೂರ್ಖ, ಈ ಭೂಮಿಯ ಪ್ರೇಮವನ್ನು ತ್ಯಜಿಸಿ, ಆಕಾಶದ ನಕ್ಷತ್ರಗಳನ್ನು ಆಸೆಯ ಕಣ್ಣುಗಳಿಂದ ದೃಷ್ಟಿಸುತ್ತೀಯಾ; ಸ್ವರ್ಗದೆಡೆಗೆ ದುರಾಸೆಯಿಂದ ನೋಡುತ್ತೀಯಾ. ಈ ಪೃಥ್ವಿಯನ್ನೇ ಸ್ವರ್ಗ ಮಾಡುವ ಕಲೆಯನ್ನು ನಿನಗ್ಯಾರೂ ಕಲಿಸಲಿಲ್ಲವೇ? ಬಹುಶಃ ಇಲ್ಲ. ಒಂದು ವೇಳೆ ಕಲಿಸಿದ್ದರೂ ಅದಕ್ಕಾಗಿ ಕಷ್ಟಪಡದೆ ರೆಡಿಮೇಡ್ ಸ್ವರ್ಗದ ದುರಾಸೆಯನ್ನು ಮನುಷ್ಯರಾದ ನೀವು ಮಾಡುತ್ತಿದ್ದೀರಿ ಎಂಬುದು ನನಗ್ಗೊತ್ತಿದೆ. ಕಾರಣ, ಇದು ರೆಡಿಮೇಡ್ ಯುಗ.”
“ನಾಯಿ! ನಾನು ಸಾವಿನ ಸಮೀಪದಲ್ಲಿದ್ದೇನೆ ಸುಳ್ಳು ಹೇಳುವುದಿಲ್ಲ. ನಿನ್ನ ವಿಚಾರದಲ್ಲಿ ಶ್ವಾನಲೋಕದ ಫಿಲಾಸಫಿಯಿದೆ. ನಿನ್ನ ಶಬ್ದಗಳಲ್ಲಿ ನಾನು ಹೊಸ ಭಾರತದ ಕನಸನ್ನು ಕಾಣುತ್ತೇನೆ. ನಿನ್ನ ಚಿಂತನೆ ನನ್ನನ್ನಾಕರ್ಷಿಸುತ್ತದೆ. ಆದರೆ ಹೆಚ್ಜು ಹೊತ್ತು ನಾನು ನಿನ್ನೊಂದಿಗಿರಲಾರೆ. ನನ್ನ ಬಳಿ ಇಷ್ಟು ಸಮಯವಿಲ್ಲ.
ಅಪ್ಸರೆಯ ಬೆನ್ನ ಹತ್ತಿ….. ಅಧ್ಯಾಯ – 5
ಝಾಬಾನನ್ನು ಒಪ್ಪಿಸಲು ನಮಗೆ ಸಲ್ಪ ಹೆಚ್ಚು ಸಮಯವೇ ಹಿಡಿಯಿತು. ಕಡೆಗಂತೂ ಅವನು ನನ್ನ ಉತ್ಕೃಷ್ಟ ಯೋಜನೆಯ ವರ್ಕಿಂಗ್ ಪಾರ್ಟನರ್ ಆದ. ಕುಟ್ಟಿಯಂತೂ ನನ್ನ, ಮಾತು ಕೇಳಿ ಕುಣಿದ.
“ಗೆಳೆಯ ಕೋಬರ್!” ಅವನು ನನ್ನನ್ನೇ ನೋಡಿದ, “ಬೇವರ್ಸಿ ನನ್ಮಗಂದು . . . ಇದು ನನಗೆ ಹೊಳೆಯಲೇ ಇಲ್ಲವಲ್ಲ! ಝಾಬಾನ ಗಡ್ಡವನ್ನು ಬೋಳಿಸಿದರೆ ಅವನು ಬಾಬಾರಂತೆ ಕಾಣಿಸ್ತಾನೆ ಅನ್ನೋದ್ರಲ್ಲಿ ಅನುಮಾನವಿಲ್ಲ. ಝಾಬಾನನ್ನು ತ್ರಿಕಾಲಜ್ಞಾನಿ ಸನ್ಯಾಸಿ ರೂಪದಲ್ಲಿ ಮುಂದೆ ತಂದು ಸಾವಿರಾರು-ಯಾಕೆ, ಲಕ್ಷಾಂತರ ರೂಪಾಯಿಗಳನ್ನು ಹಳ್ಳಿಯ ಮೂರ್ಖ ಜನರಿಂದ ಕಕ್ಕಿಸಬಹುದು. ನಿನ್ನ ಮಾತು ನಿಜ.”
“ನಾನು . . . ನಾನು ನಿಮ್ಮ ಹಾಗೆ ಲೋಫರ್ ಅಲ್ಲ.” ಝಾಬಾ ನನ್ನ ಯೋಜನೆ ಕೇಳಿ ಮೊದಲು ನರ್ವಸ್ ಆದ. “ನಾನು ಶ್ರೇಷ್ಠ ವಂಶದ ನೀಗ್ರೋ, ನನ್ನ ವಂಶದಲ್ಲಿ ಇದುವರೆಗೂ ಮೋಸ ಮಾಡುವ ವಿಚಾರವೇ ಯಾರಿಗೂ ಬಂದಿಲ್ಲ.”
“ಹಾಗಾದ್ರೆ ನೀನು ಈ ಸಂಪ್ರದಾಯವನ್ನು ಪ್ರಾರಂಭ ಮಾಡಬೇಕಾಗುತ್ತೆ” ಅವನ ತರ್ಕ ಕೇಳಿ ಕುಟ್ಟಿ ಸ್ಪಷ್ಟತೆಯಿಂದ ಹೇಳಿದ.
“ಇಲ್ಲ! ಇದು ಸಾಧ್ಯ,ವಿಲ್ಲ” ಅವನು ಗರ್ಜಿಸಿದ.
“ಸರಿ, ಅಂಥ ರಗಳೆ ಕೆಲಸಗಳನ್ನು ನಾವು ಮಾಡ್ತೀವಿ. ಆದರೆ. ಪ್ರತಿ ತಿಂಗಳು ಬಾಡಿಗೆ ಚುಕ್ತ ಮಾಡೋದಕ್ಕೆ ನೀನು ದುಲಈಯತ್ತ ಹೋಗು”.
ಕುಟ್ಟಿಯ ಈ ಬೆದರಿಕೆ ಕೆಲಸ ಮಾಡಿತು. ದುಲಈಳ ಹೆಸರು ಕೇಳಿದೊಡನೆಯೇ ಝಾಬಾ ತಣ್ಣಗಾದ. ಈಗ ಅವನೆದುರು ಎರಡೇ ಮಾರ್ಗಗಳಿದ್ದವು-ನಮ್ಮೊಂದಿಗೆ ಸೇರಿಕೊಳ್ಳುವುದು ಅಥವಾ ದುಲಈಯನ್ನು ಖುಷಿಪಡಿಸುವುದು. ಅವನು ಮೊದಲ ಮಾರ್ಗವನ್ನೇ ಖುಷಿಯಿಂದ ಒಪ್ಪಿಕೊಂಡ. ನಾವು ಮೂವರೂ ಸೂರ್ಯೋದಯವಾಗುತ್ತಲೇ ಹೊರಟುಬಿಟ್ಟೆವು.
ಸ್ವಲ್ಪ ದೂರ ಹೋದಾಗ ನಮಗೆ ಜರ್ಮನ್ ಟೂರಿಸ್ಟ್ ಎದುರಾದ. ಕುತ್ತಿಗೆಗೆ ದುರ್ಬೀನು ನೇತು ಹಾಕಿಕೊಂಡು ಮಾರ್ನಿಂಗ್-ವಾಕ್ ಮಾಡುವ ಸಮಯ ಅವನದಾಗಿತ್ತು.
“ಹೇಗಿದ್ದೀರ, ತ್ರೀ ಮಸ್ಕೆಟೀಯರ್ಸ್! ಅವನು ಸ್ಟ್ರೈಲಾಗಿ ಹಕ್ಕ. ನಾವು ಅವನೆಡೆಗೆ ನೋಡಲೂ ಇಲ್ಲ. ಬೆಳ್ಳಂ-ಬೆಳಿಗ್ಗೆಯೇ ಅವನ ಮುಖ ಕಂಡು ನಮ್ಮ ಇಡೀ ದಿನವನ್ನು ಹಾಳು ಮಾಡಿಕೊಳ್ಳಲು ನಾವು ಬಯಸುತ್ತಿರಲಿಲ್ಲ. ವಿಶೇಷವಾಗಿ ನಾನು ಮತ್ತು ಕುಟ್ಟಿ ಈ ಬಗ್ಗೆ ಎಚ್ಚರದಿಂದಿದ್ದವು.
ನಾವು ಕೇವಲ ಕಾಜಾವನ್ನು ಮಾತ್ರ ಧರಿಸಿದ್ದೆವು, ನಾವಿಬ್ಪರು ತುಂಬಾ ಖುಷಿಯಾಗಿದ್ದೆವು.
ಝಾಬಾ, ಕಾಚಾ ಹಾಕಿಕೊಳ್ಳಲಿಲ್ಲ. ಜೇನುಗೂಡಿನಂತಹ ಅವನ ಗಡ್ಡವೂ ಸರಿಯಾಗಿಯೇ ಇತ್ತು. ಅವನು ಕೇವಲ ಒಂದು ನಿಲುವಂಗಿಯನ್ನು ಧರಿಸಿದ್ದ. ಈ ನಿಲುವಂಗಿಯನ್ನು ದುಲಈಯ ಒಂಬತ್ತು ಗಜದ ಸೀರೆಯಿಂದ ಸಿದ್ಧಪಡಿಸಿದ್ದೆವು.
ದುಲಈಗೆ ತನ್ನ ಬಿಳಿಯ ಸೀರೆಯೊಂದು ಕಣ್ಮರೆಯಾದ ವಿಷಯ ತಿಳಿದರೆ, ಖಂಡಿತ ಅವಳು ಸುಮ್ಮನಿರುವುದಿಲ್ಲ. ಆದರೆ ನಮಗೆ ಅವಳ ಚಿಂತೆಯಿರಲಿಲ್ಲ. ಭವಿಷ್ಯದ ಚಿಂತೆ ನಮಗಿರಲಿಲ್ಲ. ನಾವು ವರ್ತಮಾನದಲ್ಲಿ ಬದುಕುವುದನ್ನು ಕಲಿತಿದ್ದೆವು.
ಆದರೂ-
ಚಿಂತೆಯೊಂದು ನಮ್ಮನ್ನು ಕಾಡಿಸುತ್ತಿತ್ತು. ಝಾಬಾ ಸ್ವಲ್ಪ ಗಂಭೀರನಾಗಿದ್ದ. ಅವನ ಈ ಗಾಂಭೀರ್ಯ ನಮಗೆ ಲಾಭದಾಯಕವೇ ಆಗುವುದೆಂಬ ವಿಶ್ವಾಸ ನನಗಿತ್ತು. ಮಹಾತ್ಮರಂತೂ ಗಂಭೀರವಾಗಿಯೇ ಇರುತ್ತಾರೆ. ಝಾಬಾ ಈಗ ಹೇಳಿ ಮಾಡಿಸಿದಂತಹ ಸನ್ಯಾಸಿಯಾಗಿದ್ದರೆ ನಾವಿಬ್ಪರೂ ಅವನಿಗೆ ಹೇಳಿಮಾಡಿಸಿದಂತಹ ಶಿಷ್ಯರಾಗಿದ್ದೆವು. ಅದೂ ಲಂಗೋಟಿ ಶಿಷ್ಯರು! ಇಂದು ಅವನ ಪ್ರತಿಯೊಂದು ಆಜ್ಞೆಯನ್ನೂ ನಾವು ಪಾಲಿಸಬೇಕಾಗಿತ್ತು.
ಮಧ್ಯಾಹ್ನಕ್ಕೂ ಮೊದಲು ನಾವೊಂದು ಹೊಸ ಹಳ್ಳಿಗೆ ಹೋದೆವು. ಈ ಹಳ್ಳಿಯಲ್ಲಿ ಈ ಹಿಂದೆ ನಾವು ಕಾಲನ್ನೂ ಇಟ್ಟಿರಲಿಲ್ಲ. ನಾವು ನಿಶ್ಚಿಂತೆಯಿಂದ ಒಂದು ದಟ್ಟ ವೃಕ್ಷದ ನೆರಳಿನಲ್ಲಿ ಹಳ್ಳಿಯ ಅಂಚಿನಲ್ಲಿ ಝಾಬಾನನ್ನು ಪ್ರತಿಷ್ಠಾಪಿಸಿದೆವು. ಝಾಬಾ ಒರಿಜಿನಲ್ ಸನ್ಯಾಸಿಯಂತೆ ತೊಗಟೆಗೊರಗಿ ಕೂತ. ನಾವಿಬ್ದರು ಶಿಷ್ಯರು ಒಂದೊಂದು ಕಾಲನ್ನು ನಮ್ಮ-ನಮ್ಮ ಮಡಿಲಲ್ಲಿಟ್ಟುಕೊಂಡು ಒತ್ತಲಾರಂಭಿಸಿದೆವು. ಬಾ ಒಮ್ಮೆ ಕುಟ್ಟಿಯನ್ನು ನೋಡಿದರೆ ಒಮ್ಮೆ ನನ್ನನ್ನು ನೋಡುತ್ತಿದ್ದ. ಮನಸ್ಸಿನಲ್ಲಿ ಅವನು ಮುಳ್ನಗುತ್ತಿದ್ದಾನೆಂದು ಅವನ ಅರಳಿದ ಮುಖ ಹೇಳುತ್ತಿತ್ತು. ಇಂಥ ಫೈವ್-ಸ್ಟಾರ್ ಸೇವೆಯ ಸುಖ ನಿತ್ಯ ಸಿಗುವುದಾದರೆ ಅವನು ನಮ್ಮೊಂದಿಗೆ ನಿತ್ಯ ಬರುತ್ತಾನೆ!
ಅರ್ಧ ಗಂಟೆ ಅವನ ಕಾಲುಗಳನ್ನು ಒತ್ತುತ್ತಿದ್ದರೂ ಒಂದು ಪಕ್ಷಿಯೂ ಬರಲಿಲ್ಲ. ಹದಿಮೂರು ನಿಮಿಷಗಳು ಮತ್ತೆ ಕಳೆದಾದ ಮೇಲೆ ದೂರದಲ್ಲಿ ಓರ್ವ ಬರುತ್ತಿರುವುದು ಕಾಣಿಸಿತು. ಮೂಲ ಯೋಜನೆಗನುಸಾರವಾಗಿ ಝಾಬಾ ಕಣ್ಣುಗಳನ್ನು ಮುಚ್ಚಿಕೊಂಡ. ನಾನು ಮತ್ತು ಕುಟ್ಟಿ ಕೂಡಲೇ ಅವನ ಕಾಲುಗಳನ್ನು ಒತ್ತಲಾರಂಭಿಸಿದವು.
“ಬಾಬಾ! ಒಂದು ರೂಪಾಯಿಗೆ ನೂರು ಮತ್ತು ನೂರಕ್ಕೆ ಸಾವಿರ ರೂಪಾಯಿ ಮಾಡುವ ವಿದ್ಯೆಯನ್ನು ಹೇಳಿ” ನಾವು ಗಟ್ಟಿಯಾಗಿ ಹೇಳಲಾರಂಭಿಸಿದೆವು.
ಆ ವ್ಯಕ್ತಿ ಸಮೀಪಕ್ಕೆ ಬಂದು ಗಮನವಿಟ್ಟು ನಮ್ಮ ಮಾತನ್ನು ಕೇಳಿದ ಅನಂತರ ನನ್ನ ಪಕ್ಕದಲ್ಲಿ ಕುಕ್ಕುರುಗಾಲಿನಲ್ಲಿ ಕೂತು ಮೆಲ್ಲನೆ ವ್ರಶ್ನಿಸಿದ, “ಏನಪ್ಪಾ, ಈ ಬಾಬಾ ಯಾರು?”
“ನೀವು… ಬಾಬಾರವರ ಹೆಸರನ್ನು ಕೇಳಿಲ್ವಾ?” ನಾನು ಮೆಲ್ಲನೆ ಪ್ರಶ್ನಿಸಿದೆ. ಅವನು ‘ಉಹೂಂ’ ಎಂದ ಮೇಲೆ ಹೇಳಿದ “ಅವರ ಚಮತ್ಕಾರಗಳ ಬಗ್ಗೆಯೂ ಸಾಕಷ್ಟು ಕೇಳಿದ್ದೇನೆ. ಆದರೆ ಇದುವರೆಗೆ ಅವರ ದರ್ಶನ ಮಾತ್ರ ಆಗಿರಲಿಲ್ಲ.”
“ಈ ಝಾಬಾ ಬಾಬಾ, ಶ್ರೀ. . . ಬಾಬಾರವರ ಗುರುಗಳು” ನಾನು ಝಾಬಾನೆಡೆಗೆ ಸಂಜ್ಞೆ ಮಾಡಿದೆ.
ಕತ್ತೆಯೊಂದು ಹಿಂದಿನಿಂದ ಜಾಡಿಸಿ ಒದ್ದ ಹಾಗೆ ಆ ವ್ಯಕ್ತಿ ಝಾಬಾನೆದುರು ಸಾಷ್ಟಾಂಗ ನಮಸ್ಕಾರ ಮಾಡಿದ. ಅನಂತರ ಜೇಬಿನಿಂದ ಐದು ರೂಪಾಯಿಯ ನೋಟನ್ನು ಹೊರತೆಗೆದು ನನ್ನೆಡೆಗೆ ಚಾಚಿದ. ಅವನ ಕೈಯಿಂದ ನೋಟನ್ನು ಪಡೆದು ಅದನ್ನು ಝಾಬಾನೆದುರು ಇಡುತ್ತಾ ಅವನ ಪರವಾಗಿ ನಾನು ಝಾಬಾನನ್ನು ವಿನಂತಿಸಿಕೊಂಡೆ, “ಬಾಬಾ, ನಮಗಲ್ಲದಿದ್ದರೂ, ಕಡೇ ಪಕ್ಷ ಈ ಬಡವನನ್ನಾದರೂ ಉದ್ಧಾರ ಮಾಡಿ! ಇವನ ಈ ಐದು ರೂಪಾಯಿಯನ್ನು ಐನೂರು ರೂಪಾಯಿ ಮಾಡಿ!”
ಝಾಬಾ ಒಂದು ಕಣ್ಣು ತೆರೆದು, ನೋಟನ್ನು ಮೂಗಿಗೆ ಹಿಡಿದು ಮೂಸಿದ. ಅನಂತರ ಅದನ್ನು ಚೂರು ಚೂರು ಮಾಡಿ ಕಣ್ಣು ಮುಚ್ಚಿಕೊಂಡ. ಆ ವ್ಯಕ್ತಿ, ನಾನು ಮತ್ತು ಕುಟ್ಟಿ ಸ್ತಬ್ಧರಾದೆವು. ಮೂಲ ಯೋಜನೆಗನುಸಾರವಾಗಿ ಅಲ್ಪ ಹಣವನ್ನು ಅದರ ಮಾಲಿಕನಿಗೊಪ್ಪಿಸಿ, ದೊಡ್ಡ ಮೊತ್ತದ ಹಣವನ್ನು ಬೇಡ ಬೇಕಾಗಿತ್ತು. ಆದರೆ ಝಾಬಾ, ತಾನು ಮಾಯೆ-ಮೋಹವನ್ನು ಮೀರಿದ್ದೇನೆಂಬ ಭಾವನೆಯನ್ನು ವ್ಯಕ್ತಪಡಿಸಿದ್ದ.
ನಾನು ಈ ಬಗ್ಗೆ ಹೆಚ್ಚು ಯೋಚಿಸಬೇಕೆಂದಿದ್ದೆ, ಅದಕ್ಕೂ ಮೊದಲೇ ಕುಟ್ಟಿ ಸೂತ್ರ ಹಿಡಿದು ಆ ವ್ಯಕ್ತಿಗೆ ಗಟ್ಟಿಯಾಗಿ ನಿಂದಿಸಿ ಹೇಳೀದ, “ನಿನ್ನ ಕೇವಲ ಐದು ರೂಪಾಯಿಗೆ ಬಾಬಾ ಚಮತ್ಕಾರವನ್ನು ತೋರಿಸೋದಿಲ್ಲ, ಹೋಗು! ಇನ್ನೂರೋ ಐನೂರೋ ತಗೊಂಡು ಬಂದು ಧನ್ಯನಾಗು!”
ಆ ವ್ಯಕ್ತಿ ಸರದಿ ಪ್ರಕಾರ ನಮ್ಮಲ್ಲಿ ಕ್ಷಮೆಯಾಚಿಸಿ ಹಳ್ಳಿಯೆಡೆಗೆ ಓಡಿದ, ಸ್ವಲ್ಪ ಹೊತ್ತಿಗೆ ಎತ್ತಿನಗಾಡಿಯಲ್ಲಿ ಇನ್ನೂ ನಾಲ್ವರನ್ನು ಕರೆತಂದ. ಆ ಐವರೂ ಪ್ರಪ್ರಥಮವಾಗಿ ಝಾಬಾ ಬಾಬಾನಿಂದ ಆಶೀರ್ವಾದ ಪಡೆದು ಅನಂತರ ಜತೆಗೆ ತಂದಿದ್ದ ಗಂಟನ್ನು ಬಿಚ್ಚಿದರು. ಅವನು ಸಾವಿರ ರೂಪಾಯಿಗಳನ್ನು ತಂದಿದ್ದರೆ, ಅವನ ಇನ್ನಿಬ್ಪರು ಪರಿಚಿತರು ಹತ್ತು ಹತ್ತು-ರೂಪಾಯಿಗಳ ಕಟ್ಟನ್ನೇ ತಂದಿದ್ದರು. ಉಳಿದಿಬ್ಬರ ದುಡ್ಡಿನ ಚೀಲಗಳು, ನಾಣ್ಯಗಳಿಂದ ಝಣ-ಝಣ ಎನ್ನುತ್ತಿದ್ದವು. ಸುಮಾರು ಏಳೆಂಟು ಸಾವಿರ ರೂಪಾಯಿಗಳನ್ನು ಕಂಡು ನಮ್ಮೆದೆ ಅರಳಿತು.
ಝಾಬಾ ಮತ್ತೆ ಒಂದು ಕಣ್ಣು ತೆರೆದ. ನೋಟುಗಳು ಮತ್ತು ನಾಣ್ಯಗಳನ್ನು ಕಂಡು ಎರಡನೆಯ ಕಣ್ಣು ತನ್ನಷ್ಟಕ್ಕೆ ತಾನೇ ತೆರೆದುಕೊಂಡಿತು. ಆದರೂ ಅವನು ಸಂಯಮದಿಂದಿದ್ದ. ಆ ರಾಶಿಯಿಂದ ನೋಟೊಂದನ್ನು ಎತ್ತಿಕೊಂಡು ಮೂಸಿ ನೋಡಿ, ಸಂತೋಷ ವ್ಯಕ್ತಪಡಿಸಿದ.
ವೇದಿಕೆಯ ಮೇಲೆ ಪ್ರಮುಖ ಪಾತ್ರಗಳು ಮಹತ್ವದ ನಟನೆಯನ್ನು ತೋರಿಸಬೇಕಾಗುತ್ತದೆ. ಇಲ್ಲಿ ಝಾಬಾ ಹೀರೋ ಆಗಿದ್ದ. ಅವನ ರೋಲ್ ಸುಮಾರಾಗಿ ಮುಗಿದಿತ್ತು. ಈಗೆಲ್ಲವೂ ಕುಟ್ಟಿಯ ನಟನೆಯನ್ನು ಅವಲಂಬಿಸಿತ್ತು. ಕುಟ್ಟಿ, ‘ಐವರು ಮೂರ್ಖರನ್ನು’ ಸ್ನಾನಕ್ಕಾಗಿ ನದಿಗೆ ಕರೆದೊಯ್ಯಬೇಕಾಗಿತ್ತು. ಅಲ್ಲಿ ಅವರೆಲ್ಲರ ಕಣ್ಣುತಪ್ಪಿಸಿ ಅವನು ನಮ್ಮ ಬಳಿಗೆ ಓಡಿಬರಬೇಕಿತ್ತು. ಈ ಮಧ್ಯೆ ನಾವಿಬ್ಪರು ನೋಟು-ನಾಣ್ಯಗಳನ್ನು ಗಂಟುಕಟ್ಟಿ ಸಿದ್ಧರಾಗಬೇಕಿತ್ತು. ಆದರೆ ಇದೆಲ್ಲಾ ಸುಲಭದ ಮಾತಾಗಿರಲಿಲ್ಲ.
ಕುಟ್ಟಿ ಏನೋ ಹೇಳಬೇಕೆಂದಿದ್ದ, ಆದರೆ ಅವನ ತುಟಿಗಳಿಗೆ ಹೊಲಿಗೆ ಹಾಕಿದಂತಾಯಿತು. ಅವನ ದೃಷ್ಟಿ ದೂರದಲ್ಲಿ ಬರುತ್ತಿದ್ದ ಒಬ್ಪ ಪೊಲೀಸಿನವನ ಮೇಲೆ ಬಿತ್ತು. ಪೊಲೀಸಿನವ ಅಡ್ಡಾಡುತ್ತಾ ಈ ಕಡೆಗೇ ಬರುತ್ತಿದ್ದ. ಅವನ, ಕಾಗೆಯ ರೆಕ್ಕೆಗಳಂತೆ ಹಾರುವ ಮೀಸೆಯನ್ನು ನೋಡಿ ಝಾಬಾನಿಗೆ ಆಕಾಶವೇ ಕಳಚಿ ಬಿದ್ದಂತಾಯಿತು. ಕಾಲುಗಳು ಸಡಿಲಗೊಂಡವು. ಗಾಜಿನಂತಹ ಕಣ್ಣುಗಳು ನಿಸ್ತೇಜಗೊಂಡವು. ಝಾಬಾನ ಕಾಲುಗಳನ್ನು ನಾವು ಒತ್ತಿ ಹಿಡಿದಿರದಿದ್ದರೆ, ಅವನಾಗಲೇ ಓಟ ಕಿತ್ತು ಬಿಡುತ್ತಿದ್ದ!
ನಮಗೇನೂ ಹೊಳೆಯದಿದ್ದಾಗ ನಾವು ಅವನ ಕಾಲುಗಳನ್ನು ಹೊಸದಾಗಿ ಒತ್ತಲು ಪ್ರಾರಂಭಿಸಿದೆವು. ಜತೆಗೇ ಟೇಪ್-ರೆಕಾರ್ಡರ್ ನಂತೆ ಹಳೆಯ ರಾಗವನ್ನೇ. “ಬಾಬಾ, ಒಂದು ರೂಪಾಯಿಗೆ ನೂರು ರೂಪಾಯಿ ಯಾಗುವ, ನೂರು ರೂಪಾಯಿಗೆ ಸಾವಿರ ರೂಪಾಯಿಯಾಗುವ ವಿದ್ಯೆಯನ್ನು ಹೇಳಿ” ಎನ್ನಲಾರಂಭಿಸಿದೆವು.
ಝಾಬಾ ಮತ್ತೊಮ್ಮೆ ಧೈರ್ಯ ವಹಿಸಿ ಒಂದು ಕಣ್ಣನ್ನು ತೆರೆದು, ತಮಾಷೆಯಾಟ ನೋಡುವವರಂತೆ ನಿಂತಿದ್ದ ಪೊಲೀಸಿನವನ ಮೇಲೆ ದೃಷ್ಟಿ ಹರಿಸಿದ. ಕೂಡಲೇ ನಖಶಿಖಾಂತ ಕಂಪಿಸಿದರೂ ಹೆದರದೆ ಹೊಸ ಉಪಾಯವೊಂದನ್ನು ಮಾಡಿದ.
ಶಿಷ್ಯರಾದ ನಮ್ಮಿಬ್ಪರನ್ನೂ ಕೆಂಗಣ್ಣುಗಳಿಂದ ನೋಡುತ್ತಾ ಸರದಿಯಂತೆ ಇಬ್ಬರಿಗೂ ಕೆ.ಜಿ.ಗಟ್ಟಲೆ ನಿಂದಿಸಿದ. ನಾವು ಮತ್ತೆ ನಮ್ಮ ಬಾಯಿಪಾಠವನ್ನು ಉಚ್ಚರಿಸಿದೆವು. ಅವನು ಮತ್ತೆ ಕೆಂಡವಾದ. ಕೆಂಡವಾಗಿ ನಮ್ಮಿಬ್ದರ ಮೇಲೂ ಉಗಿದು ನೋಟುಗಳ ರಾಶಿಯನ್ನೆತ್ತಿ ಗಾಳಿಗೆ ಒಗೆದ.
ಐವರು ಮೂರ್ಖರೊಂದಿಗೆ ಪೊಲೀಸಿನವನೂ ದಂಗಾದ. ನೋಟಿನ ಎಣಿಕೆಯ ಮಾತಿರಲಿ, ಮನೆಗೆ ಬಂದ ಲಕ್ಷ್ಮಿಯೂ ಗಾಳಿಯ ಪಾಲಾಗಿದ್ದಳು.
ಪೊಲೀಸಿನವನಿಗೆ ಝಾಬಾ ನಿಜವಾದ ಸನ್ಯಾಸಿಯೋ ಅಥವಾ ಧೊಂಗಿಯೋ ಎನ್ನುವುದು ಇನ್ನೂ ನಿರ್ಧರಿಸಲು ಸಾಧ್ಯವಾಗಿರಲಿಲ್ಲ. ಹಳ್ಳಿಯ ಜನ ನೋಟುಗಳು ಮತ್ತು ನಾಣ್ಯಗಳನ್ನು ಆರಿಸಲು ಅತ್ತ-ಇತ್ತ ಓಡಿದರು. ಝಾಬಾ ಒಮ್ಮೆಲೆ ಎದ್ದು ಹಳ್ಳಿಯ ಗಡಿಯೆಡೆಗೆ ಹೊರಟ. ನಾವೂ “ಬಾಬಾ, ವಿದ್ಯೆ ಹೇಳಿ! ಚಮತ್ಕಾರ ತೋರಿಸಿ!” ಎನ್ನುತ್ತಾ ಅವನನ್ನು ಹಿಂಬಾಲಿಸಿದೆವು.
ಸ್ವಲ್ಪ ದೂರ ಹೋದ ಮೇಲೆ ಝಾಬಾ ಹಿಂತಿರುಗಿಯೂ ನೋಡದೆ ಒಮ್ಮೆಲೆ ಓಡಲಾರಂಭಿಸಿದ. ನಾವೂ ಓಡಿ ಗಡಿ ದಾಟಿದೆವು. ನಮ್ಮ ಮಾಸ್ಟರ್ ಪ್ಲಾನ್ ನೂರಕ್ಕೆ ನೂರರಷ್ಟು ವ್ಯರ್ಥವಾಯಿತು. (ಆ ಜರ್ಮನ್-ಟೂರಿಸ್ಟ್ ನನ್ಮಗ ದಾರಿಗಡ್ಡ ಬರದಿದ್ದರೆ ಬಹುಶಃ ನಮಗೆ ಯಶಸ್ಸು ಸಿಗುತ್ತಿತ್ತು!)
ಮನೆಗೆ ಬರುತ್ತಲೇ ತಲೆ ಮೇಲೆ ಕೈಯಿಟ್ಟುಕೊಂಡು ಕುರ್ಚಿಯಲ್ಲಿ ಕೂತೆ. ನನಗೆ ಅತೀವ ಹಸಿವೆಯಾಗುತ್ತಿತ್ತು. ನಾವು ಬೆಳಿಗ್ಗೆಯಿಂದ ಏನೂ ತಿಂದಿರಲಿಲ್ಲ. ಮಂಡಕ್ಕಿ ತಿನ್ನಲೂ ಜೇಬಿನಲ್ಲಿ ದುಡ್ಡಿರಲಿಲ್ಲ.
“ಗೆಳೆಯಾ ಕುಟ್ಟಿ!” ನಾನು ಮುಖವೆತ್ತಿ ಝಾಬಾನೆಡೆಗೆ ನೋಡುತ್ತಾ ಹೇಳಿದೆ, “ಈ ಗೋರಿಲ್ಲಾಗೆ ಹಸಿವು ಕಾಡಿಸಲ್ಲ. ಆದ್ರೆ ನನ್ನ ಹೊಟ್ಟೇಲಿ ಇಲಿ, ಬೆಕ್ಕಿನ ಜತೆಗೆ ಸಿಂಹವೂ ಗರ್ಜಿಸುತ್ತಿದೆ. ಏನಾದ್ರೂ ಮಾಡು! ಇಲ್ಲದಿದ್ರೆ ನಾಳೆ ಬೆಳಗ್ಗೆ ನಾವು ನನ್ನ ಮುಖವನ್ನು ನೋಡಲಾರಿರಿ!”
ಉತ್ತರದಲ್ಲಿ ಕುಟ್ಟಿ ಜರ್ಮನ್ ಟೂರಿಸ್ಟ್ ನವನಂತೆ ನಕ್ಕು ಹೇಳಿದ, “ನಮ್ಮ ಝಾಬಾ ಬಾಬಾರಂತೂ ಚಮತ್ಕಾರ ತೋರಿಸಲಿಲ್ಲ. ಆದ್ರೆ ನಾನಿವತ್ತು ಒಂದು ಚಮತ್ಕಾರವನ್ನು ತೋರಿಸೂದಕ್ಕೆ ನಿರ್ಧಾರ ಮಾಡಿದ್ದೇನೆ”
“ಗೆಳೆಯಾ, ತಮಾಷೆ ಮಾಡ್ಬೇಡ. ನನ್ನ ಕರುಳುಗಳು ರಬ್ಬರ್ ಬ್ಯಾಂಡ್ನಂತೆ ಹಿಗ್ಗುತ್ತಿವೆ” ನಾನು ವ್ಯಾಕುಲಗೊಂಡೆ.
ನನ್ನ ಮಾತಿನಡೆಗೆ ಗಮನಕೊಡದೆ ಅವನು ಜಾದೂಗಾರನಂತೆ ತನ್ನೆರಡೂ ಕೈಗಳನ್ನು ನಮ್ಮೆದುರು ಚಾಚಿದ. ಎರಡೂ ಕೈಗಳು ಖಾಲಿಯಿದ್ದು, ಈಗ ಅವನು ಬಲಗೈಯನ್ನು ಮೇಲಕ್ಕೂ-ಕೆಳಕ್ಕೂ ಮಾಡಿ ‘ಛೂ ಮಂತರ್’ ಎಂದ, ಅನಂತರ ಮುಚ್ಜಿದ ಮುಷ್ಟಿಯನ್ನು ಹಿಡಿದು “ಬಾಯಿಂದ ಗಾಳಿ ಹಾಕಿ” ಎಂದ. ನಾವಿಬ್ಪರೂ ಗಾಳಿ ಊದಿದೆವು. ಅವನು ಮತ್ತೆ ಜರ್ಮನ್ ಟೂರಿಸ್ಟ್ ನ ಸ್ಟೈಲ್ನಲ್ಲಿ ನಗುತ್ತಾ ಮುಷ್ಟಿ ಬಿಚ್ಜಿದ. ಅವನ ಕೈಯಲ್ಲಿ ನೂರು ರೂಪಾಯಿಯ ನೋಟಿತ್ತು. ಈ ಹಸುರು ನೋಟನ್ನು ನೋಡಿ ನಾನು ಕುರ್ಚಿಯಿಂದ ಕುಣಿದು ನಿಂತೆ. ವಾಸ್ತವವಾಗಿ ಈ ನೋಟನ್ನು ಅವನು ಝಾಬಾನೆದುರು ಚೆಲ್ಲಿದ್ದ ನೋಟುಗಳ ರಾಶಿಯಿಂದ ಆರಿಸಿದ್ದ.
ನೋಟನ್ನು ಖರ್ಚು ಮಾಡುವ ಯೋಜನೆ ಕೂಡೆಲೇ ಸಿದ್ಧವಾಯಿತು. ಈ ನೋಟಿನಿಂದ ನಾನು ಹಳ್ಳಿಗೆ ಹೋಗಿ ಚಿಕನ್ ಮತ್ತು ಮದ್ಯದ ಒಂದು ಬಾಟ್ಲಿಯನ್ನು ತರಬೇಕಿತ್ತು. ನಾನು ಸ್ಪೂರ್ತಿಯಿಂದ ಹೊರ ಹೊರಟೆ. ನಮ್ಮ ಕಾಟೇಜಿನಿಂದ ಹಳ್ಳಿ ಹೆಚ್ಜು ದೂರವಿರಲಿಲ್ಲ. ಕಾಲ್ನಡಿಗೆಯಲ್ಲಿ ಕೇವಲ ಹದಿನೈದು ನಿಮಿಷಗಳು ಸಾಕು. ಹತ್ತೇ ನಿಮಿಷದಲ್ಲಿ ಹಳ್ಳಿಗೆ ಹೋದೆ. ಮದ್ಯದಂಗಡಿಯಡೆಗೆ ಕಾಲಿಡಬೇಕೆಂದಿದ್ದೆ. ಆಗಲೇ ನನಗೊಬ್ಪಳು ಅಪ್ಸರೆ ಕಂಡಳು.
ನೋಡುವುದಕ್ಕೆ ಆ ಅಪ್ಸರೆ ರಾಜಕುಮಾರಿಯಂತೆಯೇ ಇದ್ದಳು. ನಕ್ಕರೆ ಹೂ-ಅರಳಿದಂತೆ, ಅತ್ತರೆ ಮುತ್ತರಳಿದಂತೆ! ಅವಳು ಕಾಡಿಗೆ ಬಣ್ಣದ ಬ್ಲೂ ಜೀನ್ಸ್ ಮೇಲೆ ಗುಲಾಬಿ ಬಣ್ಣದ ಬ್ಲೌಸ್ ತೊಟ್ಟು ಕುದುರೆ ಮೇಲೆ ಕೂತಿದ್ದಳು. ಕುದುರೆ ಓಲಾಡುತ್ತಾ ಹೋಗುತ್ತಿತ್ತು.
ಮದ್ಯದ ಬಾಟ್ಲಿಯನ್ನು ಕೊಳ್ಳುವುದಕ್ಕೂ ಮೊದಲೇ ನನಗೆ ಅಮಲೇರಿತು. ನಾನು ಕುದುರೆಯನ್ನು ಹಿಂಬಾಲಿಸಿದೆ. ಹಳ್ಳಿ ದಾಟಿದ ಕುದುರೆ ಮರಗಳ ಮಧ್ಯೆ ಹಾಯ್ದು ಗೆಸ್ಟ್-ಹೌಸ್ನ ಕಾಂಪೌಂಡಿನೊಳಗೆ ಹೋಗಿ ನಿಂತಿತು. ನನ್ನ ಅಪ್ಸರೆ ಕುದುರೆಯಿಂದ ನೆಗೆದು ಗೆಸ್ಟ್ ಹೌಸಿನೊಳಗೆ ಹೋದಳು. ಮರಗಳ ಮಧ್ಯೆ ನಾನು ನೋಡುತ್ತಲೇ ನಿಂತುಬಿಟ್ಟೆ.
ಚಿಕನ್ ಮುಗಿಸಿದ ಮೇಲೆ ನಾವು ಮದ್ಯದ ಒಂದೊಂದು ಪೆಗ್ ಗ್ಲಾಸಿಗೆ ಸುರಿದುಕೊಂಡೆವು.
“ಸಹೋದರರೇ ಮತ್ತು ಸಹೋದರಿಯರೇ!. . . ” ನಾನು ಪ್ರಾರಂಭಿಸಿದೆ.
“ಸಹೋದರಿ ಎಲ್ಲಿದ್ದಾಳೆ?” ನಾನು ಮುಂದೆ ಮಾತನಾಡುವುದಕ್ಕೂ ಮೊದಲೇ ಕುಟ್ಟಿ ತಡೆದ.
“ಸಹೋದರಿ ಇಲ್ಲಿಲ್ಲ. ಮೇಲಿದ್ದಾಳೆ” ಎಂದೆ.
“ಅವಳು ನಿನ್ನ ಅಮ್ಮ” ಝಾಬಾನಿಗೆ ರೇಗಿತ್ತು.
“ಖಂಡಿತ ನಿಜ. ಮುಂದಿನ ತಿಂಗಳ ಬಾಡಿಗೆ ತೀರಿಸಲು ಇನ್ನು ನಾನು ಹೋಗಲಾರೆ. ನೀನೇ ಹೋಗು!”
ಝಾಬಾನ ಎರಡು ಪೆಗ್ ನ ಅಮಲು, ಪ್ಯಾರಾಶೂಟ್ ಇಲ್ಲದೆ ಧುಮುಕಿದ ಪೈಲೆಟ್ನಂತೆ ಇಳಿದುಹೋಯಿತು.
“ಇವತ್ತು ನಾನೊಬ್ಬಳು ಅಪ್ಸರೆಯನ್ನು ನೋಡಿದೆ” ನಾನು ಮುಂದುವರಿಸಿದೆ.
“ಗೆಳೆಯಾ, ನಿನಗೆ “ಕಿಕ್’ ಹೊಡೀತು!” ಎಂದ ಕುಟ್ಟಿ. ನಾನು ಅವನ ಮಾತನ್ನು ಅಲ್ಲಗಳೆಯುತ್ತಾ ಹೇಳಿದೆ. “ಆ ಅಪ್ಸರೆಯ ಕೊರಳಿನಲ್ಲಿ ಒಂದು ನಕ್ಲೇಸ್ ಇತ್ತು. ಅದರ ಬೆಲೆ ಕಡೇಪಕ್ಷ ನಾಲ್ಕೈದು ಸಾವಿರ ರೂಪಾಯಿಗಳಾಗಬಹುದು!”
“ಏನೆಂದೆ?” ಕುಟ್ಟಿಗೆ ನನ್ನ ಮಾತಿನ ಮೇಲೆ ನಂಬಿಕೆಯುಂಟಾಗುತ್ತಿರಲಿಲ್ಲ.
ನಾನು ಸವಿಸ್ತಾರವಾಗಿ ಹೇಳಿದೆ. ಕುಟ್ಟಿ ಮೂರನೆಯ ಪೆಗ್ ಮುಗಿಸಿ ಚರಮಾವಸ್ಥೆಯನ್ನು ತಲುಪಿದ. ಝಾಬಾ ಇನ್ನೂ ಮೂರ್ಖನಂತೆ ನನ್ನ ಮುಖವನ್ನೇ ನೋಡುತ್ತಿದ್ದ. ನಾನು ಕುಟ್ಟಿಯನ್ನೂ, ಝಾಬಾನನ್ನೂ ನೋಡುತ್ತಿದ್ದೆ. ಕುಟ್ಟಿ ಮತ್ತು ನನ್ನ ವಿಚಾರಗಳು ಸಮವಾಗಿದ್ದವು. ನಾನು ಮೌನಿಯಾದಾಗ ಕುಟ್ಟಿ ಹೇಳಿದ, “ಆ ಹುಡುಗಿಯನ್ನು ಬುಟ್ಟಿಗೆ ಹಾಕಿಕೊಂಡರೆ ನಮ್ಮ ಕೆಲಸವಾಗುತ್ತೆ”
“ಆದ್ರೆ ಅವಳನ್ನು ಹೇಗೆ ಬಲೆಗೆ ಹಾಕಿಕೊಳ್ಳೋದು?” ನಾನು ಕುಟ್ಟಿಯ ಮುಖವನ್ನೇ ನೋಡಿದೆ.
“ಇದು ತುಂಬಾ ಸುಲಭ, ನೀನು ಅವಳಿಗೆ ನಿನ್ನ ಫಿಲ್ಮ್ನ ಹೀರೋಯಿನ್ ಮಾಡುವ ಆಸೆ ತೋರ್ಸು! ಮೂಳೆ ನೋಡಿ ನಾಯಿ ಜಿಗಿದು ಬರುವಂತೆ ಅವಳು ನಿನ್ನ ಹಿಂದೆ-ಮುಂದೆ ಜೊಲ್ಲುಸುರಿಸುತ್ತಾ ಅಲೀತಾಳೆ!”
“ಆದ್ರೆ ನಮ್ಮ ಎಕ್ಸ್ಪರಿಮೆಂಟಲ್-ಫಿಲ್ಮ್ನಲ್ಲಿ ಮನುಷ್ಯನ ಒಂದು ಪಾತ್ರವೂ ಇಲ್ಲವೆಂಬುದು ನಿನಗೆ ನೆನಪಿರಲೇ ಬೇಕು!”
“ಸಿನಿಮಾ ಕತೆಯ ಲೇಖಕ ನಾನು. ಅದರಲ್ಲಿ ಪರಿವರ್ತನೆ ಹೇಗೆ ಮಾಡಿಕೋಬೇಕೆಂಬುದು ನನ್ನ ಕೆಲಸ” ಕುಟ್ಟಿ ಗತ್ತಿನಿಂದ ಹೇಳಿದ.
“ಇಲ್ಲ!” ಅಕಸ್ಮಾತ್ ಝಾಬಾ ಕಿರುಚಿದ, “ಇದು ಸಾಧ್ಯವಿಲ್ಲ”.
“ಇದು ಸಾಧ್ಯ ಅಂತ ನಾನು ಯಾವಾಗ ಹೇಳಿದೆ! ನಾವು ಅವಳಿಗೆ ಹಿರೋಯಿನ್ನೂ ಮಾಡೋಣ. ಮತ್ತು ನಮ್ಮ ಫಿಲ್ಮ್ನಲ್ಲಿ ಮನುಷ್ಯ ಪಾತ್ರವೂ ಇರಲ್ಲ” ಕುಟ್ಟಿ ಬಾನೆಡೆಗೆ ಹೊರಳಿದ.
“ಇದು ಹೇಗೆ ಸಾಧ್ಯ?” ನಾನು ಮಧ್ಯದಲ್ಲೇ ಪ್ರಶ್ನಿಸಿದೆ.
“ಫೈನಲ್ ಎಡಿಟಿಂಗ್ನಲ್ಲಿ ಅವಳ ಶಾಟ್ಗಳನ್ನೆಲ್ಲಾ ತೆಗೆದು ಹಾಕಿದರಾಯ್ತು.”
ಎಲ್ಲವೂ ರಾತ್ರಿಯೇ ನಿರ್ಧಾರವಾಯಿತು. ಹುಡುಗಿಯನ್ನು ಬಲೆಗೆ ಹಾಕಿಕೊಳ್ಳುವುದಕ್ಕೂ ಮೊದಲು ಅವಳ ಬಗ್ಗೆ ಎಲ್ಲಾ ವಿಷಯಗಳನ್ನು ತಿಳಿದುಕೊಳ್ಳುವ ಅಗತ್ಯವಿತ್ತು. ಝಾಬಾ ಅವಳ ಕೆಲವು ಭಂಗಿಗಳನ್ನೂ ತೆಗೆದುಕೊಳ್ಳಲು ಬಯಸುತ್ತಿದ್ದ. ಒಂದು ವೇಳೆ ಅವಳ ಮುಖ ಫೋಟೋಜಿನಿಕ್ ಆಗಿದ್ದರೆ ಭವಿಷ್ಯದಲ್ಲಿ ಉಪಯೋಗಕ್ಕೆ ಬರಬಹುದು.
ಮಾರನೆಯ ದಿನ ಚಹಾವನ್ನು ಗುಟುಕರಿಸದೆ ನಾವು ಮೂವರೂ ಗೆಸ್ಟ್ ಹೌಸಿನೆಡೆಗೆ ಹೊರಟೆವು. ನಾವೀಗ ಬಹು ಎಚ್ಚರಿಕೆಯಿಂದಿದ್ದೆವು. ಯಾಕೆಂದರೆ ಈಗ ಜರ್ಮನ್ ಟೂರಿಸ್ಟ್ ಅಕಸ್ಮಾತ್ ಎದುರಾದರೆ ಅವನಿಗೆ ಸದೆ ಬಡೆಯುವುದು ಎಂಬ ನಿರ್ಣಯವನ್ನು ನಾವಾಗಲೇ ತೆಗೆದುಕೊಂಡಿದ್ದೆವು. ಸದ್ಯ, ಅವನ ಅದೃಷ್ಟ ಇಂದು ಚೆನ್ನಾಗಿತ್ತು.
ಗೆಸ್ಟ್ ಹೌಸಿನ ಸಮೀಪದ ದಟ್ಟ ವೃಕ್ಷವೊಂದನ್ನು ಏರಿ ನಾವು ಕೂತೆವು. ಅಲ್ಲಿಂದ ಗೆಸ್ಟ್ ಹೌಸಿನ ಹಂದರ ಮತ್ತು ಕಾಂಪೌಂಡು ಸ್ಪಷ್ಟವಾಗಿ ಕಾಣಿಸುತ್ತಿತ್ತು. ಕಾಂಪೌಂಡಿನಲ್ಲಿ ಬಾಣಸಿಗ ಫೋಲ್ಡಿಂಗ್ ಟೇಬಲ್ ಮತ್ತು ಕುರ್ಚಿಗಳನ್ನು ಹಾಕುತ್ತಿದ್ದ. ನೋಡುನೋಡುತ್ತಿದ್ದಂತೆಯೇ ಅವನು ಟೇಬಲ್ ಮೇಲೆ ಚಹಾದ ಕೆಟಲ್ ಮತ್ತು ಎರಡು ಜತೆ ಕಷ್-ಸಾಸರನ್ನೂ ಇಟ್ಟ. ಕುರ್ಚಿಗಳೂ ಎರಡೇ ಇದ್ದವು.
ನಾವು ಬೇಡನಂತೆ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದೆವು. ಗೆಸ್ಟ್ ಹೌಸಿನ ಹಿಂಭಾಗದಲ್ಲಿ ಎತ್ತರವಾದ ಮರಗಳಿದ್ದವು. ಕಾಂಪೌಂಡಿನಲ್ಲಿ ಬಣ್ಣ-ಬಣ್ಣದ ಹೂಗಳು ತೂಗಾಡುತ್ತಿದ್ದವು. ಬೆಳಗಿನ ಕೋಮಲ ಕಿರಣಗಳು ಈ ಹೂಗಳ ಮೇಲೆ ಬೀಳುತ್ತಿದ್ದುದರಿಂದ ಇವುಗಳ ಬಣ್ಣ ಮತ್ತೂ ಸುಂದರವಾಗಿತ್ತು. ನಮ್ಮ ಮುಖದ ಬಣ್ಣವೂ ಕ್ಷಣ-ಕ್ಷಣಕ್ಕೂ ಬದಲಾಯಿಸುತ್ತಿತ್ತು. ಧೈರ್ಯವೂ ಕುಸಿಯುತ್ತಿತ್ತು. “ಇನ್ನೇನು ಬಂದೇಬಿಡ್ತಾಳೆ” ಎಂದು ಗೆಳೆಯರ ಉತ್ಸಾಹವನ್ನು ಕಾಪಾಡಲು ನಾನು ಹೇಳಿದೆ.
ಆಗಲೇ ವೃದ್ಧನೊಬ್ಬ ಮೆಟ್ಟಿಲುಗಳ ಬಳಿ ಕಂಡ. ಮೂರು ಮೆಟ್ಟಿಲುಗಳನ್ನಿಳಿದು ಅವನು ಕಾಂಪೌಂಡಿಗೆ ಬಂದು ಕುರ್ಚಿಯೊಂದರಲ್ಲಿ ಕೂತ. ನಾನು ತದೇಕಚಿತ್ತದಿಂದ ನೋಡಿದಾಗ ಅವನು ವೃದ್ದನಂತೆ ಕಾಣಿಸದೇ ಎಪ್ಪತ್ತರ ಯುವಕನಂತೆ ಕಂಡ. ಅವನ ಶರೀರ ಪೈಲ್ವಾನನಂತೆ ಮಜಬೂತಾಗಿತ್ತು. ದುಂಡನೆ ಮುಖ, ವಿಶಾಲವಾದ ಕಣ್ಣುಗಳು, ಕಣ್ಣುಗಳ ಮೇಲೆ ತೆಳು ಸಿಲ್ಟರ್ ಫ್ರೇಮಿನ ಕನ್ನಡಕವಿತ್ತು. ಮೂಗಿನ ಕೆಳಗೆ ಹಿಟ್ಲರ್ ಬ್ರಾಂಡ್ನ ಮೀಸೆಗಳಿದ್ದವು. ಕತ್ತು ಕಾಣಿಸುತ್ತಿರಲಿಲ್ಲ. ಕತ್ತು ರಹಿತ ದೇಹ ಹೊಸ್ತಿಲ ಮೇಲಿಟ್ಟ ಮಡಿಕೆಯಂತೆ ಕಾಣಿಸುತ್ತಿತ್ತು. ಅವನು ಬಹುಮೂಲ್ಯ ಸೂಟನ್ನು ಧರಿಸಿದ್ದ.
“ಅವನ್ಯಾರು?” ಬಾ ನನ್ನೆಡೆಗೆ ನೋಡದೆ ಪ್ರಶ್ನಿಸಿದ. ಅವನ ಬಳಿ ನಿಕೋನ್ ಕೆಮೆರಾವಿದ್ದು ಟೆಲಿಫೋಟೋ ಲೆನ್ಸ್ ಹಾಕಿ ಹುಡಿಗಿಯ ಫೋಟೋ ತೆಗೆಯಲು ರೆಡಿಯಾಗಿ ಕೂತಿದ್ದ. ನಾನು ಉತ್ತರಿಸುವುದಕ್ಕೂ ಮೊದಲೇ ಹುಡುಗಿ ಪ್ರತ್ಯಕ್ಷಳಾದಳು. ಬಿಳಿಯ ಶರ್ಟ್ ಮತ್ತು ಮೊಣಕಾಲಿನವರೆಗಿನ ಚಡ್ಡಿಯಲ್ಲಿ ಅವಳು ಶ್ವೇತ ಅಪ್ಸರೆಯಂತೆ ಕಂಗೊಳಿಸುತ್ತಿದ್ದಳು.
ನಾನು ಓರೆನೋಟದಿಂದ ಕುಟ್ಟಿಯನ್ನು ನೋಡಿದೆ. ಅವನ ಕಣ್ಣುಗಳು ಅರಳಿದ್ದವು. ಝಾಬಾ ಒಂದೇಸಮನೆ ಅವಳ ಫೋಟೋ ತೆಗೆದುಕೊಳ್ಳುತ್ತಿದ್ದ.
“ಹೇಗಿದ್ದಾಳೆ?” ನಾನು ಮತ್ತೆ ಕುಟ್ಟಿಯನ್ನು ನೋಡಿದೆ.
“ವಂಡರ್ ಫುಲ್! ಆದ್ರೆ ಆ ಪೈಲ್ವಾನ್ ಯಾರು?”
“ಅವಳಪ್ಪ ಆಗಿರಬೇಕು” ನಾನು ಅನುಮಾನಿಸಿದೆ.
ಆಗಲೇ ಪೈಲ್ವಾನ್ ಮತ್ತು ಹುಡುಗಿಯ ಮಧ್ಯ ಏನೋ ವಾದ-ವಿವಾದ ಪ್ರಾರಂಭವಾಗಿತ್ತು. ಸೈಲೆಂಟ್ ಮೂವಿಯ ಪ್ರೇಕ್ಷಕರಂತೆ ನಾವು ಮೌನವಾಗಿ ನೋಡುತ್ತಿದ್ದೆವು. ಕ್ಷಣ-ಕ್ಷಣವೂ ಪರಿಸ್ಥಿತಿ ಬಿಗಡಾಯಿಸುತ್ತಿತ್ತು. ಹುಡುಗಿ ಇದ್ದಕ್ಕಿದ್ದಂತೆಯೇ ಒಂದು ಕೈಯಿಂದ ಟೇಬಲ್ ಕುಟ್ಟಿ ಟೇಬಲ್ ಮೇಲಿದ್ದ ಕಪ್- ಸಾಸರ್ ಗಳನ್ನು ಬೀಳಿಸಿದಳು. ಪೈಲ್ವಾನ್ ಅಂಗಲಾಚಲಾರಂಭಿಸಿದ. ಹುಡುಗಿ, ಅವನೆಡೆಗೂ ನೋಡದೆ ಮರಳಿ ಒಳಗೆ ಹೊರಟು ಹೋದಳು.
“ನಿಜವಾಗಿಯೂ ವಿಚಿತ್ರ” ಕುಟ್ಟಿ ನನ್ನನ್ನೇ ನೋಡುತ್ತಾ ಹೇಳಿದ. “ಆದ್ರೆ ನಿನಗೆ ಸೊಪ್ಪು ಹಾಕುವವಳಲ್ಲ. ಅವಳನ್ನು ನಾನೇ ಬಲೆಗೆ ಹಾಕ್ಕೋಬೇಕು.”
ನಾನು ಕುಟ್ಟಿಯನ್ನೇ ನೋಡುತ್ತಾ ಕೂತುಬಿಟ್ಟೆ.
ಹುಡುಕುವ ಬಳ್ಳಿ ಕಾಲಿಗೇ ತೊಡಕಿದಾಗ…. ಅಧ್ಯಾಯ-6
ಪ್ಲಾಟ್ ಫಾರOಲ್ಲಿ ಗುಂಪು ಹೆಚ್ಜುತ್ತಿದೆ. ಕೋಲಾಹಲ ಹೆಚ್ಜುತ್ತಿದೆ. ಈ ಜನಸಂದಣಿಯಿಂದ ದೂರವಾಗಿ ಒಂದು ಹನಿಮೂನ್-ಕಪಲ್ ಬೆಂಚಿನ ಮೇಲೆ ಕೂತು ಐಸ್ರ್ಕೀಮ್ ಹೀರುತ್ತಿದೆ. ಯುವತಿ ಹಾವಿನಂತೆ ನಾಲಿಗೆ ಹೊರತೆಗೆದು ಕರಗುವ ಐಸ್ರ್ಕೀಮನ್ನು ನೆಕ್ಕುತ್ತಿದ್ದಾಳೆ. ಸ್ವಲ್ಪ ಹೊತ್ತಿನ ಅನಂತರ ಅವಳ ದೃಷ್ಟಿ ನನ್ನ, ಮೇಲೆ ಬಿದ್ದಾಗ ಅವಳು ಯೋಚಿಸುತ್ತಾಳೆ. “ಇವನ್ಯಾರೋ ಭಯಂಕರ ಪಾಪಿಯಿರಬೇಕು! ಇಲ್ಲದಿದ್ದರೆ ಈ ರೀತಿ ವಾರಸುದಾರರಿಲ್ಲದೆ ಸಾಯುವುದಿಲ್ಲ! ಅಯ್ಯೋ ಪಾಪಿ! ಬಡ ಪ್ರಾಣಿ, ಪಾಪಿ! ಇವನ ಬಳಿ ನಾಯಿಯನ್ನು ಹೊರತುಪಡಿಸಿ ಬೇರ್ಯಾರೂ ಇಲ್ಲ. ಮತ್ತೆ ಇವನು ಹೇಗೆ ಕೆಮ್ಮುತ್ತಿದ್ದಾನೆಂದರೆ ಇವನ ಹೃದಯ ಬಾಯಿಯಿಂದ ಹೊರಬಂದು ಅಂಗೈ ಮೇಲೆ ಬೀಳುವಂತೆ ತೋರುತ್ತದೆ.!
ಯುವಕನ ಧೂರ್ತ ಕಣ್ಣುಗಳು ಯುವತಿಯನ್ನೇ ಗಮನಿಸುತ್ತಿವೆ. ಅವನ ಯೋಜನೆಗಳೇ ಬೇರೆ-ದಿಲ್ಲಿ, ಆಗ್ರಾಕ್ಕೆ ಹೋಗಿ ಒಂದು ತಿಂಗಳು ಮಜಾ ಮಾಡ್ತೀನಿ. ಒಂದು ತಿಂಗಳ ಅನಂತರ ಸೀಮಿ ಮಾರಾಟಗೊಳ್ತಾಳೆ ಅನ್ನೋ ವಿಷಯವೂ ಅವಳಿಗೆ ಗೊತ್ತಿಲ್ಲ! ಇವಳ ಒಡವೆಗಳೆಲ್ಲಾ ನನ್ನ ಸೂಟ್ಕೇಸಿನಲ್ಲಿವೆ. ವ್ಯಾಪಾರ ಕುದುರಿದರೆ ಸಾವಿರವೋ-ಎರಡು ಸಾವಿರವೋ ಮತ್ತೂ ಸಿಗಬಹುದು. ಮತ್ತೆ ಹೊಸ ಮದುವೆ ಹೊಸ ಹುಡುಗಿ, ಹೊಸ ವ್ಯಾಪಾರ. ಜಗತ್ತು ಗೋಳ, ಬದುಕು ಗೋಳ. ಸೀಮಿಯ ಎರಡೂ ಸ್ತನಗಳನ್ನು ಕತ್ತರಿಸಿ ಜೋಡಿಸಿದರೆ ಪೃಥ್ವಿಯ ಗೋಳವೊಂದು ಖಂಡಿತವಾಗಿಯೂ ಆಗುತ್ತದೆ! ಹಿ… ಹಿ… ಹಿ.:
ಆ ಯುವತಿಗೆ ಎಚ್ಚರಿಕೆಯ ಮಾತುಗಳನ್ನು ಹೇಳಲು ಮನಸ್ಸಾಗುತ್ತದೆ! ಏಯ್ ಮೂರ್ಖ ಹೆಣ್ಣೆ! ಯಾವ ಪುರುಷನಿಗಾಗಿ ನೀನು ಹುಚ್ಚಿಯಾಗಿರುವೆಯೋ ಅವನು ತುಂಬಾ ನೀಚ. ನಿನ್ನಂತಹ ಅದೆಷ್ಟು ಹುಡುಗಿಯರನ್ನು ಮಾರಿ ಮಜಾ ಮಾಡಿದ್ದಾನೋ! ಈಗಲೂ ಸಮಯವಿದೆ. ಎಚ್ಚೆತ್ತುಕೋ! ಎಂದು ಎಚ್ಜರಿಸಲು ಮನಸ್ಸು ಬಯಸುತ್ತದೆ.
ಆದರೆ ಅವಳು ಎಚ್ಚೆತ್ತುಗೊಳ್ಳುವುದಿಲ್ಲ. ಪ್ರತಿಯಾಗಿ, ನನ್ನನೇ ಹುಚ್ಚನೆಂದು ತಿಳಿದು, ನನ್ನ ಮಾತಿಗೆ ನಗುತ್ತಾಳೆ. ಹೆಣ್ಣು ಒಮ್ಮೆ ಜಾರಿದರೆ, ಅವಳನ್ನು ಎತ್ತುವುದು ಕಷ್ಟ, ಮತ್ತೆ ಆ ಕೆಸರೂ ಎಂಥದ್ದು? ಚಂದ್ರನಂತೆ ಸುಂದರ, ಆಕರ್ಷಕ, ಬಳಿಗೆ ಹೋದರೆ ಮಾತ್ರ ಹೊಂಡ-ದಿಣ್ಣೆ ಮತ್ತು ಕಲ್ಲುಗಳು ಮಾತ್ರ ಕಾಣಿಸುತ್ತವೆ.
ನಿಜ ಹೇಳಬೇಕೆಂದರೆ ಯುವತಿಯನ್ನು ಎಚ್ಚರಿಸುವಷ್ಟೂ ಶಕ್ತಿ ನನ್ನಲ್ಲಿ ಉಳಿದಿಲ್ಲ. ಎದ್ದು ನಿಲ್ಲುವ ಶಕ್ತಿ ಇಲ್ಲ, ಸಮುದ್ರದ ಅಲೆಗಳಂತೆ ಕೆಮ್ಮು ಒಂದೇ ಸಮನೆ ಆಕ್ರಮಣವೆಸಗುತ್ತಿದೆ. ನಾನು ಕಾಲುಚಾಚಿ ಒಂದು ಬೆಂಚಿನ ಆಸರೆಯಿಂದ ಪ್ಲಾಟ್ ಫಾರಮ್ ಮೇಲೆ ಬಿದ್ದಿದ್ದೇನೆ. ಒಂದು ಗಂಟೆಯೊಳಗೇ ನಿದ್ರಿಸುತ್ತೇನೆ, ಶಾಶ್ವತವಾಗಿ!
ಕುಟ್ಟಿ ಕಾಲುಚಾಚಿ ನೆಲದ ಮೇಲೆ ಮಲಗಿದ್ದ. ತಲೆಕೆಳಗೆ ದಿಂಬಿರಲಿಲ್ಲ. ಅವನ ಶರೀರದ ಮೇಲೆ ನಿಕ್ಕರ್ ಮಾತ್ರವಿತ್ತು. ತಲೆಯಲ್ಲಿಯೂ ಲಬಂಗಿಯನ್ನು ಹೊರತುಪಡಿಸಿ ಬೇರ್ಯಾವ ವಿಚಾರವೂ ಇರಲಿಲ್ಲ. ಗೆಸ್ಟ್ ಹೌಸ್ ನಲ್ಲಿದ್ದ ಹುಡುಗಿಯ ಹೆಸರೇ ಲಬಂಗಿ ಯಾಗಿತ್ತು – ಇದುವರೆಗೆ ಅವಳ ಹೆಸರನ್ನಷ್ಟೇ ಪತ್ತೆ ಮಾಡಿದ್ದೆವು. ಅವಳ್ಯಾರು? ಎಲ್ಲಿಂದ ಬಂದಿದ್ದಾಳೆ? ಎಷ್ಟು ದಿನ ಗೆಸ್ಟ್ ಹೌಸ್ ನಲ್ಲಿರುತ್ತಾಳೆ- ಈ ಪ್ರಶ್ನೆಗಳಿಗೆ ಉತ್ತರ ಹುಡುಕಲು ಗೆಸ್ಟ್ ಹೌಸ್ ನ ಬಾಣಸಿಗನೊಂದಿಗೆ ಸಂಪರ್ಕಿಸುವುದು ಅಗತ್ಯವಾಗಿತ್ತು.
ಝಾಬಾ ಮಧ್ಯಾಹ್ನವಾದ ಮೇಲೆ ಹೊರಟು ಹೋಗಿದ್ದ. ಲಬಂಗಿಯ ಫೋಟೋಗಳ ರೀಲನ್ನು ಡೆವಲಪ್ ಮಾಡಿಸಿ, ಡಿನ್ನರ್ ಗೆ ಮೊದಲು ಅವನು ಹಳ್ಳಿಗೆ ಹಿಂತಿರುಗುತ್ತಾನೆಂಬ ನಂಬಿಕೆ ನಮಗಿತ್ತು. ನನ್ನ ನಂಬಿಕೆ ನನಗೆ ಮೋಸಮಾಡುವುದಿಲ್ಲ. ಅವನು ಅದಕ್ಕೂ ಮೊದಲೇ ಬಂದು ನಮ್ಮೆದುರು ಫೋಟೋಗಳನ್ನು ಹರಡಿದ, ಲಬಂಗಿಯ ಮುಖ ಫೋಟೋಜಿನಿಕ್ ಆಗಿತ್ತು. ಕ್ಯಾಮೆರಾ ಕಣ್ಣಿನಿಂದ ಅವಳು ಇನ್ನೂ ಹೆಚ್ಚು ಆಕರ್ಷಕವಾಗಿ ಕಾಣುತ್ತಿದ್ದಳು. ವಿಶೇಷವಾಗಿ ಅವಳ ಕ್ಲೋಸ್-ಅಪ್ ನಮ್ಮ ಮೇಲೆ ಪರಿಣಾಮ ಬೀರಿತ್ತು.
ಲಬಂಗಿಯ ಬಗ್ಗೆ ಝಾಬಾ ಹಳ್ಳಿಯಿಂದ ಇನ್ನೂ ಸ್ವಲ್ಪ ವಿಷಯಗಳನ್ನು ಸಂಗ್ರಹಿಸಿಕೊಂಡು ಬಂದಿದ್ದ. ಅದೇನಂದರೆ… ನಿತ್ಯಸಂಜೆ ಅವಳು ಕುದುರೆಯೇರಿ ಒಂಟಿಯಾಗಿ ಸುತ್ತಾಡಲು ಹೊರಡುತ್ತಾಳೆ. ಹಳ್ಳಿಯನ್ನು ಒಂದು ಬಾರಿ ಸುತ್ತುಹಾಕಿ, ಹಳ್ಳಿಯ ಮುಖ್ಯರಸ್ತೆಯಿಂದ ಗೆಸ್ಟ್ ಹೌಸಿಗೆ ಬರುತ್ತಾಳೆ.
ಇನ್ನೂ ನೆಲದ ಮೇಲೆ ಮಲಗಿದ್ದ ಕುಟ್ಟಿ ಎದ್ದುಕೂತ. ಲಬಂಗಿಯನ್ನು ಬಲೆಗೆ ಹಾಕಿಕೊಳ್ಳುವ ಹೊಸ ಉಪಾಯ ಅವನಿಗೆ ಹೊಳೆದಿದ್ದರೆ ಆಶ್ಚರ್ಯವಿಲ್ಲ! ಎದ್ದು, ಅವನು ಪ್ರಪ್ರಥಮವಾಗಿ ಬಾನನ್ನು ನೋಡಿದ. ಕಡೆಗೆ ನನ್ನ ನೋಡಿ “ಕೋಬರ್! ನಾಳೆ ಸಂಜೆ ನಾವು ಅವಳನ್ನು ಹಳ್ಳಿಯ ಹೊರಗೇ ಅಟ್ಯಾಕ್ ಮಾಡೋಣ” ಎಂದ.
“ಹೇಗೆ?” ನಾನು ಪ್ರಶ್ನಿಸಿದೆ.
ಉತ್ತರದಲ್ಲಿ ಅವನು ತನ್ನ ತತ್ತ್ವಜ್ಞಾನಿಯ ವಿಚಾರವನ್ನು ಹೇಳಿದ: ಮುಖಕ್ಕೆ ಎರಡು ರಂಧ್ರದ ಕಪ್ಪು ಬುರುಕ ಹಾಕಿಕೊಂಡು ನಾನು ಲಬಂಗಿಯ ಮಾರ್ಗದಲ್ಲಿ ಅಕಸ್ಮಾತ್ ಬರ್ತೀನಿ. ಸಹಜವಾಗಿಯೇ ಅವಳು ಗಾಬರಿಯಾಗ್ತಾಳೆ. ಅವಳು ಕಿರುಚುವುದಕ್ಕೂ ಮೊದಲೇ ಝಾಬಾ ಬಿಳಿ ಬುರಕಿಯಲ್ಲಿ ಅವಳನ್ನು ಕುದುರೆಯಿಂದ ಎಳೆದುಕೊಳ್ತಾನೆ. ಅವಳ ಬಾಯಿಗೆ ರುಮಾಲನ್ನು ತುರುಕಿದ ಮೇಲೆ ನಾವು ಅವಳನ್ನೆತ್ತಿಕೊಂಡು ಪಾಳು ಪ್ರದೇಶದ ಕೊನೆಗೆ ಹೋಗ್ತೀವಿ. ಅಲ್ಲಿ ಕುಟ್ಟಿ ಕೆಂಪು ಬುರುಕಿಯಲ್ಲಿ ಕಾಯುತ್ತಿರುತ್ತಾನೆ. ಅವನು ಲಬಂಗಿಯನ್ನು ಕಟ್ಟಿಹಾಕಿ, ತತ್ಕ್ಷಣ ಲಬಂಗಿಯ ಕುದುರೆಗೆ ಸಂದೇಶ ಅಂಟಿಸಿ ಕುದುರೆಯನ್ನು ಗೆಸ್ಟ್ ಹೌಸ್ ತನಕ ಓಡಿಸಿ ಬರ್ತಾನೆ.
ಸಂದೇಶ ಹೀಗಿರುತ್ತೆ: “ಮಹಾಶಯರೇ! ನಮ್ಮ ಲಬಂಗಿ ಕೆಂಪು ಬುರುಕಿಯವನ ವಶದಲ್ಲಿದ್ದಾಳೆ. ಅವಳನ್ನು ನೀವು ಸುರಕ್ಷಿತವಾಗಿ ಮರಳಿ ಪಡೆಯಬೇಕೆಂದಿದ್ದರೆ, ರಾತ್ರಿಯ ಹನ್ನೆರಡು ಗಂಟೆಗೂ ಮೊದಲು ಪಾಳುಪ್ರದೇಶದ ಆರಂಭದಲ್ಲೇ ಹದಿನೈದು ಸಾವಿರ ರೂಪಾಯಿಗಳನ್ನಿಟ್ಟು ಹೋಗಿ. ಇಲ್ಲದಿದ್ದರೆ ನಿಮ್ಮ ರೂಪಸಿ ಲಬಂಗಿಯನ್ನು ತುಂಡು-ತುಂಡು ಮಾಡಿ ಮೀನುಗಳಿಗೆ ಹಾಕುತ್ತೇವೆ.”
ಬರೆದವ,
ಕೆಂಪು ಬುರುಕಿಯವ
ಕುಟ್ಟಿಯ ಈ ಟೆಕ್ನಿಕಲ್ ವಿಚಾರ ನನಗೆ ಹಿಡಿಸಿತು. ನಾನು ಕಪ್ಪು ಬುರುಕಿಯವ, ಕುಟ್ಟಿ ಕೆಂಪು ಬುರುಕಿಯವ, ಝಾಬಾ ಬಿಳಿ ಬುರುಕಿಯವ! ಆದರೆ ನಾನು ಝಾಬಾನೊಂದಿಗೆ ಅಪಹರಣದ ಕಾಂಡದಲ್ಲಿ ಮಹತ್ವಪೂರ್ಣ ಭೂಮಿಕೆಯನ್ನು ನಿರ್ವಹಿಸಬೇಕಿತ್ತು. ಇದು ಸ್ವಲ್ಪ ಕಷ್ಬವೇ ಆಗಿತ್ತು.
ನಾನೇನೋ ತರ್ಕಿಸಬೇಕೆಂದಿದ್ದೆ. ಆಗಲೇ ಕುಟ್ಟಿ ಬಿಕ್ಕಳಿಸಿದ. ಅವನ ಮೇಲೆ ‘ಐಡಿಯಾ’ ಆಕ್ರಮಣ ವೆಸಗಿತ್ತು. ಏಕಾಂತದ ಅವಶ್ಯಕತೆ ಅವನಿಗಿತ್ತು. ‘ಆಕ್ರಮಣ- ಆಕ್ರಮಣ’ ಎಂದರಚುತ್ತಾ ಅವನು ಕಾಟೇಜ್ನಿಂದ ಹೊರಗೋಡಿದ ಝಾಬಾ ಅವನನ್ನು ಹಿಂಬಾಲಿಸಿದ, ನನಗಾಶ್ಚರ್ಯವಾಯಿತು. ಝಾಬಾ ಅವನನ್ನು ಹಿಂಬಾಲಿಸಿ ಓಡಿದ್ದಕ್ಕೆ ಇಂದು ಯಾವ ಕಾರಣವೂ ಇರಲಿಲ್ಲ. ಆದರೆ ಬಹುಶಃ ಇತ್ತು ಎಂಬುದು ಒಂದು ಕ್ಷಣದ ಅನಂತರವೇ ನನಗೆ ಅರ್ಥವಾಯಿತು.
ದುಲಈ ಮೆಟ್ಟಿಲುಗಳನ್ನಿಳಿದು ಕೆಳಗೆ ಬಂದಳು. ಗಾಬರಿಯಿಂದ ನಾನು ಗೋಡೆಯ ಮೇಲಿದ್ದ ಹನುಮಂತನ ಚಿತ್ರವಿದ್ದ ಕ್ಯಾಲೆಂಡರನ್ನು ನೋಡಿದೆ. ಇಂದು ಒಂದನೆಯ ತಾರೀಕಾಗಿತ್ತು. ಪ್ರತಿ ತಿಂಗಳ ಒಂದನೆಯ ತಾರೀಕಿನಂದು ಈ ಕಾಳಿಮಾತೆ ಕುರಿಯೊಂದನ್ನು ಬಲಿ ತೆಗೆದುಕೊಳ್ಳುತ್ತಿದ್ದಳು. ಕುಟ್ಟಿ ಅವಳಿಗೆ ಬಲಿಯಾಗಿದ್ದ. ಹೋದ ತಿಂಗಳು ಝಾಬಾ ಹೋಗಿದ್ದ. ಈ ತಿಂಗಳು ನನ್ನ ಸರದಿಯಿತ್ತು. ಬಲಿಯಾಗದೆ ಬೇರೆ ಮಾರ್ಗವಿರಲಿಲ್ಲ. ಹೇಡಿಗಳು ಬಲಿಯಾಗಲಾರರು ನಾನು ಗಂಡಸಿನಂತೆ ಬಲಿಯಾಗಲು ನಿರ್ಧರಿಸಿ ದುಲಈ ಯೊಂದಿಗೆ ಮೇಲಕ್ಕೆ ಹೋದೆ.
ಮೇಲೆ ಬಂದ ದುಲಈ ಪ್ರಪ್ರಥಮವಾಗಿ ಮದ್ಯದ ಬಾಟ್ಲಿಯ ಮುಚ್ಚಳವನ್ನು ತೆರೆದಳು. ನನಗೆ ಮದ್ಯದ ಅಗತ್ಯವಿರಲಿಲ್ಲ. ಬರುವಾಗಲೇ ಮೂರು ಪೆಗ್ ಹಾಕಿಕೊಂಡು ಬಂದಿದ್ದೆ.
ಸುಮಾರು ಒಂದು ಗಂಟೆಯ ಅನಂತರ ಕೆಳಗಿಳಿಯುವುದಕ್ಕೂ ಮೊದಲು ಅವಳು ನನಗೊಂದು ಮದ್ಯದ ಬಾಟಲಿಯನ್ನು ಉಡುಗೊರೆಯಾಗಿ ಕೊಟ್ಟಳು. ಆ ಬಾಟಲಿಯನ್ನು ಅಲ್ಲೇ ಒಡೆದು ಅವಳ ತಲೆಯ ಮೇಲೆ ಮದ್ಯ ಸುರಿದು ನಾನು ಕೆಳಗೆ ಬಂದೆ. ಅಥವಾ ನನಗೆ ‘ಡಬ್ಬಲ್-ಕಿಕ್’ ಹೊಡೆದಿತ್ತೊ?”
ಲಬಂಗಿ ನನ್ನೆದುರಿಗಿದ್ದಳು. ನಾನು ರೆಪ್ಪೆಗಳನ್ನು, ಬಡಿದೆ. ಇಲ್ಲ, ಅವಳು ನಿಂತಿರದೆ, ಗೋಡೆಗೊರಗಿ ಮಂಚದ ಮೇಲೆ ಕೂತಿದ್ದಳು. ತಲೆಕೂದಲುಗಳು ಅವಳ ಭುಜಗಳ ಮೇಲೆ ಹರಡಿದ್ದವು. ಬೆಳಗಿನ ಉಡುವನ್ನು ಧರಿಸಿದ್ದಳು. ಬಿಳಿ ಶರ್ಟ್ ಮತ್ತು ಮೊಣಕಾಲುಗಳನ್ನು ಮುಚ್ಚಲು ಪ್ರಯತ್ನಿಸುತ್ತಿದ್ದ ಬಿಳಿ ನಿಕ್ಕರ್ ನಲ್ಲಿ ಲಬಂಗಿಯೂ ಶ್ವೇತವರ್ಣಿಯಾಗಿದ್ದಳು. ಬಲ್ಪ್ ಹಳದಿ ಬೆಳಕನ್ನು ಚೆಲ್ಲುತ್ತಿತ್ತು. ನನ್ನೆದುರು ವಾಸ್ತವವಾಗಿಯೂ ಲಬಂಗಿ ಇದ್ದಾಳೆಂಬ ನಂಬಿಕೆ ನನಗಾಗುತ್ತಿರಲಿಲ್ಲ. ಮದ್ಯದಿಂದಾಗಿ ನನಗೆ ಭ್ರಮೆಯುಂಟಾಗುತ್ತಿತ್ತು. ನಾನು ಕೆಲವು ಹೆಜ್ಜೆ ಮುಂದೆ ಬಂದು ಅವಳ ಮೊಣಕಾಲುಗಳ ಮೇಲೆ ಬೆರಳನ್ನಿಟ್ಟೆ ಅನಂತರ ಇಳಿಬಿಟ್ಟುಕೊಂಡಿದ್ದ ಅವಳ ಕಾಲುಗಳ ಬೆರಳಿನಲ್ಲಿದ್ದ ಕಾಲುಂಗುರವನ್ನೂ ಕಳಚಿದೆ.
“ನಂಬಿಕೆಯಾಯ್ತಾ?” ಅವಳ ಈ ಪ್ರಶ್ನೆಯಿಂದ ಗಾಬರಿಗೊಂಡು ಎರಡನೆಯ ಬಾರಿ ಅವಳ ಮುಖವನ್ನೇ ನೋಡಿದೆ. ಅವಳು ಈಗಲೂ ಹಿಂದಿನಂತೆಯೇ ಗೋಡೆಗೊರಗಿ ಕೂತಿದ್ದಳು. ನಾನಿನ್ನೂ ಮೂರ್ಖನಂತೆ ಅವಳ ಕಣ್ಣುಗಳನ್ನೇ ನೋಡುತ್ತಿದ್ದೆ. ತಲೆಕೆರೆದುಕೊಳ್ಳುತ್ತಿದ್ದೆ. ಅನಂತರ ತಲೆಯನ್ನು ಮೂರ್ನಾಲ್ಕು ಬಾರಿ ಕೊಡವಿಕೊಂಡೆ. ಅಮಲು ಇಳಿಯಿತು. ವಾಸ್ತವಿಕತೆ ಎದುರಾಯಿತು.
“ನಂಬಿಕೆಯಾಯ್ತು.” ಅವಳ ಪ್ರಶ್ನೆಗೆ ಉತ್ತರಿಸಿದೆ.
“ಏನು?” ಅವಳ ಮುಗುಳ್ನಗೆಯಲ್ಲಿ ಸೂಕ್ಷತ್ಮೆಯಿತ್ತು.
“ಈಗ?”
“ಈಗೇನು?”
“ನನಗೆ ಹಸಿವೆಯಾಗ್ತಿದೆ.”
“ಹಾಗಾದ್ರೆ ನಿನ್ನ ಮನೆಗೆ ಹೋಗು!” ನಾನು ಸಲಹೆ ಕೊಟ್ಟೆ.
“ಇದು ಮನೆಯಲ್ವಾ?”
“ಹೌದು, ಆದ್ರೆ ಒಲೆಯಿಲ್ಲದ ಮನೆ.”
ಅವಳು ನಿಕ್ಕರ್ ನ ಹಿಂಭಾಗದ ಜೇಬಿಗೆ ಕೈಹಾಕಿ ನೂರರ ಒಂದು ನೋಟನ್ನು ತೆಗೆದು ನನ್ನದುರಿಗಿಡುತ್ತಾ ಹೇಳಿದಳು, “ಪೇಟೆಗೆ ಹೋಗಿ ಒಂದು ಒಲೆ ಮತ್ತು ಬೇಕಾದ ಪಾತ್ರೆಗಳನ್ನು ತಗೊಂಡು ಬಾ!”
“ಆದ್ರೆ ಅಡುಗೆ ಮಾಡೋರು ಯಾರು?” ನನಗಾಶ್ಚರ್ಯವಾಯಿತು.
“ನಾನು.”
ನನಗೆ ಮತ್ತೂ ಆಶ್ಚರ್ಯವಾಯಿತು. ಇವಳು ಬಯಸುವದಾದರೂ ಏನನ್ನು?
ಏನೂ ಹೊಳೆಯದಿದ್ದಾಗ ನಾನು ಹೊರಬಂದೆ. ನನಗೆ ಕುಟ್ಟಿ ಮತ್ತು ಝಾಬಾನ ಸಹಕಾರದ ಅಗತ್ಯವಿತ್ತು. ಲಬಂಗಿ, ನಮ್ಮ ‘ಥೈಸ್’ ಕಾಟೇಜಿಗೆ ಬಂದು ದರ್ಶನ ನೀಡಿ ನನ್ನ, ಮಿದುಳಿನ ಚಟ್ನಿ ಮಾಡಿ ಬಿಟ್ಟಿದ್ದಳು. ನಾವು ಅವಳನ್ನು ಅಪಹರಿಸಲು ಬಯಸುತ್ತಿದ್ದೆವು. ಆದರೆ ಅವಳು ಈಗ ನಮ್ಮ ಮನೆಯಲ್ಲಿ ಒಲೆಯನ್ನು ವ್ರತಿಷ್ಠಾಪಿಸುವ ಬಯಕೆ ಹೊಂದಿದ್ದಳು.
ಸ್ವಲ್ಪಹೊತ್ತಿಗೆ ನಾನು ಪಾಳುಪ್ರದೇಶಕ್ಕೆ ಬಂದೆ. ನಮ್ಮ ಸಭೆ ಇಲ್ಲೇ ನಡೆಯುತ್ತಿತ್ತು. ನಾಲ್ಕು ಗೋಡೆಗಳ ಮಧ್ಯೆ ‘ಬೋರ್’ ಆಗಿ, ಗೋಡೆಗಳಿಲ್ಲದ ಈ ಬಂಗ್ಲೆಗೆ ಬಂದು ನಾವು ಕೂರುತ್ತಿದ್ದೆವು. ಒಮ್ಮೆ ಒಂಟಿಯಾಗಿ ಬಂದರೆ, ಒಮ್ಮೆ ಜತೆಯಲ್ಲಿ, ಒಮ್ಮೆ ನಿಕ್ಕರ್ ನಲ್ಲಿ ಬಂದರೆ, ಒಮ್ಮೆ ನಿಕ್ಕರ್ ಇಲ್ಲದೆ! ‘ನಾಚಿಕೆ’ ಶಬ್ದ ನಮ್ಮನ್ನು ಮುಟ್ಟಲು ಸಾಧ್ಯವಾಗಿರಲಿಲ್ಲ.
“ನಾಚಿಕೆ ಅಂದ್ರೇನು?” ಅದೊಂದು ದಿನ ಕುಟ್ಟಿ ಹೇಳಿದ್ದ, “ಎಲ್ಲಿಯವರೆಗೆ ಈ ಶರೀರದ ಮೇಲೆ ಈ ನಿಕ್ಕರ್ ಇರುತ್ತೋ, ಸಮಾಜದ ದೃಷ್ಟಿಯಲ್ಲಿ ನಾವು ಸಜ್ಜನರು. ನಿಕ್ಕರ್ ಕಳಚಿದರೆ ನಾಚಿಕೆಯಿಲ್ಲದವರು”
ಇಲ್ಲಿಯ ಹಾಳುಪ್ರದಶದಲ್ಲಿ ಕುಟ್ಟಿ ನಿಕ್ಕರ್ ಕಳಚುವ ರೆಕಾರ್ಡನ್ನು ಖಾಯಂಗೊಳಿಸಿದ್ದ. ವಿಶೇಷವಾಗಿ ಅವನು ಹುಡುಗಿಯೊಬ್ದಳನ್ನು ಪುಸಲಾಯಿಸಿ ಈ ಹಾಳು ಪ್ರದೇಶಕ್ಕೆ ಕರೆತಂದಾಗ, ತನ್ನ ನಿಕ್ಕರನ್ನು ಬಾವುಟದಂತೆ ಬಿದಿರಿಗೆ ಸಿಗಿಸಿ ಅದನ್ನು ನಿಲ್ಲಿಸುತ್ತಿದ್ದ. ನಾವೂ ದೂರದಿಂದ ಈ ಸಿಗ್ನಲ್ ಕಂಡು ಕುಟ್ಟಿ ವ್ಯಸ್ತನಾಗಿದ್ದಾನೆಂದು ತಿಳಿಯುತ್ತಿದ್ದೆವು.
ನಾನೂ ಅದಷ್ಟೋ ಬಾರಿ ಈ ಹಾಳುಪ್ರದೇಶದಲ್ಲಿ ನಿಕ್ಕರ್ ಕಳಚಿದ್ದೇನೆ ಆದರೆ ಅದನ್ನು ಬಾವುಟ ಮಾಡಿ ಹಾಕುವ ಧೈರ್ಯವನ್ನು ಇದುವರೆಗೂ ಮಾಡದಾದೆ. ಝಾಬಾ ಬಾಲಬ್ರಹ್ಮಚಾರಿಯೆಂಬುದನ್ನು ಆಗಲೇ ಹೇಳಿಬಿಟ್ಟಿದ್ದೇನೆ.
ಮೂಡ್ ಬಂದಾಗ ಕುಟ್ಟಿ ಒಮ್ಮೊಮ್ಮೆ ಹೇಳುತ್ತಿದ್ದ, “ಝಾಬಾ, ನಿನ್ನ ವಿಚಾರಗಳಿಗೆ ನೀನೇನಾದರೂ ‘ತಿರುವು’ ಕೊಡಬೇಕೆಂದಿದ್ದರೆ, ಕೆಲವು ಕ್ಷಣಗಳಿಗಾದರೂ ಕನ್ಯೆಯೊಬ್ಪಳಿಗೆ ನಿನ್ನ ಬಗಲಲ್ಲಿ ಜಾಗಕೊಡು. ನಿನ್ನ ವಿಚಾರಗಳಲ್ಲಿ ಪರಿವರ್ತನೆ ಬರುತ್ತೆ. ಫೋಟೋಗ್ರಫಿಯ ಕ್ಷೇತ್ರದಲ್ಲಿ ಭೂಕಂಪ ತರುವ ನಿನ್ನ ಕನಸಿಗೆ ‘ಗತಿ’ಬರುತ್ತೆ. ನಿನ್ನ ಶರೀರದಲ್ಲಿ ಮಿಂಚು ಹರಿಯುತ್ತೆ. ವಿಚಿತ್ರ-ಅದ್ಭುತ ವಿಚಾರಗಳು, ಕ್ರಾಂತಿಕಾರಕ ವಿಚಾರಗಳು ನಿನ್ನಲ್ಲಿ ಉದ್ಭವಿಸುತ್ತವೆ. ಸ್ವರ್ಗದ ಸುಖ ಮತ್ತು ನರಕದ ಯಾತನೆ, ಒಮ್ಮೆಲೆ ಎರಡೂ ಅನುಭವಗಳು ನಿನಗಾಗುತ್ತವೆ. ಆದರೆ ನೀನು ಬರೀ ವಿಚಾರಗಳನ್ನು ಹುಟ್ಟುಹಾಕ್ತೀಯ. ಬದುಕನ್ನಲ್ಲ.”
ಝಾಬಾನಿಗೆ ಕುಟ್ಟಿಯ ಮಾತುಗಳ ಬಗ್ಗೆ ಲಕ್ಷ್ಯವಿಲ್ಲ. ತನ್ನ ಸಿದ್ಧಾಂತಗಳ ಬಗ್ಗೆ ಅವನು ಅಚಲನಾಗಿದ್ದ. ಕುಟ್ಟಿಯ ಮಾತುಗಳನ್ನು ತದೇಕಚಿತ್ತದಿಂದ ಕೇಳಿ ಹೇಳುತ್ತಿದ್ದ “ಹೆಣ್ಣು, ಮಹಾತ್ಮರ ಜನನಿ, ಏಸು, ಬುದ್ಧ, ಮಹಾವೀರ, ರಾಮ, ಮೊಹಮ್ಮದ್ರಂತಹ ಪವಿತ್ರಾತ್ಮಗಳು ಹೆಣ್ಣಿನ ಗರ್ಭದಿಂದ ಜನಿಸಿವೆ. ಆ ಗರ್ಭವನ್ನು ಕೆಟ್ಟ ದೃಷ್ಟಿಯಿಂದ ನೋಡುವುದು ಸರಿಯಲ್ಲ.”
“ಹೆಣ್ಣು ಯುಜೀದ್ ಮತ್ತು ರಾವಣನಂತಹ ಪಾಪಿಗಳಿಗೂ ಜನ್ಮ ನೀಡುತ್ತಾಳೆಂಬುದನ್ನು ನೀನ್ಯಾಕೆ ಮರೀತೀಯಾ?” ಕುಟ್ಟಿ ನಿಷ್ಠುರನಾಗಿ ಉತ್ತರಿಸುತ್ತಿದ್ದ.
ಝಾಬಾ ಮೌನಿಯಾಗುತ್ತಿದ್ದ ಕುಟ್ಟಿಯನ್ನು ತರ್ಕದಲ್ಲಿ ಸೋಲಿಸುವುದು ಕಷ್ಟವೆಂಬುದು ನನ್ನ ಅಭಿಪ್ರಾಯ.
ಝಾಭಾ ಮತ್ತು ಕುಟ್ಟಿಯ ಹೆಸರು ಹಿಡಿದು ಕೂಗುತ್ತಾ ನಾನು ಸುಮಾರು ಹತ್ತು ಧ್ವಂಸ ಬಂಗ್ಲೆಗಳ ಹಾಳುಪ್ರದೇಶದಲ್ಲಿ ನುಗ್ಗಿ ಗೋಡೆಗಳನ್ನು ಹಾರಿ ದಾಟುತ್ತಾ ಹೊರಬಂದೆ. ಇಲ್ಲಿ ಝಾಬಾನೂ ಇರಲಿಲ್ಲ, ಕುಟ್ಟಿಯ ಬಾವುಟವೂ ಇರಲಿಲ್ಲ. ಅವರೆಲ್ಲಿಯಾದರೂ ತುಂಬಾ ದೂರ-ಚಿಲ್ಕಾ ಕೆರೆಯ ಬಳಿಗೆ ಹೋಗಿದ್ದರೆ ಮಧ್ಯರಾತ್ರಿಯವರೆಗೂ ಮರಳಿ ಬರಲಾರರು.
ಸಮುದ್ರ ತೀರದ ರೇಶ್ಮೆಯಂತಹ ಮರಳಿನ ಮೇಲೆ ಹೆಜ್ಜೆಗಳನ್ನು ಹಾಕುತ್ತಾ ನಾನು ಹೊಸರೀತಿಯಲ್ಲಿ ಯೋಚಿಸಲು ಪ್ರಾರಂಭಿಸಿದೆ. ಕುಟ್ಟಿ ಮತ್ತು ಝಾಬಾನನ್ನು ಹುಡುಕುವುದು ಅನಿವಾರ್ಯವೇ? ಲಬಂಗಿ ನನ್ನ ಆವಿಷ್ಕಾರ, ನನ್ನ ಅದೃಷ್ಟದಿಂದಾಗಿಯೇ ಮನೆಬಾಗಿಲಿಗೆ ಲಕ್ಷ್ಮಿ ಬಂದಿದ್ದಾಳೆ. ಈ ‘ಗಂಗೆ’ಯಲ್ಲಿ ಪ್ರಪ್ರಥಮವಾಗಿ ಮುಳುಗು ಹಾಕುವ ಕಾಪಿರೈಟ್ ನನ್ನದು! ಆ ಮೇಲಿನ ವಿಚಾರ ನನಗೇಕೆ! ನಾನು ಮನಸ್ಸಿನಲ್ಲಿ ನಿರ್ಧರಿಸಿದೆ. ಇಂದು, ಪ್ರಥಮ ಬಾರಿಗೆ ಬಿದಿರಿನ ಮೇಲೆ ನನ್ನ ಬಾವುಟ ಹಾರುವುದು!
ಲಬಂಗಿಯನ್ನು ಮಸಲಾಯಿಸಿ ಹಾಳುಪ್ರದೇಶಕ್ಕೆ ಕರೆತರಲು ನಾನು ಮರಳಿ ಕಾಟೇಜಿನೆಡೆಗೆ ಹೊರಟೆ. ನನ್ನ ಮನಸ್ಸಿನಲ್ಲಿ ಅವಳು ದಡದ ಅಲೆಯಂತೆ ಆವರಿಸಿದ್ದಳು. ಅವಳ ಮುಗುಳ್ನಗೆ ತುಂಬಿದ ವಿಶಾಲ ಮುಖದ ಬ್ಲೋ-ಅಪ್ ಕಲ್ಪಿಸಿಕೊಂಡೆ. ನನ್ನದೊಂದು ಬೆರಳು ಅವಳ ಮೊಣಕಾಲಿನಿಂದ ಹೆಬ್ಪೆರಳಿನವರೆಗೆ ನುಸುಳಲು ಸಿದ್ಧವಾಯಿತು.
ನಾನು ಕಾಟೇಜಿನೊಳಗೆ ನುಗ್ಗಿಹೋಗುವುದಕ್ಕೂ ಮೊದಲೇ ನನ್ನ ಕಾಲುಗಳು ಬಾಗಿಲಲ್ಲೇ ಸ್ಥಿರವಾದವು. ನನ್ನೆದುರಿನ ದೃಶ್ಯಕ್ಕೂ ಬಾಕ್ಸಿಂಗ್ ರಿಂಗಿಗೂ ಹೆಚ್ಚು ವ್ಯತ್ಯಾಸವಿರಲಿಲ್ಲ. ಕುಟ್ಟಿ ಕ್ರಾಸ್ ಮೇಲಿನ ಏಸುಕಿಸ್ತನಂತೆ ಎರಡೂ ಕೈಗಳನ್ನು ಚಾಚಿ ನೆಲದ ಮೇಲೆ ಸಮತಲದಲ್ಲಿ ಬಿದ್ದಿದ್ದ. ಲಬಂಗಿ ಅವನ ತಲೆಯ ಬಳಿ ಕುಕ್ಕುರುಗಾಲಿನಲ್ಲಿ ಕೂತು ‘ಒಂದು… ಎರಡು… ಮೂರು… ನಾಲ್ಕು… ಐದು….” ಎಂದು ಎಣಿಸುತ್ತಿದ್ದಳು. ಕುಟ್ಟಿಗೆ ಇನ್ನೂ ಪ್ರಜ್ಞೆಬಂದಿರಲಿಲ್ಲ. ಝಾಬಾ ಮೂಲೆಯಲ್ಲಿ ಕೂತು ಆರಾಮವಾಗಿ ಗಿಟಾರ್ ಬಾರಿಸುತ್ತಿದ್ದ.
ಲಬಂಗಿ ಹತ್ತು ಎಂದು ಎಣಿಸುವುದಕ್ಕೂ ಮೊದಲೇ ಕುಟ್ಟಿಯ ದೇಹ ಕಂಪಿಸಿತು. ಹೊರಳಿದ ಅವನು ತುಂಬಾ ಪ್ರಯಾಸದಿಂದ ಮಗುವಿನಂತೆ ಮೊಣಕಾಲೂರಿ ಕೂತ. ಅನಂತರ ಮೆಲ್ಲನೆ ಎದ್ದೂ ನಿಂತ. ಆದರೆ ಕೆಲವು ಕ್ಷಣ ಮಾತ್ರ ಲಬಂಗಿ ತನ್ನದೊಂದು ಬೆರಳನ್ನು ಅವನೆದೆಗಿಟ್ಟು ಮೆಲ್ಲನೆ ಒತ್ತಿದಳು. ಪೀಸಾದ ಟವರ್ ನಂತೆ ಎದ್ದುನಿಂತಿದ್ದ ಕುಟ್ಟಿ ರೋಮ್ನ ಕಂಬದಂತೆ ಕೆಳಗೆ ಬಿದ್ದ!
ಒಮ್ಮೆಲೆ ಝಾಬಾನ ದೃಷ್ಟಿ ನನ್ನ ಮೇಲೆ ಬಿತ್ತು. ಅವನು ಗಿಟಾರನ್ನು ಮಂಚದ ಮೇಲಿಟ್ಟು ನನ್ನ ಬಳಿ ಓಡಿಬಂದ. ಕುಟ್ಟಿಯ ಪರಿಸ್ಥಿತಿ ಕಂಡು ಆಕಾಶವೇ ತಲೆಯ ಮೇಲೆ ಕಳಚಿ ಬಿದ್ದಂತಾಗಿತ್ತು. ಮಾತೇ ಹೊರಡುತ್ತಿರಲಿಲ್ಲ. ಹಾಳು ಪ್ರದೇಶದಲ್ಲಿ ಬಾವುಟ ಹಾರಿಸುವ ನನ್ನ ಕನಸು, ಈಗ ಕನಸಾಗಿಯೇ ಉಳಿಯಿತು ಎಂದನ್ನಿಸಿತು!
ಹೆಚ್ಚು ಯೋಚಿಸದೆ ಝಾಬಾನಿಗೆ ಸಂಜ್ಞೆ ಮಾಡಿದೆ. ಝಾಬಾ ಕುಟ್ಟಿಯ ಎರಡೂ ಕೈಗಳನ್ನು ಹಿಡಿದುಕೊಂಡ. ನನ್ನ ಕೈಗಳಲ್ಲಿ ಅವನ ಎರಡು ಕಾಲುಗಳಿದ್ದವು. ನಾವಿಬ್ಬರೂ ಅವನನೆತ್ತಿಕೊಂಡು ಸಮುದ್ರ ತೀರಕ್ಕೆ ತಂದು ಅನಂತರ ಮೊಣಕಾಲುದ್ದ ನೀರಿನಲ್ಲಿ ಅವನನ್ನು ಎರಡು-ಮೂರು ಬಾರಿ ಮುಳುಗೇಳಿಸಿದೆವು. ತತ್ಕ್ಷಣ ಅವನು ಸಹಜ ಸ್ಥಿತಿಗೆ ಬಂದು ಬಾಯಿಯಿಂದ ನೀರನ್ನು ಪಿಚಕಾರಿಯಂತೆ ಉಗುಳಿದ.
ಈಗ ಕುಟ್ಟಿ ನಿಂತು ಅಗಲವಾದ ಕಣ್ಣುಗಳಿಂದ ನಮ್ಮನ್ನೇ ನೋಡುತ್ತಿದ್ದ. ರಾತ್ರಿ ಅಷ್ಟು ದಟ್ಟವಾಗಿರಲಿಲ್ಲ. ನಾವು ಛಾಯಾಚಿತ್ರಗಳಂತೆ ಅವನೆದುರು ನಿಂತಿದ್ದೆವು. ಕಡೆಗೆ ಕೆಲವು ಹೆಜ್ಜೆ ಮುಂದೆ ಹೋಗಿ ದಡದ ಮರಳಿನ ಮೇಲೆ ಕೂತೆವು. ಕುಟ್ಟಿಯೂ ಹಿಂಬಾಲಿಸಿ ಬಂದು ಎದುರಿಗೆ ಕೂತ. ಈಗ ಸ್ವಲ್ಪ ಸುಧಾರಿಸಿದಂತೆ ಕಂಡ. ಮೆಲ್ಲನೆ ನಾನು ವಿಷಯ ಪ್ರಾರಂಭಿಸಿದೆ. ನನ್ನ ಅನುಪಸ್ಥಿತಿಯಲ್ಲಿ ಸಂಭವಿಸಿದ ವಿಷಯಗಳನ್ನು ತಿಳಿಯದೆ ನನಗೆ ನೆಮ್ಮದಿಯಿರಲಿಲ್ಲ.
ಕುಟ್ಟಿ ಏನೂ ಮಾತನಾಡದೆ ನಮ್ಮನ್ನೇ ನೋಡುತ್ತಿದ್ದ. ಬಹುಶಃ ಇಂಥ ‘ಉಗ್ರ’ ಸೋಲು ಈ ಹಿಂದೆ ಅವನಿಗಾಗಿರಲಿಲ್ಲ. ಅವನ ನಾಲಿಗೆ ಉಡುಗಿಹೋಗಿತ್ತು. ನಾನು ಝಾಬಾನನ್ನು ನೋಡಿದೆ. ಇದುವರೆಗೆ ಮೌನಿಯಾಗಿದ್ದ ಅವನು ಒಮ್ಮೆಲೆ ಹೇಳಲಾರಂಭಿಸಿದ.
ಕುಟ್ಟಿಯ ಕಥೆ:
ಮಾನಸಿಕ ಸಿದ್ಧತೆಯೊಂದಿಗೆ ಕುಟ್ಟಿ ಮತ್ತು ಝಾಬಾ ಬೀದಿ ನಾಯಿಗಳಂತೆ ಹಳ್ಳಿಯನ್ನೆಲ್ಲಾ ಸುತ್ತಾಡಿ ಅನಂತರ ಗೆಸ್ಟ್ ಹೌಸ್ ನೆಡೆಗೆ ಹೊರಟರು. ಬಾಣಸಿಗನನ್ನು ಸರಿಮಾಡಿಕೊಂಡು ಸಾಧ್ಯವಾದಷ್ಟೂ ವಿಷಯಗಳನ್ನು ಲಬಂಗಿಯ ಬಗ್ಗೆ ಸಂಗ್ರಹಿಸುವುದು ಕುಟ್ಟಿಯ ಉದ್ದೇಶವಾಗಿತ್ತು.
ರಾತ್ರಿ ಒಂಬತ್ತೂಕಾಲಿಗೆ ಅವರು ಗೆಸ್ಟ್ ಹೌಸಿಗೆ ಹೋದಾಗ ಅಲ್ಲಿ ನಿಶ್ಯಬ್ಧತೆಯಿತ್ತು. ಎಲ್ಲೆಲ್ಲೂ ಕತ್ತಲು, ಲಬಂಗಿ ತನ್ನ ಪೈಲ್ವಾನನೊಂದಿಗೆ ಚಿಲ್ಕಾ ಕೆರೆಯ ಬಳಿ ವಾಕಿಂಗ್ಗೆ ಹೋಗಿರಬಹುದೆಂದು ಕುಟ್ಟಿ ಯೋಚಿಸಿದ್ದ. ಆದರೆ ಬಾಣಸಿಗನ ಗುಡಿಸಲಿನಲ್ಲಿ ಕತ್ತಲಿತ್ತು.
ಕುಟ್ಟಿ ಮತ್ತು ಝಾಬಾ ದೃಷ್ಟಿ ಹಾಯಿಸುತ್ತಾ ಗೆಸ್ಟ್ ಹೌಸ್ ನ್ನು ಪರೀಕ್ಷಿಸಿ, ಅದರ ಹಿಂಬಾಗಕ್ಕೆ ಬಂದರು. ಅಲ್ಲೇ ಬಾಣಸಿಗನ ಗುಡಿಸಲಿತ್ತು. ಗುಡಿಸಲ ಹೊರಗೆ ಅವನು ಒಂಟಿಯಾಗಿ ಕೂತಿದ್ದ.
ಕುಟ್ಟಿ ಝಾಬಾನನ್ನು ಸ್ವಲ್ಪ ದೂರ ನಿಲ್ಲಿಸಿ ಅವನ ಬಳಿಗೆ ಬಂದು ಮೆಲ್ಲನೆ ಮಾತನಾಡಿಸಿದ. “ಅಂಕಲ್! ಬೆಂಕಿ ಸಿಗುತ್ತಾ? ಚಿಲುಮೆ ಹೊತ್ತಿಸಿಕೊಳ್ಳಬೇಕಿತ್ತು.”
ಬಾಣಸಿಗ ತಲೆಯೆತ್ತಿಯೂ ಅವನೆಡೆಗೆ ನೋಡಲಿಲ್ಲ.
“ಅಂಕಲ್! ವತ್ತು ಒಲೆ ಹಚ್ಚಲಿಲ್ವಾ?” ಕುಟ್ಟಿಗೆ ಟ್ರಾಜೆಡಿಯ ವಾಸನೆ ಬಡಿಯಿತು.
“ನೋಡಪ್ಪಾ, ಮೇಮ್ ಸಾಹೇಬರ ಪತ್ತೆಯಾಗುವ ವರೆಗೂ ಬಹುಶಃ ಒಲೆ ಹಚ್ಚಲ್ಲ” ಬಾಣಸಿಗ ಇಲ್ಲವೆಂಬಂತೆ ತಲೆಯಾಡಿಸಿದ.
“ಯಾಕೆ, ಮೇಮ್ ಸಾಹೇಬರಿಗೆ ಏನಾಯ್ತು?” ಕುಟ್ಟಿಗೆ ಆಶ್ಚರ್ಯವಾಯಿತು.
“ಸಾಹೇಬರ ಜತೆಗೆ ಜಗಳವಾಗಿ ಮನೆಬಿಟ್ಟು ಹೋದ್ರು” ವೃದ್ದ ಬಾಣಸಿಗನಮಾತಿನಲ್ಲಿ ದುಃಖವಿತ್ತು.
“ಮತ್ತೆ ಸಾಹೇಬ್ರು?”
“ಗೆಸ್ಟ್ ಹೌಸ್ ನ ಮೂಲೇಲಿ ನನ್ನಹಾಗೇ ಕತ್ತಲಲ್ಲಿ ಕೂತಿರಬೇಕು!”
ಇನ್ನೂ ಹೆಚ್ಚು ವಿಚಾರಿಸದೆ ಕುಟ್ಟಿ ಝಾಬಾನ ಬಳಿ ಬಂದು ವಿಷಯ ತಿಳಿಸುತ್ತಾ ಹೇಳಿದ, “ಹಕ್ಕಿ ಬಲೇಲಿ ಬೀಳೋದಕ್ಕೆ ಮೊದಲೇ ಹಾರಿಹೋಯ್ತು.”
ಇಬ್ಪರೂ ಲಬಂಗಿಯ ಬಗ್ಗೆಯೇ ಮಾತನಾಡಿಕೊಳ್ಳುತ್ತಾ ಕಾಟೇಜಿಗೆ ಬಂದರು. ಕಾಟೇಜಿನಲ್ಲಿ ಲಬಂಗಿಯನ್ನು ಕಂಡು ಇಬ್ಪರ ಮುಖ ಸಿನಿಮಾ ಸ್ಕೋಪ್ ಆಯಿತು.
ಲಬಂಗಿಯ ಕೋಪ….. ಅಧ್ಯಾಯ-7
ಲಬಂಗಿ ಗೋಡೆಗೊರಗಿ ಮಂಚದ ಮೇಲೆ ಕೂತಿದ್ದಳು. ಬಿಳಿ ನಿಕ್ಕರ್ ಧರಿಸಿದ್ದ ಅವಳನ್ನು ಆಶ್ವರ್ಯದಿಂದ ಸೂಕ್ಷ್ಮವಾಗಿ ಕುಟ್ಟಿ ಗಮನಿಸುತ್ತಿದ್ದ. ಹೆಜ್ಜೆಯ ಮೇಲೆ ಹೆಜ್ಜೆಯನ್ನಿಟ್ಟು ಮುಂದೆ ಬರುತ್ತಿದ್ದ ಅವನು ಮಂಚದ ಬಳಿಗೆ ಬರುವುದಕ್ಕೂ ಮೊದಲೇ ಲಬಂಗಿ ಎದ್ದು ನಿಂತಳು. ಕುಟ್ಟಿ ಎರಡು ಹೆಜ್ಜೆ ಹಿಂದಕ್ಕೆ ಸರಿದ. ಝಾಬಾ ಸುರಕ್ಷಿತ ಜಾಗ ಹುಡಿಕಿಕೊಂಡು ಗಿಟಾರ್ ಹಿಡಿದ. ಗಿಟಾರನ್ನು ಝಾಬಾ ವಿಶೇಷ ಸಂದರ್ಭಗಳಲ್ಲಿ ಉಪಯೋಗಿಸುತ್ತಿದ್ದ. ಒಮ್ಮೆ ನರ್ವಸ್ನೆಸ್ ಮರೆಯಲು ಉಪಯೋಗಿಸಿದರೆ ಇನ್ನೊಮ್ಮೆ ದಣಿವಾರಿಸಿಕೊಳ್ಳಲು ಉಪಯೋಗಿಸುತ್ತಿದ್ದ.
“ಏಯ್ ಹುಡುಗಿ!” ತನಗೆ ಅವಳ ಬಗ್ಗೆ ಏನೂ ತಿಳಿದಿಲ್ಲವೆಂಬಂತೆ ಕುಟ್ಟಿ ಪ್ರಶ್ನಿಸಿದ, “ನೀನ್ಯಾರು? ಇಲ್ಲಿಗೇಕೆ ಬಂದಿದ್ದೀಯಾ?”
ಈ ಪ್ರಶ್ನೆಗೆ ತನ್ನ ಮೂವತ್ತೆರಡೂ ಹಲ್ಲುಗಳನ್ನು ಪ್ರದರ್ಶಿಸುತ್ತಾ ಲಬಂಗಿ ನಕ್ಕಳು. ಕಡೆಗೆ ಸಹಜವಾಗಿಯೇ ಬಾಂಬ್ ಎಸೆದಳು. “ಕಳೆದರಡು ವಾರಗಳಲ್ಲಿ ನೀವು ನನ್ನ ಬಗ್ಗೆ ಸಾಕಷ್ಟು ವಿಷಯ ಸಂಗ್ರಹಿಸಿರಬಹುದೆಂದುಕೊಂಡಿದ್ದೆ!”
ಕುಟ್ಟಿಗೆ ತಲೆಸುತ್ತಿ ಬಂದಂತಾಯಿತು. ಆದರೂ ಅವನು ಸೋಲುವವನಾಗಿರಲಿಲ್ಲ. “ಏನ್ ಹರಟ್ತಿದ್ದೀಯಾ? ನನಗಂತೂ ನಿನ್ನ ಹೆಸರು ಗೊತ್ತಿಲ್ಲ!”
“ಅದನ್ನು ನಾನು ಹೇಳ್ತೀನಿ. ನನ್ನ ಹೆಸರು ಲಬಂಗಿಲತಾ. ನಿನ್ನ ಹೆಸರು ಕುಟ್ವಿ ಆ ನೀಗ್ರೋವಿನ ಹೆಸರು ಝಾಬಾ!…” ಕುಟ್ಟಿ ಏನೋ ಹೇಳಲು ಬಯಸಿದಾಗ ಲಬಂಗಿ ಟೇಬಲ್ ಮೇಲಿದ್ದ ಕವರ್ ನಿಂದ ಝಾಬಾ ತೆಗೆದ ಫೋಟೋಗಳನ್ನು ಅವನೆಡೆಗೆ ರಾಚುತ್ತಾ ತನ್ನ ಮಾತನ್ನು ಮುಂದುವರೆಸಿದಳು. “ಇನ್ನೂ ತೃಪ್ತಿಯಾಗದಿದ್ರೆ ನನ್ನ ಸಂಪೂರ್ಣ ಪರಿಚಯ ಕೊಡಲೂ ನಾನು ಸಿದ್ಧ.”
ಲಬಂಗಿಯ ಫೋಟೋಗಳು ನಾಲ್ಕೂ ಕಡೆ ಚೆಲ್ಲಿಬಿದ್ದವು. ಕುಟ್ಟಿ ತನ್ನ ಮೊದಲ ಸೋಲನ್ನೊಪ್ಪಿಕೊಂಡ. ತಾನು ಯೋಚಿಸಿದ್ದಕ್ಕಿಂತಲೂ ಹೆಚ್ಚಾಗಿ ಈ ಹುಡುಗಿ ಬುದ್ಧಿವಂತೆ… ಈಗ ಅವನು ಹೊಸ ಬಲೆಯನ್ನು ಬೀಸಿದ. ಲಬಂಗಿಯೆದುರು ಗೆಳೆತನದ ಪ್ರಸ್ತಾಪವನ್ನಿಟ್ಟು ಒಂದು ಲೋಟ ತಣ್ಣನೆಯ ನೀರನ್ನು ಕೊಟ್ಟ.
“ನೋಡು ಲಬಂಗಿ! ನಿಜ ಹೇಳಬೇಕೆಂದರೆ, ನಾವು ನಿನ್ನನ್ನು ನಮ್ಮ ಫಿಲ್ಮಿಗೆ ಹೀರೋಯಿನ್ ಮಾಡಿಕೋಬೇಕು ಅಂತ ಇಷ್ಟಪಡ್ತಿದ್ದೆವು. ಈಗ್ಲೂ ಇಷ್ಟಪಡ್ತೀವಿ. ಅದಕ್ಕಾಗಿಯೇ ನೀನು ವಾಪಸ್ ಹೋಗಲೇಬೇಕು.”
“ಹೋಗದಿದ್ರೆ?”
“ನಾನು ಮತ್ತು ಝಾಬಾ ನಿನ್ನನ್ನೆತ್ತಿಕೊಂಡು ಹೋಗಿ ಬಿಟ್ಟು ಬರ್ತೀವಿ.”
“ಯಾಕೆ ಅಂತ?”
“ಯಾಕೆಂದ್ರೆ ಇಲ್ಲಿ ಮೂರು ಜನ ಅಖಂಡ ಬ್ರಹ್ಮಚಾರಿಗಳಿದ್ದೇವೆ.” ಕುಟ್ಟಿ ತಲೆ ಕೆರೆದುಕೊಂಡ.
“ಏನಾಯ್ತೀಗ?”
“ಮತ್ತೆ ಇಲ್ಲಿಗೆ ಬರುವ ಪ್ರತಿಯೊಂದನ್ನೂ ನಾವು ಮೂವರು ಸಮನಾಗಿ ಹಂಚಿಕೊಳ್ತೇವೆ.”
“ಇದು… ಇದು ನನಗೆ ಹಿಡಿಸ್ತು.”
“ಏನ್ ಹಿಡಿಸ್ತು?” ಕುಟ್ಟಿಗೆ ಆಶ್ಜರ್ಯವಾಯಿತು.
“ಅದೇ, ನಿಮ್ಮ ಮೂವರ ಹೆಂಡ್ತಿಯಾಗಿ ಇಲ್ಲಿರೋದು.”
“ಏನ್ ಮಾತಾಡ್ತಿದ್ದೀಯಾ!!!”
“ಅದೇ ಹೇಳಿದೆನಲ್ಲ.”
“ನಿಜವಾಗ್ಲೂ ನೀನು ನಮ್ಮ ಮೂವರೊಂದಿಗೆ…”
“ಬರೆದು ಕೊಡ್ಲಾ?” ಕುಟ್ಟಿಯನ್ನು ತಡೆದು ಲಬಂಗಿ ಪ್ರಶ್ನಿಸಿದಳು.
ಝಾಬಾ ಇನ್ನೂ ಸುರಕ್ಷಿತ ಮೂಲೆಯಲ್ಲಿ ನಿಂತಿದ್ದ. ಕ್ಷಣ-ಕ್ಷಣವೂ ಅವನ ಬುದ್ಧಿಗೆ ಗಂಟುಗಳು ಬೀಳುತ್ತಿದ್ದವು. ಆ ಗಂಟುಗಳು ಎಷ್ಟು ವೃದ್ಧಿಸಿತ್ತೆಂದರೆ, ಅವನು ಗಿಟಾರ್ ನ ತಂತಿಗಳನ್ನು ಜೋರಾಗಿ ಮೀಟಿದ. ಕುಟ್ಟಿ ಲಬಂಗಿಯನ್ನೇ ನೋಡುತ್ತಿದ್ದ. ಕಡೆಗೆ ಏನೋ ನಿರ್ಧರಿಸಿದ. ಲಬಂಗಿ ತನ್ನನ್ನು ಮೂರ್ಖನನ್ನಾಗಿ ಮಾಡುವ ಪ್ರಯತ್ನವೆಸಗುತ್ತಿದ್ದಾಳೆಂದು ಯೋಚಿಸಿದ.
“ನಡಿ!” ಕಡೆಗೆ ಕುಟ್ಟಿ ಹೇಳಿದ.
“ಎಲ್ಲಿಗೆ?”
“ಹಾಳು ಪ್ರದೇಶಕ್ಕೆ.”
“ಹನಿಮೂನ್ಗೆ ಆ ಜಾಗ ಕೆಟ್ಟದ್ದನಲ್ಲ, ನಡಿ!” ಲಬಂಗಿ ಕೈ ಜಾಚಿದಳು.
ಕುಟ್ಪಿ ಸ್ವಲ್ಪ ಯೋಚಿಸುತ್ತಾ, ಸ್ವಲ್ಪ ನರ್ವಸ್ ಆಗುತ್ತಾ ತನ್ನ ಕೈಯನ್ನು ಲಬಂಗಿಯ ಕೈಯಲ್ಲಿಟ್ಟ. ತತ್ಕ್ಷಣ ಅವಳು ಅವನ ಮಣಿಕಟ್ಟನ್ನು ಹಿಡಿದು, ಅವನ ಕೈಯನ್ನು ಸ್ವಲ್ಪ ತಿರುವಿದಳು. ಜೋಡೋ ವರಸೆಯನ್ನು ಲಬಂಗಿ ಪ್ರಯೋಗಿಸಿದ್ದಳು. ಕುಟ್ಟಿಯ ಇಡೀ ದೇಹ ನೆಗೆದು ಕೆಳಗೆ ಬಿತ್ತು. ಸಂಕ್ಷೇಪದಲ್ಲಿ ಸೋಲನ್ನೊಪ್ಪಿಕೊಳ್ಳುವುದಕ್ಕೂ ಮೊದಲು ಕುಟ್ಟಿ ಮೂರು ಬಾರಿ ಹಾರಿ ಅಗಸನ ಬಟ್ಟೆಯಂತೆ ಕೆಳಗೆ ಅಪ್ಪಳಿಸಿ ಬಿದ್ದಿದ್ದ!
ವಿಷಯವನ್ನೆಲ್ಲಾ ತಿಳಿದ ಮೇಲೆ, ಲಬಂಗಿ ಗೂಢಚಾರಿಣಿಯಾಗಿ ನಮಗಿಂತ ಒಂದು ಹೆಜ್ಜೆ ಮುಂದಿದ್ದಾಳೆಂದು ಅನ್ನಿಸಿತು. ಅವಳ ಬಗ್ಗೆ ನಾವು ಸಂಗ್ರಹಿಸುತ್ತಿದ್ದ ವಿಷಯ ಅವಳಿಗೆ ತಿಳಿದಿತ್ತು. ಆದರೆ ನಮ್ಮ ಬಗ್ಗೆ ಅವಳು ಸುಮಾರಾಗಿ ಎಲ್ಲಾ ವಿಷಯಗಳನ್ನೂ ಸಂಗ್ರಹಿಸಿದ್ದು ನಮಗೆ ತಿಳಿದಿರಲೇ ಇಲ್ಲ.
“ಕೋಬರ್! ನಮ್ಮ ಮೇಲೆ ಗೂಢಚರ್ಯೆ ಮಾಡುವಂತಹ ಅಗತ್ಯ ಈ ಹುಡುಗಿಗೆ ಯಾಕಾಯ್ತೋ ಅರ್ಥವಾಗಲಿಲ್ಲ” ಝಾಬಾ ಮೌನ ಮುರಿದ.
“ನಾನೂ ಇದನ್ನೇ ಯೋಚ್ನೆ ಮಾಡ್ತಿದ್ದೇನೆ. ಇದನ್ನು ನಾವು ತಿಳಿದುಕೊಳ್ಳಲೇಬೇಕು.”
ಅಂಧಕಾರ ಹಬ್ಬಿತ್ತು. ನಾವು ಸಮುದ್ರ ತೀರದಲ್ಲಿ ಕೂತಿದ್ದೆವು. ಕುಟ್ಟಿ ಇನ್ನೂ ಮೌನಿಯಾಗಿದ್ದ. ಈಗ ಅವನ ಸ್ಥಿತಿ ದಯನೀಯವಾಗಿತ್ತು, ಕ್ಷಣಕಾಲ ನನಗೆ ಅವನ ಟೆಕ್ನಿಕಲ್ ಯೋಜನೆ ನೆನಪಾಯಿತು. ಲಬಂಗಿಯನ್ನು ಬುಟ್ಟಿಗೆ ಹಾಕಿಕೊಳ್ಳಲು ಅವನು ನನಗೆ ಮತ್ತು ಝಾಬಾನಿಗೆ ಕಪ್ಪು-ಬಿಳಿಯ ಬುರುಕಿಧಾರಿ ಗೂಂಡಾಗಳ ಅಭಿನಯ ಮಾಡಲು ತಿಳಿಸಿದ್ದ. ವಾಸ್ತವವಾಗಿ ಹಾಗೇನಾದರೂ ನಟಿಸಿದ್ದರೆ, ನನಗೆ ಮತ್ತು ಝಾಬಾನಿಗೆ ಕುಟ್ಟಿಗಾದ ಪರಿಸ್ಥಿತಿಯೇ ಕಾದಿತ್ತು.
ಬದಲಾದ ಪರಸ್ಥಿತಿಗಳಿಂದಾಗಿ ನನ್ನ ವಿಚಾರಗಳಿಗೆ ಹೊಸ ದಿಕ್ಕನ್ನು ಕೊಡುವ ಅಗತ್ಯವುಂಟಾಯಿತು. ಲಬಂಗಿಯನ್ನು ಅಪಹರಿಸಿ ಹದಿನೈದು ಸಾವಿರ ರೂಪಾಯಿಗಳನ್ನು ಒಂದೇ ರಾತ್ರಿಯಲ್ಲಿ ಸಂಪಾದನೆ ಮಾಡುವ ನಮ್ಮ ಯೋಜನೆ ಆಕಾರ ತಾಳುವುದಕ್ಕೂ ಮೊದಲೇ ನಿರಾಕಾರವಾಗಿಬಿಟ್ಟಿತ್ತು. ಲಬಂಗಿ, ಅಪಹರಿಸಲ್ಪಡದೆ ನಮ್ಮ ಬಳಿ ಬಂದಿದ್ದಳು.
ಈ ಬಗ್ಗೆ ಆಳವಾಗಿ ಯೋಚಿಸಿದಾಗ, ಪ್ರಪ್ರಥಮವಾಗಿ ಅವಳು ಬಂದ ಕಾರಣವನ್ನು ಕೇಳಬೇಕೆಂದನ್ನಿಸಿತ್ತು. ತನ್ನ ಪೈಲ್ವಾನ್ ಅಪ್ಪನೊಂದಿಗೆ ಜಗಳವಾಡಿಕೊಂಡು ಬೇರೆಡೆಗೆ ಅವಳು ಹೋಗಬಹುದಿತ್ತು. ನಮ್ಮ ಕಾಟೇಜಿಗೇ ಯಾಕೆ ಬಂದಳು?
ರಾತ್ರಿಯ ಸುಮಾರು ಹತ್ತೂವರೆ ಗಂಟೆಗೆ ನಾವು ಮರಳಿ ಕಾಟೇಜಿಗೆ ಬಂದೆವು. ಲಬಂಗಿ ಹಸಿದ ಹೆಣ್ಣು ಹುಲಿಯಂತೆ ಆ ಕಡೆಯಿಂದ ಈ ಕಡೆ ಗೋಡೆಯವರೆಗೆ ಓಡಾಡುತ್ತಿದ್ದಳು. ನಮ್ಮನ್ನು ನೋಡಿದೊಡನೆಯೇ ನಿಂತಳು. ನಾವು ಹಳ್ಳಿಯಿಂದ ಸ್ವಲ್ಪ ಕುಡಿದು-ತಿಂದು ಬಂದಿದ್ದೆವು. ಲಬಂಗಿಗೆ ಸ್ವಲ್ಪ ಆಲೂಚಿಪ್ಸ್, ಬೆಣ್ಣೆಪ್ಯಾಕೇಟ್ ಮತ್ತು ಒಂದು ಬ್ರೆಡ್ ತಂದಿದ್ದೆವು.
ಮುಗುಳ್ನಗುತ್ತಾ ಮುಂದೆ ಬಂದು ನಾನು ಕುಟ್ಟಿಯ ರೈಟಿಂಗ್ ಟೇಬಲ್ಮೇಲೆ ಎಲ್ಲವನ್ನೂ ಇಟ್ಟೆ. ಲಬಂಗಿ ಒಂದೂ ಶಬ್ಧವನ್ನಾಡದೆ ಚಿಪ್ಸ್ ತಿನ್ನಲಾರಂಭಿಸಿದಳು. ಬಾ ಮಂಚದಮೇಲೆ ಕೂತ. ಕುಟ್ಟಿ ಇನ್ನೂ ಬಾಗಿಲ ಬಳಿಯೇ ನಿಂತಿದ್ದ. ಒಳಬರಲು ಬಹುಶಃ ಇನ್ನೂ ಹೆದರಿಕೆಯಾಗುತ್ತಿತ್ತೇನೋ! ಲಬಂಗಿ ಆಲೂಚಿಪ್ಸ್ ಮುಗಿಸುವುದಕ್ಕೂ ಮೊದಲೇ ನಾನು ಬ್ರೆಡ್ ಹೋಳುಗಳಿಗೆ ಬೆಣ್ಣೆಹಚ್ಚಿ ಸಿದ್ಧಪಡಿಸಿದೆ. ಕುಟ್ಟಿ ಮೆಲ್ಲನೆ ಬಂದು ಝಾಬಾನ ಪಕ್ಕದಲ್ಲಿ ಕೂತ. ನಾನೆಲ್ಲಿ ಕೂರಬೇಕೆಂದು ತೋಚದೆ ಕಡೆಗೆ ನೆಲದ ಮೇಲೆ ಹಾಸಿದ್ದ ಹಾಸಿಗೆಯ ಮೇಲೆ ಕೂತು ಲಬಂಗಿ ಬ್ರೆಡ್ ತಿನ್ನುವುದನ್ನೇ ನೋಡಿದೆ.
ಸ್ವಲ್ಪ ಹೊತ್ತಿನ ಅನಂತರ ಝಾಬಾ ಎದ್ದು ಹೋಗಿ ನೀರಿನಗ್ಲಾಸ್ ತಂದು ಲಬಂಗಿಯ ಟೇಬಲ್ ಮೇಲಿಟ್ಟ. ಲಬಂಗಿ ಮುಗುಳ್ನಗುತ್ತಾ ‘ಥ್ಯಾಂಕ್ಯೂ’ ಎಂದಳು. ಅನಂತರ ಬಾಯಿ ಒರೆಸಿಕೊಳ್ಳುತ್ತಾ ಕುರ್ಚಿಯನ್ನು ಟೇಬಲ್ಗೆ ಬೆನ್ನು ಮಾಡಿ, ಕೂತಳು-ಮೂವರಿಗೂ ತಾನು ಸಹ್ಯವಾಗಿ ಕಾಣಿಸಲೆಂದು.
“ಡಿನ್ನರ್ ಗೆ ವಂದನೆಗಳು” ಅವಳೇ ಪ್ರಾರಂಭಿಸಿದಳು. “ಇಂದಿನಷ್ಟು ರುಚಿಯಾದ ತಿಂಡಿಯನ್ನು ಈ ಹಿಂದೆ ನಾನು ತಿಂದಿರಲೇ ಇಲ್ಲ. ನೀವು ಪ್ರತಿದಿನ ಹೀಗೆ ಏನಾದ್ರೂ ತಿನ್ತೀರ?”
“ಒಮ್ಮೊಮ್ಮೆಯಂತೂ ಏನೂ ತಿನ್ನಲ್ಲ. ಅದಕ್ಕೆ ನಮಗೆ ನಿನ್ನ ಚಿಂತೆಯಾಗ್ತಿದೆ.” ನಾನು ವಾಸ್ತವಾಂಶವನ್ನು ಹೇಳಿದೆ.
“ಅದೆಂಥಾ ಚಿಂತೆ?”
“ನಮ್ಮ ಜತೆ ನೀನು ಉಪವಾಸ ಮಲಕ್ಕೋಬೇಕಾಗುತ್ತೆ.”
“ಇದನ್ನೆಲ್ಲಾ ಯೋಚಿಸಿಯೇ ನಾನಿಲ್ಲಿಗೆ ಬಂದಿದ್ದೀನಿ.”
“ಆದ್ರೆ ಇಲ್ಲಿಗ್ಯಾಕೆ?”
“ನಿಮ್ಮ ಜೀವನ ನನಗಿಷ್ಟ.”
ಅಕಸ್ಮಾತ್ ಝಾಬಾ ಕಿಲಕಿಲನೆ ನಗುತ್ತಾ ‘ವ್ಹಾಟ್ ಎ ಬಿಗ್ ಜೋಕ್? ಹಾ ಹಾ ಹಾ ಹಾ ಹಾ ಹಾ! ಹೋ ಹೋ ಹೋ ಹೋ ಹೋ ಹೋ!” ಎಂದ, ಯಾರೂ ಅವನೊಂದಿಗೆ ನಗಲಿಲ್ಲ. ಹೀಗಾಗಿ ನಗುವಿನ ಟೇಪ್ ಅರ್ಧಕ್ಕೆ ನಿಂತು ಅವನು ಮೌನಿಯಾದ.
“ಝಾಬಾ!” ಲಬಂಗಿ ಅವನನ್ನೇ ನೋಡುತ್ತಾ ಗಂಭೀರವಾಗಿ ಹೇಳಿದಳು, “ನಾನು ತಮಾಷೆ ಮಾಡ್ತಿಲ್ಲ. ಹೊಟ್ಟೆಗಾಗಿ ನೀವು ಒಮ್ಮೊಮ್ಮೆ ದಾರಿಹೋಕರ ಜೇಬನ್ನು ಕತ್ತರಿಸುತ್ತೀರ ಮತ್ತು ಒಮ್ಮೊಮ್ಮೆ ಕತ್ತಲಲ್ಲಿ ಜನರನ್ನೂ ಲೂಟಿ ಮಾಡ್ತೀರ ಅನ್ನೋ ವಿಷಯವೂ ನನಗ್ಗೊತ್ತಿದೆ.” ಲಬಂಗಿ ನಮ್ಮ ಆಶ್ಚರ್ಯಭರಿತ ಮುಖವನ್ನೇ ಗಮನಿಸುತ್ತಾ ಹೇಳಿಕೆಯನ್ನು ಮುಂದುವರಿಸಿದಳು. “ಇಂಥ ರೋಮಾಂಚಕ
ಬದುಕು, ಎಲ್ಲರಿಗೂ ಸಿಗಲ್ಲ. ಇದಕ್ಕೂ ಅದೃಷ್ಟ ಬೇಕು. ಇದರಲ್ಲಿ ಪಾಲು ಹಂಚಿಕೊಳ್ಳುವ ಹಕ್ಕು ನನಗಿಲ್ವಾ?”
ಯಾರೂ ಏನೂ ಮಾತನಾಡಲಿಲ್ಲ. ನಾವು ಕೇಳುತ್ತಿರುವುದು ನಿಜ ಎಂಬ ನಂಬಿಕೆಯೇ ನಮಗಾಗುತ್ತಿರಲಿಲ್ಲ! ನಾವು ಮೊಣಕಾಲುಗಳಿಂದ ಹೊಟ್ಟೆಯ ಗುಂಡಿಯನ್ನು ಮುಚ್ಚಿಕೊಳ್ಳುತ್ತಿದ್ದೇವೆ. ಆದರೆ ಇದನ್ನು ಕಂಡು ಒಬ್ಪಳಿಗೆ ಈರ್ಷ್ಯೆಯಾಗುತ್ತಿದೆ!
“ಲಬಂಗಿ! ಇದೆಲ್ಲಾ ಸರಿಯೇ. ಆದ್ರೆ ನಿನ್ನ ಅಪ್ಪನಿಗೆ ನೀನಿಲ್ಲಿರೋ ವಿಷಯ ಗೊತ್ತಾದರೆ…”
“ಅಪ್ತ!” ಅವಳು ಮಧ್ಯದಲ್ಲಿ ತಡೆದಳು. “ನನಗೆ…?”
“ಯಾಕೆ! ಯಾರ ಜತೆಯಲ್ಲಿ ನೀನು ಗೆಸ್ಟ್ ಹೌಸ್ ನಲ್ಲಿ ಇರ್ತೀಯೋ ಅವರು ನಿನ್ನ ತಂದೆಯಲ್ವಾ?”
“ಅಲ್ಲ!”
“ಮತ್ತೆ?”
“ಆ ಪೈಲ್ವಾನ್, ನನ್ನ ಪತಿ!”
ನಾಯಿ ನನ್ನ ಮಿತ್ರ. ಸಾವಿನ ಭಯ ನನಗಿಲ್ಲ, ಮನುಷ್ಯರ ಭಯ ನನಗಿಲ್ಲ. ಈ ಬದುಕು ರೈಲಿನಂತೆ, ಗತಿ ನಿಶ್ಜಿತ. ಒಬ್ಪ ವೇಗವಾಗಿ ಹೋದರೆ, ಇನ್ನೊಬ್ಬ ಲೋಕಲ್ ಟ್ರೈನಿನಂತೆ, ಮಗದೊಬ್ಪ ರಾಜಧಾನಿ ಎಕ್ಸ್ ಪ್ರೆಸ್ ನ ಸ್ಪೀಡ್ ನಲ್ಲಿ ಹೋಗುತ್ತಾನೆ. ಇವರೆಲ್ಲಾ ಮನುಷ್ಯರು, ಮನುಷ್ಯನ ಸಾವಿನಿಂದ ಸಾಯುವವರು ಎಂಬುದಷ್ಟೇ ವ್ಯತ್ಯಾಸ. ಇದು ಅವರ ದುರದೃಷ್ಟ ನಾನು ನಾಯಿಯ ಸಾವಿನಂತೆ ಸಾಯುತ್ತಿದ್ದೇನೆ. ಇದು ನನ್ನ ಅದೃಷ್ಟ.
ಕುಟ್ಟಿ ಮತ್ತು ಝಾಬಾ ಖುಷಿಯಿಂದ ಕುಣಿಯುತ್ತಾ, ನರ್ತಿಸುತ್ತಿದ್ದರು ಸಮುದ್ರ- ತೀರ ಹಾಡು ಮತ್ತು ಸಂಗೀತದಿಂದ ತಲೆದೂಗುತ್ತಿತ್ತು. ಬಾ ತನ್ನ ಗಿಟಾರನ್ನು ಜತೆಗೇ ತಂದಿದ್ದ ಅವನು ಅದನ್ನು ಬಾರಿಸುತ್ತಾ ಗಂಟಲು ಕಿತ್ತು ಹೋಗುವಂತೆ ಹಾಡುತ್ತಲೂ ಇದ್ದ ಕುಟ್ಟಿ ತನ್ನೆರಡೂ ಕೈಗಳನ್ನು ಬಳುಕಿಸುತ್ತಾ ನರ್ತಿಸುತ್ತಿದ್ದ. ಹಾಳು ಪ್ರದೇಶದಲ್ಲಿ ನಾನು ಲಬಂಗಿಯೊಂದಿಗೆ ಕೂತಿದ್ದೆ.
“ಕೋಬರ್! ಇವತ್ತು ಯಾವುದಾದ್ರೂ ಹಬ್ಪಾನಾ?” ಲಬಂಗಿ ಅವರಿಬ್ಬರನ್ನೇ ನೋಡಿದಳು.
ನಾನು ಇಲ್ಲವೆಂದೆ.
“ಮತ್ತೆ ಈ ಇಬ್ಪರು ಹುಚ್ಚರು ಇಷ್ಟೊಂದು ಯಾಕೆ ಕುಣೀತಿದ್ದಾರೆ?”
“ಲಬಂಗಿ! ವಾರಕ್ಕೆ ಮೊದ್ಲು ನೀನು ನಮ್ಮೊಂದಿಗಿರಲು ಬಂದಾಗ ನೂರು ರೂಪಾಯಿ ನೋಟೊಂದನ್ನು ತಂದಿದ್ದೆ” ಮುಳುಗುವ ಸೂರ್ಯನನ್ನೇ ನೋಡುತ್ತಾ ಹೇಳಿದೆ.
“ಹೌದು.”
“ಆ ನೋಟು ಇಂದಿಗೆ ಮುಗೀತು.”
“ಅಂದ್ರೆ ಅವರು ಉತ್ಸವ ಆಚರಿಸ್ತಾ ಇದ್ದಾರಾ?’
ಲಬಂಗಿ ಜಗತ್ತಿನ ಅತ್ಯಂತ ದೊಡ್ಡ ಕಟ್ಟುಕತೆಯೊಂದನ್ನು ಕೇಳಿದವಳ ಹಾಗೆ ನನ್ನನ್ನೇ ನೋಡಲಾರಂಭಿಸಿದಳು.
ನಾನು ಅವಳ ಕಣ್ಣುಗಳನ್ನೇ ನೋಡಿದೆ.
ಕಳೆದ ಶುಕ್ರವಾರ ದುಲಈ ಬಾಡಿಗೆ ವಸೂಲಿಗಾಗಿ ಬಂದಾಗಲೂ ಲಬಂಗಿ ಹೀಗೆ ನನ್ನ ಮುಖವನ್ನು ನೋಡಿದ್ದಳು. ಪ್ರಥಮ ಬಾರಿಗೆ ದುಲಈ ಲಬಂಗಿಯನ್ನು ನೋಡಿದಾಗ ಅವಳು ಸಹ ಇದೇ ರೀತಿ ನನ್ನ ಮುಖವನ್ನು ನೋಡಿದ್ದಳು. ಅನಂತರ ದುಲಈ ಅವಳೆಡೆಗೆ ಬೆರಳು ಮಾಡಿ ನನ್ನಲ್ಲಿ ನೇರವಾಗಿ “ಯಾರಿವಳು?” ಎಂದು ಪ್ರಶ್ನಿಸಿದ್ದಳು.
“ಹೆಂಡ್ತಿ” ನಾನು ಏನಾದರೂ ಉತ್ತರಿಸಬೇಕೆಂದಿದ್ದೆ, ಅದಕ್ಕೂ ಮೊದಲೇ ಲಬಂಗಿ ಹೇಳಿದಳು.
“ಯಾರ ಹೆಂಡ್ತೀ?”
ಉತ್ತರದಲ್ಲಿ ಲಬಂಗಿ ಮೂವರೆಡೆಗೂ ಬೆರಳುಮಾಡಿದಾಗ ದುಲಈಗೆ ತಲೆಸುತ್ತಿ ಬಂದಂತಾಯಿತು. ಲಬಂಗಿಯ ಮುಖ ಆಗ ನೂರು ವರ್ಷ ಹಿಂದಿನ ಪತಿವ್ರತೆಯಂತೆ ಗಂಬೀರವಾಗಿತ್ತು.
ದುಲಈಯೊಂದಿಗೆ ಲಬಂಗಿಯ ಎರಡನೆಯ ಭೇಟಿ ಬಾಡಿಗೆ ವಸೂಲು ಮಾಡುವ ದಿನವಾಯಿತು. ಅಂದು ಶುಕ್ರವಾರ. ಅವಳು ಎರಡು ಬಾಟ್ಲಿ ಮದ್ಯ ಖರೀದಿಸಿ ಸಂಜೆ ಮನೆಗೆ ಬಂದಿದ್ದಳು. ಆಗ ನಾವು ಹರಟೆ ಹೊಡೆಯುತ್ತಾ ಕೂತಿದ್ದೆವು. ದುಲಈ ಮೂವರನ್ನು ಸರದಿ ಪ್ರಕಾರ ನೋಡಿ ಕುಟ್ಟಿಗೆ ಕಣ್ಣು ಹೊಡೆದಿದ್ದಳು… ಮತ್ತೆ ಕುಟ್ಟಿಯ ಸರದಿ ಬಂದಿತ್ತು.
“ಆಕ್ರಮಣ-ಆಕ್ರಮಣ” ಎಂದರಚುತ್ತಾ ಕುಟ್ಟಿ ನೇರವಾಗಿ ಬಾಗಿಲೆಡೆಗೆ ಓಡಿದ. ಆದರೆ ಅವನ ತಂತ್ರ ಫಲಿಸಲಿಲ್ಲ: ಸಮಯದ ಸೂಕ್ಷ್ಮತೆ ಅರಿತು ಝಾಬಾ ಈ ಮೊದಲೇ ಬಾಗಿಲ ಮರೆಯಲ್ಲಿ ನಿಂತಿದ್ದ. ಕುಟ್ಟಿ ಅಂಧನಂತೆ ಓಡಿದ್ದ. ಅಂಧ ಗೋಡೆಗೆ ಡಿಕ್ಕಿ ಹೊಡೆಯುವವನಂತೆ ಅವನ ತಲೆ ಡಾಬಾನ ಹೊಟ್ಟೆಗೆ ಡಿಕ್ಕಿ ಹೊಡೆದಿತ್ತು.
ಝಾಬಾನ ಹೊಟ್ಟೆ ಮಜಬೂತಾಗಿತ್ತು. ಅವನು ಸ್ಥಿರವಾಗಿಯೇ ನಿಂತ ಕುಟ್ಟಿ ತಲೆಹಿಡಿದುಕೊಂಡು ಕೆಳಗೆ ಕೂತ. ಝಾಬಾ, ಅವನನ್ನು ಅದೇ ಫೋಸ್ನಲ್ಲಿ ಮಗುವಿನಂತೆ ಎತ್ತಿ, ಮೆಟ್ಟಿಲುಗಳನ್ನೇರಿ ದುಲಈಯ ಕೋಣೆಯಲ್ಲಿ ಎಸೆದು ಬಂದ! ಆ ದಿನವೂ ಲಬಂಗಿ ಆಶ್ಚರ್ಯದಿಂದ ನನ್ನೆಡೆಗೆ ನೋಡಿ, “ಇದೆಲ್ಲಾ ಗಲಾಟೆ ಏನು!” ಎಂದು ಪ್ರಶ್ನಿಸಿದ್ದಳು.
“ಇಲ್ಲಿ ಪ್ರತಿಯೊಂದನ್ನೂ ನಾವು ಮೂವರು ಸಮನಾಗಿ ಹಂಚಿಕೊಳ್ಳುತ್ತೇವೆ. ಆಳಿ ಇಲ್ಲಿ ಹಂಚಿಕೊಳ್ಳಲಾರದಂತಹ ವಸ್ತುವೊಂದಿದೆ, ಅದನ್ನು ವಿಧಿಯಿಲ್ಲದೆ ಹಂಚಿಕೊಳ್ಳಬೇಕಾಗುತ್ತೆ” ನಾನು ಸಹಜವಾಗಿ ನಗುತ್ತಾ ಹೇಳಿದೆ.
“ಅದೇನು?” ಲಬಂಗಿ ಮುಗ್ಧಳಾಗಿ ಪ್ರಶ್ನಿಸಿದಳು ನಾನು ದುಲಈಯ ಹೆಸರು ಹೇಳಿದೆ. ಅವಳಿಗೆ ಬಾಡಿಗೆ ಕೊಡುವ ಕಷ್ಟದ ಬಗ್ಗೆಯೂ ಹೇಳಿದೆ. ಅವಳಿಗೆ ಆವೇಶ ಬಂದು ದುಲಈಗೆ ಗದರಿಸಲು ಮೆಟ್ಟಿಲುಗಳೆಡೆಗೆ ಓಡಿದಳು. ನಾನೂ ಓಡಿ ಹೋಗಿ ಅವಳ ಮಣಿಕಟ್ಟನ್ನು ಹಿಡಿದು ಹೇಳಿದೆ, ‘ಲಬಂಗಿ! ಈ ರೀತಿ ನೀನು ಪದೇ-ಪದೇ ರೇಗಿದರೆ ನಮ್ಮೊಂದಿಗೆ ಹೆಚ್ಚುದಿನ ಇರಲಾರೆ?….”
ನನ್ನ ಮಾತು ನಿಜವಾಗಿತ್ತು. ದಿನ-ದಿನ ಕಳೆದಂತೆ ಲಬಂಗಿಯ ವ್ಯಗ್ರತೆ ಹೆಚ್ಚುತ್ತಿತ್ತು. ಗೆಸ್ಟ್ ಹೌಸ್ ನಿಂದ ಕಣ್ಮರೆಯಾದ ಮೇಲೆ ತನ್ನ ಗಂಡ ತನ್ನನ್ನು ಹುಡುಕಲು ಎಲ್ಲಾ ರೀತಿಯ ಪ್ರಯತ್ನ ಮಾಡ್ತಾನೆ. ತಾನಿಲ್ಲದೆ ಊಟ ಬಿಟ್ಟು ನರಳುತ್ತಾನೆ, ಗೋಡೆಗೆ ತಲೆ ಚಚ್ಚಿಕೊಳ್ತಾನೆ, ತನ್ನ ಸುಳಿವು ಸಿಕ್ಕಿದೊಡನೆ ನೇರವಾಗಿ ಇಲ್ಲಿಗೆ ಓಡಿಬಂದು ಕಾಲಿಗೆ ಬಿದ್ದು ತನ್ನಲ್ಲಿ ಕ್ಷಮೆ ಯಾಚಿಸ್ತಾನೆ, ತನ್ನನ್ನು, ಹೊಗಳುತ್ತಾನೆ ಎಂದೆಲ್ಲಾ ಅವಳು ಯೋಚಿಸಿದ್ದಳು.
ಇದನ್ನೆಲ್ಲಾ ನಮಗೆ ಮಾರನೆಯ ದಿನವೇ ಲಬಂಗಿ ಗರ್ವದಿಂದ ಹೇಳಿದ್ದಳು. ಅಲ್ಲದೆ, “ಆ ಪೈಲ್ವಾನ ಎಲ್ಲಾದರೂ ತಪ್ಪಿಯೂ ಬಂದರೆ ಪ್ರಪ್ರಥಮವಾಗಿ ಅವನ ಹತ್ರ ಏಳು ಸಲ ಕ್ಷಮೆ ಹೇಳಿಸಿಕೊಳ್ತೀನಿ, ಆಮೇಲೆ ಚಪ್ಪಲಿಯಲ್ಲಿ ಹೊಡೆದು ಹಾಕ್ತೀನಿ” ಎಂದೂ ಕಿಡಿಕಾರಿದ್ದಳು.
ನಾವೂ ಅವಳ ಪತಿಯನ್ನು ತುಂಬಾ ವ್ಯಗ್ರರಾಗಿ ನಿರೀಕ್ಷಿಸಿದ್ದೆವು. ಅವರಿಬ್ಬರಲ್ಲಿ ಒಪ್ಪಂದವಾದರೆ ಲಬಂಗಿಯ ಬೆಲೆ ಮತ್ತೂ ಏರುತ್ತಿತ್ತು. ಲಬಂಗಿಗೆ ದುರಾಸೆ ತೋರಿಸಿ ಅವನನ್ನು ನಿಂಬೆ ಹಣ್ಣಿನಂತೆ ಹಿಂಡಬಹುದಿತ್ತು. ಅವಳು ತನ್ನ ಗಂಡನ ಬಳಿ ವಾಪಸ್ ಹೊರಟು ಹೋಗಲಿ ನಮಗೆ ಹಿಂಡುವ ಅವಕಾಶ ಕೊಡಲಿ ಎಂದು ನಾವು ಮನಸಾರೆ ಬಯಸುತ್ತಿದ್ದೆವು.
ಪತಿ ಎಂಬ ಸೈತಾನ ಅಧ್ಯಾಯ – 8
ವಾರ ಕಳೆಯಿತು. ಈ ಏಳು ದಿನಗಳು, ಕುಟ್ಟಿ ಮತ್ತು ಝಾಬಾ ಪೊಲೀಸ್- ನಾಯಿಗಳಂತೆ ಪೈಲ್ವಾನನ ಎಳೆಯನ್ನು ಕಂಡು ಹಿಡಿಯಲು ಹಳ್ಳಿಯನ್ನೆಲ್ಲಾ ಸುತ್ತಿದ್ದರು. ಗೆಸ್ಟ್ ಹೌಸ್ ಮೇಲೆ ನಿಗಾ ಇಟ್ಟಿದ್ದರು. ಕಡೆಗೆ ಗಾಬರಿ ಹುಟ್ಟಿಸುವಂತಹ ಸುದ್ದಿಗಳನ್ನು ಸಂಗ್ರಹಿಸಿದ್ದರು.
ಲಬಂಗಿ ಮನೆ ಬಿಟ್ಟು ಹೋದ ದಿನ, ರಾತ್ರಿಯೆಲ್ಲಾ ಅವಳ ಗಂಡ ತುಂಬಾ ವ್ಯಗ್ರನಾಗಿದ್ದ. ರಾತ್ರಿಯನ್ನು ಗೆಸ್ಟ್ ಹೌಸ್ಸ್ನ ಅಂಧಕಾರದಲ್ಲಿ ಯೋಚಿಸುತ್ತಾ ಕಳೆದ. ಬಹುಶಃ ಬೆಳಗಿನ ಹೊತ್ತಿಗೆ ಒಂದು ತೀರ್ಮಾನಕ್ಕೂ ಬಂದಿದ್ದ. ಮಾರನೆಯ ದಿನ ಬೆಳಗಿನ ತಿಂಡಿಯಲ್ಲಿ ಆರು ಮೊಟ್ಟೆಗಳ ಆಮ್ಲೆಟ್, ಒಂದು ಗ್ಲಾಸ್ ಕಿತ್ತಲೆ ಹಣ್ಣಿನ ರಸ, ನಾಲ್ಕು ಟೋಸ್ಟ್, ಫ್ರೂಟ್ಜೆಲ್ಲಿ, ಬೆಣ್ಣೆ ಮತ್ತು ಎರಡು ಕಪ್ ಬಿಸಿ ಕಾಫಿಯನ್ನು ಮುಗಿಸಿದ್ದ. ಮೂರನೆಯ ದಿನ ಲಂಚ್ನಲ್ಲಿ ಒಂದಿಡೀ ಕೋಳಿ ಮತ್ತು ಏಳು ಪರೋಟವನ್ನು, ತಿಂದಿದ್ದ. ನಾಲ್ಕನೆಯ ದಿನ ಗೆಸ್ಟ್ ಹೌಸಿನ ಬಾಣಸಿಗನೊಂದಿಗೆ ಚಿಲ್ಕಾಕೆರೆಯ ಬಳಿ ಬೇಟೆಯಾಡಲು ಹೋಗಿ ಮೂರು ನೀರು ಕೋಳಿಗಳನ್ನಲ್ಲದೆ ಹಾರುತ್ತಿದ್ದ ಪಕ್ಷಿಯೊಂದನ್ನು ಹೊಡೆದುರುಳಿಸಿ, ಅಲ್ಲೇ-ಕೆರೆಯ ಬಳಿ ಒಲೆ ಹಾಕಿಸಿ ಸುಟ್ಟು ತಿಂದಿದ್ದ. ಐದನೆಯ ದಿನವನ್ನು ಗೋಪಾಲಪುರದ ಫೈವ್-ಸ್ಟಾರ್ ಹೋಟೆಲ್ನಲ್ಲಿ ಕಳೆದಿದ್ದ. ಆರನೆಯ ದಿನ ಗೋಪಾಲಪುರದ ಇಬ್ಬರು ವೇಶ್ಯೆಯರನ್ನು ಡಿನ್ನರ್ಗೆ ಕರೆದಿದ್ದ. ಏಳನೆಯ ದಿನ ಸಂಜೆ ದಣಿದ ಸ್ಥಿತಿಯಲ್ಲಿ ಆ ಇಬ್ಬರು ವೇಶ್ಯೆಯರು ಗೆಸ್ಟ್ ಹೌಸಿನಿಂದ ಹೊರ ಹೋದರು.
ಲಬಂಗಿಯ ಧೈರ್ಯ ಕುಸಿಯಿತು. ಆಸೆ ಮಣ್ಣು ಪಾಲಾಯಿತು. ವಾಸ್ತವವಾಗಿ ಅವಳು ಗಂಡನ ಬಳಿ ಮರಳಿ ಹೋಗಲು ಬಯಸುತ್ತಿರಲಿಲ್ಲ. ಆದರೆ ಅವಳ ಗಂಡ ಅವಳಿಲ್ಲದೆ ಬದುಕಬಲ್ಲನೆಂಬ ಕಲ್ಪನೆಯೂ ಅವಳಿಗೆ ಅಸಹ್ಯವಾಗಿತ್ತು. ನಮಗೂ ನಿರಾಸೆಯಾಯಿತು.
ನಾವೂ ಮೂವರು ಮಿತ್ರರೂ ನಿತ್ಯರಾತ್ರಿ ಸಮಾಲೋಚನೆ ಮಾಡಿ ಲಬಂಗಿಯ ಬಗ್ಗೆ ಬೇರೆ-ಬೇರೆಯಾಗಿ ತೀರ್ಮಾನ ತೆಗೆದುಕೊಳ್ಳುತ್ತಿದೆವು. ಕೊನೆಗಂತೂ ‘ಥೈಸ್- ಕಾಟೇಜಿ’ನಲ್ಲಿ ಅವಳನ್ನು ಒರ್ವ ಸದಸ್ಯೆಯಾಗಿ ನಾವು ಒಪ್ಪಿಕೊಂಡಿದ್ದೆವು. ನಮಗೀಗ ಭಯವಿರಲಿಲ್ಲ. ಹಾನಿಯಿರಲಿಲ್ಲ. ಲಾಭವೂ ಇರಲಿಲ್ಲ. ಪ್ರತಿಯಾಗಿ ಈಗಲೂ ನಮಗೆ, ನಮ್ಮ ದರಿದ್ರ ಜೀವನದಿಂದ ಬೇಸತ್ತು ಲಬಂಗಿಯೇ ಸ್ವತಃ ನಮ್ಮನ್ನು ಬಿಟ್ಟು ಹೊರಟು ಹೋಗುತ್ತಾಳೆ ಎಂಬ ವಿಶ್ವಾಸವಿತ್ತು.
ಅವಳು ಹೋಗಲಿಲ್ಲ. ಮತ್ತೂ ಎರಡು ದಿನ ನೀರಿಗೆ ಬ್ರೆಡ್ ಅದ್ದಿ ತಿಂದೆವು. ಮೂರನೆ ದಿನ ಬೆಳಿಗ್ಗೆಯೇ ಭಿಕ್ಷೆಗೆ ಹೊರಟೆವು. ಲಬಂಗಿ ತುಂಬಾ ಖುಷಿಯಲ್ಲಿದ್ದಳು. ಖುಷಿಯಿಂದಾಗಿ ಅವಳ ಅಂಗಾಂಗಗಳಲ್ಲಿ ಕಾಂತಿ ಮತ್ತೂ ಸೂಸುತ್ತಿತ್ತು. ಭಿಕ್ಷುಕಿಯ ಭೂಮಿಕೆಯನ್ನು ಯಶಸ್ವಿಯಾಗಿ ನಿರ್ವಹಿಸಲು ತನ್ನ ತಲೆಗೂದಲುಗಳನ್ನು ಕೆದರಿಕೊಂಡಿದ್ದಳು. ಆದರೂ ಅವಳ ಮುಖದಲ್ಲಿ ವ್ಯತ್ಯಾಸ ಕಂಡುಬರುತ್ತಿರಲಿಲ್ಲ.
ಲಬಂಗಿ ಉಟ್ಟ ಬಟ್ಟೆಯಲ್ಲಿಯೇ ಗಂಡನನ್ನು ತೊರೆದು ಬಂದಿದ್ದಳು. ಬಿಳಿ ಶರ್ಟು ಮತ್ತು ಬಿಳಿ ನಿಕ್ಕರ್ ನಲ್ಲಿಯೇ ನಿತ್ಯರಾತ್ರಿ ಸಮುದ್ರ ತೀರಕ್ಕೆ ಒಂಟಿಯಾಗಿ ಹೋಗಿ, ಎರಡೂ ಬಟ್ಟೆಗಳನ್ನು ಕಳಚಿ ದಡದ ಬಂಡೆಯ ಮೇಲೆ ಸ್ವಚ್ಛಗೊಳಿಸಿ, ಅಲ್ಲೇ ಹರವಿ, ಗಂಟೆಗಟ್ಟಲೆ ನೀರಿನಲ್ಲಿ ಈಜುತ್ತಿದ್ದಳು. ಬಟ್ಟೆಗಳು ಒಣಗಿದ ಮೇಲೆ ನೀರಿನಿಂದ ಹೊರಬಂದು ಅವನ್ನು ಧರಿಸಿಕೊಳ್ಳುತ್ತಿದ್ದಳು. ಒಮ್ಮೊಮ್ಮೆ ಒದ್ದೆಯಾಗಿದ್ದರೆ ನಿಕ್ಕರ್ ಮಾತ್ರ ಧರಿಸಿ ಎದೆಬಿಟ್ಟುಕೊಂಡು ಆದಿವಾಸಿ ಕನ್ಯೆಯಂತೆ ಮರಳಿ ಬರುತ್ತಿದ್ದಳು.
ನಾವು ನಿಕ್ಕರ್ ಮಾತ್ರ ಧರಿಸುತ್ತಿದ್ದೆವು. ಆದರೆ ಈ ಹಳೆಯ ಹರಿದ ನಿಕ್ಕರ್ ಗಳಲ್ಲಿ ನಾವು ಹುಟ್ಟು ಭಿಕ್ಷುಕರಂತೆಯೇ ತೋರುತ್ತಿದ್ದೆವು. ನಮ್ಮ ಸುಕ್ಕುಗಟ್ಟಿದ ತಲೆಗೂದಲುಗಳು, ಬೆಳೆದ ಗಡ್ಡ ಕಂಡು ಯಾರಿಗಾದರೂ ನಮ್ಮ ಬಗ್ಗೆ ಕರುಣೆಯುಂಟಾಗಲು ಸಾಧ್ಯವಿತ್ತು. ಆದರೆ ಲಬಂಗಿ, ಕಣ್ಣುಗಳಿಗೆ ಕಾಡಿಗೆ ಹಚ್ಚಲಿ ಅಥವಾ ಬಿಡಲಿ, ನಿಕ್ಕರ್ ಧರಿಸಲಿ ಅಥವಾ ಧರಿಸದೇ ಇರಲಿ ಅವಳು ಲಬಂಗಿಯಾಗಿಯೇ ಇರುವವಳಾಗಿದ್ದಳು.
ಮಾರ್ಗದಲ್ಲಿ ಪೋಲೀಸ್ ಸ್ಟೇಷನ್ ಎದುರಾದಾಗ ಅಕಸ್ಮಾತ್ ಲಬಂಗಿ ಒಳನುಗ್ಗಿದಳು. ನಾವು ಪರಸ್ಪರ ಮುಖ ನೋಡಿಕೊಂಡೆವು. ಮೆಲ್ಲನೆ ಹಿಂಬಾಲಿಸಿಯೂ ಹೋದೆವು. ಡ್ಯೂಟಿ ಆಫೀಸರನಿಗೆ ನಮ್ಮ ಪರಿಚಯವಿದ್ದು ಅವನು ನಮಗೆ ‘ಗಂಟೆ ಕಳ್ಳರು’ ಎನ್ನುತ್ತಿದ್ದ. ನಮ್ಮ ಹೆಸರುಗಳು ಅಲ್ಲಿಯ ರಿಜಿಸ್ಟರ್ ನಲ್ಲಿ ಆಗಲೇ ದಾಖಲಾಗಿದ್ದವು. ಐದು ದಿನ ಲಾಕ್-ಅಪ್ನಲ್ಲಿದ್ದ ನಾವು ಸರಿಯಾದ ಸಾಕ್ಷಿಗಳ ಅಭಾವದಿಂದಾಗಿ ಗೌರವದೊಂದಿಗೆ ಬಿಡುಗಡೆಯಾಗಿದ್ದೆವು.
ಡ್ಯೂಟಿ ಆಫೀಸರ್ ನಮ್ಮನ್ನು ನೋಡಿ ಆಶ್ಜರ್ಯಗೊಂಡ. ಅನಂತರ ಲಬಂಗಿಯನ್ನು ನೋಡುತ್ತ, “ಯಸ್ ಮೇಡಂ! ನನ್ನಿಂದೇನಾಗಬೇಕಾಗಿತ್ತು?” ಎಂದು ಮುಗುಳ್ನಕ್ಕ.
“ಹೆಂಡತಿ ಕಳೆದುಹೋದ ಬಗ್ಗೆ ಯುವುದಾದ್ರೂ ರಿಪೋರ್ಟ್ ನಿಮ್ಮ ಸ್ಟೇಷನ್ಗೆ ಬಂದಿದೆಯಾ?” ಲಬಂಗಿ ಪ್ರಶ್ನಿಸಿದಳು.
“ಯಾರ ಹೆಂಡ್ತಿ?” ಡ್ಯೂಟಿ ಆಫೀಸರ್ ಸಹಜವಾಗಿಯೇ ಪ್ರಶ್ನಿಸಿದ.
“ನನ್ನ ಪತಿಯ ಹೆಂಡ್ತಿ|” ಲಬಂಗಿ ಕೂಡಲೇ ಉತ್ತರಿಸಿದಳು.
ಡ್ಯೂಟಿ ಆಫೀಸರ್ಗೆ ಮತ್ತೂ ಆಶ್ಜರ್ಯವಾಯಿತು. ತನ್ನನ್ನು ವಾಪಸ್ ಪಡೆಯಲು ತನ್ನ ಗಂಡ ಯಾವಿದೇ ಕ್ರಮವನ್ನು ತೆಗೆದುಕೊಂಡಿಲ್ಲವೆಂದು ಅವಳಿಗೆ ನಂಬಿಕೆಯಾಯಿತು. ಅವಳು ನವ್ಮೊಂದಿಗೆ ಸಾಗುತ್ತಾ “ಆ ಪೈಲ್ವಾನನನ್ನು ನೋಡಿಕೊಳ್ತೀನಿ. ಅವನ ಜೀವನವನ್ನು ಧೂಳೀಪಟ ಮಾಡದಿದ್ರೆ ನನ್ನ ಹೆಸರೂ ಲಬಂಗಿಯಲ್ಲ!” ಎಂದು ಬಡಬಡಿಸುತ್ತಿದ್ದಳು.
ಎರಡು ಸಣ್ಣ ಹಳ್ಳಿಗಳನ್ನು ದಾಟಿ ನಾವು ಮೂರನೆಯ ಹಳ್ಳಿಯ ಗಡಿಗೆ ಬಂದೆವು. ಲಬಂಗಿ ಜತೆಗಿದ್ದುದರಿಂದಾಗಿ ಭಿಕ್ಷೆಯ ಪ್ರಶ್ನೆ ಈಗಲೂ ಮನಸ್ಸಿಗೆ ನೋವುಂಟು ಮಾಡುತ್ತಿತ್ತು. ಯಾರೂ ನಮಗೆ ಒಂದು ಪೈಸೆ ಭಿಕ್ಷೆಯನ್ನೂ ಹಾಕಲ್ಲವೆಂಬ ಭರವಸೆ ನನಗಿತ್ತು. ಪ್ರತಿಯಾಗಿ ಜನ ನಮ್ಮನ್ನು ನೋಡಿ ನಗ್ತಾರೆ ….ಮತ್ತೆ ಹಸಿದ ಹೊಟ್ಟೆಯು, ತಮಾಷೆ-ಗೇಲಿಯನ್ನು ಸಹಿಸಲಾರದು.
ನನ್ನ ಮನಸ್ಸಿನಲ್ಲಿ ಉದ್ಭವಿಸುತ್ತಿದ್ದ ವಿಚಾರಗಳನ್ನು ಲಬಂಗಿ ಅರಿತುಕೊಂಡಳು. ಅವಳು ನಿಂತು ಏನೋ ಯೋಚಿಸಿ ಹೇಳಿದಳು, “ಕೋಬರ್ ನನಗೊಂದು ಹೋಸ ಉಪಾಯ ಹೊಳೆದಿದೆ! ಹಾವು ಕಚ್ಚಿದ್ದರಿಂದ ನಾನು ಸತ್ತು ಹೋದೆ, ನನ್ನ ಸಂಸ್ಕಾರಕ್ಕೆ ನಿಮ್ಮ ಬಳಿ ಹಣವಿಲ್ಲ ಅಂತ ನೀವು ಸ್ವಲ್ಪ ಹೊತ್ತು ತಿಳಿದುಕೊಳ್ಳಿ.”
“ಫ್ಯಾಂಟಾಸ್ಟಿಕ್!” ಕುಟ್ಟಿ ಚಿಟಿಕೆ ಯೊಡೆಯುತ್ತಾ ಲಬಂಗಿಯ ವಿಚಾರಗಳಿಗೆ ನೀರೆರೆದ “ಲಬಂಗಿ ಶವವಾಗಿ ಬಿದ್ದಿರ್ತಾಳೆ. ನಾವು ಮೂವರೂ ಒಂದೇ ಸಮನ ಧಾರಾಕಾರವಾಗಿ ರೋಧಿಸುವುದನ್ನು ಕಂಡು ಯಾರಿಗಾದರೂ ದಯೆಯುಂಟಾಗುತ್ತೆ!”
“ಮೂರ್ಖ!” ಕುಟ್ಪಿಯನ್ನು ತಡೆದು ಝಾಬಾ ಹೇಳಿದ, “ಹೆಣ್ಣಿನ ಕಣ್ಣೀರು ಹೆಚ್ಚು ಪರಿಣಾಮಬೀರುತ್ತೆ ಲಬಂಗಿ ಬದುಕಿರಲಿ. ನಾನು ಶವವಾಗಲು ಸಿದ್ಧ.”
“ಮತ್ತೆ ನಾವಿಬ್ದರು ಏನ್ ಮಾಡೋದು?” ನಾನು ಪ್ರಶ್ನಿಸಿದೆ.
“ಮರ ಹತ್ತಿ ಕೂರಿ!”
ಝಾಬಾನ ವಿಚಾರ ಕೆಡುಕಾಗಿರಲಿಲ್ಲ. ತತ್ಕ್ಷಣ ನಾನು ಮತ್ತು ಕುಟ್ಟಿ ಮರವೇರಿದೆವು. ಝಾಬಾ ಕೆಳಗೆ ಅಂಗಾತ ಮಲಗಿದ. ಲಬಂಗಿ, ಅವನ ತಲೆಯನ್ನು ತನ್ನ ಮಡಿಲಲ್ಲಿಟ್ಟುಕೊಂಡು ಪತಿವ್ರತೆಯಂತೆ ಪದ್ಮಾಸನ ಹಾಕಿ ಕೂತಳು.
ಸ್ವಲ್ಪ ಹೊತ್ತಿಗೆ ರೈತನೊಬ್ಪ ಹೊಲದಿಂದ ಬರುವುದು ಕಾಣಿಸಿತು. ಲಬಂಗಿ ಎದೆಬಡಿದುಕೊಳ್ಳಲಾರಂಭಿಸಿದಳು. “ಅಯ್ಯಯ್ಯೋ! ನನ್ನನ್ನೂ ಪುಟ್ಟ ಮಗುವನ್ನೂ ಬಿಟ್ಟು ನೀವೊಬ್ರೆ ಹೊಂಟು ಹೋದ್ರಾ-ಅದ್ಯಾವ ಸುಡಗಾಡು ಹಾವು ನಿಮಗೆ ಕಚ್ಜಿತೋ, ಅದ್ರ ಮನೆ ಹಾಳಾಗ-ಇನ್ನು ನನ್ನ ಗತಿಯೇನು-ಮಗುವಿನ ಗತಿಯೇನು. ಅಯ್ಯೋ… ವಾಸ್ತವವಾಗಿಯೂ ತನ್ನ ಗಂಡ ಸತ್ತಹೋದಂತೆ ಅವಳು ಶೋಕ ಗೀತೆ ಹಾಡಲಾರಂಭಿಸಿದಳು.
ರೈತ ದೊಣ್ಣೆಯೂರಿ ನಿಂತು ದಯೆ-ಧರ್ಮದ ಕಣ್ಣೀರನ್ನು ಹರಿಸುತ್ತಿದ್ದ. ಆದರೆ ಜೇಬಿನಿಂದ ಒಂದು ವೈಸೆಯನ್ನೂ ತೆಗೆಯಲಿಲ್ಲ. ಲಬಂಗಿ ತನ್ನ ಅಭಿನಯವನ್ನು ಚರಮಸ್ಥಿತಿಗೆ ಒಯ್ಯಲು, ರೈತ ಗಾಬರಿಯಿಂದ ಎರಡು ಹೆಜ್ಜೆ ಹಿಂದಕ್ಕೆ ಸರಿದು. ಬೆನ್ನು ತೋರಿಸಿ ಹಳ್ಳಿಯೆಡೆಗೆ ಹೊರಟೇ ಬಿಟ್ಟ.
ನಾವು ಮರದಿಂದ ಕೆಳಗಿಳಿದವು. ಇದ್ದಕ್ಕಿದ್ದಂತ ರೈತ ತಕೆ ಮಾಯವಾದನೆಂದು ಈಗಲೂ ಲಬಂಗಿಗೆ ಅರ್ಥವಾಗಿರಲಿಲ್ಲ. ಅವಳ ಅಭಿನಯ ವಾಸ್ತವದಂತಿತ್ತು. ಆದರೂ… ಕಡೆಗೆ ಅವಳ ಗಮನಕ್ಕೆ ವಾಸ್ತವಿಕತೆಯ ಅರಿವಾಯಿತು. ಅವಳ ಮಡಿಲಲ್ಲಿ ತಲೆಯಿಟ್ಟು ಮಲಗಿದ್ದ ಝಾಬಾನಿಗೆ ನಿದ್ರೆ ಬಂದುಬಿಟ್ಟಿತ್ತು. ಅವನ ಮೂಗಿನ ಹೊಳ್ಳೆಗಳು ಕಂಪಿಸುತ್ತಿದ್ದವು. ಶವದ ಗೊರಕೆ ಕೇಳಿ ರೈತ ಓಡಿಹೋಗಿದ್ದರಲ್ಲಿ ಆಶ್ಜರ್ಯವೇನಿರಲಿಲ್ಲ!
ಝಾಬಾನನ್ನು ತಿವಿದು ಎಚ್ಚರಿಸಿದೆವು. ಆಗಲೇ ನಮ್ಮ ದೃಷ್ಟಿ ದೂರದಲ್ಲಿ ಬರುತ್ತಿದ್ದ ಜರ್ಮನ್ ಟೂರಿಸ್ಟ್ ನ ಮೇಲೆ ಬಿತ್ತು. ಅವನ ಕತ್ತಿನಲ್ಲಿ ದುರ್ಬೀನು ನೇತಾಡುತ್ತಿತ್ತು. ತಲೆ ಮೇಲೆ ಫೆಲ್ಟ್ ಹ್ಯಾಟಿತ್ತು. ಅವನು ಟೀ-ಶರ್ಟ್ ಮತ್ತು ಸಫಾರಿ ಜೀನ್ಸ್ ತೊಟ್ಟಿದ್ದ. ಅನೇಕ ಜಾತಿಯ, ವಿಧ-ವಿಧ ಪಕ್ಷಿಗಳನ್ನು ಅಭ್ಯಸಿಸುವುದು ಅವನ ಆಸಕ್ತಿಯಾಗಿತ್ತು. ಜೇಬಿನಲ್ಲಿ ಸದಾ ಡೈರಿಯೊಂದನ್ನು ಇಟ್ಟುಕೊಳ್ಳುತ್ತಿದ್ದ. ಅವನು ಹೊಸ ಪಕ್ಷಿಯನ್ನು, ಕಂಡಾಗ ಅದರ ಬಗ್ಗೆ ವಿವರಣೆಯನ್ನು, ತನ್ನ ಡೈರಿಯಲ್ಲಿ ನೋಟ್ ಮಾಡಿಕೊಳ್ಳುತ್ತಿದ್ದ.
ಈ ಜರ್ಮನ್ ಟೂರಿಸ್ಟ್ ಎದುರಾದಾಗಲೆಲ್ಲಾ ನಮಗೆ ಆಕಾಶವೇ ತಲೆ ಮೇಲೆ ಕಳಚಿ ಬೀಳುತ್ತಿತ್ತು. ಇವನಿಂದಾಗಿಯೇ ನಾವಿ ನಮ್ಮ ಅಮೂಲ್ಯ ಬದುಕಿನ ಐದು ದುಬಾರಿ ದಿನಗಳನ್ನು. ಲಾಕ್-ಅಪ್ನಲ್ಲಿ ಕಳೆದಿದ್ದೆವು. ಆಗ ನಾವು ಕೂಲಿ ಮಾಡುತ್ತಿದ್ದೆವು. ನಾವು ಟೋಕನ್ ಹೊಂದಿದ ‘ಲೈಸೆನ್ಸ್’ ಕೂಲಿಯಾಗಿದ್ದೆವು. ಬೆವರು ಸುರಿಸಿ ಬದುಕುವ ನಮ್ಮ ಅಂತಿಮ ಪ್ರಯಾಸ ಇದಾಗಿತ್ತು.
ನಾವು. ಗೋಪಾಲಪುರಕ್ಕೆ ಬರುವ ಪ್ರವಾಸಿಗರ ಲಗ್ಗೇಜುಗಳನ್ನು ಬಸ್- ಸ್ಟ್ಯಾಂಡ್ನಿಂದ ಹೊತ್ತು ಗೋಪಾಲಪುರದಲ್ಲಿದ್ದ ಒಂದೇ ಒಂದು ಫೈವ್-ಸ್ಟಾರ್ ಹೊಟೇಲ್ ವರೆಗೆ ತರುತ್ತಿದ್ದೆವು. ಮಾರ್ಗದಲ್ಲಿ ಪ್ರವಾಸಿಗರ ಪರ್ಸ್ಗಳು ಅಥವಾ ಚಿಕ್ಕ-ಪುಟ್ಟ ಸಾಮಾನುಗಳನ್ನೂ ಅವರ ಕಣ್ ತಪ್ಪಿಸಿ ಅಪಹರಿಸುತ್ತಿದ್ದೆವು. ನಮ್ಮ ಕಸುಬು ಚೆನ್ನಾಗಿಯೇ ನಡೆಯುತ್ತಿತ್ತು. ಇದುವರೆಗೆ ಯಾರಿಗೂ ನಮ್ಮ ಮೇಲೆ ಅನುಮಾನ ಬಂದಿರಲಿಲ್ಲ. ಅದೊಂದು ದಿನ ಈ ಜರ್ಮನ್ ಟೂರಿಸ್ಟ್ ಗೋಪಾಲಪುರಕ್ಕೆ ಬಂದ. ಬಸ್ನಿಂದ ಹೊರಬಂದಾಗ ಅನೇಕ ಕೂಲಿಗಳು ಅವನನ್ನು ಸುತ್ತುವರಿದರು. ಅವರಲ್ಲಿ ನಾವೂ ಇದ್ದೆವು.
ಜರ್ಮನ್ ಟೂರಿಸ್ಟ್ ನ ಲಗ್ಗೇಜುಗಳನ್ನು ಹೊರುವ ಅವಕಾಶ ನಮಗೆ ಸಿಕ್ಕಿತು. ಅವನ ಬಳಿ ಎರಡು ಸೂಟ್ ಕೇಸ್ಗಳು, ಒಂದು ಟೇಪ್ ರೆಕಾರ್ಡರ್ ಮತ್ತು ಫೋಲ್ಡಿಂಗ್-ಡೇರೆಯಿತ್ತು. ಈ ಎಲ್ಲಾ ಲಗ್ಗೇಜನ್ನೂ ಝಾಬಾನ ತಲೆ ಮೇಲೆ ಹೊರಿಸಿದೆವು. ಆದರೆ, ಝಾಬಾ ಹೋಟೆಲ್ಗೆ ಹೋಗುವುದಕ್ಕೂ ಮೊದಲೇ ಮಾರ್ಗ ಮಧ್ಯದಲ್ಲಿ ಕುಟ್ಟಿ ಜರ್ಮನ್ ಟೂರಿಸ್ಟ್ ನವನ ಟೇಪ್ ರೆಕಾರ್ಡರನ್ನು ಹಾರಿಸಿದ್ದ.
ಇದಕ್ಕೂ ಮೊದಲು ಪ್ರವಾಸಿಗರ ಚಿಕ್ಕ-ಪುಟ್ಟ ಸಾಮಾನುಗಳನ್ನು ಅಪಹರಿಸಿದ್ದ ದೂರುಗಳು ಪೋಲೀಸ್ ಸ್ಟೇಷನ್ನಲ್ಲಿ ದಾಖಲಾಗಿದ್ದವು. ಈಗ ಮತ್ತೊಂದು ದೂರು ದಾಖಲಾಯಿತು. ಈ ದೂರಿಗೂ ಹಿಂದಿನ ದೂರುಗಳಿಗೂ ವ್ಯತ್ಯಾಸವಿತ್ತು. ಈ ಬಾರಿ ಕಳ್ಳತನದ ಅಪರಾಧವನ್ನು, ನಮ್ಮ ಮೇಲೆ ಹೊರಿಸಲಾಗಿತ್ತು.
ಪೋಲೀಸರು ನಮ್ಮನ್ನು ಬಂಧಿಸಿ ಲಾಕ್-ಅಪ್ಗೆ ಹಾಕಿದರು. ಅಲ್ಲದೇ, ಈ ಐದೂ ದಿನಗಳೂ ನಮ್ಮನ್ನು ಸರಿಯಾಗಿ ಹತ್ತಿಕ್ಕಿದರು. ಝಾಬಾನನ್ನು ಎರಡು ದಿನ ತಲೆಕೆಳಗಾಗಿ ನೇತುಹಾಕಲಾಯಿತು. ನನಗೆ ಮತ್ತು ಕುಟ್ಟಿಗೆ ಬೆಳಗ್ಗೆ ಮತ್ತು ಸಂಜೆ ಹತ್ತತ್ತು ಹೊಡೆತಗಳು ಬಿದ್ದವು. ಆದರೂ ನಾವು ಪದೇ-ಪದೇ ‘ನಾವು ನಿರಪರಾಧಿಗಳು’ ಎಂದೇ ಹೇಳುತ್ತಿದ್ದೆವು.
ಝಾಬಾ ಪ್ರತಿಸಲವೂ ಡ್ಯೂಟಿ ಆಫೀಸರ್ಗೆ, “ತಾನು ಅಮೇರಿಕಾದ ನಾಗರಿಕ, ತನ್ನ ಸರಕಾರದ ಓರ್ವ ನಿರಪರಾಧಿಗೆ ಭಾರತದ ಪೋಲೀಸರು ಅಮಾನುಷವಾಗಿ ಹಿಂಸಿಸುತ್ತಿದ್ದಾರೆಂಬುದು ತಿಳಿದರೆ ಅಮೇರಿಕಾದ ಸರಕಾರ ಇದನ್ನು ಸಹಿಸಲ್ಲ. ಅಮೇರಿಕಾಕ್ಕೂ ಭಾರತಕ್ಕೂ ಯುದ್ಧವೇ ನಡೆಯುತ್ತೆ. ಅಮೇರಿಕಾದ ವಿಜ್ಞಾನಿಗಳು ಎಂಥೆಂಥ ಅಸ್ತ್ರಗಳನ್ನು ಕಂಡುಹಿಡಿದಿದ್ದಾರೆಂದರೆ, ಅವನ್ನು ನ್ಯೂಯಾರ್ಕ್ನಿಂದ ಹಾರಿಸಿದರೂ ಅವು ನೇರವಾಗಿ ಗೋಪಾಲಪುರದ ಈ ಪೋಲೀಸ್ ಸ್ಟೇಷನ್ ಮೇಲೆ ಬಂದು ಬೀಳಬಲ್ಲವು” ಎಂದು ಹೆದರಿಸುತ್ತಿದ್ದ.
ಝಾಬಾ ಒಂದೇ ಸಮನೆ ಬಡಬಡಿಸುತ್ತಿದ್ದ. ಇದಕ್ಕೆ ಯಾವುದೇ ಅರ್ಥವಿರಲಿಲ್ಲ. ಆದರೂ ಅವನದೊಂದು ತರ್ಕ, ನಮ್ಮ ಆಶ್ಚರ್ಯದ ಮಧ್ಯೆ ಪ್ರಭಾವ ಬೀರಿತು. ಝಾಬಾ ವಿದೇಶಿ ನಾಗರಿಕನಾಗಿದ್ದು, ಯಾವುದೇ ವಿದೇಶಿ ನಾಗರಿಕನ ಮೇಲೆ ಸಾಕ್ಷಿಯಿಲ್ಲದೆ ಪೋಲೀಸರು ಕ್ರಮ ಕೈಗೊಳ್ಳುವಂತಿಲ್ಲ!
ಐದು ದಿನದ ಯುತನ ಸಹಿಸಿ ಮರಳಿ ಬಂದಾಗ ನಮ್ಮ ಟೋಕನ್ ಕಸಿದುಕೊಳ್ಳಲಾಗಿತ್ತು. ಬಯಸಿದರೂ ನಾವು ಕೂಲಿಯಾಗಲು ಸಾಧ್ಯವಿರಲಿಲ್ಲ. ನಾವು ಗ್ರಾಜುಯೇಟ್ ಕೂಲಿಗಳಾಗಿದ್ದೆವು. ಗೋಪಾಲಪುರದ ಸ್ಥಳೀಯ ಕೂಲಿಗಳು ನಮ್ಮನ್ನು ಆದರದ ದೃಷ್ಟಿಯಿಂದ ನೋಡುತ್ತಿದ್ದರು. ಈಗ ಆ ಆದರ ಉಳಿಯಲಿಲ್ಲ. ಆದರೆ ಈ ಬಗ್ಗೆ ನಮಗೆ ದುಃಖವೇನಾದರೂ ಇದ್ದರೆ ಅದು ಟೇಪ್ ರೆಕಾರ್ಡರ್ ಬಗ್ಗೆಯಾಗಿತ್ತು.
ಟೇಪ್ ರೆಕಾರ್ಡರ್ ಬೆಲೆ ಕಡಿಮೆಯೆಂದರೂ ಮೂರೂವರೆ ಸಾವಿರವಿತ್ತು. ಕುಟ್ಟಿ, ಅದನ್ನು ಹಾರಿಸಿ, ನೇರವಾಗಿ ಮಾರ್ವಾಡಿಯ ಅಂಗಡಿಯಲ್ಲಿಟ್ಟು ಬಂದಿದ್ದ. ಮಾರ್ವಾಡಿ ಕುಟ್ಟಿಗೆ ಎರಡು ದಿನಗಳ ಅನಂತರ ಬಂದು ಅದಕ್ಕೆ ಸಾವಿರ ರೂಪಾಯಿಗಳನ್ನು ತೆಗೆದುಕೊಂಡು ಹೋಗುವಂತೆ ತಿಳಿಸಿದ್ದ. ಲಾಕ್-ಅಪ್ ನಿಂದ ಬಿಡುಗಡೆಯಾಗುತ್ತಲೇ ಅವನು ಹಣ ವಸೂಲಿಗಾಗಿ ಮಾರ್ವಾಡಿಯ ಅಂಗಡಿಗೆ ಹೋದ. ಆದರೆ ಅವನು ಈ ಹಿಂದೆ ಕುಟ್ಟಿಯನ್ನು ನೋಡಿಯೇ ಇಲ್ಲವೆಂಬಂತೆ ವ್ಯವಹರಿಸಿದ.
ಕುಟ್ಟಿ ನಿಂದಿಸಿದರೂ ಮಾರ್ವಾಡಿಯ ಮೇಲೆ ಯಾವ ಪರಿಣಾಮವೂ ಉಂಟಾಗಲಿಲ್ಲ. ತನ್ನ ಬಗ್ಗೆ ದೂರು ಸಲ್ಲಿಸಿದರೆ ನಾವೇ ಬಯಲಿಗೆ ಬರುತ್ತೇವೆಂಬುದು ಮಾರ್ವಾಡಿಗೆ ತಿಳಿದಿತ್ತು. ನಾವೇ ಕಳ್ಳರು ಎಂಬುದೂ ಸಾಬೀತಾಗುತ್ತಿತ್ತು. ಐದು ದಿನ ಲಾಕ್-ಅಪ್ನಲ್ಲಿ ಕಳೆದ ನಾವು ಮತ್ತೆ ಮರಳಿ ಲಾಕ್-ಅಪ್ಗೆ ಹೋಗಲು ಸುತಾರಾಮ್ ಬಯಸುತ್ತಿರಲಿಲ್ಲ.
ಜರ್ಮನ್ ಟೂರಿಸ್ಟ್ ಪ್ರತಿ ಕ್ಷಣವೂ ಸಮೀಪಕ್ಕೆ ಬರುತ್ತಿದ್ದ. ಕುಟ್ಟಿ ”ಇವತ್ತು ಈ ನನ್ಮಗನನ್ನೇ ಕೊಳ್ಳೆಹೊಡೆಯೋಣ” ಎಂದ. ಇದು ಅಸಾಧ್ಯವಾಗಿತ್ತು. ಜರ್ಮನ್ ಟೂರಿಸ್ಟ್ ಗೂ ನಮ್ಮ ಬಗ್ಗೆ ತಿಳಿದಿತ್ತು. ಅವನ ಅಪಶಕುನದ ಮುಖದಿಂದ ನಮಗೆಷ್ಟು ಬೇಸರವಾಗಿತ್ತೆಂದರೆ ಅವನನ್ನು ನೋಡುತ್ತಲೇ ಅವನನ್ನು ಕೊಲೆಗೈಯುವ ಬಲವಾದ ಇಚ್ಛೆ ನಮ್ಮಲ್ಲಿ ಉದ್ಭವಿಸುತ್ತಿತ್ತು. ಅವನು ನಮ್ಮೆದುರು ಬಂದು ಸ್ಟೈಲಾಗಿ ಮುಗುಳ್ನಗುತ್ತಾ ಎಂದಿನಂತೆಯೇ “ಹೇಗಿದ್ದೀರ, ತ್ರೀ ಮಸ್ ಕ್ಯಾಟಿಯರ್ಸ್?” ಎಂದು ನಮ್ಮ ಉತ್ತರಕ್ಕು ಕಾಯದೇ ಮುಂದಕ್ಕೆ ಹೋದ.
“ಈ ಗಂಡಸರಿಗೆಲ್ಲಾ ಏನಾಗಿದೆ?” ಲಬಂಗಿ ರೇಗಿದಳು. ಅನಂತರ ಜರ್ಮನ್ ಟೂರಿಸ್ಟ್ ನವನ ಬೆನ್ನನ್ನೇ ನೋಡುತ್ತಾ, “ಆ ಬೇವರ್ಸಿ ನನ್ಮಗ ನನ್ನ ಕಡೆ ಕಣ್ಣೆತ್ತಿಯೂ ನೋಡಿಲ್ಲ. ನಾನವನಿಗೆ ಒಂದು ಪೀಪಾಯಿಯಷ್ಟು ಚಹಾ ಕುಡಿಸಿದ್ದೇನೆ” ಎಂದಳು.
ಲಬಂಗಿಯ ಮಾತಿನಿಂದ ನನಗಾಶ್ಚರ್ಯವಾಯಿತು.
“ಇವನ ಪರಿಚಯ ನಿನಗಿದೆಯಾ?” ನಾನು ಅವಳನ್ನ ನೋಡಿದೆ.
“ಅದೊಂದು ದಿನ ಅವನು ಚಿಲ್ಕಾ ಕೆರೆಯ ಬಳಿ ಭೇಟಿಯಾಗಿದ್ದ. ಆಗ ನಾನು ನನ್ನ ಪೈಲ್ವಾನನೊಂದಿಗಿದ್ದೆ. ಒಂದೆ ದಿನದ ಭೇಟಿಯಲ್ಲಿ ಅವನು ನನ್ನ ಪತಿಗೆ ಮಿತ್ರನಾ.ದ ಆಮೇಲೆ ದಿನ ನಿತ್ಯ ಸಂಜೆ ಅವನು ನಮ್ಮಲ್ಲಿಗೆ ಚಹಾ ಕುಡಿಯಲು ಬರುತ್ತಿದ್ದ. ನಿಮ್ಮ ಬಗ್ಗೆ ಎಲ್ಲಾ ವಿಷಯಗಳು ನನಗೆ ಅವನಿಂದಲೇ ಸಿಕ್ಕಿತ್ತು. ನಿಜ ಹೇಳಬೇಕೆಂದರೆ, ನಿಮ್ಮ ಸಾಹಸದ ಕಥೆಗಳನ್ನು ಹೇಳುವಾಗ ಅವನಿಗೆ ಅದ್ಭುತ ಆನಂದವುಂಟಾಗುತ್ತೆ. ಇವತ್ತು ನೀವು ಅವನನ್ನು ಕೊಳ್ಳೆ ಹೊಡೆಯದಿದ್ದುದು ಒಳ್ಳೆಯದೇ ಆಯಿತು.”
“ಯಾಕೆ?’
“ಅವನು ಕರಾಟೆ ಚಾಂಪಿಯನ್. ಜರ್ಮನಿಯಲ್ಲಿ ಅವನು ‘ಬ್ಲ್ಯಾಕ್ ಬೆಲ್ಟ್’ ಹೆಸರಿನಿಂದ ಪರಿಚಿತ. ನಾನು ಅವನ ಕೃಪೆಯಿಂದಲೇ ಮೂರ್ನಾಲ್ಕು ಜೂಡೋ ವರಸೆಗಳನ್ನು ಕಲಿತೆ” ಲಬಂಗಿ ಕೆಲವು ಕ್ಷಣ ಮೌನ ವಹಿಸಿ ಅನಂತರ ಹೇಳಿದಳು, “ಹಾಗಂತ, ನೀವು ಕೊಳ್ಳೆ ಹೊಡೆಯುವುದಾದರೆ, ನನ್ನ ಗಮನದಲ್ಲಿ ಓರ್ವ ವ್ಯಕ್ತಿಯಿದ್ದಾನೆ.”
ನಾವು ಮೂವರೂ ಅವಳನ್ನ ನೋಡಿದೆವು. ಅವಳು ನಮ್ಮ ಮುಖದ ಭಾವನೆಗಳನ್ನು ಓದುತ್ತಿರುವಂತೆ ಕಂಡಿತು. ನಾವು ಕ್ರೈಮ್-ಥ್ರಿಲ್ಲರ್ ಪ್ರೇಕ್ಷಕರಂತೆ ಬಂಧಿಸಲ್ಪಟ್ಟಿದ್ದೆವು.
“ನಿಮಗೆ ಆ ಡ್ಯೂಟಿ ಆಫೀಸರ್ ಗಂಟೆ-ಕಳ್ಳರು ಅಂತ ಹೇಳೋದು ಉಚಿತವೇ ಆಗಿದೆ” ಲಬಂಗಿ ಮುಗುಳ್ನಗುತ್ತಾ ಹೇಳಿದಳು. “ನೀವು ಯಾವಾಗ್ಲೂ ಐದು- ಐವತ್ತು ರೂಪಾಯಿಗಳನ್ನು ಹೊಡಿಯೋ ಚಿಂತೆಯಲ್ಲಿರ್ತೀರ. ಹೊಡೆಯುವುದಾದರೆ ಸಿಂಹವನ್ನು ಹೊಡೀಬೇಕು. ನಾನು ಹೇಳಿದಂತೆ ಕೇಳಿದರೆ ನೀವು, ಐ ಮೀನ್ ನಾವು, ಒಂದೇ ಸಲಕ್ಕೆ ಲಕ್ಷಾಧಿಪತಿಗಳಾಗ್ತೀವಿ.”
ನಾವು ಗರ ಬಡಿದವರಂತೆ ಅವಳನ್ನ ನೋಡುತ್ತಾ ನಿಂತುಬಿಟ್ಟೆವು. ಲಬಂಗಿ ವಾಸ್ತವವಾಗಿಯೂ ಕುಲೀನ ವಂಶದವಳಿರಬೇಕು. ಅವಳ ವಿಚಾರಗಳು ಉನ್ನತವಾಗಿದ್ದವು. ಬಂಗಿ ವಾಸ್ತವವಾಗಿಯೂ ಕುಲೀನ ವಂಶದ ಯುವತಿಯೇ? ಯಾಕೋ ಏನೋ, ಒಮ್ಮೊಮ್ಮೆ ಈ ಪ್ರಶ್ನೆ ಹೆಡೆಯೆತ್ತಿ ನನ್ನಲ್ಲಿ ಫೂತ್ಕರಿಸುತ್ತಿತ್ತು.
“ಲಬಂಗಿ!” ಕುಟ್ಟಿ ಹೇಳಿದ, “ನಾವು ಲಕ್ಷಾಧಿಪತಿಗಳಾಗಬೇಕಿಲ್ಲ, ನಮಗೆ ಹೆಚ್ಚೆಂದರೆ ಹದಿನೈದು ಸಾವಿರ ರೂಪಾಯಿಗಳು ಸಾಕು. ಇಷ್ಟು ಹಣ ಸಿಕ್ಕಿದೊಡನೆ ನಾವು ಎಕ್ಸ್ ಪೆರಿಮೆಂಟಲ್ ಫಿಲ್ಮ್ಗೆ ಬೇಕಾದ ರೂಪ ಕೊಡಬಲ್ಲೆವು. ಇದಕ್ಕಿಂತ ಹೆಚ್ಚು ನಮಗೆ ಬೇಕಿಲ್ಲ.”
“ಕುಟ್ಟಿ ಹೇಳೋದು ನಿಜ” ಅವನ ಮಾತನ್ನು ಬೆಂಬಲಿಸುತ್ತಾ ನಾನು ಲಬಂಗಿಗೆ ಹೇಳಿದೆ, “ಮತ್ತೆ ಈ ಹದಿನೈದು ಸಾವಿರ ರೂಪಾಯಿಗಳಿಗಾಗಿ ನಿನ್ನ ಹತ್ರ ಯಾವುದೇ ಬ್ಯಾಂಕ್ ಲೂಟಿ ಮಾಡುವ ಯೋಜನೆಯಿದ್ದರೆ ಅದಕ್ಕೂ ನಾವು ಸಿದ್ಧ.”
“ಮಿಸ್ಟರ್ ಬ್ಯಾನರ್ಜಿ ಯಾವುದೇ ಬ್ಯಾಂಕ್ಗಿಂತಲೂ ಕಡಿಮೆ ಶ್ರೀಮಂತನಲ್ಲ.”
“ಈ ಮಿಸ್ಟರ್ ಬ್ಯಾನರ್ಜಿ ಯಾರು?’
“ಆ ಸೈತಾನ ನನ್ನ ಗಂಡ!”
“ಏನು?” ಅದುವರೆಗೂ ಮೌನಿಯಾಗಿದ್ದ ಝಾಬಾ ಬಾಯಿಬಿಟ್ಟ.
“ನಾವು ನಾಲ್ವರೂ ಸೇರಿ ಗೆಸ್ಟ್ ಹೌಸಿಗೆ ಮುತ್ತಿಗೆ ಹಾಕೋಣ. ಯಾರಿಗೂ ತಿಳಿಯದಂತೆ ಟ್ರೆಜರಿಸಾಮಾನುಗಳನ್ನು ಅಪಹರಿಸಿ ಹೊರಗೆ ಬರೋಣ” ಲಬಂಗಿ
ಎಷ್ಟು ಸಹಜವಾಗಿ ಹೇಳಿದ್ದಳೆಂದರೆ ನನ್ನೊಂದಿಗೆ ಕುಟ್ಟಿಗೂ ತಲೆಸುತ್ತು ಬಂದಿತ್ತು.
ನಾವು ನಾಲ್ವರೂ ಕೆಳಗೆ ಕೂತೆವು. ನಾವಿನ್ನೂ ಹಳ್ಳಿಯ ಗಡಿಯಲ್ಲಿದ್ದೆವು. ತಲೆಯ ಮೇಲೆ ದಟ್ಟ ವೃಕ್ಷವೊಂದರ ನೆರಳಿತ್ತು. ನಾನು ತೀವ್ರವಾಗಿ ಯೋಚಿಸುತ್ತಿದ್ದೆ. ಲಬಂಗಿ, ಪತಿಯೊಂದಿಗೆ ಸೇಡು ತೀರಿಸಿಕೊಳ್ಳಲು ಬಯಸುತ್ತಿದ್ದಾಳೆ. ಗೆಸ್ಟ್- ಹೌಸಿನ ಮಾರ್ಣ ಪರಿಚಯ ಅವಳಿಗಿದೆ. ಕೊಳ್ಳೆ ಹೊಡೆಯುವ ಅವಳ ಯೋಜನೆ ವಿಫಲಗೊಳ್ಳುವ ಚಾನ್ಸ್ ಇಲ್ಲವೇ ಇಲ್ಲ.
ನಾನು, ಕುಟ್ಟಿ ಮತ್ತು ಝಾಬಾನಿಗೆ ನನ್ನ ಅಭಿಪ್ರಾಯ ತಿಳಿಸಿದಾಗ ಅವರಿಬ್ಪರು ಒಪ್ಪಿದರು. ಆ ಕ್ಷಣವೇ ಬಹುಮತದಿಂದ ಪ್ರಸ್ತಾಪ ಪಾಸಾಯಿತು. ‘ಆಪರೇಷನ್ ಗೆಸ್ಟ್-ಹೌಸ್’ನ ಯೋಜನೆಗೆ ಅನುಮತಿ ದೊರೆಯಿತು. ಈ ಖುಷಿಯಲ್ಲಿ ಲಬಂಗಿ ಸರದಿಯಂತೆ ನಮ್ಮ ಮೂವರಿಗೂ ಚುಂಬಿಸಿ, ಇದರಲ್ಲಿ ಯಶಸ್ಸು ಪಡೆದ ಮೇಲೆ ಕಾನೂನುಬಾಹೀರವಾಗಿ ನಮ್ಮೊಂದಿಗೆ ವಿವಾಹವಾಗುವುದಾಗಿ ಘೋಷಿಸಿದಳು. ಅವಳ ಮಾತು ಕೇಳಿ ಝಾಬಾ “ಆದ್ರೆ ನಾನಂತೂ ಬಾಲ ಬ್ರಹ್ಮಜಾರಿ!” ಎಂದ.
ಗೋಪಾಲಪುರದಿಂದ ಮರಳಿ ಬರುವಾಗ ಮಾರ್ಗದಲ್ಲಿ ಎರಡು ಬಾತುಕೋಳಿಗಳನ್ನು ಕದ್ದು, ಕಾಟೇಜಿಗೆ ತಂದೆವು. ದುಲಈಗೆ ಅದನ್ನು ಕೊಟ್ಟಾಗ ಅವಳಿಗೆ ಖುಷಿಯಾಯಿತು. ದಿನನಿತ್ಯ ಬೆಳಗ್ಗೆ ಅವಳು ಬಾತು ಕೋಳಿಯ ಎರಡು ಮೊಟ್ಟೆಗಳ ಆಮ್ಲೇಟ್ ತಿನ್ನುತ್ತಿದ್ದಳು. ತಿಂಗಳು-ಹದಿನೈದು ದಿನಗಳಿಗೊಮ್ಮೆ ಒಂದು ಜೀವಂತ ಬಾತುಕೋಳಿಯನ್ನು ಖರೀರಿಸಿ, ತನ್ನ ಕೈಯಿಂದಲೇ ಅದನ್ನು ಕೊಂದು, ಬೇಯಿಸಿ ತಿನ್ನುತ್ತಿದ್ದಳು. ಬಾತು ಕೋಳಿಯ ಪಲ್ಯ ಅವಳಿಗಿಷ್ಟವಾದ ಆಹಾರವಾಗಿತ್ತು. ಅವಳೊಂದಿಗಿದ್ದ ನಾವೂ ಕೋಳಿ, ಬಾತುಕೋಳಿ, ಹಂದಿ, ಮೀನು, ಪಾರಿವಾಳ, ಗೌಜಲ ಹಕ್ಕಿ ಮುಂತಾದವುಗಳನ್ನು, ರುಚಿಯಿಂದ ತಿನ್ನುವುದನ್ನು ಕಲಿತಿದ್ದೆವು. ಎರಡು ಬಾತುಕೋಳಿಗಳಲ್ಲಿ ಒಂದನ್ನು ಫ್ರೈ ಮಾಡಿ ನಮಗೆ ಕೊಡಲು ದುಲಈ ಒಪ್ಪಿದ್ದಳು.
ಡಿನ್ನರಿಗೆ ಮೊದಲು ಲಬಂಗಿ ಸ್ನಾನ ಮಾಡಿ, ಬಟ್ಟೆ ಒಗೆಯಲು ಸಮುದ್ರ ತೀರಕ್ಕೆ ಹೊರಟಳು ಇಂದು ಅವಳು ನನ್ನನ್ನು ಮತ್ತು ಕುಟ್ಟಿಯನ್ನು ನಿಸ್ಸಂಕೋಚವಾಗಿ ಜತೆಗೆ ಕರೆದೊಯ್ದಳು. ಸಮುದ್ರತೀರದಲ್ಲಿ ಅವಳು ಬಟ್ಟೆ ಕಳಚುತ್ತಿದ್ದಾಗ ನಾವು ಜೊಲ್ಲು ಸುರಿಸುತ್ತಿದ್ದೆವು. ಕಾರಣ, ಹೊಟ್ಟೆಯ ಹಸಿವೆಯೊಂದಿಗೆ ದೇಹದ ಹಸಿವೂ ಸಹಜವಾಗಿ ಒಮ್ಮೊಮ್ಮೆ ಜಾಗೃತವಾಗುತ್ತದೆ.
ಆದರೆ ಇಂದಿನ ಸಂಗತಿಯೇ ಭಿನ್ನವಾಗಿತ್ತು. ಇಂದು ಅವಳೇ ನಮ್ಮನ್ನು ಆಹ್ವಾನಿಸಿದ್ದಳು. ಲಬಂಗಿ ನಮ್ಮೆದುರು ಬೆತ್ತಲೆಯಲ್ಲಿದ್ದಳು ಬೆಳದಿಂಗಳಿನಲ್ಲಿ ಅವಳ ಆಕೃತಿ ಛಾಯಾಚಿತ್ರದಂತೆ ಕಾಣುತ್ತಿತ್ತು. ನಾನು ಕುಟ್ಟಿಯನ್ನು ನೋಡಿದೆ ಲಬಂಗಿ ಒಂದು ಕಪ್ಪು ಬಂಡೆಯ ಮೇಲೆ ಕೂತು ತನ್ನ ಶರ್ಟ್ ನ್ನು ತಿಕ್ಕಿ-ತಿಕ್ಕಿ ಸ್ವಚ್ಛ ಮಾಡುತ್ತಿದ್ದಳು. ಬೆಳದಿಂಗಳು ಅವಳ ಬಾಗಿದ ಬೆನ್ನ ಮೇಲೆ ಚೆಲ್ಲಿತ್ತು.
ನಮ್ಮ ದೇಹದ ಹಸಿವು ಜಾಗೃತವಾಯಿತು. ವಾತಾವರಣವೇ ಹೇಗಿತ್ತೆಂದರೆ, ನಮ್ಮ ಜಾಗದಲ್ಲಿ ಯಾರಾದರೂ ನಪುಂಸಕನಿದ್ದರೂ ಅವನೂ ಗಂಡಸಾಗಿಬಿಡುತ್ತಿದ್ದ. ಆದರೆ ನಮಗೆ ಇಷ್ಟೊಂದು ಧೈರ್ಯವಿರಲಿಲ್ಲ. ಆದರೂ ಏನಾದರೂ ಯುಕ್ತಿ ಮಾಡಬೇಕೆಂದು ಮನಸ್ಸು ಬಯಸುತ್ತಿತ್ತು.
“ಏನ್ ಯೋಚ್ನೆ ಮಾಡ್ತಿದ್ದೀರ?’
ನಮಗಾಶ್ಚರ್ಯವಾಯಿತು. ಬಟ್ಟೆಯನ್ನು ಒಣಗಲು ಹಾಕಿ ಲಬಂಗಿ ನಮ್ಮ ಬಳಿ ಬಂದಿದ್ದಳು. ಬೆರಗಾಗಿ ಅವಳನ್ನ ನೋಡಿದೆವು. ಲಬಂಗಿ ಮನಸ್ಸಿನಲ್ಲೇ ಮುಗುಳ್ನಗುತ್ತಿದ್ದಳು.
“ನೀವೇನು ಯೋಚ್ನೆ ಮಾಡುತಿದ್ದೀರ ಅಂತ ಕೇಳ್ದೆ” ಲಬಂಗಿ ಮತ್ತೆ ಪ್ರಶ್ನಿಸಿದಳು. ನನ್ನ ಕಾಲ ಕೆಳಗಿನ ಭೂಮಿ ಕುಸಿಯಿತು. ಕುಟ್ಟಿಯ ಪರಿಸ್ಥಿತಿ ಮತ್ತೂ ಬಿಗಡಾಯಿಸಿತ್ತು. ಇಲ್ಲಿಂದ ಕಾಲು ಕೀಳುವ ನೆಪ ಹುಡುಕುತ್ತಿದ್ದ. ಕ್ಷಣಕಾಲ ಯೋಚಿಸಿ ಅವನು ಹೇಳಿದ, “ಕೋಬರ್: ವಿಷಯವೇನಂದರೆ… ಗೆಸ್ಟ್ ಹೌಸ್ ನ್ನು ಕೊಳ್ಳೆ ಹೊಡೆಯುವುದಕ್ಕೂ ಮೊದಲು ಹಾಕಿದ ಬೀಗವನ್ನು ತೆಗೆಯುವ ಪ್ರ್ಯಾಕ್ಟೀಸ್ ಮಾಡೋದು ಅಗತ್ಯ….” ಅವನು ನನ್ನ ಉತ್ತರಕ್ಕೂ ಕಾಯದೆ ಅಲ್ಲಿಂದ ಜಾರಿಕೊಂಡ. ಈಗ ಅವನ ಮೇಲೆ ‘ಆಕ್ರಮಣ’ ವಾಗಲಿಲ್ಲವೆಂಬುದು ಆಶ್ಜರ್ಯ.
ನಾನು ಸ್ಥಿರವಾಗಿಯೇ ನಿಂತಿದ್ದ. ಒಳಗೆ ಭಯ ಪಡುತ್ತಿದ್ದರೂ, ಹೊರ ನೋಟದಲ್ಲಿ ಸ್ಥಿರವಾಗಿದ್ದೆ.
“ನೀನೇ ಹೇಳು! ನಾವಿಬ್ಪರೂ ಏನು ಯೋಚ್ನೆ ಮಾಡ್ತಿದ್ದೆವು?”
“ಗಂಡನನ್ನು ಬಿಟ್ಟು ದುಃಖ ಪಡೋದಕ್ಕೆ ನಾನು ಇಲ್ಲಿಗೇಕೆ ಬಂದೆ ಅಂತ” ಲಬಂಗಿ ನನ್ನನ್ನೇ ನೋಡಿದಳು.
“ಇದನ್ನೇ ಯೋಚ್ನೆ ಮಾಡ್ತಿದ್ದೆವು!” ಎಂದೆ.
“ಯಾಕೆಂದರೆ ಆ ಸಹವಾಸದಲ್ಲಿ ಸುಖವಿರಲಿಲ್ಲ” ಎನ್ನುತ್ತಾ ಅವಳು ಮರಳಿನಲ್ಲಿ ಕೂತಳು.
“ಮದುವೆ ಯಾಕೆ ಮಾಡಿಕೊಂಡೆ?” ನಾನು ಅವಳೆದುರು ಕೂತೆ.
“ಸುಖ-ಜೀವನಕ್ಕಾಗಿ ಬ್ಯಾನರ್ಜಿ ಲಕ್ಷಾಧಿಪತಿ. ಅವನು ಕಡೇಪಕ್ಷ ನಲವತ್ತು ಲಕ್ಷ ರೂಪಾಯಿಗಳ ಮಾಲೀಕ. ಈ ಪೈಲ್ವಾನನ ಐಶ್ವರ್ಯ ಪಡೆದು ನಾನು ಮಜಾ ಮಾಡ್ತೀನಿ ಅಂತ ಯೋಚಿಸಿದ್ದೆ. ಇವನನ್ನು ಮದುವೆಯಾಗಿ ಸ್ವಚ್ಛಂದ ಜೀವನ ಸಾಗಿಸಲು ಬಯಸಿದ್ದೆ. ನಿನ್ನಂತಹ ಒಬ್ಪ ಉನ್ಮತಿ ಬಾಳಫ್ರೆಂಡ್ ನೊಬ್ಪನನ್ನೂ ಕೊಂಡುಕೊಳ್ತೀನಿ ಅಂತ ಯೋಚಿಸಿದ್ದೆ| ಯಾಕೆಂದರೆ, ಎಪ್ಪತ್ತು ವರ್ಷದ ಮುದುಕನಿಗೆ ಸೆಕ್ಸ್ ಬಗ್ಗೆ ಹೆಚ್ಚು ಆಸಕ್ತಿ ಇರುವುದಿಲ್ಲ. ಆದ್ರೆ ನನ್ನ ಅನುಮಾನಗಳೆಲ್ಲವೂ ಪೊಳ್ಳಾದವು ಮದುವೆಯ ರಾತ್ರಿಯೇ ಬ್ಯಾನರ್ಜಿ ನನ್ನ ಮೇಲೆರಗಿದ. ನನ್ನನ್ನು ಹಿಂಡಿ ಹಿಪ್ಪೆ ಮಾಡಿದ್ದ.”
“ನಿನ್ನ ಮದುವೆಯಾಗಿ ಎಷ್ಟು ವರ್ಷಗಳಾಯ್ತು?”
“ನೀನೇ ಅಂದಾಜು ಮಾಡು!” ಲಬಂಗಿ ಮೆಲ್ಲನೆ ನಕ್ಕಳು.
“ಒಂದೆರಡು ವರ್ಷಗಳಂತೂ ಆಗಿರಲೇ ಬೇಕು!”
“ಇನ್ನೂ ಮೂರು ತಿಂಗಳೂ ಪೂರಾ ಆಗಿಲ್ಲ. ಈ ಮೂರೇ ತಿಂಗಳಲ್ಲಿ ನನಗೆ ನನ್ನ ತಪ್ಪಿನ ಅರಿವೂ ಆಯಿತು. ಬ್ಯಾನರ್ಜಿ ಮಹಾ ಜಿಪುಣ! ಅವನ ಹಣದಿಂದ ಸುಖ ಪಡುವ ನನ್ನಾಸೆಯೂ ಭಸ್ಮವಾಯಿತು. ಆದರೂ, ಸ್ವಲ್ಪ ದಿನಗಳಲ್ಲೇ ಎಲ್ಲಾ ಸರಿಯಾಗುತ್ತೆ ಅಂತ ಮನಸ್ಸಿಗೆ ಹೇಳಿಕೊಂಡೆ. ಅವನು ನನ್ನನ್ನು ಕಲ್ಕತ್ತಾದಿಂದ ಇಲ್ಲಿಗೆ ಕರೆತಂದ. ಇಲ್ಲಿ ಅವನ ಜೀವನದ ಮತ್ತೊಂದು ಮುಖ ನನಗೆ ತಿಳಿಯಿತು. ಅವನು ಜಿಪುಣನಷ್ಟೇ ಅಲ್ಲ, ಕಟುಕನೂ ಆಗಿದ್ದ.”
“ಇದು ನಿನಗೆ ಹೇಗೆ ತಿಳೀತು?” ನನಗೆ ಕುತೂಹಲವಾಯಿತು.
“ಅಂದೊಂದು ದಿನ ನಾವು ಚಿಲ್ಕಾ ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದೆವು. ದಡದಲ್ಲಿ ಕೂತು ಅವನು ನೀರಿಗೆ ಗಾಳ ಹಾಕಿದ್ದ. ಸ್ವಲ್ಪ ಹೊತ್ತಿಗೆ ಒಂದು ಮೀನು ಸಿಕ್ಕಿ ಹಾಕಿಕೊಂಡಿತು. ಅವನು ಗಾಳ ಎಳೆದುಕೊಂಡ. ಆದ್ರೆ ಮುಳ್ಳಿನಿಂದ ಮೀನನ್ನು ತೆಗೆಯದೇ, ಒದ್ದಾಡುತ್ತಿದ್ದ ಅದನ್ನು ನೋಡಿ ಖುಷಿಗೊಂಡ. ನಾನವನಿಗೆ ಬೈದೆ. ಧಿಕ್ಕಾರ ಹಾಕಿದೆ. ಆದ್ರ ಯಾವ ಪ್ರಯೋಜನವಾಗಲಿಲ್ಲ… ಆ ದಿನವೇ ಅವನನ್ನು ತ್ಯಜಿಸಲು ನಾನು ನಿರ್ಧರಿಸಿದೆ. ಮೂರು ತಿಂಗಳ ವಿವಾಹಿತ ಜೀವನದಲ್ಲಿ ನಾನು ಅವನಿಗೆ ತುಂಬಾ ಪ್ರೀತಿಸಿದೆ. ನಾನಿಲ್ಲದೆ ಅವನು ಬದುಕಲಾರನೆಂಬ ವಿಶ್ವಾಸ ನನಗಿತ್ತು! ನಾನು ಅವನಿಂದ ದೂರವಾದರೆ ಆಗ ಅವನಿಗೆ ನನ್ನ ಬೆಲೆ ತಿಳಿಯುತ್ತೆ ಎಂದುಕೊಂಡಿದ್ದೆ. ಆದ್ರೆ ಎಲ್ಲಾ ಸುಳ್ಳಾಯ್ತು. ಆ ನೀಚ ನನ್ನನ್ನು ಹುಡುಕುವ ಒಂದು ಸಾಮಾನ್ಯ ಒರಯತ್ನವನ್ನೂ ಮಾಡ್ಲಿಲ್ಲ. ಈ ವಿಷಯ ನಿನಗೂ ಗೊತ್ತಿದ” ಲಬಂಗಿ ನಿಟ್ಟುಸಿರು ಬಿಟ್ಟಳು.
“ನಿಜ.” ನಾನು ಯೋಚಿಸಿ ಪ್ರಶ್ನಿಸಿದೆ. “ಆದ್ರೆ ನಿನ್ನ ಎಪ್ಪತ್ತು ವರ್ಷದ ಪತಿ ಮಹಾಶಯನಲ್ಲಿ ಇಷ್ಟೊಂದು ಶಕ್ತಿ ಎಲ್ಲಿಂದ ಬಂತು ಅನ್ನೋದು ನನಗೆ ತಿಳೀತಿಲ್ಲ.”
“ಬ್ಯಾನರ್ಜಿ ರಿಟೈರ್ಡ್ ಮಿಲಿಟರಿ ಆಫೀಸರ್.” ಲಬಂಗಿ ತನ್ನ ಪತಿಯ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಕೊಟ್ಟಳು. “ಎರಡನೆಯ ಮಹಾಯುದ್ಧದಲ್ಲಿ ಅವನು ಬರ್ಮಾ-ಮಲಯಾ ಯುದ್ಧದಲ್ಲಿ ಬ್ರೀಟೀಷರೊಂದಿಗೆ, ಜಪಾನೀಯರ ವಿರುದ್ಧವಾಗಿ ಹೋರಾಡಿದ್ದ. ಭಾರತ ಸ್ವತಂತ್ರಗೊಂಡ ಮೇಲೆ ಚೀನ ಮತ್ತು ಪಾಕಿಸ್ತಾನದ ಸೈನಿಕರೊಂದಿಗೆ ಭಯಂಕರವಾಗಿ ಹೋರಾಡಿದ್ದ. ಛಂಬ್ ಯುದ್ಧದಲ್ಲಿ ಅವನ ಕಾಲಿಗೆ ಗುಂಡು ಬಿದ್ದು ಅವನು ರಿಟೈರ್ ಆಗಬೇಕಾಯಿತು. ಆದ್ರೆ ಅವನು ಸುಮ್ಮನೆ ಕೂರಲಿಲ್ಲ. ವ್ಯಾಪಾರ ಪ್ರಾರಂಭಿಸಿದ. ಭಾರತೀಯ ಸೈನ್ಯಾಧಿಕಾರಿಗಳೊಂದಿಗೆ ಸಂಪರ್ಕ ಬೆಳೆಸಿದ್ದ. ಅವರು ರದ್ದು ಪಡಿಸಿದ ವಾಹನಗಳನ್ನು ಕಡಿಮೆ ಬೆಲೆಗೆ ಖರೀದಿಸಿ, ಅವನ್ನು ರಿಪೇರಿ ಮಾಡಿಸಿ, ಹತ್ತು ಪಟ್ಟು ಹೆಚ್ಚು ಬೆಲೆಗೆ ನಗರಗಳಲ್ಲಿ ಮಾರಾಟ ಮಾಡುತ್ತಿದ್ದ.
ಈ ವ್ಯಾಪಾರದಲ್ಲಿ ಅವನಿಗೆ ಲಕ್ಷಾಂತರ ರೂಪಾಯಿ ಸಿಕ್ಕಿತ್ತು. ಕಳೆದ ವರ್ಷವಷ್ಟೇ ಅವನು ಈ ಕಸುಬನ್ನು ಬಿಡಬೇಕಾಯಿತು. ಆದರೆ ಇಂದಿಗೂ ಅವನ ಜೀವನ ಮಿಲಿಟರಿ ಜನರಂತೆಯೇ ಇದೆ. ಮುಂಜಾನೆ ಎದ್ದು ಅವನು ಬುಲ್ ವರ್ಕರ್ ನಿಂದ ಕಸರತ್ತು ಮಾಡ್ತಾನೆ. ಆಮೇಲೆ ಎರಡು ಹಸಿ ಮೊಟ್ಟೆಯನ್ನು ಹಾಲಿಗೆ ಸೇರಿಸಿ ನುಂಗಿಬಿಡ್ತಾನೆ. ಆದಕ್ಕೆ ಈ ವಯಸ್ಸಿನಲ್ಲೂ ಅವನು ಅಷ್ಟು ಗಟ್ಟಿಮುಟ್ಟಾಗಿರೋದು.”
ಲಬಂಗಿಯ ಪತಿಯ ಬಗ್ಗೆ ಇಷ್ಟೆಲ್ಲಾ ತಿಳಿದ ಮೇಲೆ ನನ್ನ ಕಾಲುಗಳ ಶಕ್ತಿ ಕುಂದಿತ್ತು. ಯಾರ ಖಜಾನೆಯನ್ನು ಕೊಳ್ಳೆ ಹೊಡೆಯುವ ಯೋಜನೆಯನ್ನು ಕೈಗೊಂಡಿದ್ದೆವೋ ಅವನು ಸಾಮಾನ್ಯ ಮನುಷ್ಯನಾಗಿರಲಿಲ್ಲ. ಆಲ್ಲದೆ, ಅವನ ಬಳಿ ಒಂದು ರೈಫಲ್ ಕೂಡ ಇತ್ತು. ನಮ್ಮಿಂದ ಸ್ವಲ್ಪವೇ ತಪ್ಪಾದರೂ ಕೂಡ ಅವನು ನಮ್ಮ ಮೇಲೆ ಗುಂಡು ಹಾರಿಸಲು ಹಿಂದೆ-ಮುಂದೆ ನೋಡುತ್ತಿರಲಿಲ್ಲ.
“ಲಬಂಗಿ!” ನನ್ನ ಮನಸ್ಸನ್ನು ಹತ್ತಿಕ್ಕಿಕೊಂಡು ಕಡೆಯ ಪ್ರಶ್ನೆಯನ್ನು ಕೇಳಿದೆ. “ಬ್ಯಾನರ್ಜಿಯೊಂದಿಗೆ ನಿನ್ನ ಪರಿಚಯ ಹೇಗಾಯ್ತು?”
ಈ ಪ್ರಶ್ನೆಯೊಂದಿಗೆ ಇನ್ನಿತರ ಪ್ರಶ್ನೆಗಳೂ ಸೇರಿದ್ದವು-ಮದುವೆಗೂ ಮುಂಚೆ ನೀನು ಏನಾಗಿದ್ದೆ? ಎಲ್ಲಿದ್ದೆ? ನಾನು ಈ ಪ್ರಶ್ನೆಗಳಿಗೂ ಉತ್ತರ ಬಯಸುತ್ತಿದ್ದೆ.
ಆದರೆ ಅವಳು ನನ್ನ ಪ್ರಶ್ನೆಯನ್ನು ಕೇಳದವಳಂತೆ, “ನಡೆ ಎದ್ದೇಳು! ನನ್ನ ಬಟ್ಟೆಗಳು ಒಣಗಿವೆ.” ಎಂದಳು.
ದರೋಡೆ ಮತ್ತು ಔದಾರ್ಯ ಅಧ್ಯಾಯ – 9
ಮಾರನೆಯ ದಿನ ರಾತ್ರಿಯ ಎರಡು ಗಂಟೆಗೆ ಸಂಪೂರ್ಣವಾಗಿ ಸಿದ್ಧರಾಗಿ ನಾವು ಗೆಸ್ಟ್-ಹೌಸಿನೆಡೆಗೆ ಹೊರಟೆವು. ಸಮುದ್ರದೆಡೆಯಿಂದ ಬರುತ್ತಿದ್ದ ಬಿರುಗಾಳಿಯ ಪೂತ್ಕಾರ ಕಿವಿಯ ತಮಟೆಯನ್ನು ಕಂಪಿಸುತ್ತಿತ್ತು. ತೀರದ ಅಲೆಗಳು ಅಪ್ಪಳಿಸುತ್ತಿದ್ದವು, ನಾವು ಶುಷ್ಕಮರಳಿನಲ್ಲಿ ವೇಗವಾಗಿ ಹೆಜ್ಜೆಗಳನ್ನು ಹಾಕುತ್ತಿದ್ದೆವು. ಲಬಂಗಿ ಎಲ್ಲರಿಗಿಂತ ಮುಂದಿದ್ದಳು. ಕುಟ್ಟಿ ಮತ್ತು ನಾನು ಅವಳ ಹಿಂದಿದ್ದೆವು. ಝಾಬಾ ಎಲ್ಲರಿಗಿಂತ ಹಿಂದಿದ್ದ. ಅವನಿಗಿಷ್ಟವಿಲ್ಲದಿದ್ದಾಗ್ಯೂ ಅವನು ನಮ್ಮೊಂದಿಗೆ ಬರಬೇಕಿತ್ತು.
“ಝಾಬಾ! ನಮ್ಮ ರೋಮಾಂಚಕ ಬದುಕಿನ ಕಡೆಯ ಹೋರಾಟವಿದು! ನಾಳೆಯಿಂದ ನಮ್ಮ ದುಃಖದ ದಿನಗಳು ಕೊನೆಗೊಳ್ಳುತ್ತವೆ. ಆಮೇಲೆ ನಾವು ಭಿಕ್ಷೆ ಬೇಡಬೇಕಾಗಿಲ್ಲ. ಯಾರ ಜೇಬನ್ನೂ ಕತ್ತರಿಸಬೇಕಿಲ್ಲ. ಯಾವ ಹಳ್ಳಿಗನನ್ನೂ ಮೋಸ ಮಾಡಬೇಕಿಲ್ಲ. ಹದಿನೈದು ಸಾವಿರ ಕೈಗೆ ಬರುತ್ತಲೇ ನಮ್ಮ ಫಿಲ್ಮ್ಗೆ ಪೂರ್ಣ ವಿರಾಮ ಹಾಕಿ ಇಲ್ಲಿಂದ ಹೊರಟು ಬಿಡೋಣ” ಕುಟ್ಟಿ ಅವನಿಗೆ ಸ್ಪೂರ್ತಿಕೊಟ್ಟ. ಆದರೂ ಝಾಬಾ ಈ ದರೋಡೆಯಲ್ಲಿ ಸಕ್ರಿಯವಾಗಿ ಭಾಗವಹಿಸುವುದಿಲ್ಲವೆಂದು ಸ್ಪಷ್ಟವಾಗಿ ತಿರಸ್ಕರಿಸಿ ಬಿಟ್ಟ. ಆಗ ಕುಟ್ಟಿ ಅವನಿಗೆ ಒಂದು ಸಾಧಾರಣ ಕೆಲಸವನ್ನು ವಹಿಸಿದ. ಅವನು ಗೆಸ್ಟ್-ಹೌಸ್ನೊಳಗೆ ನುಗ್ಗದೆ ನಾವು ಒಳಹೋದ ಮೇಲೆ, ಹೊರಗಿದ್ದು ಕಾವಲು ಕಾಯಬೇಕಿತ್ತು.
ಗೋಪಾಲಪುರದ ಹಳ್ಳಿಯ ವಿಶಾಲ ಗಡಿಯನ್ನು ಸುತ್ತು ಹಾಕಿ, ನಾವು ಮರಗಿಡಗಳ ಸಂದಿಯಲ್ಲಿ ಸಾಗುತ್ತಾ ಗೆಸ್ಟ್ ಹೌಸಿನ ಬಳಿ ಬಂದೆವು. ನಡುರಾತ್ರಿಯ ಅಂಧಕಾರದಲ್ಲಿ ಗೆಸ್ಟ್ ಹೌಸ್ ಛಾಯಾಚಿತ್ರದಂತೆ ನಿಂತಿತ್ತು. ಒಳಗಿದ್ದ ಬಲ್ಬ್ ಗಳೆಲ್ಲವೂ ಆರಿದ್ದವು. ಬಾಣಸಿಗನ ಗುಡಿಸಲು ಮೌನವಾಗಿತ್ತು.
ಲಬಂಗಿಯ ಹಿಂದಿದ್ದುಕೊಂಡೇ ನಾವು ಗೆಸ್ಟ್ ಹೌಸನ್ನು ಒಮ್ಮೆ ಸುತ್ತು ಹಾಕಿದೆವು. ಅದರ ಮುಖ್ಯದ್ವಾರ ಮುಚ್ಚಿತ್ತು. ಕಿಟಿಕಿಗಳೂ ಮುಚ್ಜಿದ್ದವು. ಆದರೆ ಒಂದೇ ಒಂದು ಕಿಟಕಿ ತೆರೆದಿದ್ದು ಅದರ ಸಮೀಪದಲ್ಲಿ ಲಬಂಗಿಯ ಪತಿ ಮಲಗಿದ್ದ. ಈ ಕಿಟಕಿಯೊಳಗಿನಿಂದ ಒಳನುಗ್ಗುವ ಮೂರ್ಖತನವನ್ನು ನಾವ್ರು ಮಾಡುವಂತಿರಲಿಲ್ಲ.
ನಾವು ಗೆಸ್ಟ್ ಹೌಸಿನ ಹಿಂಭಾಗಕ್ಕೆ ಬಂದೆವು. ಅಲ್ಲೊಂದು ಗವಾಕ್ಷಿಯಿತ್ತು. ಅದು ಸಾಕಷ್ಟು ಎತ್ತರದಲ್ಲಿತ್ತು. ಅದರೊಳಗೆ ತೆಳು ದೇಹದ ವ್ಯಕ್ತಿ ಮಾತ್ರ ನುಗ್ಗಬಹುದಿತ್ತು. ನಾವು ಕುಟ್ಟಿಯನ್ನು ಒಳನುಗ್ಗಿಸಲು ನಿಶ್ವಯಿಸಿದೆವು. ಕುಟ್ವಿ “ಕೋಬರ್, ನೀನೇ ನನಗಿಂತ ತೆಳ್ಳಗಿದ್ದೀಯಾ. ನೀನೇ ಒಳ ಹೋಗಿ ಮುಖ್ಯ ಬಾಗಿಲನ್ನು ತೆಗೆ” ಎಂದ.
ಝಾಬಾ ಗವಾಕ್ಷಿಯ ಕೆಳಗೆ ನಿಂತ. ಅವನ ಮುಖ ಗೋಡೆಯ ಕಡೆಗಿತ್ತು. ನಾನು ಅವನ ಬೆನ್ನ ಮೇಲೆ ಹತ್ತಿ ಹೆಗಲುಗಳ ಮೇಲೆ ನಿಂತು ಗವಾಕ್ಷಿಯ ಅಂಚನ್ನುಹಿಡಿದುಕೊಂಡು ಮೇಲಕ್ಕೆ ನೆಗೆದೆ. ಅನಂತರ ಮೆಲ್ಲ-ಮೆಲ್ಲನೆ ಗವಾಕ್ಷಿಯಲ್ಲಿ ನುಗ್ಗಿ ಬಹು ಎಚ್ಚರಿಕೆಯಿಂದ ಕೆಳಗೆ ಹಾರಿದೆ.
ಕೆಳಗೆ ರತ್ನಗಂಬಳಿ ಹಾಸಿದ್ದರಿಂದ ಶಬ್ದವಾಗಲಿಲ್ಲ. ಕೆಲವು ಕ್ಷಣ ನಿಂತ ನಾನು ಅನಂತರ ಮುಖ್ಯ ದ್ವಾರದೆಡೆಗೆ ಮುಂದುವರಿದೆ. ನನ್ನ ನಡಿಗೆ ಆಮೆಗಿಂತಲೂ ಮಂದವಾಗಿತ್ತು. ಕತ್ತಲಲ್ಲಿ ನಾನು ಯಾವುದೇ ವಸ್ತುವಿಗೆ ಅಥವಾ ಫರ್ನಿಚರ್ ಗೆ ಡಿಕ್ಕಿ ಹೊಡೆದು ಶಬ್ದವಾದರೆ! ಎಂಬ ಭಯ ನನಗಿತ್ತು.
ಅದೃಷ್ಟ ಚೆನ್ನಾಗಿತ್ತು. ಸ್ವಲ್ಪವೂ ಶಬ್ದ ಮಾಡದೆ ಬೆಕ್ಕಿನ ಹೆಜ್ಜೆ ಹಾಕುತ್ತಾ ಬಾಗಿಲ ಬಳಿ ಬಂದು ಅಷ್ಟೇ ಎಚ್ಚರಿಕೆಯಿಂದ ಬಾಗಿಲನ್ನು ತೆರೆದೆ.
ಲಬಂಗಿ, ಕುಟ್ಟಿ ಮತ್ತು ಝಾಬಾ, ಇಷ್ಟರಲ್ಲಿ ಇಲ್ಲಿಗೆ ಬಂದು ನನ್ನನ್ನೇ ಕಾಯುತ್ತಿದ್ದರು. ಲಬಂಗಿ ಸಂಜ್ಞೆಮಾಡಿ “ಓ.ಕೆ.?” ಎಂದು ಪ್ರಶ್ನಿಸಿದಳು. ನಾನೂ ಸಂಜ್ಞೆಮಾಡಿ “ಓ.ಕೆ.!” ಎಂದೆ. ಲಬಂಗಿ ಧೈರ್ಯದಿಂದ ಒಳ ನುಗ್ಗಿದಳು. ಗೆಸ್ಟ್ ಹೌಸಿನ ಭೂಪಟದ ಅರಿವು ಅವಳಿಗಿತ್ತು. ನಾನು ಮತ್ತು ಕುಟ್ಟಿ ಮೌನದಿಂದ ಅವಳನ್ನೇ ಹಿಂಬಾಲಿಸಿದವು. ಝಾಬಾ ಗೇಟ್ ಕೀಪರ್ ನಂತೆ ಬಾಗಿಲ ಬಳಿ ನಿಂತ.
ಸ್ವಲ್ಪ ಹೊತ್ತಿನ ಅನಂತರ ಬೆಡ್ ರೂಮಿನ ಬಳಿಯಿದ್ದ ಒಂದು ಕೋಣೆಗೆ ಹೋಗಿ ಅಲ್ಲಿಂದ ಒಂದು ಟ್ರೆಜರಿ ಬಳಿ ನಿಂತೆವು. ಲಬಂಗಿಯ ಹೇಳಿಕೆಯಂತೆ ಆ ಪೆಟ್ಟಿಗೆಯಲ್ಲಿ ಅವಳ ಒಡವೆಗಳು ಮತ್ತು ಸುಮಾರು ಐವತ್ತು ಸಾವಿರ ನಗದು
ಹಣವಿತ್ತು. ಪೆಟ್ಟಿಗೆಗೆ ಬೀಗ ಹಾಕಿತ್ತು.
ಕೈಯಲ್ಲಿ ಕೈ ಚೀಲ ಹಿಡಿದು ತತ್ಕ್ಷಣ ಕುಟ್ಟಿ ಕಾರ್ಯೋನ್ಮುಖನಾದ. ಅವನು ತನ್ನೊOದಿಗೆ ಬೀಗ ತೆಗೆಯಲು ಎರಡು ತಂತಿ ತುಂಡುಗಳನ್ನು ಮತ್ತು ಒಂದು ದೊಡ್ಡ ಚೀಲವನ್ನೂ ತಂದಿದ್ದ. ಆ ಚೀಲ ಕೊಳ್ಳೆ ಹೊಡೆದ ಮಾಲನ್ನು ಹಾಕಿಕೊಳ್ಳಲೋಸುಗವಿತ್ತು.
ಕುಟ್ಟಿ ಎರಡೂ ತಂತಿಗಳನ್ನು ಬೀಗದ ರಂಧ್ರದಲ್ಲಿ ಹಾಕಿ ಬೀಗದ ರಚನೆಯನ್ನು ಪರೀಕ್ಷಿಸಿದ. ಐದಾರು ನಿಮಿಷಗಳ ಅನಂತರ ತಂತಿಗಳನ್ನು ಹೊರತೆಗೆದು ಒಂದು ತಂತಿಯನ್ನು ಸ್ವಲ್ಪ ವಕ್ರಮಾಡಿದ. ಅನಂತರ ಎರಡೂ ತಂತಿಗಳನ್ನು ಒಳ ಹಾಕಿ, ಒಂದು ತಂತಿಯನ್ನು ಮೆಲ್ಲನೆ ತಿರುಗಿಸಿದ. ಬೀಗ ತೆರೆದುಕೊಂಡಿತು. ನನಗಾಶ್ಚರ್ಯವಾಗಲಿಲ್ಲ. ಕಳೆದ ಒಂದು ವಾರದಿಂದ ಕುಟ್ಟಿ, ದುಲಈ ಮನೆಯ ಬೀಗದ ಮೇಲೆ ಪ್ರಯೋಗ ಮಾಡುತ್ತಿದ್ದ.
ಲಬಂಗಿ ಪೆಟ್ಟಿಗೆ ತೆರೆದು ಮೊದಲು ತನ್ನ ಒಡವೆಗಳ ಬಾಕ್ಸನ್ನು ಎತ್ತಿ ಕುಟ್ಟಿಯ ಕೈಗೆ ಹಾಕಿದಳು. ಕುಟ್ಟಿ ಆಗಲೇ ಚೀಲದ ಬಾಯಿ ತೆರೆದಿದ್ದ. ಚಟುವಟಿಕೆಗಳು ತೀವ್ರವಾಗಿ ನಡೆಯುತ್ತಿದ್ವು ಒಡವೆಗಳ ಅನಂತರ ನೋಟುಗಳ ಕಟ್ಟುಗಳನ್ನು ಚೀಲಕ್ಕೆ ತುಂಬುವ ಕಾರ್ಯ ಸಾಗಿತ್ತು. ನಾನು ಬೆಡ್ ರೂಮಿನ ಬಾಗಿಲ ಬಳಿ ಎಚ್ಚರಿಕೆಯಿಂದ ನಿಂತಿದ್ದೆ.
ಒಂದು ಕ್ಷಣ ನಾನು ಲಬಂಗಿ ಮತ್ತು ಕುಟ್ಟಿಯನ್ನು ನೋಡಿದರೆ ಮರುಕ್ಷಣ ಬೆಡ್ ರೂಮನ್ನು ನೋಡುತ್ತಿದ್ದೆ. ಬ್ಯಾನರ್ಜಿಯನ್ನು ಇಷ್ಟು ಸಮೀಪದಿಂದ ಈ ಹಿಂದ ನಾನು ನೋಡಿರಲಿಲ್ಲ. ಬೆಡ್ ರೂಮಿನ ಮಂದ ಬೆಳಕಿನಲ್ಲಿ ಅವನ ದುಂಡನೆ ಮುಖ ಶವದಂತೆ ತೋರಿತ್ತು. ಅವನ ಮೂಗಿನ ತುದಿಯಲ್ಲಿ ಹಿಟ್ಲರ್ ಬ್ರಾಂಡ್ನ ಮೀಸೆಗಳಿದ್ದವು. ಅವನ ಕತ್ತು ಕಾಣಿಸುತ್ತಿರಲಿಲ್ಲ. ಹೊರಳಿ ಬಿದ್ದ ಡ್ರಮ್ಮಿನಂತೆ ಅವನ ಎದೆಯವರೆಗೆ ರಗ್ಗಿತ್ತು.
ನೋಡು ನೋಡುತ್ತಿದ್ದಂತೆಯೇ ಪೆಟ್ಟಿಗೆ ಖಾಲಿಯಾಯಿತು. ಚೀಲವೂ ಸುಮಾರಾಗಿ ತುಂಬಿತ್ತು. ಕುಟ್ಟಿ ಚೀಲವನ್ನು ಹೆಗಲ ಮೇಲಿಟ್ಟುಕೊಂಡು ನನಗೆ ಸಂಜ್ಞೆಮಾಡಿದ. ನಾನು ಮುಖ್ಯದ್ವಾರದೆಡೆಗೆ ಹೋದ. ನನ್ನ ಹಿಂದಿದ್ದ ಲಬಂಗಿ ಒಂದು ಸಣ್ಣ ತಪ್ಪು ಮಾಡಿದಳು. ಪರಿಣಾಮ ಭಯಂಕರವಾಯಿತು. ಚೀಲ ತುಂಬಿದ ಅನಂತರ ಲಬಂಗಿ ಪೆಟ್ಟಿಗೆಯ ಬಾಯನ್ನು ಮುಚ್ಜಿರಲಿಲ್ಲ. ನಾವಿನ್ನೂ ಮೂರನೆ ಮೆಟ್ಟಲನ್ನಿಳಿದು ಕಾಂಪೌಂಡ್ನಲ್ಲಿ ಕಾಲಿಟ್ಟಿದ್ದೆವು; ಆಗಲೇ ಪೆಟ್ಟಿಗೆಗೆ ಜೀವ ಬಂದಂತಾಗಿ ಅದರ ಬಾಗಿಲು ಹಾಕಿಕೊಂಡಿತ್ತು. ಇದರಿಂದಾದ ಶಬ್ದ ರಾತ್ರಿಯ ನೀರವತೆಯನ್ನು ಭೇದಿಸಿತು.
ಆಗಲೇ ಬೆಡ್ ರೂಮಿನ ದೀಪ ಹೊತ್ತಿಕೊಂಡಿತು. ಬೆಳಕಿನ ತುಂಡೊಂದು ಕಿಟಕಿಯಿಂದ ಹಾರಿ ನಮ್ಮೆದುರಿಗೆ ಚೆಲ್ಲಿತು. ಝಾಬಾ ಕುಟ್ಟಿಯ ಕೈಯಿಂದ ಚೀಲವನ್ನು ಕಸಿದುಕೊಂಡು ತನ್ನ ಹೆಗಲಿಗೇರಿಸಿಕೊಂಡು ಓಡಿದ. ಬೆಳಕಿನ ವೃತ್ತದಿಂದ ಪಾರಾಗುತ್ತಾ ನಾವು ಅವನನ್ನ ಹಿಂಬಾಲಿಸಿದವು. ಕೆಲವೇ ಸೆಕೆಂಡುಗಳಲ್ಲಿ ನಾವು ಮರಗಿಡಗಳ ಮಧ್ಯಕ್ಕೆ ಬಂದೆವು.
ಅಲ್ಲಿಂದ ಪಾರಾಗಿ ಕಾಟೇಜಿಗೆ ಬಂದು ಒಳಗಿನಿಂದ ಬಾಗಿಲನ್ನು ಭದ್ರಪಡಿಸಿ ನೆಲದ ಮೇಲೆ ಅಂಗಾತ ಮಲಗಿಕೊಂಡೆವು. ಬ್ಯಾನರ್ಜಿಯ ಭಯದಿಂದ ನಾವು ಓಡೋಡಿ ಬಂದಿದ್ದೆವು. ರೇಸ್ ಕುದುರೆಗಳಂತೆ ಏದುಸಿರು ಬಿಡುತ್ತಿದ್ದ ನಮ್ಮ ತಲೆಯ ಮೇಲೆ ಭಯದ ಬಾಂಬ್ ತೂಗುತ್ತಿತ್ತು.
ನಮ್ಮ ಯೋಜನೆಯಂತೆಯೇ ಎಲ್ಲಾ ನಡೆದಿದ್ದರೆ ನಮಗೆ ಚಿಂತೆಯಿರಲಿಲ್ಲ. ಪೆಟ್ಟಿಗೆಯ ತೆರೆದ ಬಾಗಿಲು ಇದ್ದಕ್ಕಿದ್ದಂತೆಯೇ ಹಾಕಿಕೊಂಡ ಶಬ್ದವಾಗಿದ್ದರಿಂದಾಗಿ ನಮ್ಮ ಯೋಜನೆಗಳೆಲ್ಲಾ ತಲೆಕೆಳಗಾಯಿತೆಂದು ಅನ್ನಿಸಿತು. ಬ್ಯಾನರ್ಜಿ ನಾವು ಓಡಿ ಹೋದದ್ದನ್ನು ನೋಡಿದ್ದರೆ ಬೆಳಗಾಗುತ್ತಲೇ ತನ್ನ ರೈಫಲ್ ಹಿಡಿದು ಇಲ್ಲಿಗೆ ಬಂದು ನಮ್ಮ ಮೇಲೆ ಗುಂಡು ಹಾರಿಸುತ್ತಿದ್ದ. ಇದರಲ್ಲಿ ಅನುಮಾನವೇ ಇಲ್ಲ. ಅಲ್ಲದೆ, ಲಬಂಗಿ “ಬ್ಯಾನರ್ಜಿ, ಪೋಲೀಸ್ಗೆ ದೂರು ಕೊಡಲ್ಲ. ತನ್ನ ಬೇಟೆಯನ್ನು, ತನ್ನ ಕೈಯಾರೆ ಹೊಸಕಿ ಹಾಕುವಲ್ಲಿ ಆ ಪೈಲ್ವಾನನಿಗೆ ಆತ್ಮಸಂತೋಷ ಸಿಗುತ್ತೆ. ಅಲ್ಲದೆ ಅವನು ಸ್ವಚ್ಛಂದವಾಗಿ ಜೀವಿಸುತ್ತಿದ್ದಾನೆ. ಒಂಟಿತನ ಕಾಡಬಾರದೆಂದು ಒಂದಲ್ಲ ಒಂದು ಉಪಾಯ ಹುಡುಕುತ್ತಿರುತ್ತಾನೆ. ನಮ್ಮ ಬೇಟೆಯಾಡುವ ಇಂಥ ಸುವರ್ಣಾವಕಾಶವನ್ನು ಅವನು ಹೇಗೆ ಕಳೆದುಕೊಳ್ಳುತ್ತಾನೆ>” ಎಂದೂ ಹೇಳಿದ್ದಳು.
ಝಾಬಾ ಎಚ್ಚೆತ್ತುಕೊಂಡು ನೋಟುಗಳನ್ನು. ಎಣಿಸಲಾರಂಭಿಸಿದ ಕುಟ್ಟಿಯೂ ಎದ್ದು ಬಂದು ಅವನಿಗೆ ಸಹಾಯ ಮಾಡಲಾರಂಭಿಸಿದ. ನಾನು ಮತ್ತು ಲಬಂಗಿ ತಲೆ ಮೇಲೆ ತೂಗುತ್ತಿದ್ದ ಬಾಂಬನ್ನು ಡಿಫ್ಯೂಜ್ ಮಾಡುವ ಉಪಾಯದಲ್ಲಿ ಮಗ್ನರಾದೆವು. ಬೆಳಗಾಗಲು ಹೆಚ್ಜು ಸಮಯವಿರಲಿಲ್ಲ. ನಮ್ಮ ಆಕಾಂಕ್ಷೆ ಚರಮಸೀಮೆಯಲ್ಲಿ ಆದಷ್ಟು ಶೀಘ್ರ ಗೋಪಾಲಪುರಕ್ಕೆ ಧನ್ಯವಾದಗಳನ್ನರ್ಪಿಸಿ, ಇಲ್ಲಿಂದ ಕಣ್ಮರೆಯುಗಬೇಕಿತ್ತು. ನಮ್ಮ ಹತ್ತಿರ ಹೆಚ್ಚು ಲಗ್ಗೇಜುಗಳಿರಲಿಲ್ಲ. ಒಂದು ಚಿಕ್ಕ ಮೂವಿ-ಕ್ಯಾಮೆರಾ, ಫಿಲ್ಮ್ನ ಏಳು ಟಿನ್ನುಗಳು, ಫೋಟೋಗ್ರಫಿಯ ಸಾಮಾನುಗಳು ಮತ್ತು ಕುಟ್ಟಿಯ ಹಿಟ್-ನಾವೆಲ್ಸ್ಗಳ ಅರ್ಧಂಬರ್ಧ ಹಸ್ತಪ್ರತಿಗಳು- ಇಷ್ಟೇ ನಮ್ಮ ಲಗ್ಗೇಜುಗಳಾಗಿತ್ತು.
ಇವುಗಳನ್ನೆಲ್ಲಾ ಇನ್ನೊಂದು ಚೀಲಕ್ಕೆ ಹಾಕಿ ಝಾಬಾ ತನ್ನ ಬಲ ಹೆಗಲ ಮೇಲಿಟ್ಟುಕೊಂಡ. ಕೊಳ್ಳೆ ಹೊಡೆದ ಮಾಲುಗಳ ಇನ್ನೊಂದು ಚೀಲವನ್ನು ಎಡ ಹೆಗಲ ಮೇಲಿಟ್ಟುಕೊಂಡು, ಗಿಟಾರನ್ನು ಕತ್ತಿಗೆ ನೇತು ಹಾಕಿಕೊಂಡ. ಸರಿ, ರಾತ್ರಿಯ ಅಂಧಕಾರದಲ್ಲಿ ನಾವು ‘ಥೈಸ್’ಕಾಟೇಜನ್ನು ಸದಾಕಾಲವು ತ್ಯಜಿಸಿ ಮೌನವಾಗಿ ಹೊರಟು ಬಿಟ್ಟೆವು. ಹೊರಡುವುದಕ್ಕೂ ಮೊದಲು ಕುಟ್ಟಿ ದಾನಶೂರ ಕರ್ಣನಂತೆ ಸಾವಿರ ರೂಪಾಯಿಗಳ ಒಂದು ಕಟ್ಟನ್ನು ದುಲಈ ಮನೆಯ ಕಿಟಕಿಯೊಳಗೆ ಹಾಕಿದ್ದ.
ನಾವು ಶ್ರೀಮಂತರಾಗಿದ್ದೆವು. ಒಂದೇ ರಾತ್ರಿಗೆ ಮೂವತ್ತೆರಡು ಸಾವಿರ ರೂಪಾಯಿಗಳು ಹಾಗು ಸುಮಾರು ಐವತ್ತೈದು ಸಾವಿರ ರೂಪಾಯಿಗಳಷ್ಟು ಲಬಂಗಿಯ ಒಡವೆಗಳು ಚೀಲದಲ್ಲಿದ್ದವು. ಆದರೆ, ಈ ಒಡವೆಗಳ ಮೇಲೆ ನಮಗೆ ಅಧಿಕಾರವಿರಲಿಲ್ಲ. ಮೂವತ್ತೆರಡು ಸಾವಿರ ರೂಪಾಯಿಗಳೂ ನಮಗೆ, ನಮ್ಮ ಅಗತ್ಯಕ್ಕಿಂತ ಹೆಚ್ಚಾಗಿತ್ತು.
ಮಾರ್ಗದಲ್ಲಿ ಮತ್ತ ಗೆಸ್ಟ್ ಹೌಸ್ ಎದುರಾದಾಗ ಕುಟ್ಟಿ ನಿಂತ; ನಮಗಾಶ್ಚರ್ಯವಾಯಿತು.
“ಕೋಬರ್! ನಮಗೆ ಹದಿನೈದು ಸಾವಿರ ರೂಪಾಯಿಗಳು ಮಾತ್ರ ಸಾಕು” ಕುಟ್ಟಿ ನನ್ನೆಡೆಗೆ ನೋಡಿದ.
“ನೀನು ಏನು ಹೇಳಲು ಇಷ್ಟಪಡ್ತಿದ್ದೀಯಾ?” ಲಬಂಗಿಗೆ ಆಶ್ಚರ್ಯವಾಯಿತು.
“ಉಳಿದ ಹಣವನ್ನು ನಾವು ಗೆಸ್ಟ್ ಹೌಸಿನಲ್ಲಿ ಹಾಕಿ ಬರಬೇಕು!”
ಕುಟ್ಟಿಯ ಮಾತಿನಿಂದ ಲಬಂಗಿಗೆ ಗರಬಡಿದಂತಾಯಿತು. ಅವಳು ಕುಟ್ಟಿಗೆ ತಿಳುವಳಿಕೆಯನ್ನು ಹೇಳಿದರೂ ಯಾವ ಪ್ರಯೋಜನವಾಗಲಿಲ್ಲ. ಕುಟ್ಟಿ ತನ್ನ ನಿರ್ಧಾರದ ಬಗ್ಗೆ ಅಚಲನಾಗಿದ್ದ. ನಾನು ಮತ್ತು ಝಾಬಾ ಸಹ ಅವನ ಮಾತನ್ನು ಬೆಂಬಲಿಸಿದೆವು. ಉಳಿದ ಹದಿನೇಳು ಸಾವಿರ ರೂಪಾಯಿಗಳನ್ನು ತೆಗೆದುಕೊಂಡು ಕುಟ್ಟಿ ಗೆಸ್ಟ್ ಹೌಸಿಗೆ ಹೋಗಬೇಕು. ಅಲ್ಲೇ ಬಾಗಿಲ ಬಳಿ ಸುರಕ್ಷಿತವಾದ ಸ್ಥಳದಲ್ಲಿಟ್ಟು ಮರಳಿ ಬರಬೇಕೆಂಬ ನಿರ್ಣಯ ಬಹುಮತದಿಂದ ಅಂಗೀಕಾರವಾಯಿತು. ಆದರೆ ಈ ಕೆಲಸ ಸುಲಭವಾಗಿರಲಿಲ್ಲ
ಗೆಸ್ಟ್ ಹೌಸ್ ನ ಎರಡು ದೀಪಗಳು ಉರಿಯುತ್ತಿರುವುದನ್ನು ದೂರದ ಮರಗಳ ಮಧ್ಯದಿಂದ ನಾವು ಸ್ಪಷ್ಟವಾಗಿ ನೋಡುತ್ತಿದ್ದೆವು. ಕಿಟಕಿಯ ಬಳಿ ನಿಂತಿದ್ದ ಬ್ಯಾನರ್ಜಿಯ ನೆರಳಿನಂತಹ ಆಕೃತಿ ಪ್ರೇತನ ಆಕೃತಿಯಂತೆ ಕಾಣುತ್ತಿತ್ತು. ಕುಟ್ಟಿ ಹದಿನೇಳು ಸಾವಿರ ರೂಪಾಯಿಗಳ ನೋಟಿನ ಕಟ್ಟುಗಳನ್ನು ಬೇರೆಯಾಗಿಯೇ ತೆಗೆದುಕೊಂಡು ಅಡಗಿಕೊಳ್ಳುತ್ತಾ ಮುಂದೆ-ಮುಂದೆ ಹೋದ. ಕಂಪಿಸುವ ಹೃದಯದಿಂದ ನಾವು ಅವನನ್ನೇ ನೋಡುತ್ತಿದ್ದೆವು. ಕೆಲವೇ ಕ್ಷಣಗಳಲ್ಲಿ ಅವನು ಕಣ್ಮರೆಯಾದ. ನಮ್ಮ ಮತ್ತು ಗೆಸ್ಟ್ ಹೌಸಿನ ಮಧ್ಯೆ ಹೆಚ್ಜು ಅಂತರವಿರಲಿಲ್ಲ. ಆದರೆ ಗಾಢವಾದ ಅಂಧಕಾರವಿತ್ತು.
ಅಕಸ್ಮಾತ್ ನನಗೆ, ಬೆಡ್ ರೂಮಿನ ಕಿಟಕಿಬಳಿಯಿದ್ದ ಬ್ಯಾನರ್ಜಿಯ ನೆರಳೂ ಕಣ್ಮರೆಯುದ ವಿಷಯ ಗಮನಕ್ಕೆ ಬಂದಿತು. ನನ್ನ ಹೃದಯ ಮತ್ತೂ ವೇಗದಿಂದ ಕಂಪಿಸಿತು. ಕುಟ್ಟಿಗೆ ಎಚ್ಚರಿಕೆ ಹೇಳುವಷ್ಟು ಸಮಯವೂ ಇರಲಿಲ್ಲ. ಇಷ್ಟರಲ್ಲಿ ಕುಟ್ಟಿ ಗೆಸ್ಟ್ ಹೌಸಿನ ಬಳಿಗೆ ಹೋಗಿರಬಹುದು, ಆದರೂ ನಾನು ಮುಂದುವರಿದೆ.
ಇನ್ನೂ, ಕೆಲವು ಹೆಜ್ಜೆಗಳನಷ್ಟೇ ಇಟ್ಟಿದ್ದೆ, ಆಗಲೇ ರೈಫಲ್ ಪ್ರತಿಧ್ವನಿಸಿತು. ರಾತ್ರಿಯ ಅಂಧಕಾರವನ್ನು ಗುಂಡಿನ ಶಬ್ದ ಭೇದಿಸಿತ್ತು. ನನ್ನ ಕಾಲುಗಳು ನಿಂತಲ್ಲೇ ನಿಂತು ಬಿಟ್ಟವು. ಎದುರಿನಿಂದ ಓಡಿ ಬರುತ್ತಿದ್ದ ಕುಟ್ಟಿ ನನ್ನೆದುರೆ ಬಂದು ಕುಸಿದು ಬಿದ್ದ. ನಾನು ಕೂಡಲೇ ಹಾರಿ ಬಂದು ಅವನನ್ನತ್ತಿಕೊಂಡೆ.
“ಏನಾಯ್ತು?” ನಾನು ಮರಳಿ ಬಂದಾಗ ಲಬಂಗಿ ಪ್ರಶ್ನಿಸಿದಳು. ಚಿಂತೆಯಿಂದಾಗಿ ಝಾಬಾನ ಮುಖ ಮತ್ತೂ ಕಪ್ಪಾಗಿತ್ತು.
“ಕುಟ್ಟಿಯ ಕಾಲಿಗೆ ಗುಂಡು ಬಿದ್ದಿದೆ. ಓಡಿ!” ಹೀಗೆಂದು ಕುಟ್ಟಿಯನ್ನು ಬೆನ್ನ ಮೇಲೆ ಹೊತ್ತುಕೊಂಡು ನಾನೂ ಓಡಿದೆ. ಝಾಬಾ ಮತ್ತು ಲಬಂಗಿಯೂ ನನ್ನನ್ನು ಹಿಂಬಾಲಿಸಿದರು. ಒಂದೇ ಸಮನೇ ಓಡುತ್ತಾ ಸುಮಾರು ಎರಡೂವರೆ ಮೈಲಿ ದೂರದ ಚಿಲ್ಕಾ ಕೆರೆಯ ಬಳಿ ಬಂದೆವು. ಅಷ್ಟರಲ್ಲಿ ಬೆಳಗಾಗಿತ್ತು. ಅದಷ್ಟು ಬೇಗ ಎದುರಿನ ದಡ ಸೇರಬೇಕಿತ್ತು. ಚಿಲ್ಕಾ ಕೆರೆಯ ಆ ಭಾಗದಲ್ಲಿ ದಟ್ಟವಾದ ಕಾಡು ಮತ್ತು ಬೆಟ್ಟಗಳಿದ್ದವು. ಒಂದು ಸಾರಿ ಕಾಡನ್ನು ಹೊಕ್ಕರೆ ಸಿ.ಬಿ.ಐ.ಗೂ ನಮ್ಮನ್ನು ಪತ್ತೆ ಮಾಡುವುದು ಕಷ್ಟವಾಗಿತ್ತು.
ಬದುಕು ಈಗ ಕಷ್ಟವಲ್ಲ. ಭಾರವಲ್ಲ, ಆದರೂ, ನನ್ನ ಬದುಕಿನ ಮೇಣದ ಬತ್ತಿ ಎರಡೂ ಕಡೆಗಳಿಂದ ಉರಿಯುತ್ತಿದೆಯೆಂಬುದು ವಾಸ್ತವಾಂಶ ಮೇಣವೆಲ್ಲಾ ಕರಗಿದೆ. ಬಹುಶಃ ಅರ್ಧ-ಮುಕ್ಕಾಲು ಗಂಟೆಯಲ್ಲಿ ನಾನೂ ನಂದಿಹೋಗುವೆ. ನನ್ನ ಆತ್ಮ ಹೊರಬಂದು ಅನಂತಾಕಾಶದಲ್ಲಿ ವಿಲೀನವಾಗುವುದು. ಹೀಗೆನಾದರೂ ಆಗದಿದ್ದರೆ ಪುನರ್ಜನ್ಮ ಪಡೆಯುವೆ.
ನಾನು ನನ್ನ ಹಿಂದಿನ ಐದು ಜನ್ಮಗಳಲ್ಲಿ ಕುರಿ, ಹಂದಿ, ಉಡ, ಆನೆ, ನರಿ, ಎತ್ತು ಮತ್ತು ಚಿಟ್ಟೆಗಳ ಯೋನಿಯಲ್ಲಿದ್ದೆ. ಮುಂದಿನ ಜನ್ಮದಲ್ಲಿ ನಾಯಿಯಾಗುವೆ ಎಂದು ಜ್ಯೋತಿಷಿಯೊಬ್ಪ ಹೇಳಿದ್ದ. ನನ್ನ ಈ ಕೊನೆಯ ಗಳಿಗೆಯಲ್ಲಿ ನನ್ನ ಬಳಿ ಒಂದು ಬೀದಿ ನಾಯಿಯನ್ನು ಹೊರತುಪಡಿಸಿ ಬೇರ್ಯಾರೂ ಇಲ್ಲ. ನಾನು ಅದರ ಬಾಯಿ ನೋಡುತ್ತೇನೆ. ಅದರ ಹೊಳೆಯುವ ಕಣ್ಣುಗಳನ್ನು ನೋಡುತ್ತೇನೆ. ಮನಸ್ಸಿನಲ್ಲೇ ದೇವರಲ್ಲಿ, ‘ನನಗೆ ನಗರದ ನಾಯಿಯ ಯೋನಿ ಬೇಡ’ವೆಂದು ಪ್ರಾರ್ಥಿಸುತ್ತೇನೆ. ನಾನು ಹಳ್ಳಿಯ ನಾಯಿಯಾಗಿ ಜನ್ಮಪಡೆಯಬೇಕು. ನಾನು ಸ್ವಚ್ಛಂದವಾಗಿರುವ ಹೊಲಗಳಲ್ಲಿ ಸುತ್ತಾಡಬೇಕು. ಹಸುರು ಪರ್ವತದ ಗಾಳಿ ಸೇವಿಸಬೇಕು. ದಟ್ಟವಾದ ವಕ್ಷಗಳ ನೆರಳಿನಲ್ಲಿ ಕೂರಬೇಕು. ನಾಯಿಯ ಯೋನಿಯಲ್ಲಿ ಜನ್ಮ ತಳೆದಾಗ ನನ್ನಾಸೆಗಳು ಸಾಮಾನ್ಯವಾಗಿಬಿಡುತ್ತವೆ! ವಿಶ್ವದ ಶ್ರೇಷ್ಠ ಫಿಲ್ಮ್ ಡೈರೆಕ್ಟರ್ ಆಗುವ ಕನಸು ಅರ್ಥ ಹೀನವೆಂದು ಅನ್ನಿಸುತ್ತದೆ. ಪ್ರಗತಿ ಮತ್ತು ಪತನದೊಂದಿಗೆ ನನ್ನ ಸಂಬಂಧವಿರುವುದಿಲ್ಲ. ನಾನು ಓರ್ವ ಲಬಂಗಿಯನ್ನು ಬಯಸುವೆ. ಆದರೆ ನನ್ನೆದುರು ಬಾಲವಾಡಿಸುತ್ತಾ ಅನೇಕ ಲಬಂಗಿಯರು ನಿಲ್ಲುತ್ತಾರೆ!
ಸಾಬೀತಾದ ದ್ರೌಪದಿಯ ನಾಟಕ ಅಧ್ಯಾಯ – 10
ಝಾಬಾ ಬೆನ್ನು ತಿರುಗಿಸಿ ಸ್ವಲ್ಪ ದೂರದಲ್ಲಿ ನಿಂತಿದ್ದ. ಮಗುವಿನಂತೆ ಅವನು ತನ್ನ ಮುಖವನ್ನು ಎರಡೂ ಕೈಗಳ ಮಧ್ಯೆ ಮುಚ್ಚಿಕೊಂಡಿದ್ದ. ಲಬಂಗಿ ತನ್ನೆರಡೂ ಕೈಗಳಿಂದ ಕುಟ್ಟಿಯ ಕಾಲುಗಳನ್ನು ಒತ್ತಿ ಹಿಡಿದಿದ್ದಳು. ಕುಟ್ಟಿ ಮಣ್ಣಿನ ಮೇಲೆ ಮಲಗಿದ್ದ. ಅವನ ಎದೆ ಮೇಲೆ ಕೂತು ಅವನ ತೊಡೆಯಿಂದ ಗುಂಡು ತೆಗೆಯುವ ಕಷ್ಟದ ಪ್ರಯತ್ನವನ್ನು ನಾನು ಮಾಡುತ್ತಿದ್ದೆ.
ನನ್ನ ಬಳಿ ಯುವುದೇ ಅಸ್ತ್ರವಿರಲಿಲ್ಲ. ಗುಂಡು ತೆಗೆಯಲೇ ಬೇಕಿತ್ತು. ಗುಂಡು ಸ್ನಾಯುಗಳನ್ನು ಸೀಳಿ ಆಳದವರೆಗೆ ಹೋಗಿತ್ತು. ನನ್ನ ಬೆರಳುಗಳು ರಕ್ತಸಿಕ್ತವಾಗಿದ್ದವು. ಕುಟ್ಟಿ ನರಳುತ್ತಿದ್ದ ಅವನೆದೆಯಿಂದ ನಾನು ಕೆಳಗೆ ಕುಸಿಯುವ ಭಯವಿತ್ತು.
ಗುಂಡು ಹೊರತೆಗೆಯುವ ಕಟ್ಟಕಡೆಯ ಪ್ರಯಾಸವನ್ನು ಮಾಡಿದಾಗ ಕುಟ್ಟಿಯ ಗಂಟಲಿನಿಂದ ನೋವುಭರಿತ ಚೀತ್ಕಾರ ಹೊರಟಿತ್ತು. ಶಾಕ್-ಟ್ರೀಟ್ಮೆಂಟಿನ ರೋಗಿಯಂತೆ ಅವನಿಡೀ ಶರೀರ ಕಂಪಿಸಿತ್ತು. ನಾನು ಹೊರಳಿ ಬಿದ್ದೆ. ಆದರೆ ನನ್ನ ರಕ್ತಸಿಕ್ತ ಬೆರಳುಗಳ ಮಧ್ಯೆ ಗುಂಡಿತ್ತು. ಕುಟ್ಟಿ ಪ್ರಜ್ಞೆ ಕಳೆದುಕೊಂಡಿದ್ದ. ಲಬಂಗಿ ಅವನ ಗಾಯದ ಬಳಿಯಿದ್ದ ರಕ್ತವನ್ನು ಒರೆಸುತ್ತಿದ್ದಳು. ಒರೆಸಲು ಅವಳ ಬಳಿ ಒಂದು ಟವೆಲ್ ಮಾತ್ರವಿತ್ತು. ನನ್ನಿಂದ ನೋಡಲಾಗಲಿಲ್ಲ. ಕುಟ್ಟಿಯ ಪರಿಸ್ಥಿತಿಕಂಡು ಕರುಳು ‘ಚುರುಕ್’ ಎಂದಿತು. ಗುಂಡೆಸೆದು ಸಮೀಪದ ಝರಿಯೆಡೆಗೆ ಕೈತೊಳೆಯಲು ಹೋದೆ.
ಸ್ವಲ್ಪ ಸಮಯದ ಅನಂತರ ಲಬಂಗಿ ಬಂದು, ಟವೆಲ್ ಸ್ವಚ್ಛ ಮಾಡಿಕೊಂಡು ಹೊರಟುಹೋದಳು. ನಾನು ಝರಿಯ ನೀರಿಗೆ ಮೈಯನ್ನೂ ಒಡ್ಡಿದ್ದ, ನೀರು ಆಳವಿರಲಿಲ್ಲ. ನಾನು ಝರಿಯ ಕೆಳಗೆ ಕೂತೆ ಹಾಯೆನಿಸಿತು. ಸುತ್ತಮುತ್ತ ನೋಡಿದೆ, ಎಲ್ಲೆಲ್ಲೂ ಹಸುರಿತ್ತು.
ಲಬಂಗಿ ಮತ್ತೆ ಝರಿಯ ಬಳಿ ಬಂದು ಮೌನಿಯಾಗಿ ಕೂತಳು. ನಾನು ಅವಳನ್ನೇ ನೋಡಿದೆ. ಅವಳು ಉದಾಸೀನಳಾದಂತೆ ಕಂಡಿತು. ಕುಟ್ಟಿಯ ವೇದನೆ ಅವಳ ಮುಖದ ಮೇಲೂ ಇತ್ತು – ತನ್ನವರ್ಯಾರೋ ಗಾಯಗೊಂಡಿದ್ದಾರೆಂಬಂತೆ! ಲಬಂಗಿ ನಮ್ಮಿಂದ ಭಿನ್ನಳಾಗಿಲ್ಲವೆಂಬ ಭಾವನೆ ನನ್ನ ಗಮನಕ್ಕೆ ಪ್ರಥಮ ಬಾರಿಗೆ ಉಂಟಾಯಿತು.
“ಕೋಬರ್, ನಮ್ಮ ಬಳಿ ಹದೆನೈದು ಸಾವಿರ ನಗದು ಹಣವಿದೆ. ಆದರೆ ಈಗ ಅದರಿಂದೇನು ಉಪಯೋಗವಿಲ್ಲ, ಕುಟ್ಟಿಯನ್ನು, ವೈದ್ಯರ ಬಳಿ ಕರೆದೊಯ್ದು ಬ್ಯಾಂಡೇಜ್ ಸಹ ಹಾಕಿಸಲಾರೆವು”. ಲಬಂಗಿ ನನ್ನನ್ನೇ ನೋಡಿದಳು.
“ಕುಟ್ಟಿ ಒಂದು ವಾರದಲ್ಲಿ ಸುಧಾರಿಸಿಕೊಳ್ತಾನೆ.” ನಾನು ಭರವಸೆ ನೀಡಿದ.
“ಮತ್ತೆ ಈ ವಾರ ಕಳೆಯುವುದು ಹೇಗೆ”?
“ವಾರವಿಡೀ ನಾವು ಕಾಡಿನಲ್ಲಿ ಉಳಿಯಬೇಕಾಗುತ್ತೆ. ಅದೃಷ್ಟ ಖುಲಾಯಿಸಿದರೆ ಅಕ್ಕಪಕ್ಕದ ಬೆಟ್ಟಗಳ ಇಳಿಜಾರಿನಲ್ಲಿ ಯಾವುದಾದರೂ ಆದಿವಾಸಿಗಳ ಗುಡಿಸಲು ಸಿಗಬಹುದು! ಆಮೇಲೆ ಯೋಚ್ನೇ ಇರಲ್ಲ.”
ಆದರೆ ನನ್ನ ಈ ಮಾತಿನಲ್ಲಿ ನನಗೇ ನಂಬಿಕೆಯಿರಲಿಲ್ಲ. ಆದರೂ ಆದಿವಾಸಿಗಳ ಗುಡಿಸಲು ಸಿಕ್ಕರೆ ನಮ್ಮ ವಾಸಕ್ಕೆ ಹಾಗೂ ಊಟಕ್ಕೆ ಸಮಸ್ಯೆಯಿರುವುದಿಲ್ಲವೆಂಬುದು ನಿಜವಾಗಿತ್ತು. ಈ ಕಾಡಿನಲ್ಲಿ ಸೂರಿಲ್ಲದೆ ವಾಸಿಸುವುದು ಕಷ್ಟವಾಗಿತ್ತು.
ಝರಿಯನ್ನು ಬಿಟ್ಟು ಲಬಂಗಿಯ ಬಳಿಗೆ ಬಂದೆ.
“ಕೋಬರ್, ನಿಜವಾದ ಪ್ರೀತಿಯೆಂದರೇನು?” ಲಬಂಗಿ ಎದ್ದುನಿಂತು ನನ್ನ ನೆನೆದ ಎದೆಯ ಮೇಲೆ ತಲೆಯಿಟ್ಟಳು.
“ಎಲ್ಲಿ ಯಾವುದೇ ಸ್ವಾರ್ಥಿವಿಲ್ಲವೋ ಅದೇ ಪ್ರೀತಿ, ಇವತ್ತು ಕುಟ್ಟಿಗೆ ನೀನು ಮಾಡಿದ ಸೇವೆಯನ್ನು ಕಂಡು ನನಗೆ ಸ್ವಚ್ಛ ಪ್ರೀತಿಯ ದರ್ಶನವಾಯಿತು”
ಲಬಂಗಿ ಮುಖವೆತ್ತಿ ನನ್ನನ್ನೇ ನೋಡಿದಳು. ಅವಳ ಕಣ್ಣುಗಳಲ್ಲಿ ನನಗೆ ಭಗ್ನಾವಶೇಷಗಳು ಕಾಣಿಸಿದವು. ಬಹುಶಃ ಈ ಯುವತಿಗೆ ವಾಸ್ತವಿಕ ಪ್ರೀತಿ ದೊರೆತಿರಲಾರದು! ಬಹುಶಃ ಇವಳ ಬದುಕಿನಲ್ಲಿ ಬಂದ ಪ್ರತಿಯೊಬ್ಪನೂ ಇವಳಿಗೆ ಮೋಸ ಮಾಡಿರಬಹುದು! ಆದರೆ ನನಗೆ ಲಬಂಗಿಯ ಭೂತಕಾಲದ ಬಗ್ಗೆ ಏನೂ ತಿಳಿದಿರಲಿಲ್ಲ. ತೀಳಿಯಲು ಬಯಸಿದಾಗ ಅವಳು ನಕ್ಕು ವಿಷಯಾಂತರ ಮಾಡಿಬಿಡುತ್ತಿದ್ದಳು.
ಕುಟ್ಟಿಗೆ ಇನ್ನೂ ಪ್ರಜ್ಞೆ ಬಂದಿರಲಿಲ್ಲ. ಝಾಬಾನನ್ನು ಅವನ ಬಳಿಯೇ ಕೂರಿಸಿದ್ದೆವು. ಅವನು ಕಾಣಿಸದಿದ್ದಾಗ ಸುತ್ತಲೂ ದೃಷ್ಟಿ ಹರಿಸಿದವು. ಕಾಡು ದಟ್ಟವಾಗಿದ್ದರಿಂದ ಹೆಚ್ಚು ದೂರ ನೋಡಲು ಸಾಧ್ಯವಿರಲಿಲ್ಲ. ಲಬಂಗಿಯನ್ನು, ಕುಟ್ಟಿಯ ಬಳಿ ಬಿಟ್ಟು ನಾನು ಸಾಕಷ್ಟು ದೂರ ಹೋಗಿ ಹುಡುಕಿ ಬಂದೆ. ಝಾಬಾ ಕಣ್ಮೆರೆಯಾಗಿದ್ದ. ಅವನಲ್ಲಿಗೆ ಹೋದ? ಅವನು ವಾಸ್ತವವಾಗಿಯೂ ಕಣ್ಮರೆಯಾಗಿದ್ದರೆ ನಮ್ಮ ಸಮಸ್ಯೆ ಮತ್ತಷ್ಟು ಜಟಿಲವಾಗುತ್ತದೆ…
ನಾನು ಮತ್ತೂ ಯೋಚಿಸುವುದಕ್ಕೆ ಮೊದಲು ಝಾಬಾ ಕಾಲುಹಾದಿಯಲ್ಲಿ ಕುಣಿಯುತ್ತಾ ಬರುವುದು ಕಾಣಿಸಿತು. ಅವನ ನಡಿಗೆಯಿಂದ ಅವನು ಮಹಾನ್ ಸಂಶೋಧನೆ ಮಾಡಿ ಬಂದಿದ್ದಾನೆಂದು ತೋರುತ್ತಿತ್ತು. ಅವನು ಸಮೀಪಕ್ಕೆ ಬಂದಾಗ ಅವನ ಸಂಶೋಧನೆ ವಾಸ್ತವವಾಗಿಯೂ ಶ್ರೇಷ್ಠವಾಗಿತ್ತು ಎಂದನ್ನಿಸಿತು. ಕಾಡಿನಲ್ಲಿ ಅವನು ಹಣ್ಣುಗಳನ್ನರಸುತ್ತಾ ಹೋಗಿದ್ದ. ಅವನ ದೃಷ್ಟಿ ಓರ್ವ ಆದಿವಾಸಿ ಮಹಿಳೆಯ ಮೇಲೆ ಬಿತ್ತು. ಅವಳನ್ನು ಹಿಂಬಾಲಿಸಿಕೊಂಡು ಹೋಗಿ ಅವಳ ಮನೆಯನ್ನು ನೋಡಿಕೊಂಡು ಬಂದಿದ್ದ.
ಲಬಂಗಿ ಕುಣಿದು ಕುಪ್ಪಳಿಸುತ್ತಾ ಝಾಬಾನಿಗೆ ಮುತ್ತಿನ ಮಳೆಗರೆದಳು, ತನ್ನ ಖಷಿಯನ್ನು ವ್ಯಕ್ತಪಡಿಸುವ ಅವಳ ಈ ವಿಧಾನ ವಾಸ್ತವವಾಗಿಯೂ ಅದ್ಭುತವಾಗಿತ್ತು. ಕೂಡಲೇ ನಾವು ಸಿದ್ಧರಾಗಿ ಝಾಬಾನನ್ನು ಹಿಂಬಾಲಿಸಿದೆವು. ಝಾಬಾ, ತನ್ನೆರಡೂ ಕೈಗಳಿಂದ ಕುಟ್ಟಿಯನ್ನು ಮಗುವಿನಂತೆ ಎತ್ತಿಕೊಂಡಿದ್ದ. ನಾನೊಂದು ಚೀಲವನ್ನು ಹೆಗಲ ಮೇಲಿಟ್ಟುಕೊಂಡೆ. ಲಬಂಗಿಯೂ ಒಂದು ಚೀಲವನ್ನು ತನ್ನ
ಹೆಗಲಮೇಲಿಟ್ಟುಕೊಂಡಳು.
ಹೀಗೆ ಸಾಗುವಾಗ ನನ್ನ ಗಮನ ಕುಟ್ಟಿಯ ಗಾಯದಮೇಲೆ ಬಿತ್ತು. ಲಬಂಗಿ ಗಾಯದ ಮೇಲೆ ಯಾವುದೋ ಮರದ ಚಿಗುರೆಲೆಗಳನ್ನಿಟ್ಟು, ಅದರ ಮೇಲೆ ಒದ್ದೆಯಾದ ಟವೆಲ್ ಇಟ್ಟು, ಅದರ ಮೇಲೆ ಬಳ್ಳಿಯೊಂದನ್ನು ಕಟ್ಟಿದ್ದಳು ನಾನು ಮತ್ತೊಮ್ಮೆ ಲಬಂಗಿಗೆ ಮನಸ್ಸಿನಲ್ಲೇ ವಂದಿಸಿದೆ.
ಒಂದೂವರೆ ಗಂಟೆ ಪ್ರಯಾಣದ ಅನಂತರ, ಸೂರ್ಯಾಸ್ತದ ವೇಳೆಗೆ ನಾವು ಆದಿವಾಸಿಯ ಮನೆಯ ಸಮೀಪಕ್ಕೆ ಬಂದೆವು. ದೂರದಿಂದಲೇ ನಮ್ಮನ್ನು ನೋಡಿದ ಆದಿವಾಸಿಯ ಪರಿವಾರ ಬಾಗಿಲ ಬಳಿ ಬಂದು ಜಮಾಯಿಸಿತ್ತು. ಆ ಪರಿವಾರದಲ್ಲಿ ಗಂಡ-ಹೆಂಡತಿ ಮತ್ತು ಅವರ ಆರು ಜನ ಮಕ್ಕಳಿದ್ದವು. ಅವರಲ್ಲಿ, ಹದಿನಾರನ್ನು ದಾಟಿದ ಒಬ್ಪ ಮಗಳೂ ಇದ್ದಳು. ಅವಳ ವೃಕ್ಷಸ್ಥಳ ನೋಡಿದರೆ ಅವಳಿಗೆ ಹದಿನಾರು ವರ್ಷವಾಗಿದೆ ಎಂದು ಊಹಿಸಬಹುದಿತ್ತು. ಅವಳು ಬಟ್ಟೆ ತುಂಡನ್ನು ಸೊಂಟದ ಮೇಲೆ ಮಾತ್ರ ಸುತ್ತಿಕೊಂಡಿದ್ದಳು.
ಒರಿಸ್ಸಾದ ಒರಿಯಾ ಭಾಷೆಯಲ್ಲಿ ನಾನು ಗಂಡನೊಂದಿಗೆ ಮಾತಿಗಾರಂಭಿಸಿದೆ. ಅವನಿಗೆ ಹಿಂದಿಯೂ ಬರುವ ವಿಷಯ ತಿಳಿಯಿತು. ನನಗೆ ಒರಿಯಾ ಅಷ್ಟು ಚೆನ್ನಾಗಿ ಬರುತ್ತಿರಲಿಲ್ಲ. ಹೀಗಾಗಿ ಎರಡೂ ಭಾಷೆಗಳ ಮಿಶ್ರಣ ಮಾಡಿ ನಮ್ಮ ಸಮಸ್ಯೆಯನ್ನು ಅವನದುರಿಗಿಟ್ಟೆ. ಒಂದರಡು ವಾರ ಇಲ್ಲೇ ಬಿಡಾರ ಹೂಡುವುದಾಗಿಯೂ, ಅದಕ್ಕೆ ಪ್ರತಿಯಾಗಿ ಅವನು ಕೇಳುವಷ್ಟು ಹಣ ಕೊಡುವುದಾಗಿಯೂ ಹೇಳಿದೆ.
ಅವನು ನನ್ನ ಮಾತುಗಳನ್ನು ಗಮನವಿಟ್ಟು ಕೇಳಿದ. ಅನಂತರ ತನ್ನ ಭಾಷೆಯಲ್ಲಿ ಹೆಂಡತಿಗೆ ವಿಷಯ ತಿಳಿಸಿದ. ಹೆಂಡತಿ ಅವನನ್ನು ಏನೋ ಪ್ರಶ್ನಿಸಿದಳು. ಕಡೆಗೆ ಅವನು ನನ್ನನ್ನೇ ನೋಡುತ್ತಾ, “ನಿಮ್ಮೊಂದಿಗಿರುವ ಹುಡುಗಿ ಯಾರು?” ಎಂದು ಪ್ರಶ್ನಿಸಿದ.
“ಹೆಂಡತಿ” ಲಬಂಗಿ ಕೂಡಲೇ ಹೇಳಿದಳು.
“ಯಾರ ಹೆಂಡತಿ?” ತನ್ನ ಹೆಂಡತಿಯ ಕುತೂಹಲವನ್ನು ಶಾಂತಗೊಳಿಸಲು ಅವನು ಮತ್ತೆ ಪ್ರಶ್ನಿಸಿದ.
ಉತ್ತರದಲ್ಲಿ ಲಬಂಗಿ, ಮೂವರೆಡೆಗೂ ಸಂಜ್ಞೆ ಮಾಡಿದಳು.
ಆದಿವಾಸಿ ಮತ್ತು ಅವನ ಹೆಂಡತಿ ಲಬಂಗಿಯನ್ನೇ ಆಶ್ಚರ್ಯದಿಂದ ನೋಡಿದರು.
ತಾನು ನಿಜವಾಗಿಯೂ ಹೆಂಡತಿಯೆನ್ನುವುದನ್ನು ಅಂದು ರಾತ್ರಿ ಲಬಂಗಿ ರುಜುವಾತು ಮಾಡಿದಳು.
ಅಂದು ರಾತ್ರಿ ನನ್ನೊಂದಿಗೆ ಮಲಗುವ ಆಸೆಯನ್ನು ಅವಳು ವ್ಯಕ್ತಪಡಿಸಿದಳು. ಆದಿವಾಸಿಯ ಗುಡಿಸಲು ಹೆಚ್ಜು ದೊಡ್ಡೆದಿರಲಿಲ್ಲ. ಗುಡಿಸಲು ಒಳಭಾಗದಿಂದ ಮೂರು ಭಾಗಗಳಲ್ಲಿ ಹಂಚಿಹೋಗಿತ್ತು. ಮಲಗಲು ಹುಲ್ಲಿನ ಮಂಚಗಳಿದ್ದವು.
ಕುಟ್ಟಿಯ ಬಳಿ ಝಾಬಾನನ್ನು ಮಲಗಿಸಿ ನಾನು ಮತ್ತು ಲಬಂಗಿ ಪಕ್ಕದ ಕೋಣೆಗೆ ಹೊರಟೆವು. ಆದಿವಾಸಿಯ ಹೆಂಡತಿ ನೀರಿನ ಒಂದು ಕೊಡ ಮತ್ತು ಮಣ್ಣಿನ ಲೋಟವೊಂದನ್ನು ಇಟ್ಟು ಹೋದಳು. ಹೊರಡುವುದಕ್ಕೂ ಮೊದಲು ಅವಳು ಮಧ್ಯದ ಬಾಗಿಲನ್ನು ಮುಚ್ಚಿಕೊಂಡು ಹೋದಳು.
“ಕೋಬರ್!” ನನ್ನ ಪಕ್ಕದಲ್ಲಿ ಮಲಗಿದ್ದ ಲಬಂಗಿ ಮೆಲ್ಲನೆ ತುಟಿ ತೆರೆದಳು, “ಬಹುಶಃ ನೀವೆಲ್ಲಾ, ನಾನು ನಾಟಕ ಮಾಡ್ತಿದ್ದೀನಿ ಅಂತ ತಿಳಿದುಕೊಂಡಿರಬೇಕು.”
“ಎಂಥಾ ನಾಟಕ?” ನಾನು ಅರ್ಥವಾಗದವನಂತೆ ನಟಿಸಿದೆ.
“ದ್ರೌಪದಿಯ ನಾಟಕ. ಆಪರೇಷನ್ ಗೆಸ್ಟ್ ಹೌಸ್, ಸಕ್ಸಸ್ ಆದ ಮೇಲೆ ನಾನು ನಿಮ್ಮ ಮೂವರ ಹೆಂಡತಿಯಾಗ್ತೀನಿ ಅಂತ ಮಾತು ಕೊಟ್ಟಿದ್ದೆ. ಇವತ್ತು ಅದನ್ನು ಸಾಬೀತು ಮಾಡಿ ತೋರಿಸ್ತೀನಿ!”
ಗುಡಿಸಲನ್ನು ಬಿದಿರು ಮತ್ತು ಹುಲ್ಲಿನಿಂದ ಕಟ್ಟಲಾಗಿತ್ತು. ಗೋಡೆಗಳಿಗೆ ಸಗಣಿಯನ್ನು ಮೆತ್ತಲಾಗಿತ್ತು. ನಮ್ಮ ಕೋಣೆಯಲ್ಲಿ ಕಿಟಕಿಗೆ ಬದಲಾಗಿ ಒಂದು ಬೆಳಕಿಂಡಿಯಿತ್ತು. ಅಲ್ಲಿಂದ ಮಂದವಾಗಿ ಗಾಳಿ ಬರುತ್ತಿತ್ತು. ಆಕಾಶದ ಒಂದು ಬಿಳಿ ತುಂಡೂ ಕಾಣಿಸುತ್ತಿತ್ತು. ಇಂಥದೇ ಒಂದು ಬಿಳಿ ತುಂಡಿನಂತಹ ಲಬಂಗಿಯ ಶರೀರ ನನ್ನ ಪಕ್ಕದಲ್ಲಿ ಸರ್ಪಿಣಿಯಂತೆ ಒಲಿದು ಮಣಿದಿತ್ತು.
ಆದಿವಾಸಿಯ ಹೆಸರು ಮೋಗೂ ಆಗಿದ್ದು ಅವನ ವಯಸ್ಸು ಸುಮಾರು ನಲವತ್ತೈದನ್ನು ಸಮೀಪಿಸುತ್ತಿತ್ತು. ಆದರೆ ಅವನಾಗಲೇ ವೃದ್ಧನಂತೆ ಕಾಣಿಸುತ್ತಿದ್ದ. ತಲೆಗೂದಲುಗಳೆಲ್ಲಾ ಶ್ವೇತವರ್ಣಕ್ಕೆ ತಿರುಗಿದ್ದವು. ಅವನ ಮುಖದಲ್ಲಿ ಮುಳ್ಳಿನಂತಹ ಗಡ್ಡವಿತ್ತು. ಹಣೆ ಮತ್ತು ಗಲ್ಲಗಳಲ್ಲಿ ಸುಕ್ಕುಗಳಿದ್ದವು. ಕಣ್ಣುಗಳು ಹೂತು ಹೋಗಿದ್ದವು. ಆದರೆ ಅವನ ಕಣ್ಣುಗಳಲ್ಲಿ ಒಂದು ರೀತಿಯ ಕಾಂತಿಯಿತ್ತು. ಇದೇ ಜೀವನದ ಚಿಹ್ನೆಯಾಗಿತ್ತು. ಅವನು ಕಪ್ಪನೆಯ ಒಳ ಅಂಗಿಯ ಮೇಲೆ ಟವೆಲ್ ಧರಿಸಿದ್ದ.
ಬೆಳಗ್ಗೆ ಅವನ ಕೈಯನ್ನು ನೋಡಿದಾಗ ಅದರ ಮೇಲೆ ಅನೇಕ ಗುರುತುಗಳಿದ್ದವು. ಕಾರಣ ವಿಚಾರಿಸಿದಾಗ, ಅವನು ಹೇಳಿದ್ದ. “ಸ್ವಾಮಿ, ಕಾಡಿನಲ್ಲಿ ಜೀವಂತ ಹಾವುಗಳನ್ನು ಹಿಡಿದು ನಗರಗಳಲ್ಲಿ ಮಾರೋದು ನನ್ನ ಕೆಲಸ. ಒಂದೊಂದು ಸಲ ಹಾವುಗಳು ಸರಿಯಾಗಿ ಕೈಗೆ ಸಿಕ್ಕದ ಕಚ್ಚಿ ಬಿಡುತ್ತವೆ. ಈ ಗುರುತುಗಳೆಲ್ಲಾ ಹಾವು ಕಚ್ಚಿದ್ದಕ್ಕೆ ಆಗಿವೆ.”
ಅವನು ಬಲಗೈಯನ್ನು ನನ್ನೆದುರಿಗೆ ಹಿಡಿದ. ಸ್ವಲ್ಪ ದೂರದಲ್ಲಿ ಧೂಳಿನಲ್ಲಿ ಆಡುತ್ತಿದ್ದ ಅವನ ಮೂವರು ಮಕ್ಕಳು ಕುತೂಹಲದಿಂದ ನಮ್ಮ ಬಳಿಗೆ ಓಡಿ ಬಂದವು. ಅವನು ಬೆಲ್ಲದ ಮೇಲಿನ ನೊಣ ಓಡಿಸುವವನಂತೆ ಆ ಮೂರು ಮಕ್ಕಳನ್ನೂ, ಓಡಿಸಿ ಮತ್ತೆ ನನ್ನೆದುರು ಕೈ ಚಾಚಿದ.
ನಾನು ಸಮೀಪದಿಂದ ಗಮನಿಸಿದಾಗ ಮೊಣ ಕೈಯಿಂದ ಮಣಿಕಟ್ಟಿನವರೆಗೆ ಮತ್ತೂ ಕೆಲವು ಗುರುತುಗಳು ಕಾಣಿಸಿದವು.
“ನಿಮಗೆ ಹಾವಿನ ವಿಷವೇರುವುದಿಲ್ಲವೇ?” ನಾನು ಪ್ರಶ್ನಿಸಿದೆ.
“ವಿಷ ತೆಗೆಯುವುದೂ ನಮಗೆ ಗೊತ್ತು. ಹಾಗಂತ ಹೆಚ್ಚು ಹಾವುಗಳು ವಿಷಪೂರಿತವಲ್ಲ. ಬನ್ನಿ ಸ್ವಾಮಿ! ನಾನು ನಿಮಗೆ ಕೆಲವು ಹಾವುಗಳನ್ನು ತೋರಿಸ್ತೀನಿ.”
ನಾನು ಅವನೊಂದಿಗೆ ಗುಡಿಸಿಲಿನೊಳಗೆ ಹೋದೆ. ನಿನ್ನೆ ನಾವು ಸಂಜೆ ತಡವಾಗಿ ಬಂದಾಗ ಗುಡಿಸಿಲಿನಲ್ಲಿ ದೀಪವೊಂದು ಉರಿಯುತ್ತಿತ್ತು. ಅದರ ಬೆಳಕಿನಲ್ಲಿ ನಮಗೇನೂ ಸ್ಪಷ್ಟವಾಗಿ ಕಾಣಿಸಿರಲಿಲ್ಲ.
ಈಗ ಕೋಣೆಯಲ್ಲಿ ಚಿಕ್ಕ-ದೊಡ್ಡ ಅನೇಕ ಬುಟ್ಟಿಗಳು ಕವುಚಿ ಬಿದ್ದಿರುವುದನ್ನು ನೋಡಿದೆ. ನಿನ್ನೆ ರಾತ್ರಿ ನಾನು ಕಳೆದಿದ್ದ ಕೋಣೆಯಲ್ಲಿಯೂ ಇಂಥ ಬುಟ್ಟಿಗಳನ್ನು ನೋಡಿದ್ದೆ. ಆದರೆ ಅವುಗಳ ಬಗ್ಗೆ ಗಮನ ಕೊಟ್ಟಿರಲಿಲ್ಲ. ಮೋಗೂ ಒಂದೊಂದೇ ಬುಟ್ಟಿಗಳನ್ನು ತೆರೆದು ತೋರಿಸಿದಾಗ ನನಗೆ ಉಸಿರು ಕಟ್ಟಿದಂತಾಯಿತು. ಪ್ರತಿಯೊಂದು ಬುಟ್ಟಿಯ ಒಳಗೂ ಒಂದೊಂದು ಹಾವು. ಸುರಳಿ ಸುತ್ತಿಕೊಂಡು ಬಿದ್ದಿದ್ವು ಮರೆತೂ, ನಾನೋ ಅಥವಾ ಲಬಂಗಿಯೋ ಯುವುದಾದರೂ ಬುಟ್ಟಿಯನ್ನು ಮೇಲೆತ್ತಿದ್ದರೆ ನಮಗೆ ಆಫಾತವಾಗುತ್ತಿತ್ತು.
“ನಗರದಲ್ಲಿ ಈ ಹಾವುಗಳನ್ನು ಯುರು ಕೊಳ್ಳುತ್ತಾರೆಡ?” ಮರಳಿ ಬಂದು ಜಾಪೆ ಮೇಲೆ ಕೂರುತ್ತಾ ನಾನು ಪ್ರಶ್ನಿಸಿದೆ.
“ನಗರದಲ್ಲಿ ಕೆಲವು ಅಂಗಡಿಗಳು ಹಾವಿನ ಚರ್ಮದ ಬೆಲ್ಟ್ ಮತ್ತು ಪರ್ಸ್ಗಳನ್ನು ತಯಾರಿಸುತ್ತವೆ. ಒಮ್ಮೊಮ್ಮೆ ವಿಶೇಷ ರೀತಿಯ ಹಾವುಗಳು ಸಿಕ್ಕರೆ ಮೃಗಾಲಯದವರೂ ಕೊಳ್ತಾರೆ.”
ಮೋಗೂವಿನ ಜ್ಯೇಷ್ಠಪುತ್ರಿ ಹಾಲಿನ ಪಾತ್ರೆ ಮತ್ತು ಮಣ್ಣಿನ ಎರಡು ಪಾತ್ರೆಗಳನ್ನು ಚಾಪೆಯ ಮೇಲಿಟ್ಟು ಹೋದಳು. ಮೋಗೂ ಎರಡೂ ಪಾತ್ರೆಗಳಿಗೆ ಹಾಲು ಸುರಿದು ಒಂದನ್ನು ನನ್ನೆದುರಿಗಿಟ್ಟ. ಒಂದೇ ಉಸಿರಿಗೆ ನಾನು ಹಾಲನ್ನು ಕುಡಿದೆ. ಅನಂತರ ನಾನೇ ಮತ್ತೆ ಹಾಲು ತುಂಬಿಕೊಂಡೆ. ಮೋಗೂವಿನ ಪುತ್ರಿ ಮತ್ತೆ ಬಂದು ಸಜ್ಜೆಯ ಎರಡು ರೊಟ್ಟಿಗಳನ್ನಿಟ್ಟು ನಮ್ಮೆದುರೇ ಮೊಣಕಾಲೂರಿ ಕೂತಳು.
ಲಬಂಗಿ, ಝಾಬಾ ಮತ್ತು ಕುಟ್ಟಿಯ ಬಳಿ ಕೂತಿದ್ದಳು. ಈಗ ನಮಗೆ ಕುಟ್ಟಿಯ ಚಿಂತೆಯಿರಲಿಲ್ಲ. ಅವನ ಗಾಯಕ್ಕೆ ಮೋಗೂ ಕಾಡಿನ ಕೆಲವು ಗಿಡಗಳ ಎಲೆಗಳನ್ನು ಅರೆದು ಹಚ್ಚಿದ್ದ. ಮೋಗೂವಿನ ಪ್ರಕಾರ ಕುಟ್ಟಿ ಒಂದರೆಡು ದಿನಗಳಲ್ಲಿ ಓಡಾಡಲು ಸಾಧ್ಯವಿತ್ತು.
“ಕುಟ್ಟಿ, ನಿನ್ನ ಬಗ್ಗೆ ಕೇಳ್ತಿದ್ದಾನೆ” ಲಬಂಗಿ ಹೊರಬಂದು ಹೇಳಿದಳು.
ನನಗಾಶ್ಚರ್ಯವಾಯಿತು. ನಿನ್ನೆಯಿಂದ ಕುಟ್ಟಿಗೆ ಪ್ರಜ್ಞೆ ಬಂದಿರಲಿಲ್ಲ.
“ಅವನಿಗೆ ಯಾವಾಗ ಪ್ರಜ್ಞೆ ಬಂತು?” ಹಾಲಿನೊಂದಿಗೆ ಸಜ್ಜೆರೊಟ್ಟಿಯನ್ನು ತಿಂದು ಮುಗಿಸಿ ಲಬಂಗಿಯನ್ನ ನೋಡಿದೆ.
“ಹತ್ತು ನಿಮಿಷಗಳಾಗಿರಬೇಕು.”
ನಾನು ಕುಟ್ಟಿಯಿದ್ದ ಕೋಣೆಗೆ ಹೋದೆ. ಅವನು ತುಂಬಾ ಸುಧಾರಿಸಿದಂತೆ ಕಂಡ. ಹುಲ್ಲಿನ ಹಾಸಿಗೆಯಲ್ಲಿ ಅವನು ನೆಮ್ಮದಿಯಿಂದ ಮಲಗಿದ್ದ. ಝಾಬಾ ಅವನೆದುರು ಪದ್ಮಾಸನ ಹಾಕಿ ಕೂತಿದ್ದ. ಝಾಬಾನಿಗೆ ಇಲ್ಲಿಯ ವಾತಾವರಣ ತುಂಬಾ ಹಿಡಿಸಿಬಿಟ್ಟಿತ್ತು ಇಲ್ಲಿಗೆ ಬಂದ ಮೇಲೆ ಅವನ ಹಸಿವೂ ಹೆಚ್ಚಾಗಿತ್ತು. ನಿನ್ನೆ ರಾತ್ರಿ ಎರಡು ಚೊಂಬು ಹಾಲು ಕುಡಿದಿದ್ದ; ಮೂರು ರೊಟ್ಟಿಗಳನ್ನೂ ಸ್ವಾಹಾ ಮಾಡಿದ್ದ. ಜತೆಗೇ, ಒಂದು ಗೊನೆ ಬಾಳೆಹಣ್ಣುಗಳನ್ನೂ ತಿಂದಿದ್ದ.
“ಹಲೋ!” ಕುಟ್ಟಿಯ ಬಳಿ ಮುಗುಳ್ನಗುತ್ತಾ ಕೂತೆ.
“ಬ್ಯಾನರ್ಜಿಯ ಸಮಾಚಾರವೇನು?” ಕುಟ್ಟಿ ಕೂಡಲೇ ಪ್ರಶ್ನಿಸಿದ್ದ.
“ನಮ್ಮ ಸುಳಿವು ಅವನಿಗೆ ಸಿಕ್ಕಿಲ್ಲ ಅಂತ ಕಾಣಿಸುತ್ತೆ.”
“ಈಗೇನು ಮಾಡೋದು?”
“ನಿನ್ನ ಆರೋಗ್ಯ ಸುಧಾರಿಸಿದ್ದರೆ ಇಲ್ಲಿಂದ ಹೋಗೋಣ.”
“ಎಲ್ಲಿಗೆ ಹೋಗೋಣ?”
“ಕಲ್ಕತ್ತಾ ಮಾರ್ಗವಾಗಿ ಬೊಂಬಾಯಿಗೆ.”
“ನಮ್ಮ ಅರ್ಧಂಬರ್ಧ ಫಿಲ್ಮ್ನ ಗತಿಯೇನು?”
“ಲೊಕೇಶನ್ ಬದಲಾಯಿಸಬೇಕಾಗುತ್ತೆ.”
ಕುಟ್ಟಿಯ ಮುಖದಲ್ಲಿ ನಿರಾಸೆ ಕವಿಯಿತು.
“ಕುಟ್ಟಿ| ಲಬಂಗಿ ನಮ್ಮ ಮೂವರ ಹೆಂಡತಿಯಾಗ್ತೀನಿ ಅಂತ ತಮಾಷೆ ಮಾಡಿದ್ದು ನಿನಗೆ ನೆನಪಿದೆಯಾ!” ನಾನು ವಿಷಯಾಂತರಿಸಿದೆ.
“ಈಗೇನಾಯ್ತು?”
“ಅದು ತಮಾಷೆಯಾಗಿರಲಿಲ್ಲ.”
“ಏನಂದೆ!!!” ಎನ್ನುತ್ತಾ ಅವನು ಎದ್ದು ಕೂರಲಾರಂಭಿಸಿದ. ನಾನು ಅವನನ್ನು ಹಾಗೆಯೇ ಮಲಗಿಸಿದೆ. ಝಾಬಾನಿಗೂ ಆಶ್ಚರ್ಯವಾಗಿತ್ತು.
“ಏನಂದೆ? ಏನಂದೆ?” ಮತ್ತೆ ಕುಟ್ಟಿ ಪ್ರಶ್ನಿಸಿದ.
“ಮೂರ್ಖ! ನಿನ್ನೆ ರಾತ್ರಿ ನಾವಿಬ್ಪರೂ ಬೇರೆ ಕೋಣೆಯಲ್ಲಿ ಮಲಗಿದ್ದೆವು. ಇದು ನಿನಗೆ ಗೊತ್ತಿಲ್ವಾ?”
“ಇಲ್ಲಿ ಇಕ್ಕಟ್ಟು ಅದಕ್ಕೆ ನೀವಲ್ಲಿ ಮಲಗಿರಬಹುದೆಂದುಕೊಂಡಿದ್ದೆ.”
“ಹೋಗ್ಲಿ, ಇವತ್ತು ರಾತ್ರಿ ನಿನ್ನ ಸರದಿ!” ನಾನು ಝಾಬಾನೆಡೆಗೆ ನೋಡಿದೆ.
“ಆದ್ರೆ ನಾನು ಬಾಲಬ್ರಹ್ಮಚಾರಿ!” ಮಗುವಿನಂತೆ ಮುಗ್ಧನಾಗಿ ಝಾಬಾ ಹೇಳಿದ.
ಮೂರು ದಿನಗಳು ನೋಡು-ನೋಡುತ್ತಿದ್ದಂತೆಯೇ ಕಳೆದು ಹೋಯಿತು. ನಾವೀಗ ನಿಶ್ಚಿಂತರಾದೆವು. ಬ್ಯಾನರ್ಜಿ, ನಮ್ಮ ಪತ್ತೆ ಮಾಡದಾದ; ಇಲ್ಲದಿದ್ದರೆ ಇಲ್ಲಿಯವರೆಗೆ ಬರಲು ಅವನಿಗೆ ಕಷ್ಟವೇನಿರಲಿಲ್ಲವೆಂಬ ನಂಬಿಕೆ ನಮಗಾಯಿತು.
ಅಪಾಯದ ಮುನ್ಸೂಚನೆ ಅಧ್ಯಾಯ – 11
ಈ ಮೂರು ದಿನಗಳಲ್ಲಿ ಹೇಳಿಕೊಳ್ಳುವಂತಹ ಘಟನೆಗಳೇನೂ ಸಂಭವಿಸಿರಲಿಲ್ಲ. ಝಾಬಾ, ಈಗ ಬಾಲಬ್ರಹ್ಮಚಾರಿಯಾಗಿ ಉಳಿದಿರಲಿಲ್ಲ ; ಹಾಗಂತ ಹೇಳಿಕೊಳ್ಳಲೂ ಈಗ ಅಯೋಗ್ಯನಾಗಿದ್ದ. ಅವನು ಸಂಪೂರ್ಣ ಪತನವಾಗಿದ್ದರೂ ಅವನು ಖುಷಿಯಾಗಿದ್ದ. ಅವನ ‘ಮೂಡಿ’ ಸ್ವಭಾವದಲ್ಲಿ ಗಣನೀಯ ಪರಿವರ್ತನೆ ಕಂಡುಬರುತ್ತಿತ್ತು. ಅಕಸ್ಮಾತ್ ಅವನು ಎತ್ತರವಾದ ಮರದ ಕೊಂಬೆಯ ಮೇಲೆ ಕೂತು ಗೋರಿಲ್ಲಾದಂತೆ ಕಿರುಚುತ್ತಿದ್ದ.
ಕುಟ್ಟಿ ನಡೆಯಲು ಯೋಗ್ಯನಾದ. ಆದಿವಾಸಿ ಮೋಗೂವಿನ ಔಷಧಿ ರಾಮಬಾಣದಂತೆ ಕೆಲಸಮಾಡಿತ್ತು. ಗಾಯ ಮಾಗಲು ಪ್ರಾರಂಭವಾಗಿತ್ತು. ಆದರೆ ದುರ್ಬಲತೆ ಇನ್ನೂ ಇತ್ತು. ಹೆಚ್ಜು ನಡೆದರೆ ಆಯಾಸವಾಗುತ್ತಿತ್ತು.
ಈ ಮೂರು ದಿನಗಳಲ್ಲಿ ಮೋಗೂ ಎರಡು ಹೊಸ ಹಾವುಗಳನ್ನು ಹಿಡಿದು ತಂದಿದ್ದ ಇವುಗಳಲ್ಲಿ ಒಂದು ಹಾವು ಕೆಂಪು, ಹಳದಿ ಮತ್ತು ಕಪ್ಪು ಗೆರೆಗಳನ್ನು ಹೊಂದಿತ್ತು. ಇಂತಹ ಸುಂದರವಾದ ಹಾವನ್ನು ನಾನು ನೋಡಿರಲೇ ಇಲ್ಲ. ಲಬಂಗಿಗೆ ಈ ಹಾವು ಎಷ್ಟು ಇಷ್ಟವಾಯಿತೆಂದರೆ ಅವಳು ಅದನ್ನು ಖರೀದಿಸಿ ಕತ್ತಿಗೆ ಶಾಲಿನಂತೆ ಹಾಕಿಕೊಂಡಳು. ಆ ಹಾವು ವಿಷಪೂರಿತವಾಗಿರಲಿಲ್ಲ. ಆದರೆ ಲಬಂಗಿ ವಿಷಪೂರಿತಳಾಗಿದ್ದಳು. ಲಬಂಗಿಯ ವಿಷ ನನ್ನ ಮತ್ತು ಝಾಬಾನ ರೋಮಗಳಲ್ಲಿ ಹರಿಯುತ್ತಿತ್ತು. ಇಂದಿನ ರಾತ್ರಿಯಿಂದ ಕುಟ್ಟಿಯ ರೋಮಗಳಲ್ಲೂ ಹರಿಯುವುದರಲ್ಲಿತ್ತು.
ರಾತ್ರಿಯ ಊಟದ ಅನಂತರ ನಾವು ಮೂವರು ಮಿತ್ರರು ಬಯಲಲ್ಲಿ ಬೆಂಕಿ ಹಾಕಿ ಕೂತಿದ್ದೆವು. ಲಬಂಗಿ, ಗುಡಿಸಲಲ್ಲಿ ಕೂತು ಬಣ್ಣದ ಹಾವಿಗೆ ಹಾಲು ಕುಡಿಸುತ್ತಿದ್ದಳು. ನಾವು ಸರದಿ ಪ್ರಕಾರ ಚಿಲುಮೆ ಸೇದುತ್ತಾ ಮೆಲ್ಲನೆ ಮಾತನಾಡಿಕೊಳ್ಳುತ್ತಿದ್ದೆವು-
“ಕುಟ್ಟಿ ನನಗೆ ಪಶ್ಜಾತ್ತಾಪವಾಗ್ತಿದೆ?’ ಝಾಬಾ ಹೇಳಿದ.
“ಯಾತಕ್ಕೆ?”
“ಈ ಮೊದಲು ಎಂದೂ ಹೆಣ್ಣನ್ನು ಮುಟ್ಟಿರಲಿಲ್ಲವೆಂದು!” ಕುಟ್ಟಿ ಕಿಲಕಿಲನೆ ನಕ್ಕ.
“ಲಬಂಗಿಯೊಂದಿಗೆ ಒಂದು ರಾತ್ರಿ ಕಳೆಯುತ್ತಲೇ ನನ್ನ ವಿಚಾರಗಳಿಗೆ ಬಿಸಿ ಬಂತು. ಅದೆಷ್ಟೂ ವರ್ಷಗಳಿಂದ ನಾನು ಭೂತಕಾಲವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವ ಕನಸು ಹೆಣೆಯುತ್ತಿದ್ದೆ. ಈಗ ಅದು ನನಗೆ ಕಷ್ಟವೆನಿಸುವುದಿಲ್ಲ. ಅಷ್ಟೇ ಅಲ್ಲ. ನಾನೀಗ ನನ್ನ ಪ್ರಯೋಗದ ಮೊದಲ ಸರತಿಯನ್ನು ದಾಟಿಬಿಟ್ಟಿರುವೆ…”
“ಅಂದ್ರೆ?” ಅವನನ್ನು ಮಧ್ಯದಲ್ಲಿಯೇ ತಡೆದೆ.
“ಈಗ ನೀವಿಬ್ಪರೂ ನನ್ನೆದುರು ಕೂತಿದ್ದೀರ. ಸ್ವಲ್ಪ ಹೊತ್ತಿನ ಅನಂತರ ನೀವಿಲ್ಲಿಂದ ಹೊರಟು ಹೋಡಿರಿ ಅಂತ ತಿಳಿದುಕೊಳ್ಳಿ, ನೀವು ಹೋದ ಮೇಲೆ ಇಲ್ಲಿ ಕ್ಯಾಮೆರಾದ ಬಟನ್ ಒತ್ತಿದರೆ ಅದರಲ್ಲಿ ನಿಮ್ಮ ಫೋಟೋ ಬೀಳಬೇಕು.”
“ಇದು ಹೇಗೆ ಸಾಧ್ಯ!” ಕುಟ್ಟಿ ಚಿಲುಮೆಯನ್ನು ನನ್ನೆಡೆಗೆ ಚಾಚಿದ.
“ನಮ್ಮ ಶರೀರ ತನ್ನ ಸುತ್ತಮುತ್ತ ಶಾಖವನ್ನು ಹರಡುತ್ತಿರುತ್ತದೆ. ನಾವಿಲ್ಲಿಂದ ಹೋದರೂ ನಮ್ಮ ಶರೀರದಿಂದ ಹರಡಿದ ಶಾಖ ಇಲ್ಲಿ ಚೆಲ್ಲಿರುತ್ತೆ. ಕ್ಯಾಮೆರಾ ಆ ಶಾಖದ ಸಹಾಯದಿಂದ ಛಾಯಾಚಿತ್ರದಂತಹ ಆಕೃತಿಯನ್ನು ಸುಲಭವಾಗಿ ಅಂಕಿತಗೊಳಿಸುತ್ತದೆ. ಆದ್ರೆ, ನನ್ನ ಸಮಸ್ಯೆಯೇ ಬೇರೆ. ನಾನು ದೂರದ ಭೂತಕಾಲವನ್ನು ಕ್ಯಾಮೆರಾದಲ್ಲಿಳಿಸಬೇಕು.” ಝಾಬಾ ಸ್ವಲ್ಪ ತಡೆದು ಚಿಲುಮೆಯ ದಮ್ಎಳೆದು ಮುಂದುವರೆಸಿದ, “ಉದಾಹರಣೆಗೆ, ಯಾವ ಆಸನದಲ್ಲಿ ಮಹಾತ್ಮಾ ಗಾಂಧಿಯವರು ಕೂರುತ್ತಿದ್ದರೋ, ಆ ಆಸನದೆದುರು ಕ್ಯಾಮೆರಾ ಹಿಡಿದು ಬಟನ್ ಒತ್ತಿದರೆ ಕ್ಯಾಮೆರಾದಲ್ಲಿ ಮಹಾತ್ಮಾ ಗಾಂಧಿಯವರು ಕೂತಿದ್ದ ‘ಪೋಸ್’ನ ಫೋಟೋ ಬರ್ಬೇಕು. ನನ್ನ ಮಾತಿನಲ್ಲಿ ಸತ್ಯಾಂಶವಿದ್ದರೆ ಇನ್ನು ಕೆಲವೇ ದಿನಗಳಲ್ಲಿ ಫೋಟೋಗ್ರಫಿಯ ಕ್ಷೇತ್ರದಲ್ಲಿ ಭೂಕಂಪ ಬಂದುಬಿಡುತ್ತೆ.”
ಮತ್ತೆ ವಾಸ್ತವವಾಗಿಯೂ ಭೂಕಂಪ ಬಂದಿತ್ತು. ಆದರೆ ಫೋಟೋಗ್ರಫಿಯ ಕ್ಷೇತ್ರದಲ್ಲಲ್ಲ. ನಮ್ಮ ಶಾಂತ ಬದುಕಿನಲ್ಲಿ! ನಾಲ್ಕನೆಯ ದಿನ ಮೋಗೂ ಕಾಡಿನಿಂದ ಮರಳಿ ಬಂದಾಗ ಗಾಬರಿ ಹುಟ್ಟಿಸುವಂತಹ ವಿಷಯ ಹೇಳಿದ ಅವನು ಚಿಲ್ಕಾ ಕೆರೆಯನ್ನು ದಾಟಿ ಈ ದಂಡೆಗೆ ಬರುತ್ತಿರುವ ಬೇಟೆಗಾರನೊಬ್ಪನನ್ನು ನೋಡಿದ್ದ. ನಾವು ಕಕ್ಕಾಬಿಕ್ಕಿಯಾದೆವು! ಬ್ಯಾನರ್ಜಿ ಒಂದು ಅಲ್ಸೇಶೀಯನ್ ನಾಯಿಯೊಂದಿಗೆ ಬರುತ್ತಿದ್ದ.
“ನಾಯಿ ಯಾಕೆ?”
“ಆ ನಾಯಿ ನೆಲ ಮೂಸುತ್ತಿತ್ತು. ಬಹುಶಃ ಯಾರನ್ನೂ ಹುಡುಕುತ್ತಿರಬೇಕು” ಮೋಗೂ ಸಹಜವಾಗಿಯೇ ಹೇಳಿದ.
ಇನ್ನು ಅನುಮಾನವಿರಲಿಲ್ಲ. ನಮ್ಮ ಸುಖದ ದಿನಗಳು ಪ್ರಾರಂಭವಾಗುವುದಕ್ಕೂ ಮೊದಲೇ ಕೊನೆಗೊಂಡಿತ್ತು. ಕೂಡಲೇ ನಾವು ಲಬಂಗಿಯೊಂದಿಗೆ ಚರ್ಚಿಸಲು ಕೂತೆವು. ನಾವು ಆದಷ್ಟು ಶೀಘ್ರ ಈ ಗುಡಿಸಲನ್ನು ತೊರೆದು ಮುಂದೆ ಹೋಗಬೇಕಿತ್ತು. ಆದರೆ ಈ ರಾತ್ರಿಯೇ ಹೊರಡುವುದೋ ಅಥವಾ ಮುಂಜಾನೆ ಹೊರಡುವುದೋ ಎಂಬ ಪ್ರಶ್ನೆ ಎದುರಾಯಿತು.
“ಮುಂಜಾನೆ” ಎಂದ ಕುಟ್ಟಿ.
ರಾತ್ರಿ ಇಲ್ಲೇ ಉಳಿದರೆ ಯಾವುದೇ ಕ್ಷಣದಲ್ಲಿ ಬ್ಯಾನರ್ಜಿ ಬರುವ ಭಯವಿತ್ತು. ಅಲ್ಲದೆ, ಈಗಲೇ ಗುಡಿಸಲನ್ನು ಬಿಟ್ಟು ಹೋಗುವುದರಿಂದ ಬ್ಯಾನರ್ಜಿ ಮತ್ತು ನಮ್ಮ ನಡುವೆ ಸಾಕಷ್ಟು ಅಂತರವುಂಟಾಗುತ್ತಿತ್ತು- ಎಂಬ ವಿಚಾರವನ್ನು ನಾನು ಸ್ಪಷ್ಟವಾಗಿ ಹೇಳಿದೆ.
ಝಾಬಾನಿಗೆ ನನ್ನ ಮಾತು ಸರಿಯೆಂದು ಕಂಡಿತು.
ಆದರೆ ಕುಟ್ಟಿ ತರ್ಕಿಸಿದ, “ಕೋಬರ್, ರಾತ್ರಿ ಹೊರಟರೆ ನಾವು ಕ್ರೂರ ಪ್ರಾಣಿಗಳನ್ನು ಎದುರಿಸಬೇಕಾಗುತ್ತೆ. ಕಾಡಿನ ಮಾರ್ಗವೂ ನಮಗೆ ಗೊತ್ತಿಲ್ಲ.
ಮುಂಜಾನೆ ಹೊರಡೋದೇ ಒಳ್ಳೆಯದೆಂದು ನನಗನ್ನಿಸುತ್ತೆ.”
“ಮುಂಜಾನೆಗೆ ಮೊದ್ಲೇ ಬ್ಯಾನರ್ಜಿ ಇಲ್ಲಿಗೆ ಬಂದುಬಿಟ್ಟರೆ?” ನಾನು ಪ್ರಶ್ನಿಸಿದೆ.
“ಇದರ ಸಾಧ್ಯತೆ ಕಡಿಮೆ” ಕುಟ್ಟಿ ಒತ್ತಿ ಹೇಳಿದ.
“ಆದರೂ ಬಂದ… ಅಂತ…
“ಕೋಬರ್?” ಕುಟ್ಟಿ ನನ್ನ ಮಾತನ್ನು ತಡೆದು ಹೇಳಿದ, “ನಿನ್ನ ಅನುಮಾನ ನಿಜವಾಗಬಹುದು! ನಿನ್ನ ಭಯ ಸುಳ್ಳೂ ಆಗಬಹುದು! ನೀನು ಸರಿಯಾದ ಕಾರಣ ಕೊಡು. ನಾನು ನಿನ್ನ ಆಜ್ಞೆಯನ್ನು ಒಪ್ಪಿಕೊಳ್ತೀನಿ.”
ಕುಟ್ಟಿಯ ಮಾತಿನಲ್ಲಿ ವಾಸ್ತವಾಂಶವಿತ್ತು. ಆದರೆ ಅವನು ತನ್ನ ಅಭಿಪ್ರಾಯವನ್ನು ಹೇಳಬೇಕಲ್ಲ. ಹೀಗಾಗಿ ಹೇಳಿದ್ದ. ಇಲ್ಲಿ ರಾತ್ರಿ ತಂಗುವ ಒಳಗುಟ್ಟು ಬೇರೆಯದೇ ಆಗಿತ್ತು.
“ಕುಟ್ಟಿ! ಈ ಹಿಂದೆ ನಮ್ಮ ಮಧ್ಯೆ ಮತಭೇದವಾದ ನೆನಪು ನನಗಂತೂ ಇಲ್ಲ” ನಾನು ಅವನನ್ನೇ ಗಮನಿಸಿದೆ.
ಅವನು ಹಿಂಜರಿದ.
“ಲಬಂಗಿ ಜತೆ ರಾತ್ರಿ ಕಳೆಯೋದಕ್ಕೆ ನಾನು ಯೋಚ್ನೆಮಾಡ್ತಿದ್ದೀನಿ ಅಂತ ನೀನು ತಿಳ್ಕೊಂಡಿದ್ದೀಯಾ? ನಿಜಾಂಶ ಅವನ ಬಾಯಿಂದಲೇ ಹೊರಬಿತ್ತು.
ನಾನು ಒಂದು ಶಬ್ದವಾಡದೆ ಎದ್ದು ಗುಡಿಸಲಿನೊಳಗೆ ಹೋದೆ. ಲಬಂಗಿ ನನ್ನ ಹಿಂದೆ ಓಡಿ ಬಂದು ಪ್ರೀತಿಯಿಂದ ಹೇಳಿದಳು, “ಕೋಪಿಸಿಕೋ ಬೇಡ, ಕೋಬರ್! ಕುಟ್ಟಿ ಹೇಳೋದೂ ಸರಿ. ಈ ಕಾಡು ತುಂಬಾ ಭಯಾನಕ. ರಾತ್ರಿಯಂತೂ ಮತ್ತೂ ಭಯಾನಕ. ಕತ್ತಲಲ್ಲಿ ನಾವು ಒಂದು ಹೆಜ್ಜೆಯನ್ನೂ ಹಾಕೋದಕ್ಕೆ ಆಗಲ್ಲ!”.
ಆಗಲೇ ದೂರದಲ್ಲಿ ನಾಯಿ ಬೊಗಳುವ ಸದ್ದು ಕೇಳಿಸಿತು. ನಮಗೆ ಗಾಬರಿಯಾಯಿತು. ನಾನು ಕೂಡಲೇ ಹೊರಬಂದ, ಝಾಬಾ ಎತ್ತರವಾದ ಮರವನ್ನೇರಿ ದೂರದವರೆಗೆ ದೃಷ್ಟಿ ಹಾಯಿಸಿದ. ಅವನಿಗೆ ಸ್ಪಷ್ಟವಾಗಿ ಕಾಣಿಸಲಿಲ್ಲ. ಆದರೆ ನಾಯಿಯ ಕೊರಳಿನ ಸರಪಳಿ ಹಿಡಿದು ನೆರಳಿನಂತೆ ಮುಂದುವರಿದು ಬರುತ್ತಿರುವ ಬ್ಯಾನರ್ಜಿಯನ್ನು ಅವನು ನೋಡಿದ್ದ.
ಅವನ ಅಂದಾಜಿನಂತೆ ಕಾಡಿನ ಅತ್ತ-ಇತ್ತಲಿನ ಕಾಲುದಾರಿಗಳನ್ನು ದಾಟಿ ಇಲ್ಲಿಯವರೆಗೆ ಬರಲು ಬ್ಯಾನರ್ಜಿಗೆ ಕಡೇಪಕ್ಷ ಎರಡು ಗಂಟೆ ಕಾಲಾವಕಾಶ ಹಿಡಿಯುತ್ತಿತ್ತು. ಕೆಲವೇ ನಿಮಿಷಗಳಲ್ಲಿ ನಾವಿಲ್ಲಿಂದ ಹೊರಟು ಹೋಗುವುದು ಲಾಭದಾಯಕವಾಗಿತ್ತು.
ಕೂಡಲೇ ನಾವು ಕಾರ್ಯಪ್ರವೃತ್ತರಾದೆವು. ಮೋಗೂವಿನ ಹೆಂಡತಿ ಅಡುಗೆಯ ಸಾಮಾನುಗಳ ಒಂದು ಗಂಟನ್ನು ಕಟ್ಟಿಕೊಟ್ಟಳು. ಜತೆಗೆ ಮೋಗೂ ನಮಗೊಂದು ಹೇಸರಗತ್ತೆಯನ್ನು ಉಡುಗೊರೆಯಾಗಿ ಕೊಟ್ಟ. ಪ್ರಯಾಣದ ಭಾರ ಹೊರುವ ನಮ್ಮ ಚಿಂತೆ ದೂರವಾಯಿತು. ಝಾಬಾ, ಸಾಮಾನುಗಳನ್ನಲ್ಲಾ ಹೇಸರಗತ್ತೆಯ ಬೆನ್ನಮೇಲೆ ಹೇರಿದ. ಜತೆಗೆ, ತನ್ನ ಗಿಟಾರನ್ನು ಕಟ್ಟಿದ.
ಮೋಗೂ ಮತ್ತು ಅವನ ಕುಟುಂಬದ ಸದಸ್ಯರಿಗೆ ಕೃತಜ್ಞತೆಗಳನ್ನರ್ಪಿಸಿ ನಾವು ಹೊರಟೆವು. ಸ್ವಲ್ಪ ದೂರ ಹೋದ ಮೆಲೆ ನಾನು ಹಿಂತಿರುಗಿ ನೋಡಿದೆ- ಮೋಗೂವಿನ ಕುಟುಂಬ ಗ್ರೂಪ್ ಫೋಟೋವಿಗೆ ಪೋಸ್ ಕೊಡುವಂತೆ ಮೌನಿಯಾಗಿ ನಿಂತಿತ್ತು. ನಾವಿಲ್ಲಿಗೆ ಬಂದಾಗಲೂ ಅವರು ಹೀಗೆಯೇ ನಿಂತಿದ್ದರು. ಆಗಲೂ, ಸೂರ್ಯಾಸ್ತದ ಅನಂತರದ ವೇಳೆಯಾಗಿತ್ತು.
ಕತ್ತಲು ಇನ್ನೂ ದಟ್ಟವಾಗಿರಲಿಲ್ಲ ವೇಗವಾಗಿ ಮುಂದುವರೆಯುತ್ತಾ ಹೇಸರಗತ್ತೆಯನ್ನು ಓಡಿಸುತ್ತಾ, ಮಂದ ಬೆಳಕಿನಲ್ಲಿ ನಾವು ಆದಷ್ಟು ಶೀಘ್ರ ದೂರ ಹೋಗಲು ಬಯಸುತ್ತಿದ್ದೆವು. ಮೋಗೂ ನಮಗೊಂದು ಪಂಜು ಮತ್ತು ಎರಡು ಚಕಮಕಿ ಕಲ್ಲನ್ನೂ ಕೊಟ್ಟಿದ್ದ. ನಾವು ಯೋಚಿಸಿದ್ದಕ್ಕಿಂತಲೂ ಹೆಚ್ಚಾಗಿ ಮೋಗೂ ನಮಗೆ ಸಹಾಯ ಮಾಡಿದ್ದ. ಅವನ ಕಾಡಿನ ಚಕ್ರವ್ಯೂಹದಂತಹ ರಸ್ತೆಗಳ ಬಗ್ಗೆಯೂ, ಈ ಕೆಲವೇ ದಿನಗಳಲ್ಲಿ ಅನೇಕ ಮಾರ್ಗದರ್ಶನ ಕೊಟ್ಟಿದ್ದ. ಅವನ ಪ್ರಕಾರ ಒಂದು ಗಂಟೆಯ ಕಾಲಾವಕಾಶದಲ್ಲಿ ನಮಗೊಂದು ಝರಿ ಎದುರಾಗುವುದರಲ್ಲಿತ್ತು. ನನಗೆ ಆ ಝರಿಯ ನಿರೀಕ್ಷೆಯಿತ್ತು. ಬ್ಯಾನರ್ಜಿಯ ನಾಯಿಗೆ ಕೈ ಕೊಡಲು ಈ ಝರಿ ತುಂಬಾ ಉಪಯೋಗಕರವಾಗಿತ್ತು.
ಆರ್ಧ ಗಂಟೆಯಿಂದ ಒಂದೇ ಸಮನೆ ಮುಂದೆ ಸಾಗುತ್ತಿದ್ದೆವು. ಅಂದರೆ ಓಡುತ್ತಿದ್ದೆವು. ಕುಟ್ಟಿ ನಮ್ಮೊಂದಿಗೆ ಓಡಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದ. ಆದರೆ, ಹೆಚ್ಚು ಹೊತ್ತು ಅವನಿಂದ ಓಡಲಾಗಲಿಲ್ಲ. ಅವನ ಕಾಲುಗಳು ಕಂಪಿಸಲಾರಂಭಿಸಿದವು. ಅವನು ಏದುಸಿರು ಬಿಡಲಾರಂಭಿಸಿದ. ಮತ್ತೂ ಸ್ವಲ್ಪ ದೂರ ಹೋದಾಗ ಮುಗ್ಗರಿಸಿ ಬಿದ್ದ. ಝಾಬಾ ಹಾರಿ ಬಂದು ಅವನನ್ನು ಚೀಲದಂತೆ ಬೆನ್ನಿಗೆ ಹೊತ್ತುಕೊಂಡ. ಸ್ವಲ್ಪ ಹೊತ್ತಿಗೆ ನಾವು ಝರಿಯ ದಡೆಕ್ಕೆ ಬಂದೆವು.
ಲಬಂಗಿ ನಿಂತಳು. ಅವಳ ಕತ್ತಿಗೆ ಸುತ್ತಿಕೊಂಡಿದ್ದ ಹಾವು ಸರಿದು ಅವಳ ಕೈಗೆ ಬಂದಿತ್ತು. ಶಾಲಿನಂತೆ ಹಾವನ್ನು ಮತ್ತೆ ಕೊರಳಿಗೆ ಹಾಕಿಕೊಂಡು ಅವಳು ನನ್ನೆಡೆಗೆ ನೋಡಿ ವಿಶ್ರಾಂತಿ ಪಡೆಯುವ ಇಚ್ಛೆಯನ್ನು ವ್ಯಕ್ತಪಡಿಸಿದಳು.
ಇಲ್ಲಿ ವಿಶ್ರಾಂತಿ ಪಡೆಯುವ ಬದಲು ಝರಿ ದಾಟಿ, ಎದುರಿನ ದಡದಲ್ಲಿ ವಿಶ್ರಾಂತಿ ಪಡೆಯುವುದು ಹೆಚ್ಚು ಕ್ಷೇಮಕರವಾಗಿತ್ತು. ಎದುರಿನ ದಡ ತಲುಪಿ ಇನ್ನೂ ಸ್ವಲ್ಪ ದೂರ ಹೋಗುವುದು ಮತ್ತೂ ಸುರಕ್ಷಿತವಾಗಿತ್ತು. ನಾನು ಚಕಮಕಿ ಕಲ್ಲುಗಳನ್ನು ತಿಕ್ಕಿ ಪಂಜು ಹೊತ್ತಿಸಿದೆ. ಅನಂತರ ಲಬಂಗಿಯ ಕೈಯನ್ನು ನನ್ನ ಕೈಗಳಲ್ಲಿ ಹಿಡಿದುಕೊಂಡು ಝರಿಯಲ್ಲಿಳಿದೆ. ಹೇಸರಗತ್ತೆಯ ಹಗ್ಗ ಲಬಂಗಿಯ ಎಡೆಗೈಯಲ್ಲಿತ್ತು. ಹೇಸರಗತ್ತೆಯ ಹಿಂದೆ ಝಾಬಾ ಇದ್ದ. ಝಾಬಾನ ಬೆನ್ನಮೇಲೆ ಕುಟ್ಟಿ.
ಝರಿ ಸುಮಾರು ಹತ್ತು ಅಡಿ ಅಗಲ, ಒಂದು ಅಡಿ ಆಳವಿತ್ತು. ಎದುರಿನ ದಡ ತಲುಪುವುದು ಸ್ವಲ್ಪವೂ ಕಷ್ಟವಾಗಿರಲಿಲ್ಲ. ಆದರೆ, ಹೀಗೆ ಮಾಡದೆ ಝರಿಯ ಪ್ರವಾಹದೊಂದಿಗೆ ನಾನು ಸಾಗಿದೆ. ನನ್ನ ಅನುಮಾನದಂತೆ ಬ್ಯಾನರ್ಜಿಯ ನಾಯಿ ಝರಿಯ ದಡದವರೆಗೆ ಬರುವುದಿತ್ತು. ಆಮೇಲೆ ಅದರಿಂದ ಏನೂ ಸಾಧ್ಯವಿರಲಿಲ್ಲ. ನಾಯಿಯ ‘ವಾಸನಾ-ಗ್ರಹಣ’ ಶಕ್ತಿ ನೀರಿನಿಂದಾಗಿ ನಾಶವಾಗುತ್ತದೆ.
ಒಂದು ವೇಳೆ ಬ್ಯಾ,ನರ್ಜಿ ಝರಿ ದಾಟಿ ಈ ದಡಕ್ಕೆ ಬಂದು ನಾಯಿಯಿಂದ ಪರೀಕ್ಷಿಸಿದರೂ, ನಾಯಿ ನಮ್ಮನ್ನು ಹಿಂಬಾಲಿಸಬಾರದೆಂದು ನಾನು ಝರಿಯಲ್ಲಿ ಸಾಕಷ್ಟು ದೂರ ಹೋಗಿ ಹೊರಬರುವ ಉಪಾಯವನ್ನು ಯೋಚಿಸಿದ್ದೆ.
ಹದಿನೈದು ನಿಮಿಷ ಮತ್ತೂ ಝರಿಯಲ್ಲಿ ಓಡಾಡಿದೆ ನಾವು ಝರಿಯಿಂದ ಹೊರ ಬಂದು ಪೊದೆಗಳಲ್ಲಿ ನುಗ್ಗಿದೆವು. ಕತ್ತಲು ಕ್ಷಣ-ಕ್ಷಣವೂ ದಟ್ಟವಾಗುತ್ತಿತ್ತು. ಪಂಜಿನ ಬೆಳಕು ಸೀಮಿತ ಪರಿಧಿಯಲ್ಲಿ ಮಾತ್ರವಿತ್ತು. ಕ್ರೂರ ಮೃಗಗಳ ಗರ್ಜನೆ ಭಯ ಹುಟ್ಟಿಸುತ್ತಿತ್ತು.
ಸುಮಾರು ಎರಡು ಗಂಟೆಗಳ ಪ್ರಯಾಣ ಮುಗಿಸಿ ಬೆಟ್ಟದ ಕಣಿವೆಗೆ ಬಂದವು. ನಮ್ಮೆದುರು ಒಂದು ಗುಹೆಯಿತ್ತು. ಇಂದಿನ ರಾತ್ರಿಯನ್ನು ಇಲ್ಲೇ ಕಳೆಯಲು ನಿರ್ಧರಿಸಿದೆವು. ಆದರೆ, ಗುಹೆಯಲ್ಲಿ ಕ್ರೂರ ಮೃಗಗಳು ಇದೆಯೋ, ಇಲ್ಲವೋ ಎಂಬುದನ್ನು ಪರೀಕ್ಷಿಸಬೇಕಿತ್ತು.
ಲಬಂಗಿ ಹೇಸರಗತ್ತೆಯೊಂದಿಗೆ ಹೊರಗುಳಿದಳು ನಾನು ಉರಿಯುತ್ತಿದ್ದ ಪಂಜಿನೊಂದಿಗೆ ಗುಹೆಯೊಳಗೆ ನುಗ್ಗಿದೆ. ಬಹು ಎಚ್ಚರಿಕೆಯಿಂದ ಹೆಜ್ಜೆಗಳನ್ನಿಡುತ್ತಿದ್ದೆ. ಗುಹೆ ಹೆಚ್ಚು ವಿಶಾಲವಾಗಿರಲಿಲ್ಲ. ಆದರೆ ಅಗಲವಾಗಿತ್ತು. ಮತ್ತೂ ಎರಡು ಹೆಜ್ಜೆ ಮುಂದೆ ಹೋಗಿರಬಹುದು ಆಗಲೆ ‘ಹುಆಂ-ಹುಆಂ’ ಎನ್ನುತ್ತಾ ಎರಡು ನರಿಗಳು ನನ್ನ ಮೇಲೆ ಎರಗಿದವು. ವಾಸ್ತವವಾಗಿ, ಪಂಜಿನ ಭಯದಿಂದ ಅವು ಓಡಿಹೋಗಲು ನೋಡಿದ್ದವು. ನಾನು ಅವುಗಳ ಮಾರ್ಗಕ್ಕೆ ಅಡ್ಡಿಯಾಗಿದ್ದೆ. ಅವು ಎರಗಿದಾಗ ನಾನು ಬಿದ್ದಿದ್ದೆ. ಎರಡೂ ನರಿಗಳು ನನ್ನ ಮೇಲಿಂದ ಹಾಯ್ದು ಹೊರಗೋಡಿದವು.
ಹೇಸರಗತ್ತೆಯಿಂದ ಭಾರ ಇಳಿಸಿ ಅದನ್ನು ಸಮೀಪದ ಮರವೊಂದಕ್ಕೆ ಕಟ್ಟಿದೆವು. ಲಬಂಗಿ ಚೀಲವೊಂದನ್ನು ಖಾಲಿ ಮಾಡಿ ಅದರಿಂದಲೆ ಅಲ್ಲಿಯ ಜಾಗವನ್ನು ಗುಡಿಸಿ ಸ್ವಚ್ಛಗೊಳಿಸಿದಳು. ಅನಂತರ ಚೀಲವನ್ನು ಹಾಸಿದಳು. ಕುಟ್ಟಿ ಒಳ ಹೋಗಿ ಚೀಲದ ಮೇಲೆ ಮಲಗಿದ. ವಿಶ್ರಾಂತಿಯ ಹೆಚ್ಚು ಅಗತ್ಯ ಅವನಿಗಿತ್ತು.
ಲಬಂಗಿ ಊಟದ ವ್ಯವಸ್ಥೆ ಮಾಡಲಾರಂಭಿಸಿದ್ದಳು. ಈ ಜವಾಬ್ದಾರಿಯನ್ನು ಅವಳು ಬಯಸಿಯೇ ತೆಗೆದುಕೊಂಡಿದ್ದಳು. ನಮ್ಮ ಬಳಿ ಟಿನ್ನ್ ನ ಪಾತ್ರೆಯೊಂದಿತ್ತು. ಗುಡಿಸಲನ್ನು ಬಿಟ್ಟು ಹೋಗುವಾಗ ಮೋಗೂವಿನ ಹೆಂಡತಿ ಅದನ್ನು ಪ್ರೀತಿಯಿಂದ ಕೊಟ್ಟಿದ್ದಳು. ಲಬಂಗಿ ಅದಕ್ಕೆ ಅಕ್ಕಿ-ನೀರು ಹಾಕಿ, ಒಲೆ ಹಚ್ಜಿ ಅದರ ಮೇಲಿಟ್ಟಳು. ಸ್ವಲ್ಪ ಹೊತ್ತಿಗೆ ಅನ್ನ ಸಿದ್ಧವಾಯಿತು.
ನಾವೆಲ್ಲಾ ಒಟ್ಟಿಗೆ ಕೂತು ಪಂಜಿನ ಬೆಳಕಿನಲ್ಲಿ ಅನ್ನದ ತುತ್ತುಗಳನ್ನು ನುಂಗಿದೆವು- ಜತೆಗೆ ನೀರುಳ್ಳಿ ಮತ್ತು ಬೆಲ್ಲವನ್ನು ಉಪಯೋಗಿಸಿದವು. ಅನಂತರ ಗುಹೆಯಲ್ಲಿ ಹೋಗಿ ಮಲಗಿದೆವು. ಗುಹೆಯ ಹೊರಗೆ ಉರಿಯುವ ಪಂಜನ್ನಿಟ್ಟೆವು- ರಾತ್ರಿ ಯಾವ ಪ್ರಾಣಿಯೂ ಒಳ ಬರುವ ಧೈರ್ಯ ಮಾಡಬಾರದೆಂದು.
ಗುಹೆಯಲ್ಲಿ ನನ್ನ ಮತ್ತು ಕುಟ್ಟಿಯ ಮಧ್ಯ ಲಬಂಗಿ ಮಲಗಿದ್ದಳು. ಬಣ್ಣದ ಹಾವು ಸುರಳಿ ಸುತ್ತಿಕೊಂಡು ಅವಳ ತಲೆಯ ಬಳಿ ಬಿದ್ದಿತ್ತು. ಲಬಂಗಿ ಅದನ್ನು ಚೀಲದ ದಾರಕ್ಕೆ ಕಟ್ಟಿ ಹಾಕಿ, ದಾರದ ಇನ್ನೊಂದು ತುದಿಯನ್ನು ಕಲ್ಲೊಂದಕ್ಕೆ ಕಟ್ಟಿದ್ದಳು. ಝಾಬಾ ಪಂಜಿನ ಬಳಿ ಮಲಗಿದ್ದ.
ಅರ್ಧ ರಾತ್ರಿಗೆ ನನಗೆಚ್ಚರವಾದಾಗ ಪಂಜು ನಂದಿಹೋಗಿತ್ತು. ನಾನು ಕಂಪಿಸಿದೆ, ಗುಹೆಯಲ್ಲಿ ಅಂಧಕಾರ ಹಬ್ಪಿತ್ತು. ನನ್ನ, ಕೈಯೇ ನನಗೆ ಕಾಣಿಸುತ್ತಿರಲಿಲ್ಲ. ಝಾಬಾ ಗೊರಕೆ ಹೊಡೆಯುತ್ತಿದ್ದ.
ಸೂರ್ಯೋದಯಕ್ಕೂ ಮುಂಚೆ ಎಚ್ಚೆತ್ತು ನಾವು ಸ್ವಲ್ಪ ಹೊತ್ತು ಚರ್ಚಿಸಿದೆವು. ಕಾಡನ್ನು ದಾಟಿ ನಾವೆಲ್ಲಿಗೆ ಹೋಗುವುದು? ಬ್ಯಾನರ್ಜಿ ಬರಲಾರದಂತಹ ಜಾಗ ಯಾವುದಿದೆ? ಎಂಬುದೇ ನಮ್ಮ ಸಮಸ್ಯೆಯಾಗಿತ್ತು.
“ಬೆಟ್ಟ ದಾಟಿದ ಮೇಲೆ ನಾವು ಸಮೀಪದ ಹಳ್ಳಿಗೆ ಹೋಗಬಲ್ಲೆವು, ಅಲ್ಲಿಂದ ರೈಲು ಸಿಗುತ್ತೆ. ಒಂದು ಸಲ ರೈಲು ಹತ್ತಿದರೆ ನಮ್ಮನ್ನು ಹುಡುಕುವುದು ಬ್ಯಾನರ್ಜಿಗೆ ಅಸಾಧ್ಯವಾಗುತ್ತದೆ.” ಕುಟ್ಟಿ ತನ್ನ ಆಶಾವಾದವನ್ನು ವ್ಯಕ್ತಪಡಿಸಿದ.
“ಹೀಗಂತ ನೀನು ಯೋಚ್ನೆ ಮಾಡ್ತೀಯ…. ಚಿಲ್ಕಾ ಕೆರೆಯನ್ನು ದಾಟುವಾಗಲೂ ನಾವು ಹೀಗೇ ಯೋಚ್ನೆ ಮಾಡಿದ್ದವು.” ನಾನು ನನ್ನ ಅಭಿಪ್ರಾಯ ತಿಳಿಸಿದೆ.
“ಆ ಮಾತು ಬೇರೆ… ರೈಲಿನಲ್ಲಿ ಕೂತು ನಾವು ತುಂಬಾ ದೂರದ ಹಳ್ಳಿಗೆ ಹೋಗೋಣ. ಅಲ್ಲಿ ನಮ್ಮನ್ನು, ಬ್ಯಾನರ್ಜಿಯ ನೆರಳು ಹುಡುಕಲಾರದು! ನೀವೆಲ್ಲಾ ಇಷ್ಟಕಟ್ಟರೆ ಮದ್ರಾಸಿನಿಂದ, ಬಹು ದೂರದಲ್ಲಿ ನನ್ನ ಹಳ್ಳಿಯಿದೆ, ಅಲ್ಲಿಗೆ ಹೋಗೋಣ.” ಹೀಗೆಂದು ಕುಟ್ಟಿ ಲಬಂಗಿಯೆಡೆಗೆ ಹೊರಳಿದ “ನಿನ್ನ ಅಭಿಪ್ರಾಯವೇನು?”
ಲಬಂಗಿ ಬಣ್ಣದ ಹಾವನ್ನು ಆಟಿಕೆಯಂತೆ ಮಡಿಲಲ್ಲಿಟ್ಟುಕೊಂಡು ಕೂತಿದ್ದಳು. “ನನಗನ್ನಿಸಿದಂತೆ ಕುಟ್ಟಿಯ ವಿಚಾರ ತಪ್ಪೇನಿಲ್ಲ” ಎಂದು ನನ್ನನ್ನು ನೋಡಿದಳು.
ನಾನು ಝಾಬಾನೆಡೆಗೆ ನೋಡಿದೆ.
“ನಮ್ಮ ಮೊದಲ ಸಮಸ್ಯೆ ಬೆಟ್ಟವನ್ನು ದಾಟುವುದು, ಅದು ಸುರಕ್ಷಿತವಾಗಿ” ಝಾಬಾ ವಾಸ್ತವಿಕತೆಯನ್ನು ನೆನಪಿಸಿದ.
ಅವನ ಮಾತು ನಿಜವಾಗಿತ್ತು. ಬೆಟ್ಟ ದಾಟಿ ಹೋಗುವುದು ಕಡೇ ಪಕ್ಷ ಎರಡು ದಿನಗಳ ಪ್ರವಾಸವಾಗಿತ್ತು. ಈ ಎರಡು ದಿನಗಳಲ್ಲಿ ಆಗಬಾರದ ಘಟನೆಯೂ ಘಟಿಸಬಹುದು…ವಾಸ್ತವವಾಗಿ, ಅದದ್ದೂ ಹೀಗೆಯೇ.
ನಾವು ಯಾವ ಗುಹೆಯಲ್ಲಿ ರಾತ್ರಿಯನ್ನು ಕಳೆದಿದ್ದೆವೋ ಅದು ಬೆಟ್ಟದ ಕಣಿವೆಯಲ್ಲಿತ್ತು. ಸೂರ್ಯನ ಕೋಮಲ ಕಿರಣಗಳಲ್ಲಿ ಬೆಟ್ಟವೂ ನಮ್ಮ ಅನುಮಾನಕ್ಕಿಂತ ಎತ್ತರವಾಗಿ ಕಂಡಿತ್ತು. ಇಂದಿನ ನಮ್ಮ ದಿನವೆಲ್ಲ ಬೆಟ್ಟ ಹತ್ತುವುದರಲ್ಲೇ ಕಳೆದು ಹೋಗುವುದರಲ್ಲಿತ್ತು. ಸೂರ್ಯಾಸ್ತಕ್ಕೂ ಮೊದಲು ಹೇಗಾದರೂ ಮಾಡಿ ಬೆಟ್ಟದ ತುದಿಯನ್ನು ತಲುಪಿ ಬಿಡಾರ ಹೂಡಲೇ ಬೇಕಿತ್ತು. ಆದರೆ ಇದು ಸುಲಭದ ಮಾತಾಗಿರಲಿಲ್ಲ.
ಹೇಸರಗತ್ತೆಯನ್ನು ದಬ್ಬುತ್ತಾ ನಾವು ಬಹು ಪ್ರಯಾಸದಿಂದ ಬೆಟ್ಟವನ್ನು ಹತ್ತುತ್ತಿದ್ದೆವು. ಬೆಟ್ಟವೇರುವ ಶಕ್ತಿ ಕುಟ್ಟಿಗಿನ್ನೂ ಬಂದಿರಲಿಲ್ಲ. ಝಾಬಾ ಅವನನ್ನು ಮತ್ತೆ ತನ್ನ ಬೆನ್ನ ಮೇಲೆ ಹೊತ್ತುಕೊಂಡಿದ್ದ. ಅವನಲ್ಲಿ ಅಪಾರ ಶಕ್ತಿ-ಒಂದು ಗೋರಿಲ್ಲಾದಷ್ಟು ಶಕ್ತಿಯಿತ್ತೆಂದರೆ ತಪ್ಪಾಗಲಾರದು. ಅವನು ನಮ್ಮೊಂದಿಗಿರದಿದ್ದರೆ, ನಮ್ಮ ಗತಿಯೇನಾಗುತ್ತಿತ್ತೋ, ಆ ದೇವರೇ ಬಲ್ಲ.
ಏರುವುದು ಕಷ್ಟವಾದಾಗ ನಾವು ಮೊಣಕಾಲಿನ ಸಹಾಯದಿಂದ ಮೇಲೆ ಹೋಗಲಾರಂಭಿಸಿದೆವು. ಮಾರ್ಗ ಸಂಕೀರ್ಣವಾದಾಗ ಮೊಸಳೆಯಂತೆ ತೆವಳುತ್ತಾ ಮುಂದುವರೆದವು. ವಿಶೇಷವಾಗಿ ಬೆಟ್ಟದ ತಿರುವು ಬಂದಾಗ ನಾವು ತುಂಬಾ ಎಚ್ಚರಿಕೆಯನ್ನು ವಹಿಸಬೇಕಾಗುತ್ತಿತ್ತು. ಹೇಸರಗತ್ತೆ ನಮ್ಮ ಮುಂದಿತ್ತು. ಅದು ನಿಂತಾಗ ಅದರ ಬಾಲವನ್ನು ನಾನು ಹಿಂಡುತ್ತಿದ್ದೆ. ಅದು ಮತ್ತೆ ಮುಂದಕ್ಕೆ ಹೋಗುತ್ತಿತ್ತು. ಬಾಲವನ್ನು ಜೋರಾಗಿ ಹಿಂಡಿದರೆ ಅದುತನ್ನ ಸಂತುಲನೆಯನ್ನು ಕಳೆದುಕೊಂಡು ನೇರವಾಗಿ ಕಣಿವೆಗೆ ಹೋಗಿ ಬೀಳುವುವೆಂಬ ಭಯವೂ ಇತ್ತು. ಹೇಸರಗತ್ತೆ ನಮಗೆ ಅಮೂಲ್ಯವಾಗಿತ್ತು. ಕೊಳ್ಳೆ ಹೊಡೆದ ಹಣದ ಗಂಟೂ ಅದರ ಬೆನ್ನಿನ ಮೇಲಿತ್ತು.
ಬೆಟ್ಟದ ಅರ್ಧ ಭಾಗವನ್ನು ಹತ್ತಿದ್ದೆವು. ಸೂರ್ಯ ನಮ್ಮ ನೆತ್ತಿಯಿಂದ ಸರಿದು ಬೆನ್ನ ಮೇಲೆ ಬಂದಿದ್ದ. ಸ್ವಲ್ಪ ವಿಶ್ರಾಂತಿಯ ಅಗತ್ಯವಿತ್ತು. ನಾವು ಏದುಸಿರುಬಿಡುತ್ತಿದ್ದೆವು. ಹೇಸರಗತ್ತೆಯ ಬಾಯಲ್ಲಿ ನೊರೆ ಜಮಾಯಿಸಿತ್ತು. ಸಮತಲ ಜಾಗವನ್ನು ನೋಡಿ ನಾವು ನಿಂತೆವು.
ನಾವು ನಿಂತಿದ್ದ ಜಾಗದಲ್ಲೇ ಕೂತೆವು. ಕುಟ್ಟಿಯನ್ನು ಬೆನ್ನ ಮೇಲಿಂದ ಕೆಳಗಿಳಿಸಿ ಝಾಬಾ ಗಿಟಾರ್ ಹಿಡಿದು, ಬಾರಿಸಲು ಕೂತ. ಅವನ ಹಾಡು ಗಿಟಾರ್ ನ ಧ್ವನಿಯೊಂದಿಗೆ ದೂರದವರೆಗೂ ಪ್ರತಿಧ್ವನಿಸಿತು. ಇಲ್ಲಿಂದ ಪ್ರಕೃತಿಯ ದೃಶ್ಯ ರಮ್ಯವಾಗಿತ್ತು. ದೂರ-ದೂರದವರೆಗೆ, ನಾನು ವಿಮಾನದ ಪ್ರಯಾಣಿಕನಂತೆ ಹಸುರು-ರಗ್ಗನ್ನು ನೋಡುತ್ತಿದ್ದೆ. ಅಲ್ಲಲ್ಲಿ ರೇಖೆಗಳಂತಹ ನದಿಗಳು ಮತ್ತು ಝರಿಗಳು ಕಾಣಿಸುತ್ತಿದ್ದವು.
“ಝಾಬಾ, ನಿನಗೆ ಆಯಾಸವಾಗುವುದಿಲ್ಲವೇ?” ನಾನು ಝಾಬಾನ ಬಳಿ ಕೂತೆ.
ಅವನು ನನ್ನ ಮಾತು ಕೇಳಿಸದವನಂತೆ ಹಾಡುತ್ತಲೇ ಇದ್ದ. ಹಾಡು ಪೂರೈಸಿ ನನಗೆ ಉತ್ತರಿಸಿದ, “ನನಗೆ ಆಯಾಸವಾದಾಗ ಸ್ವಲ್ಪ ಹಾಡು ಹೇಳಿ ಆಯಾಸವನ್ನು ಹೋಗಲಾಡಿಸಿಕೋಳ್ತೀನಿ.”
ಅವನೆದ್ದು ಹೋಗಿ ಹೇಸರಗತ್ತೆಯ ಬೆನ್ನಿಗೆ ಚೀಲದೊಂದಿಗೆ ಗಿಟಾರ್ ಕಟ್ಟಿದ. ಈಗ ಅವನು ಉಲ್ಲಾಸದಿಂದಿದ್ದ. ತನ್ನೆರಡೂ ಕೈಗಳನ್ನು ಎದೆಗಪ್ಪಿಕೊಂಡು, ಒಮ್ಮೆ ಜೋರಾಗಿ ಕಿರುಚಿದ ಅನಂತರ ಗರಬಡಿದವನಂತೆ ಕಣಿವೆಯೆಡೆಗೆ ನೋಡುತ್ತಾ ನಿಂತುಬಿಟ್ಟ.
ಬೆಟ್ಟವೇರಿದ ಯಮದೂತ ಅಧ್ಯಾಯ – 12
“ಏನ್ ನೋಡ್ತಾ ಇದ್ದೀಯಾ?” ಕೂತಲ್ಲಿಂದಲೇ ಪ್ರಶ್ನಿಸಿದೆ. ಅವನು ನನ್ನನ್ನು ಸಂಜ್ಞೆ ಮಾಡಿ ಎಬ್ಪಿಸಿದ. ಅವನು ತೋರಿಸಿದ ದಿಕ್ಕಿನಡೆಗೆ ನಾನು ದೃಷ್ಟಿ ಹರಿಸಿದೆ. ಒಬ್ಬ ಕುದುರೆ ಸವಾರನನ್ನು ಕಂಡು ನಾನು ಕಂಪಿಸಿದೆ. ಅವನು ಬೆಟ್ಟ ಹತ್ತಲು ಪ್ರಾರಂಭಿಸಿದ್ದ. ನಾವು ಸುಮಾರು ಒಂದೂವರೆ ಸಾವಿರ ಅಡಿ ಎತ್ತರದಲ್ಲಿದ್ದೆವು. ಇಲ್ಲಿಂದ ಕುದುರೆ ಸವಾರ ಒಂದು ಆಟದ ವಸ್ತುವಿನಂತೆ ಕಾಣಿಸುತ್ತಿದ್ದ.
“ಯಾರವನು?” ಝಾಬಾ ನನ್ನನ್ನೇ ನೋಡಿದ. ನಾವು ಯಾವ ಮಾರ್ಗದಿಂದ ಬಂದಿದ್ದೆವೋ, ಅದೇ ಮಾರ್ಗದಲ್ಲಿ ಕುದುರೆ ಸವಾರನೂ ಬರುತ್ತಿದ್ದ.
“ಅವನು ಬ್ಯಾನರ್ಜಿಯೇ ಇರಬೇಕು.”
“ನಿನ್ನೆ ಅವನ ಹತ್ರ ಕುದುರೆಯಿರಲಿಲ್ಲ. ನಾಯಿಯಿತ್ತು.
“ಬಹುಶಃ ಯಾರೋ ಆದಿವಾಸಿಯಿಂದ ಕುದುರೆ ಕೊಂಡಿರಬಹುದು.”
“ಈಗೇನು ಮಾಡೋದು?”
ಹಾವಿನೊಂದಿಗೆ ಲಬಂಗಿ ಆಡುತ್ತಾ ಹುಲ್ಲಿನ ಮೇಲೆ ಮಲಗಿದ್ದಳು. ನಾವು ಸೂಕ್ಷ್ಮವಾಗಿ ಮಾತಾಡುತ್ತಿರುವುದನ್ನು ನೋಡಿ, ಎದ್ದು ನಮ್ಮ ಬಳಿಗೆ ಬಂದಳು. ಅವಳು ಒಂದೇ ನೋಟಕ್ಕೆ ಕೆಳ ನೋಡುತ್ತಾ. “ಆ ನಾಯಿ ಬ್ಯಾನರ್ಜಿ!” ಎಂದಳು. ಅಷ್ಟರಲ್ಲಿ ಕುಟ್ಟಿಯೂ ಸಮೀಪಕ್ಕೆ ಬಂದ.
“ಇನ್ನು ನಾವಿಲ್ಲಿರೋದು ಸರಿಯಲ್ಲ. ತತ್ಕ್ಷಣ ನಾವು ಬೆಟ್ಟದ ತುದಿಗೆ ಹೋಗಬೇಕು!”
ಕುಟ್ಟಿಯ ಮಾತನ್ನು ತಡೆದು ಝಾಬಾ ಹೇಳಿದ, “ಮತ್ತೆ ರಾತ್ರಿಯ ಅಂಧಕಾರದಲ್ಲಿ ಆ ತುದಿಗೆ ಬಂದು ಬ್ಯಾನರ್ಜಿ ನಮ್ಮ ಮೇಲೆ ಆಕ್ರಮಣ ಮಾಡಿದರೆ?”
“ಇಲ್ಲಿಯ ತನಕ ಅವನು ಬರದಂತೆ ಯಾವುದಾದರೂ ಉಪಾಯವನ್ನು ಯಾಕೆ ಯೋಚಿಸಬಾರದು?” ಲಬಂಗಿ ಅಭಿಪ್ರಾಯ ವ್ಯಕ್ತಪಡಿಸಿದಳು.
“ಅದು ಹೇಗೆ?”
ಲಬಂಗಿ ಯೋಚಿಸಿದಳು. ನಾನು ಯೋಚಿಸಿದೆ. ನಮ್ಮ ಬಳಿ ಸುರಕ್ಷತೆಯ ಯಾವ ಸಾಧನವೂ ಇರಲಿಲ್ಲ. ನಾವೇನು ಆಕ್ರಮಣ ಮಾಡುವುದು? ಆದರೂ ಉಪಾಯವೊಂದನ್ನು ಹುಡುಕಲೇಬೇಕಿತ್ತು. ಆಕ್ರಮಣದ ಆಧುನಿಕ ವಿಧಾನಗಳ ಬಗ್ಗೆ ಯೋಚಿಸುತ್ತಾ ಶಿಲಾಯುಗಕ್ಕೆ ಹೋದೆ! ಬಹುಶಃ ಲಬಂಗಿಯೂ ನನ್ನ ಹಾಗೆಯೇ ಯೋಚಿಸುತ್ತಿದ್ದಳು.
“ಇಲ್ಲಿರುವ ಬಂಡೆಯೊಂದನ್ನು ಕೆಳಗೆ ಉರುಳಿಸಲು ಸಾಧ್ಯವೆ?” ಲಬಂಗಿ ನಮ್ಮೆಡೆಗೆ ನೋಡಿ ಹೇಳಿದಳು, “ಬಂಡೆ ಭಯಾನಕ ಶಬ್ದದೊಂದಿಗೆ ಕೆಳಗುರುಳಿ ತನ್ನೊಂದಿಗೆ ಕುದುರೆ ಮತ್ತು ಸವಾರ ಇಬ್ಪರನ್ನೂ ಮುಗಿಸಿಬಿಡುತ್ತದೆ!”
“ಇದು ಕೋಲೆಯಾಗುತ್ತೆ!” ಕುಟ್ಟಿಗೆ ತಡೆದುಕೊಳ್ಳಲಾಗಲಿಲ್ಲ.
“ಬ್ಯಾನರ್ಜಿ ಮೇಲಕ್ಕೆ ಬಂದರೆ ನಮ್ಮ ನಾಲ್ವರ ಕೊಲೆಯಾಗುತ್ತೆ! ಇದನ್ನು ನೀನು ಒಪ್ಕೋತೀಯ?” ನಾನು ಪ್ರಶ್ನಿಸಿದೆ.
“ಕೋಬರ್! ನಾನು ಮಂಸಾಹಾರಿ ಅನ್ನೊದು ನಿಜ. ಆದ್ರೆ ನಾನು ಇದುವರೆಗೂ ಯಾವ ಮನುಷ್ಯನನ್ನೂ ಕೊಂದಿಲ್ಲ.” ಕುಟ್ಟಿಯ ಧ್ವನಿ ಗಡುಸಾಯಿತು.
“ನಿಜ, ಆದ್ರೆ ಮನುಷ್ಯರ ಜೀವವನ್ನು ಅಪಾಯಕ್ಕೆ ತಳ್ಳಿದ್ದೀಯಾ” ರಾತ್ರಿಯ ಘಟನೆ ನನಗೆ ನನಪಾಯಿತು.
“ನೀನೇನು ಹೇಳಬೇಂಕೆಂದಿದ್ದೀಯಾ? ಲಬಂಗಿಯ ಜತೆ ಒಂದು ರಾತ್ರಿ ಮಲಗಿದ್ದಕ್ಕೆ ನಿನ್ನ ಹೊಟ್ಟೆ ಉರೀತಿದ ಅಲ್ವ?” ಕುಟ್ಟಿ ಕೆಂಡವಾದ.
“ಕುಟ್ಬಿ!” ನಾನು ಅವನ ಕತ್ತು ಹಿಡಿಯಲು ಕೈ ಚಾಚಿದೆ.
ಆ ಕೂಡಲೇ ಕುಟ್ಟಿ ಅಕಸ್ಮಾತ್ ನನ್ನಹೊಟ್ಟೆಗೆ ಜಾಡಿಸಿ ಒದ್ದ. ನಾನು ಅವನ ಕಾಲು ಹಿಡಿದು ತಳ್ಳಿದೆ ಅವನು ನೆಗೆದು ಕೆಳಗೆ ಬಿದ್ದ. ಜತೆಗೆ ನನ್ನನ್ನೂ ಎಳೆದೊಯ್ದ. ನಾವು ಪರಸ್ಪರ ಕತ್ತು ಹಿಡಿಯುವ ಪ್ರಯತ್ನದಲ್ಲಿ ಹುಲ್ಲಿನ ಮೇಲೆ ಹೊರಳಾಡಲು ಪ್ರಾರಂಭಿಸಿದೆವು. ಝಾಬಾ ಮತ್ತು ಲಬಂಗಿ ನಮ್ಮ ಮಧ್ಯ ಪ್ರವೇಶಿಸದಿದ್ದರೆ ಬಹುಶಃ ಇಂದು ಕುಟ್ಟಿಯೂ ಇರುತ್ತಿರಲಿಲ್ಲ. ನಾನೂ ಇರುತ್ತಿರಲಿಲ್ಲ.
ನಮ್ಮಿಬ್ಪರನ್ನು ಸಮಾಧಾನಪಡಿಸುತ್ತಾ ಲಬಂಗಿ ಕುಟ್ಟಿಗೆ ಹೇಳಿದಳು. “ಕೋಬರ್ ಹೇಳ್ತಿರೋದು ಸರಿ. ಬ್ಯಾನರ್ಜಿಯನ್ನು ಕೊಲ್ಲಲೇಬೇಕು. ಆ ಕೆಲಸ ನನ್ನ ಕೈಯಾರೆ ನಾನೇ ಮಾಡ್ತೀನಿ. ಸೇಡು ತೀರಿಸಿಕೊಳ್ಳುನ ಇಂಥ ಒಳ್ಳೇ ಅವಕಾಶ ನನಗೆ ಮತ್ತೆ ಸಿಗಲ್ಲ.”
ಕುಟ್ಟಿ ಮರುಮಾತನಾಡದೆ, ಹೊರಳಿ ಮರವೊಂದಕ್ಕೆ ಒರಗಿ ಕೂತ.
ಲಬಂಗಿ ಒಂದು ದೊಡ್ಡ ಬಂಡೆಯನ್ನು ಆರಿಸಿದಳು. ಝಾಬಾನೊಂದಿಗೆ ನಾನೂ ಕಾರ್ಯ ಪ್ರವೃತ್ತನಾದೆ. ಲಬಂಗಿಯೂ ಸಹಕರಿಸಿದಳು. ಬಂಡೆ ಹೊರಳಿ
ದಡದವರೆಗೆ ಬರಲು ತಯಾರಿರಲಿಲ್ಲ! ಅದು ಅಷ್ಟೊಂದು ಮಜಬೂತಾಗಿತ್ತು. ಎಷ್ಟು ಪ್ರಯತ್ನಿಸಿದಾಗ್ಯೂ ಅರ್ಧ ಇಂಚೂ ಅಲುಗಾಡಲಿಲ್ಲ!.
ಝಾಬಾ ತಲೆ ಕೆರೆದುಕೊಂಡು ಉಪಾಯ ಯೋಚಿಸಿದ. ಒಂದು ಗಿಡವನ್ನು ಮುರಿದು ಅದರ ಎರಡು ಗಟ್ಟಿ ಕೊಂಬೆಗಳನ್ನು ಗೂಟದಂತೆ ಮಾಡಿದ. ಬಂಡೆ ಸ್ವಲ್ಪ ಮೇಲಕ್ಕೆ ಸರಿದರೆ, ಅದರ ಕೆಳಗೆ ಈ ಗೂಟಗಳನ್ನು ಸರಿಸುವುದು ಲಬಂಗಿಯ ಕೆಲಸವಾಗಿತ್ತು.
ಮತ್ತೊಮ್ಮೆ ನಾನು ಮತ್ತು ಝಾಬಾ ಉಸಿರುಗಟ್ಟಿ ಪ್ರಯತ್ನಿಸಿದೆವು. ಬಂಡೆ ಸ್ವಲ್ಪ ಮೇಲಕ್ಕೆ ಸರಿಯಿತು. ತತ್ಕ್ಷಣ ಲಬಂಗಿ ಎರಡೂ ಗೂಟಗಳನ್ನು ಕೆಳಕ್ಕೆ ಹಾಕಿದಳು. ಬಾ ಮತ್ತೆ ಲಬಂಗಿಯ ಬಳಿ ಬಂದು ಎರಡೂ ಗೂಟಗಳನ್ನು ಹಿಡಿದು ಪೂರ್ಣ ಶಕ್ತಿಯೊಂದಿಗೆ ಎತ್ತಿದ. ಬಂಡೆ ಮುಗ್ಗರಿಸಿ ಬೆಟ್ಟದ ತುದಿಯವರೆಗೂ ಬಂದಿತು. ಈಗ ಈ ಬಂಡೆಯನ್ನು ಕೆಳಗೆ ತಳ್ಳಲು ಮತ್ತೊಮ್ಮೆ ಮಾತ್ರ ಪ್ರಯತ್ನಿಸಬೇಕಿತ್ತು. ನಾವು ಮತ್ತೆ ಬಂಡೆಯ ಕೆಳಗೆ ಗೂಟ ಹಾಕಿ, ಸಮಯ ಕಾಯುತ್ತಾ ಕೂತೆವು.
ಒಮ್ಮೆಲೆ ನಾವು ವಿದ್ಯುತ್ ಶಾಕ್ ಹೊಡೆದವರಂತೆ ಎದ್ದು ನಿಂತೆವು. ಬೆಟ್ಟ ಹತ್ತುತ್ತಿದ್ದ ಕುದುರೆ ಸವಾರ ನಮ್ಮ ಕಣ್ಣುಗಳಿಂದ ಮರೆಯಾಗಿದ್ದ. ಇಲ್ಲಿಂದ ಮೇಲಕ್ಕೆ ಬರುವ ಕಾಲುಹಾದಿಯನ್ನು ನಾವು ಸ್ಪಷ್ಟವಾಗಿ ಕಾಣುತ್ತಿದ್ದೆವು. ಆದರೆ ಅದು ಶೂನ್ಯವಾಗಿತ್ತು. ಝಾಬಾ ಸಹ ನನ್ನನ್ನೇ ನೋಡುತ್ತಿದ್ದ. ನಾನು, ಅನುಮಾನಿಸಿದೆ – ಬ್ಯಾನರ್ಜಿ ಮೇಲೆ ಬರಲು ಬೇರೆ ಚಿಕ್ಕ ಮಾರ್ಗವನ್ನು ಹುಡುಕಿರಬೇಕು. ಒಂದು ವೇಳೆ ಇದು ನಿಜವಾಗಿಕ ಇದರ ಎರಡು ಪರಿಣಾಮಗಳು ನಿಶ್ಚಿತ. ಅವನು ನಮಗಿಂತ ಮುಂದ ಹೊರಟು ನಮ್ಮ ಮಾರ್ಗಕ್ಕೆ ಅಡ್ಡವಾಗಿ ನಿಲ್ಲಬಹುದು ಅಥವಾ ನಮ್ಮ ಬಳಿಯೇ ಅವನು ಮತ್ತೆ ಕಾಣಿಸಿಕೊಳ್ಳಬಹುದು.
ನಾನು ಎರಡೂ ಸಾಧ್ಯತೆಗಳನ್ನು ಬಾ ಮತ್ತು ಲಬಂಗಿಗೆ ಹೇಳಿದೆ. ನಾವು ಯಾವುದೇ ತೀರ್ಮಾನಕ್ಕೆ ಬರುವುದಕ್ಕೂ ಮೊದಲೇ ಕುದುರೆ ಸವಾರ ಮತ್ತೆ ಕಾಣಿಸಿದ. ನಾವೀಗ ಅವನನ್ನು ಸ್ಪಷ್ಟವಾಗಿ ನೋಡುತ್ತಿದ್ದೆವು. ಕುದುರೆಯ ಮುಂದೆ ತಲೆ ತಗ್ಗಿಸಿಕೊಂಡು ಬರುತ್ತಿದ್ದ ನಾಯಿಯೂ ಕಂಡಿತು. ನಾಯಿ ತನ್ನ ಬಾಲವನ್ನು ತನ್ನೆರಡು ಕಾಲುಗಳ ಮಧ್ಯೆ ಸಿಗಿಸಿಕೊಂಡಿತ್ತು; ಆಗಾಗ ತಲೆಯೆತ್ತಿ ಸುತ್ತಲೂ ನೋಡುತ್ತಿತ್ತು.
ಯಾವ ಮಾರ್ಗದಿಂದ ಬೆಟ್ಟವೇರಲು ನಾವು ಅನೇಕ ಗಂಟೆಗಳನ್ನು ಕಳೆದಿದ್ದೆವೋ ಅದೇ ಮಾರ್ಗವನ್ನು ಬ್ಯಾನರ್ಜಿ ನಿಮಿಷಗಳಲ್ಲಿ ದಾಟಿದ್ದ. ಎಷ್ಟಾದರೂ ಅವನು ಶಿಕಾರಿಯಾಗಿದ್ದ, ತೊಡಕು ಮಾರ್ಗಗಳಲ್ಲಿ ಹಾಯ್ದು ಬರುವುದು ಅವನಿಗೆ ತಿಳಿದಿತ್ತು.
ಎರಡನೆಯದಾಗಿ, ನಿನ್ನೆ ನಾವು ಝರಿಯನ್ನು ದಾಟುವಾಗ ನಾಯಿಗೆ ಕೈಕೊಡಲು ತುಂಬಾ ಪ್ರಯತ್ನಿಸಿದ್ದೆವು. ಆದರೂ ನಾಯಿ ನಮ್ಮನ್ನು ಹುಡುಕುವಲ್ಲಿ ಸಫಲವಾಗಿತ್ತು. ಬಹುಶಃ ಝರಿಯನ್ನು ದಾಟಿ ಬ್ಯಾನರ್ಜಿ ದೂರ ದೂರದವರೆಗೂ ಮಣ್ಣನ್ನು ಪರೀಕ್ಷಿಸಿ, ನಾಯಿಯನ್ನು ಹುಡುಕಲು ಬಿಟ್ಟಿರಬೇಕು!
ಬ್ಯಾನರ್ಜಿಯ ಕುದುರೆ ಸುಮಾರು ನೂರು ಅಡಿ ಕೆಳಗೆ ಕಾಣಿಸುತ್ತಲೇ ಝಾಬಾ ಲಬಂಗಿಯಂ ನೋಡಿದ. ಓಳ್ಳೆಯ ಸಮಯವಾಗಿತ್ತು. ಲಬಂಗಿ ಸಿದ್ಧಳಾಗಿ ನಿಂತಿದ್ದಳು. ಝಾಬಾ ಬಂಡೆಯನ್ನು ಬೆಟ್ಟದ ತುದಿಯಲ್ಲಿ ಹೇಗೆ ನಿಲ್ಲಿಸಿದ್ದನೆಂದರೆ, ಈಗ ಅದಕ್ಕೆ ಒಂದು ಸಾಮಾನ್ಯ ‘ಹೊಡೆತ’ ಮಾತ್ರ ಸಾಕಾಗಿತ್ತು. ಲಬಂಗಿ, ಕುಕ್ಕುರುಗಾಲಿನಲ್ಲಿ ಕೂತು ಎರಡೂ ಗೂಟಗಳನ್ನು ಬಿಗಿಯಾಗಿ ಹಿಡಿದುಕೊಂಡಳು. ಅನಂತರ ಒಮ್ಮೆಲೆ ಸ್ವಲ್ಪ ಮೇಲಕ್ಕೆತ್ತಿದಳು- ಬಂಡೆ ಗಡಗಡ ಶಬ್ದ ಮಾಡುತ್ತಾ ಕೆಳಗೆ ಉರುಳಲಾರಂಭಿಸಿತು.
ಬಂಡೆ ಚಮತ್ಕಾರವನ್ನೇ ಮಾಡಿತು. ಮಾರ್ಗದಲ್ಲಿದ್ದ ಇನ್ನೂ ಮೂರು ಬಂಡೆಗಳನ್ನು ಅದು ತನ್ನೊಂದಿಗೆ ಎಳೆಯೊಯ್ದಿತು. ಜ್ವಾಲಾಮುಖಿ ಸಿಡಿದಂತೆ ಅಥವಾ ಭೂಕಂಪ ಬಂದಂತೆ ದಿಕ್ಕುಗಳು ಪ್ರತಿಧ್ವನಿಸಿದವು.
ಒಮ್ಮೆಲೆ ನಾಲ್ಕು ಬಂಡೆಗಳಿಂದ ಪಾರಾಗುವುದು ಬ್ಯಾನರ್ಜಿಗೆ ಅಸಂಭವವಾಗಿತ್ತು. ಎದುರಿಗೆ ಸಾವನ್ನು ಕಂಡು ನಾಯಿ ತೀಕ್ಷ್ಣವಾಗಿ ಬೊಗಳಿತು. ಅದು ದುಂಡಗೆ ಸುತ್ತಲಾರಂಭಿಸಿತು. ಕುದುರೆ ತನ್ನೆರಡೂ ಕಾಲುಗಳನ್ನೆತ್ತಿ ಕೆನೆಯಲಾರಂಭಿತ್ತು.
ಬ್ಯಾನರ್ಜಿ, ಸಾವು ಮತ್ತು ಬದುಕಿನ ಈ ಸೂಕ್ಷ್ಮ ಕ್ಷಣಗಳಲ್ಲಿ ತನ್ನ ಮಾನಸಿಕ ಸಂತುಲನೆಯನ್ನು ಕಳೆದುಕೊಳ್ಳಲಿಲ್ಲ. ಪ್ರತಿಯಾಗಿ ಹಿಂದಿನ ಎರಡೂ ಕಾಲುಗಳ ಮೇಲೆ ನಿಂತಿದ್ದ ಕುದುರೆಯಿಂದ ಮೇಲೆದ್ದು ತಲೆಯ ಮೇಲೆ ನೇತಾಡುತ್ತಿದ್ದ ಮರದ ಒಂದು ಬಲಿಷ್ಠ ಕೊಂಬೆಯನ್ನು ಹಿಡಿದುಕೊಂಡ. ಅನಂತರ ಆ ಕೂಡಲೇ ಕುದುರೆಗಳ ಅಂಕೋಲೆಗಳಲ್ಲಿದ್ದ ಕಾಲುಗಳನ್ನು ಹೊರಗೆಳೆದುಕೊಂಡ. ಬ್ಯಾನರ್ಜಿ ಸುರಕ್ಷಿತವಾಗಿ ಪಾರಾಗಿದ್ದ. ಉರುಳುತ್ತಿದ್ದ ಬಂಡೆಗಳು ನಾಯಿ ಮತ್ತು ಕೆನೆಯುವ ಕುದುರೆಯನ್ನು ತನ್ನೂಂದಿಗೆ ಎಳೆದುಕೊಂಡು ಕಣಿವೆಯನ್ನು ಸೇರಿದವು.
“ನಾವೀಗ ಇಲ್ಲಿಂದ ಮತ್ತೆ ಹೋಗ್ಬೇಕು.” ಬ್ಯಾನರ್ಜಿ ಬದುಕಿದ್ದನ್ನು ಕಂಡು ನಾನು ಹೇಳಿದೆ.
“ಇಲ್ಲ! ಆ ಹಂದಿಯನ್ನು ಕೊಲ್ಲದೆ, ನಾನೊಂದು ಹೆಜ್ಜೆಯನ್ನೂ ಮುಂದಿಡಲಾರೆ” ಲಬಂಗಿ ಕೆಂಡವಾದಳು.
“ಲಬಂಗಿ, ಕತ್ತಲಾಗುತ್ತಲೇ ಬ್ಯಾನರ್ಜಿ ಯಾವ ಮಾರ್ಗದಿಂದ ಬಂದು ನಮ್ಮೆದುರು ಪ್ರತಕ್ಷನಾಗ್ತಾನೋ! ನಾವು ಬೆಟ್ಟದ ತುದಿಗೆ ಹೋಗಿ ಅಲ್ಲಿಂದ ಬೆಟ್ಟದ ಇನ್ನೊಂದು ಬಡಿಯಲ್ಲಿ ಇಳಿಯೋದು ಕ್ಷೇಮಕರ.” ನಾನು ಲಬಂಗಿಗೆ ತಿಳಿವಳಿಕೆ ಹೇಳಿದೆ.
“ಸೂರ್ಯಾಸ್ತಕ್ಕೂ ಮೊದಲು ಬ್ಯಾನರ್ಜಿ ಒಂದು ಹೆಜ್ಜೆಯನ್ನೂ ಮುಂದಿಡುವ ಧೈರ್ಯ ಮಾಡಲ್ಲ. ಈ ಸಮಯದಲ್ಲಿ ನಾವು ಬೆಟ್ಟದ ತುದಿಗೆ ಹೋಗಿ ಇನ್ನೊಂದು ಬದಿಯಲ್ಲಿ ಇಳಿಯಬಹುದು.” ಝಾಬಾ ನನ್ನ ಮಾತನ್ನು ಅನುಮೋದಿಸಿದ.
ಕುಟ್ಟಿಗೆ ನಮ್ಮ ಈ ಕಾರ್ಯತತ್ಪರತೆಯ ಬಗ್ಗೆ ಸ್ವಲ್ಪವೂ ಆಸಕ್ತಿಯಿರಲಿಲ್ಲ. ಅವನು ಪೂರ್ಣ ಘಟನೆಯನ್ನು ಓರ್ವ ಪ್ರೇಕ್ಷಕನಂತೆ ಮೌನಿಯಾಗಿ ದೂರದಲ್ಲಿ ಕೂತು ನೋಡಿದ್ದ. ಈಗ ನನಗೆ ಒಂದು ವಿಷಯದಲ್ಲಿ ಸಮಾಧಾನವಿತ್ತು. ಈಗ ಬ್ಯಾನರ್ಜಿಯ ಬಳಿ ಕುದುರೆಯೂ ಇರಲಿಲ್ಲ. ನಾಯಿಯೂ ಇರಲಿಲ್ಲ. ನಮ್ಮಂತೆಯೇ ಅವನೂ ಕಾಲ್ನಡಿಗೆಯಲ್ಲಿ ಮುಂದುವರಿದು ಬರುವವನಿದ್ದ. ನಮ್ಮವರೆಗೂ ಬರುವ ಸಾಧ್ಯತೆ ಕಡಿಮೆಯಿತ್ತು. ಆದರೂ, ಮುಂಜಾಗ್ರತೆಯಿಂದಾಗಿ ನಾವು ಅವನಿಂದ ದೂರವೇ ಇರಬೇಕಿತ್ತು.
ಸೂರ್ಯಾಸ್ತದ ಅನಂತರ ಸುಮಾರು ನಾಲ್ಕು ಗಂಟೆಗಳಲ್ಲಿ ನಾವು ತುದಿಯನ್ನು ತಲುಪಿ, ಕ್ಷಣವೂ ವಿಳಂಬಿಸದೇ ಬೆಟ್ಟದ ಇನ್ನೊಂದೆಡೆಯಲ್ಲಿ ಇಳಿದೆವು. ಆಗ ರಾತ್ರಿಯ ಸುಮಾರು ಎರಡು ಗಂಟೆಯಿರಬಹುದು!
ಆಯಾಸದಿಂದಾಗಿ ನಾವು ತೀವ್ರ ಬಳಲಿದ್ದವು. ಒಂದು ಹೆಜ್ಜೆ ಮುಂದಿಡಲೂ ಸ್ಪೂರ್ತಿಯಿರಲಿಲ್ಲ. ಝಾಬಾನ ಮುಖದಲ್ಲಿಯೂ ಆಯಾಸವಿತ್ತು. ಪಂಜಿನ ಹಳದಿ ಬೆಳಕಿನಲ್ಲಿ ಅವನ ಕಣ್ಣುಗಳು ಕಾಮಾಲೆ ರೋಗಿಯಂತೆ ಕಾಣಿಸುತ್ತಿದ್ದವು. ಕಂಪಿಸುವ ನಡಿಗೆಗಳಿಂದ ಅವನು ಹೇಸರಗತ್ತೆಯ ಬಳಿ ಹೋಗಿ ಗಿಟಾರ್ ತೆಗದುಕೊಂಡ. ಅವನು ಹಾಡುವುದಕ್ಕೂ ಮೊದಲು ಅವನನ್ನು ನಾನು ತಡೆದೆ.
“ಯಾಕೆ?” ಅವನ ಮುಖ ಬಾಡಿತ್ತು.
“ನಿನ್ನ ಗಟ್ಟಿ ಧ್ವನಿ ಕೇಳಿ ಬ್ಯಾನರ್ಜಿಗೆ ನಮ್ಮ ಪೊಜಿಶನ್ ಏನು ಅಂತ ತಿಳಿಯುತ್ತೆ!”
“ನಾನು ನಿಧಾನವಾಗಿ ಹಾಡ್ತೀನಿ!”
ನಾನು ಅವನ ಕೈಯಿಂದ ಗಿಟಾರ್ ಕಸಿದುಕೊಳ್ಳಬೇಕೆಂದಿದ್ದ. ಆಗಲೇ ಹಿಂದಿನಿಂದ ಬಂದ ಲಬಂಗಿ ನನ್ನ ಹೆಗಲುಗಳ ಮೇಲೆ ತನ್ನೆರಡು ಕೈಗಳನ್ನಿಟ್ಟು
ಹೇಳಿದಳು,
“ಈಗ ಅವನಿಗೆ ಹಾಡಲು ಹಕ್ಕಿದೆ.”
ನಾನು ವಾದ ಮಾಡಲಿಲ್ಲ.
ಕುಟ್ಟಿ ಕಲ್ಲುಗಳನ್ನು ತಿಕ್ಕಿ ಒಲೆ ಹಚ್ಜಿದ. ಲಬಂಗಿ ಅನ್ನ ಮಾಡಿ ನಮ್ಮ ನಡುವೆಯಿಟ್ಟಳು. ನೋಡು ನೋಡುತ್ತಿದ್ದಂತೆಯೇ ಪಾತ್ರೆ ಬರಿದಾಯಿತು. ಸ್ವಲ್ಪ ದೂರದಲ್ಲಿ ಪಂಜು ಉರಿಯುತ್ತಿದ್ದರಿಂದ ಒಲೆಯನ್ನು ಆರಿಸಿದೆವು. ನಾವು ಹೂಡಿದ್ದ ಬಿಡಾರ ದಟ್ಟ ಮರಗಳ ಮರೆಯಲ್ಲಿದ್ದಾಗ್ಯೂ ಪೂರ್ಣ ಎಚ್ಜರಿಕೆಯನ್ನು ವಹಿಸಬೇಕಾಗಿತ್ತು.
ಕೆಲವು ಗಂಟೆಗಳಿಗಾಗಿ ಕಾಲು ಚಾಚಿ ಮಲಗಿದೆವು. ಬೆಳಕು ಹರಿಯಲು ಒಂದು ಅಥವಾ ಎರಡು ಗಂಟೆಗಳ ಕಾಲವಿರಬಹುದು! ಇಂದು, ಕುಟ್ಟಿ ನನ್ನಿಂದ ದೂರ, ಪಂಜಿನ ಬಳಿ ಮಲಗಿದ್ದ. ಝಾಬಾ ಅವನ ಬಗಲಿನಲ್ಲಿ ಮಲಗಿದ್ದರೆ, ಲಬಂಗಿ ನನ್ನ ಬಳಿ ಮಲಗಿದ್ದಳು. ಇಂದಿನ ರ್ರಾತಿ ಲಬಂಗಿ ನನ್ನ ಹೆಂಡತಿಯಾಗಿದ್ದಳು. ಇಂದು ನನ್ನ ಸರದಿಯಾಗಿತ್ತು.
“ಲಬಂಗಿ” ನಾನು ಮೆಲ್ಲನೆ ಅವಳ ಕಿವಿಗಳಲ್ಲಿ ಉಸುರಿದೆ. ಅವಳು ಎಚ್ಚರವಾಗಿದ್ದಳು ಬಣ್ಣದ ಹಾವು ಅವಳ ಎದೆಯ ಮೇಲೆ ಸುರುಳಿ ಸುತ್ತಿ ಕೂತಿತ್ತು. ಪಂಜಿನ ಬೆಳಕಿನಲ್ಲಿ ನನಗೆ ಈ ದೃಶ್ಯ ಅಪ್ಸರೆಯ ಕಥೆಯಂತೆ ಕಂಡಿತು.
“ಲಬಂಗಿ, ಆಯಾಸವಾಗಿದೆಯಾ?” ನಾನು ಪ್ರಶ್ನಿಸಿದೆ.
“ಇಲ್ಲ! ಆದ್ರೆ ನನ್ನ ಅಭಿಪ್ರಾಯದಂತೆ ನಾನಿವತ್ತು ಝಾಬಾನನ್ನು ಖುಷಿಪಡಿಸಬೇಕು.” ಅವಳು ನನ್ನಡೆಗೆ ನೋಡದೆ ಹೇಳಿದಳು.
ಅವಳೆದೆಯ ಮೇಲಿದ್ದ ಹಾವು ನನ್ನನ್ನು ಕಚ್ಚಿದಂತಾಯಿತು. ಆದರೂ ಸುಧಾರಿಸಿಕೊಂಡು ಕಾರಣ ಕೇಳಿದೆ.
“ಇವತ್ತು ಅವನಿಗೆ ಅಧಿಕಾರವಿದೆ” ಅವಳು ತನ್ನ ಹೇಳಿಕೆಯನ್ನು ಪುನರ್ ಉಚ್ಛರಿಸಿದಳು.
“ಮತ್ತೆ ನನ್ನ ಇಂದಿನ ಅಧಿಕಾರ?”
ಉತ್ತರದಲ್ಲಿ ಲಬಂಗಿ ಒಂದು ಶಬ್ದವನ್ನೂ ಆಡಲಿಲ್ಲ. ಸುಮ್ಮನೆದ್ದು ಝಾಬಾನ ಬಳಿಗೆ ಹೋದಳು. ಕುಟ್ಟಿ ಅಲ್ಲಿಂದ ವಂಜು ಹಿಡಿದು ನನ್ನ ಬಳಿ ಬಂದ. ಪಂಜನ್ನು ಎರಡು-ಮೂರು ಕಲ್ಲುಗಳ ಮಧ್ಯೆ ಸಿಗಿಸಿ, ಮಲಗಿದ. ನನ್ನಿಂದ ಸಹಿಸಲಾಗಲಿಲ್ಲ. ನಾನೆದ್ದು ನಿಂತೆ. ಎದುರಿಗೆ ಝಾಬಾ ಸಹ ಅಲ್ಲಾವುದ್ದೀನನ ಜಿನ್ನನಂತೆ ನಿಂತ. ಲಬಂಗಿ ಅವನ ಕಾಲುಗಳ ಬಳಿ ಮಲಗಿದ್ದಳು.
ನಾನು ಮುಂದುವರೆದೆ. ಲಬಂಗಿಯನ್ನು ದಾಟಿ ಝಾಬಾ ನನ್ನೆದುರು ಬಂದ.
“ಏನು ಬೇಕು, ಕೋಬರ್?” ಝಾಬಾ ಪ್ರಾರಂಭಿಸಿದ.
“ಲಬಂಗಿ.”
“ಲಬಂಗಿ ಯಾರವಳು?”
“ನಮ್ಮ ಮೂವರಿಗೂ ಸೇರಿದವಳು.”
“ಹಾಗಾದ್ರೆ ಅವಳು ನನ್ನ ಜತೆಗೆ ರಾತ್ರಿ ಕಳೆದರೇನು. ನಿನ್ನ ಜತೆಗೆ ಕಳೆದರೇನು?”
“ಇವತ್ತು ನನ್ನ ಸರದಿ.”
“ಲಬಂಗಿ ತನ್ನಿಚ್ಛೆಯಿಂದ ನನ್ನ ಹತ್ರ ಬಂದಿದ್ದಾಳೆ”
“ನಾನು ಅವಳನ್ನು ಕರ್ಕೊಂಡು ಹೋಗೋದಕ್ಕೆ ಬಂದಿದ್ದೀನಿ.”
“ಅವಳಿಗೆ ಮನಸ್ಸಿಲ್ಲ.” ಝಾಬಾ ಕಡ್ಡಿಮುರಿದಂತೆ ಹೇಳಿದ. “ನನಗೆ ಹೇಳೋದಕ್ಕೆ ದುಃಖ ಆಗ್ತಿದೆ. ಕೋಬರ್! ನೀನೂ ಒಂದು ಸೊಳ್ಳೆಯೇ! ಕೈಯಲ್ಲಾಗದ ಸೊಳ್ಳೆ! ಮತ್ತೆ ಸೊಳ್ಳೆ. ಸೊಳ್ಳೆಗಾಗಿಯೇ ಬುದ್ಧಿ ಕಳೆದುಕೊಳ್ಳುತ್ತೆ. ಸ್ವಲ್ಪ ಅರ್ಥಮಾಡಿಕೋ, ನಾನು ಮತ್ತು ಕುಟ್ಟಿ ನಿನ್ನ ಪ್ರಾಣ ಸ್ನೇಹಿತರು!”.
ಹೀಗೆಂದು ಅವನು ಲಬಂಗಿಯ ಬಳಿಗೆ ಹೋದ. ನಾನು ಕುಟ್ಟಿಯ ಬಳಿ ಬಂದು ಮಲಗಿದೆ. ಝಾಬಾನನ್ನು ಎದುರು ಹಾಕಿಕೊಳ್ಳುವ ಧೈರ್ಯ ನನಗಿರಲಿಲ್ಲ. ಅವನ ಶಕ್ತಿಯ ಅರಿವಿತ್ತು. ಒಂದು ಮರವನ್ನೇ ಬೇರು ಸಹಿತ ಕಿತ್ತೆಸೆಯುವ ಶಕ್ತಿ ಅವನಿಗಿತ್ತು
“ಕೋಬರ್! ಒಂದು ಮಾತು ಹೇಳ್ಲಾ?” ನಾನು ಮೌನಿಯಾದದ್ದನ್ನು ಕಂಡು ಕುಟ್ಟಿ ಹೇಳಿದ
ನಾನು ಮಾತನಾಡಲಿಲ್ಲ.
“ಲಬಂಗಿ ಬರುವುದಕ್ಕೂ ಮೊದ್ಲು ಬಹುಶಃ ನಾವು ಸುಖವಾಗಿದ್ದೆವು. ಅನ್ನೋದು ನಿನಗೆ ನೆನಪಿರಬೇಕು. ಹೊಟ್ಟೆಗಿಲ್ಲದಿದ್ದರೂ ನಾವು ನಗುತ್ತಿದ್ದೆವು. ತಮಾಷೆ ಮಾಡುತ್ತಿದ್ದೆವು. ಇವತ್ತು ಲಬಂಗಿ ಇದ್ದಾಳೆ. ಹದಿನೈದು ಸಾವಿರ ನಗದು ಹಣವಿದೆ. ಸಾವಿರಾರು ರೂಪಾಯಿಗಳ ಒಡವೆಗಳಿವೆ. ಆದರೂ ನಾವು ಮನಸಾರೆ ನಗಲಾರೆವು. ಒಬ್ಪ ಮಿತ್ರನನ್ನು ಮಿತ್ರನಂತೆ ಒಪ್ಪಿಕೊಳ್ಳಲಾರೆವು. ಪ್ರತಿಯಾಗಿ, ನಾವು ಒಬ್ಪರನ್ನೊಬ್ಪರು ದ್ವೇಷದ ದೃಷ್ಟಿಯಿಂದ ನೋಡ್ತಿದ್ದೀವಿ.”
ಕುಟ್ಟಿಯ ಮಾತಿನಲ್ಲಿದ್ದ ವಾಸ್ತವ ನನಗೆ ನಾಟಿತ್ತು. ನನಗೆ ಜ್ಞಾನೋದಯವಾಯಿತು. ಲಬಂಗಿಯ ಪ್ರಭಾವದಿಂದಾಗಿ ನಾನು ಎಲ್ಲವನ್ನೂ ಮರೆತುಬಿಟ್ಟಿದ್ದ. ಈ ವಿಷವನ್ನು ಮೂತ್ರದ ಮೂಲಕ ಹೊರ ಹಾಕಲು ನಿಶ್ಚಯಿಸಿದೆ. ನನಗೆ ನಿದ್ರೆ ಆವರಿಸಿತು.
ನಾವು ಕೇವಲ ಮೂರುಗಂಟೆಗಳ ಕಾಲವಷ್ಟೇ ನಿದ್ರಿಸಬಹುದು. ಝಾಬಾ, ಇಷ್ಟು ಹೊತ್ತು ನಿದ್ರಿಸಿರಲಾರ. ಆದರೂ ಅವನೇ ಮೊದಲು ಎದ್ದು ಗೋರಿಲ್ಲಾದಂತೆ ತನ್ನೆದೆಗೆ ಮುಷ್ಟಿಗಳಿಂದ ಗುದ್ದಿಕೊಂಡು ಗಟ್ಟಿಯಾಗಿ ಕಿರುಚಿದ್ದ. ನನಗೂ ಎಚ್ಜರವಾಯಿತು. ನಾನು ಮಲಗಿರುವಂತೆಯೇ ನೋಡಿದೆ. ಮರದ ಕೊಂಬೆಗಳ ಮೇಲೆ ಜಿಗಿಯುತ್ತಿದ್ದ ಮಂಗಗಳು ಝಾಬಾನ ಚೀತ್ಕಾರಕ್ಕೆ ಉತ್ತರಿಸುತ್ತಿದ್ದವು.
ಝಾಬಾ ಖುಷಿಯಾಗಿದ್ದ, ಯಾರು ಲಬಂಗಿಯೊಂದಿಗೆ ರಾತ್ರಿಯನ್ನು ಕಳೆಯುತ್ತಿದ್ದರೋ ಅವರು ತುಂಬಾ ಉಲ್ಲಾಸಭರಿತರಾಗಿರುತ್ತಿದ್ದರು. ಇದಕ್ಕೆ ಝಾಬಾ ಅ[ಅವಾದವಾಗಿರಲಿಲ್ಲ. ತಾನು ದುರ್ಬಲನೆಂಬುದನ್ನೂ ಅವನು ಸಿದ್ದಪಡಿಸಿ ತೋರಿಸಿದ್ದ. ಲಬಂಗಿ, ಅವನಿಗೆ ಕಚ್ಚಲು ಸಾಧ್ಯವಾಗಿರಲಿಲ್ಲ. ಲಬಂಗಿಯ ವಿಷ ಕುಟ್ಟಿಯನ್ನು ಸ್ಪರ್ಶಿಸಿತ್ತು. ಆದರೂ ಅವನು ಹೊಸತನದಿಂದ ಯೋಚಿಸುತ್ತಿದ್ದದ್ದು ನನಗೆ ಆಶ್ಚರ್ಯದ ವಿಷಯವಾಗಿತ್ತು.
ಕಣಿವೆಯಲ್ಲಿ ಮುಂದುವರೆಯುತ್ತಿದ್ದಾಗ ನನಗೆ, ನಾನು ಮೂರ್ಖ, ನನ್ನ ಮನಸ್ಸು ಮತ್ತು ಬುದ್ಧಿಶಕ್ತಿಯನ್ನು ಲಬಂಗಿ ಅಪಹರಿಸಿದ್ದಾಳೆ ಎಂದನ್ನಿಸಿತು. ಬಹುಶಃ ಲಬಂಗಿ ನನ್ನ ಶೋಧನೆಯಾಗಿದ್ದೇ ಇದಕ್ಕೆ ಕಾರಣವಾಗಿತ್ತು. ನಾನು ಅವಳ ಅನೇಕ ರೂಪಗಳನ್ನು ಕಂಡಿದ್ದೆ, ಅವಳ ಎರಡೂ ಪಾರ್ಶ್ವಗಳನ್ನು ನೋಡಿದ್ದೆ. ಆದರೂ ಅವಳ ವಿಷವನ್ನು ಅರಿಯದಾಗಿದ್ದೆ.
ಲಬಂಗಿ ಯಾರು? ಇಂದು ಮತ್ತೆ ಹಳೆ ಪ್ರಶ್ನೆ ತಲೆಯೆತ್ತಿತ್ತು. ಈ ಪ್ರಶ್ನೆಗೆ ಉತ್ತರವನ್ನು ನಮ್ಮ ಮೂವರಲ್ಲಿ ಯಾರೂ ಕೊಡಲಾರರು. ಅವಳು ಬ್ಯಾನರ್ಜಿ ಹೆಂಡತಿಯಂಬುದಷ್ಟೇ ನಮಗೆ ತಿಳಿದಿತ್ತು. ವಾಸ್ತವವಾಗಿಯೂ ಅವಳು ಬ್ಯಾನರ್ಜಿಯ ಹೆಂಡತಿಯಾಗಿದ್ದಳೇ? ಬಹುಶಃ ಇರಬೇಕು. ನಿಶ್ಜಿತವಾಗಿ ಏನೂ ಹೇಳಲು ಸಾಧ್ಯವಿರಲಿಲ್ಲ.
ಹೇಸರಗತ್ತೆಯನ್ನು ಎಳೆಯುತ್ತಾ ದಬ್ಪುತ್ತಾ ನಾವು ಪೊದೆಗಳ ಮಾರ್ಗದಿಂದ ಹಾಯ್ದು ಹೋಗುತ್ತಿದ್ದೆವು. ಇದುವರೆಗೆ ನಮ್ಮ ಆಕೃತಿಯೂ ಬದಲಾಗಿತ್ತು. ಕಳೆದ ಮೂರ್ನಾಲ್ಕು ದಿನಗಳಿಂದ ನಾವು ಸ್ನಾನ ಮಾಡಿರಲಿಲ್ಲ. ಚಹಾ ಮತ್ತು ಚಿಲುಮೆಯ ಸುಖ ಸವಿದಿರಲಿಲ್ಲ. ಹಸಿವೆಯಿಂದ ಬಳಲುತ್ತಿದ್ದ ನಾವು ಸದಾ ಬರೀ ಅನ್ನವನ್ನು ತಿಂದು ಬೇಸತ್ತು ಬಿಟ್ಟಿದ್ದವು.
ನಾವು ಮೂವರೂ ನಿಕ್ಕರ್ ಮಾತ್ರ ಧರಿಸಿದ್ದರೆ, ಲಬಂಗಿ ನಿಕ್ಕರ್ ಮೇಲೆ ಶರ್ಟ್ ತೊಟ್ಟಿದ್ದಳು. ಮಾರ್ಗದಲ್ಲಿ ಮುಳ್ಳುಗಳ ಪೊದಗಳಿಂದ ಹಾಯ್ದು ಹೋದದ್ದರಿಂದಾಗಿ ಶರ್ಟ್ ಹರಿದು ಹೋಗಿತ್ತು. ಅವಳ ಸುಂದರ ಸ್ತನಗಳು ಅಲ್ಲಿಂದ ಇಣಿಕಿ ನೋಡುತ್ತಿದ್ದವು. ಲಬಂಗಿ ನನ್ನೊಂದಿಗೇ ಬರುತ್ತಿದ್ದಳು.
ಇಂದು ಕುಟ್ಟಿ ಝಾಬಾನಿಗೆ ಭಾರವಾಗದೆ, ನಮ್ಮ ಹಿಂದೆಯೇ ನಡೆದು ಬರುತ್ತಿದ್ದ. ಹೇಸರಗತ್ತೆಯ ಹಗ್ಗ ಎಳೆಯುತ್ತಾ ಝಾಬಾ ಎಲ್ಲರಿಗಿಂತ ಮುಂದೆ ಸಾಗುತ್ತಿದ್ದ. ಕಾಡಿನ ಈ ಪ್ರಯಾಣ ನಮ್ಮೆದೆ ಮತ್ತು ಬೆನ್ನಿನ ಮೇಲೆ ಗಾಯಗಳನ್ನು ಮೂಡಿಸಿತ್ತು.
ಕ್ಷಣಕಾಲ ನನಗೆ ಬ್ಯಾನರ್ಜಿಯ ನೆನಪಾಯಿತು. ಇದುವರೆಗೆ ಅವನೆಲ್ಲಿಯವರೆಗೆ ಬಂದಿರಬಹುದು? ಒಂದು ವೇಳೆ ಸೂರ್ಯಾಸ್ತದ ಅನಂತರ ಕತ್ತಲಲ್ಲಿ ಬೆಟ್ಟವೇರಲು ಪ್ರಾರಂಭಿಸಿದ್ದರೆ ಸರಿ ರಾತ್ರಿಗೆ ಬೆಟ್ಟದ ತುದಿಯನ್ನು ತಲುಪಿರಬಹುದು! ಬೆಟ್ಟದ ತುದಿಯಲ್ಲಿಯೇ ರಾತ್ರಿಯನ್ನು ಕಳೆದು ಬೆಳಗ್ಗೆ ಬೇಗನೇ ಮತ್ತೆ ಪ್ರಯಾಣ ಮುಂದುವರಿಸಿದ್ದರೆ ಇಷ್ಟರಲ್ಲಿ ಕಣಿವೆಗೆ ಬಂದಿರಬಹುದು. ಅಂದರೆ ಅವನು ನಮಗಿಂತ ಏಳು ಗಂಟೆ ದೂರ ಅಂತರದಲ್ಲಿರಬಹುದು! ಆದರೆ ವಾಸ್ತವ ಬೇರೆಯೇ ಆಗಿತ್ತು. ಶಿಕಾರಿ ಬ್ಯಾನರ್ಜಿಗೆ ಕಾಡಿನ ಸುತ್ತು ದಾರಿಯ ಪರಿಚಯವಿತ್ತು. ಅವನಿಗೆ ಶಾರ್ಟ್ ಕಟ್ ಸಹ ತಿಳಿದಿತ್ತು.
ಸ್ವಲ್ಪ ದೂರ ಸಾಗಿದ ಮೇಲೆ ನದಿಯೊಂದು ಸಿಕ್ಕಿತು. ನಾವು ಕುಣಿದು ಕುಪ್ಪಳಿಸಿದೆವು. ಕಾರಣ. ನದಿಯ ಆಕಡೆ ಒಂದು ದೊಡ್ಡ ಹಳ್ಳಿಯಿತ್ತು. ದಡದಿಂದಲೇ ಆ ಹಳ್ಳಿ ಕಾಣಿಸುತ್ತಿತ್ತು. ಅಲ್ಲಿಂದ ರೈಲೂ ಸಿಗಬಹುದೆಂದು ಮೋಗೂ ಹೇಳಿದ್ದ.
ನದಿಯ ಮೇಲ್ಭಾಗದಲ್ಲಿ ಉದ್ದನೆಯ ಹಗ್ಗದ ಸೇತುವೆಯಿತ್ತು. ಅದರ ಉದ್ದ ಸುಮಾರು ಐವತ್ತು ಅಡಿ ಇತ್ತು. ನದಿಯ ಅಗಲವೂ ಸುಮಾರು ಇಷ್ಟೇ ಇತ್ತು. ನದಿಯ ಹರಿಯುವಿಕೆಯ ಶಬ್ದ ನಮಗೆ ಹಿಡಿಸಿತ್ತು. ಕಾಡಿನ ಶಾಂತಿ ನಮಗೆ ಬೇಸರ ತಂದಿತ್ತು.
“ಕೋಬರ್!” ಸೇತುವೆ ಮೇಲೆ ಹತ್ತಿದ ಲಬಂಗಿ ನನ್ನನ್ನು ಪ್ರಶ್ನಿಸಿದಳು. “ರಾತ್ರಿ ನನ್ನ ಬಗ್ಗೆ ನೀನು ಮತ್ತು ಕುಟ್ಟಿ ಏನ್ ಮಾತಾಡಿಕೊಳ್ತಿದ್ದಿರಿ?”
“ನನಗೆ ನೆನಪಿಲ್ಲ.”
“ಕುಟ್ಟಿಯ ಪ್ರಕಾರ, ನಾನು ಬಂದಿದ್ದರಿಂದಾಗಿ ನಿಮ್ಮಲ್ಲಿ ಜಗಳ ಪ್ರಾರಂಭವಾಗಿದೆ.” ಅವಳು ನೆನಪಿಸಿದಳು.
“ಬಹುಶಃ!”
“ಇದು ನಿಜವಾಗಿದ್ದರೆ, ನಾನು ಮರಳಿ ಹೋಗಲು ಸಿದ್ಧ.”
“ಇಲ್ಲಿಂದ?”
“ಹೌದು, ಇದರಿಂದ ನಿಮಗೆ ಲಾಭವೇ ಆಗುತ್ತೆ.”
“ಅದು ಹೇಗೆ?”
“ನೆರಳಿನಂತೆ ಹಿಂಬಾಲಿಸುತ್ತಿರುವ ಬ್ಯಾನರ್ಜಿಯನ್ನು ನಾನು ಮರಳಿ ಕಳಿಸುವೆ.”
“ಪ್ರಯಾಣದ ಕಷ್ಟಗಳಿಂದ ನಿನಗೆ ಹೆದರಿಕೆಯಾಗಿದ್ದರೆ ಮರಳಿ ಹೋಗಲು ನೀನು ಸ್ವತಂತ್ರಳು!” ನಾನು ನಕ್ಕೆ.
“ದಯವಿಟ್ಟು ನನ್ನ ಬಗ್ಗೆ ತಪ್ಪು ತಿಳಿಯಬೇಡ. ನಿಮ್ಮ ಮೂವರ ಸೇವೆ ಮಾಡುವ ಅವಕಾಶವನ್ನು ನಾನು ಕಳೆದುಕೊಂಡಿಲ್ಲ. ನಾನು ನಿಮಗೆ ಅನ್ನ ಬೇಯಿಸಿಯೂ ಹಾಕಿದೆ. ನನ್ನ ಮನೇಲಿ ನಾನಂದೂ ಒಲೆಯ ಮುಖವನ್ನೇ ನೋಡಿದವಳಲ್ಲ. ನಾನು ರೇಶ್ಮೆ ಹಾಸಿಗೆಯಲ್ಲಿ ಮಲಗುವ ಹೆಣ್ಣಾದರೂ, ಹುಲ್ಲಿನ ಹಾಸಿಗೆಯಲ್ಲಿ ಮಲಗುವ ಬಗ್ಗೆ ನನ್ನ ಯಾವುದೇ ದೂರಿಲ್ಲ. ನಾನು ನಿಮ್ಮ ಮೂವರಿಗೂ ಹೆಂಡತಿಯಾಗಲೋಸುಗವೇ ನಿಮ್ಮಂತೆಯೇ ಬದುಕುತ್ತಿರುವೆ. ಆದರೂ ನೀವು ನನ್ನನ್ನು ಪರಕೀಯಳಂತೆ ಕಾಣುವುದು ನನ್ನಿಂದ ಸಹಿಸಲು ಸಾಧ್ಯವಿಲ್ಲ.” ಲಬಂಗಿ ಅತ್ತಳು.
ಲಬಂಗಿಯ ಬಲಿ ಅಧ್ಯಾಯ – 13
ನಾವಿನ್ನೂ ಅರ್ಧ ಸೇತುವೆಯನ್ನು ದಾಟಿದ್ದವು. ಆಗಲೇ ಅಕಸ್ಮಾತ್ ‘ಢಂ’ ಎಂದು ಗುಂಡಿನ ಶಬ್ದವಾಯಿತು. ಏನಾಯಿತೆಂದು ಯೋಚಿಸುವುದಕ್ಕೂ ಮೊದಲೇ ಹಾವಿನೊಂದಿಗೆ ಲಬಂಗಿಯ ದೇಹ ಗಾಳಿಯಲ್ಲಿ ನೆಗೆದು ಸೇತುವೆ ಕೆಳಗೆ ಬಿತ್ತು.
ಅವಳ ಶವ ನೀರಿನಲ್ಲಿ ‘ಛಪರ್’ ಎಂದು ಸದ್ದು ಮಾಡಿ ನದಿಯ ಪ್ರವಾಹದೊಂದಿಗೆ ಹರಿಯಲಾರಂಭಿತು.
‘ದನನನನನ್’ ಎನ್ನುತ್ತಾ ಮತ್ತೊಂದು ಗುಂಡು ನಮ್ಮ ಬೆನ್ನಹಿಂದೆ ಹಾಯ್ದು ಹೋಯಿತು. ನಾವು ನೆಗೆದು ಸೇತುವೆಯ ಮೇಲೆ ಎದೆಯೂರಿ ಮಲಗಿದೆವು. ಈ ಬಾರಿ ಗುಂಡು ಹೇಸರಗತ್ತೆಗೆ ಬಿತ್ತು. ನಮ್ಮ ಸಾವಿರಾರು ರೂಪಾಯಿಗಳನ್ನು ಹೊತ್ತಿದ್ದ ಅದು ಸೇತುವೆ ಮೇಲೆ ಬಿತ್ತು. ಬ್ಯಾನರ್ಜಿ ರೈಫಲ್ ಹಿಡಿದು ನಮ್ಮನ್ನು ಹಿಂಬಾಲಿಸುತ್ತಿದ್ದ. ಎದ್ದು ನಿಲ್ಲುವ ಧೈರ್ಯ ನಮಗಿರಲಿಲ್ಲ.
ಬ್ಯಾನರ್ಜಿ ಓಡೋಡಿ ನಮ್ಮ ಬಳಿಗೆ ಬಂದ. ಬಂದೂಕಿನ ನಳಿಗೆಯನ್ನು ಕೆಳಗೆ ಮಾಡಿ ನಮ್ಮಲ್ಲಿ ಒಬ್ಪರಿಗೆ ಗುರಿಯಿಡುವುದಕ್ಕೂ ಮೊದಲೇ ಝಾಬಾ ಮೊಣಕಾಲೂರಿ ನಿಂತು ಅವನ ಕಾಲುಗಳನ್ನು ರಭಸದಿಂದ ಎಳೆದ. ಬ್ಯಾನರ್ಜಿ ಏದುಸಿರು ಬಿಡುತ್ತಿದ್ದ ಹೇಸರಗತ್ತೆಯ ಮೇಲೆ ಬಿದ್ದ. ಅವನ ಕಣ್ಣುಗಳ ಮೇಲಿದ್ದ ಬೆಳ್ಳಿಯ ಸೂಕ್ಷ್ಮ ಫ್ರೇಮಿನ ಕನ್ನಡಕ ಹಾರಿ ಹೋಯಿತು, ಆದರೂ ಅವನು ಬಂದೂಕಿನ ಹಿಡಿತವನ್ನು ಸಡಿಲಗೊಳಿಸಲಿಲ್ಲ ಕ್ಷಣಮಾತ್ರದಲ್ಲಿ ಮತ್ತೆ ಎದ್ದು ನಿಂತು ಗುರಿಯಿಟ್ಟ. ಮರುಕ್ಷಣವೇ ಬಾ ನೆಗೆದು ಅವನ ಮೇಲೆಗರಿದ. ಗಾಳಿಯಲ್ಲಿ ಗುಂಡು ಹಾರಿತು.
ಸಮಯ ಸಿಗುತ್ತಲೇ ನಾನು ಮತ್ತು ಕುಟ್ಟಿ ಅವನ ಮೇಲೆ ಹೋಗಿ ಕೂತೆವು. ಆದರೆ ಬ್ಯಾನರ್ಜಿ ತುಂಬಾ ಬಲಶಾಲಿಯಾಗಿದ್ದ. ಝಾಬಾನಂತಹ ಬಲಿಷ್ಠ ಮತ್ತು ಧೈರ್ಯಶಾಲಿಯನ್ನೂ ಒಂದೇ ವರಸೆಗೆ ದೂರ ತಳ್ಳಿದ. ಆದರೆ ಝಾಬಾ ಸುಲಭವಾಗಿ ಹಿಂಜರಿಯುವವನಾಗಿರಲಿಲ್ಲ. ಚೆಂಡಿನಂತೆ ಹಾರಿ ಬಂದು ಬಂದೂಕು ಹಿಡಿದಿದ್ದ ಬ್ಯಾನರ್ಜಿಯ ಕೈಯನ್ನು ತಿರುವಿದ. ಬಂದೂಕು ಅವನ ಕೈಯಿಂದ ಜಾರಿಬಿದ್ದು ಸೇತುವೆಯ ಹಗ್ಗಗಳ ಮಧ್ಯದಿಂದ ನದಿಯ ಹೊಟ್ಟೆಗಿಳಿಯಿತು.
ನಾನು ಮತ್ತು ಕುಟ್ಟಿ, ಬ್ಯಾನರ್ಜಿಯ ಒಂದೊಂದು ಕಾಲನ್ನು ಉಡದಂತೆ ಹಿಡಿದಿದ್ದೆವು. ಬಾ ಅವನ ಬೆನ್ನ ಮೇಲಿದ್ದ. ಬ್ಯಾನರ್ಜಿ ಮತ್ತೊಮ್ಮೆ ಜಾಡಿಸಿ ಒದ್ದ. ಝಾಬಾ ಮರಳಿನಂತೆ ಕುಸಿದು ಬಿದ್ದ. ಅನಂತರ ತನ್ನಬಿಗಿ ಮುಷ್ಟಿಯಿಂದ ನಮ್ಮ ಕತ್ತಿಗೆ ಗುದ್ದಿದ್ದ. ನಮ್ಮ ಗಂಟಲಿನಿಂದ ನೋವಿನ ಚೀತ್ಕಾರ ಹೊರಟಿತ್ತು.
ಝಾಬಾ ಮತ್ತೆ ಎದ್ದು ನಿಂತ. ಅವನು ಬ್ಯಾನರ್ಜಿಯ ಹಿಂಭಾಗದಿಂದ ಟಾರ್ಜನ್ನಂತೆ ಬಂದು ಅವನನ್ನು ಅನಾಮತ್ತಾಗಿ ಎತ್ತಿಕೊಂಡು ಸೇತುವೆಯ ಕೆಳಗೆ ಎಸೆದ. ಇವೆಲ್ಲಾ ಎಷ್ಟು ಶೀಘ್ರವಾಗಿ ಘಟಿಸಿತೆಂದರೆ ನಮಗೆ ಇದೆಲ್ಲಾ ಕನಸೆಂದು ಕಂಡಿತು. ಕ್ಷಣಕಾಲ ನಾವು ಮೂರ್ಖರಂತೆ ಒಬ್ಪರನ್ನೊಬ್ಪರು ನೋಡಿಕೊಂಡೆವು. ಅನಂತರ ಎಚ್ಚೆತ್ತು ಸುತ್ತಮುತ್ತ ನೋಡಿದವು. ಬ್ಯಾನರ್ಜಿ ನೀರಿನ ಸಮತಲಕ್ಕೆ ಬಂದು ಮುಳುಗು ಹಾಕಿದ. ಬಹುಶಃ ಅವನು ತನ್ನ ರೈಫಲ್ ಹುಡುಕುತ್ತಿದ್ದ. ಬಾ, ಸೇತುವೆ ಮೇಲೆ ಹೆಚ್ಚು ಸಮಯವನ್ನು ಕಳೆಯದೆ, ಸತ್ತ ಹೇಸರಗತ್ತೆಯ ಬೆನ್ನಮೇಲಿಂದ ಎರಡೂ ಚೀಲಗಳನ್ನು ತೆಗೆದುಕೊಂಡು ತನ್ನ ಹೆಗಲುಗಳ ಮೇಲಿಟ್ಟುಕೊಂಡ. ಒಂದು ಚೀಲದಲ್ಲಿ ನಮ್ಮ ಫೋಟೋಗ್ರಫಿಯ ಸಾಮಾನುಗಳು ಮತ್ತು ಮೂವಿ ಕ್ಯಾಮೆರಾ ಇದ್ದರೆ ಇನ್ನೊಂದರಲ್ಲಿ ಕೊಳ್ಳೆಹೊಡೆದ ಮಾಲಿತ್ತು. ನಾವೀಗ ಓಡಲಾರಂಭಿಸಿದೆವು.
ಬ್ಯಾನರ್ಜಿ ನಮ್ಮನ್ನು ಹುಡುಕಿಕೊಂಡು ಬರುವುದು ಖಾತರಿಯಾಗಿತ್ತು. ತನ್ನ ನಿರ್ಧಾರದ ಬಗ್ಗೆ ಅವನು ಅಚಲನಾಗಿದ್ದ. ನಮ್ಮ ಜೀವ ಅಥವಾ ಅವನ ಜೀವ! ಸಾವು-ಬದುಕಿನ ಆಟ ನಡೆಯುತ್ತಿತ್ತು. ಈ ಆಟದಲ್ಲಿ ನಾವು ಲಬಂಗಿ ಮತ್ತು ಹೇಸರಗತ್ತೆಯನ್ನು ಕಳೆದುಕೊಂಡಿದ್ದೆವು.
ಸೇತುವೆ ದಾಟಿ, ಹಿಂದಕ್ಕೆ ನೋಡದೆ ಹಳ್ಳಿಯೆಡೆಗೆ ಓಟಕಿತ್ತೆವು. ಅದೊಂದು ಸಣ್ಣ ಹಳ್ಳಿಯಾಗಿದ್ದರೂ ಅಲ್ಲಿ ವಿದ್ಯುಚ್ಛಕ್ತಿ ಇತ್ತು. ನಲ್ಲಿಗಳಿದ್ದವು. ಒಂದು ಫ್ಯಾಮಿಲಿ ವೆಲ್ಫೇರ್ ಸೆಂಟರ್ ಸಹ ಇತ್ತು. ಈ ಹಳ್ಳಿ ಉತ್ತಮವಾದ ಪ್ರಗತಿಯನ್ನು ಸಾಧಿಸಿತ್ತು. ಪ್ರಗತಿಯಿದ್ದಲ್ಲಿ ಪತನವೂ ಸಾಧ್ಯ. ಒಂದುವೇಳೆ ನನ್ನ ಮಾತು ತಪ್ಪಾಗದಿದ್ದರೆ ಈ ಹಳ್ಳಿಯಲ್ಲಿ ವೇಶ್ಯೆಯರೂ ಇರಬೇಕು.
ನಾವೀಗ ಸ್ವಲ್ಪ ನಿಶ್ಜಿಂತರಾಗಿದ್ದೆವು. ವಿಪತ್ತಿನ ಅಗಾಧ ಸಾಗರವನ್ನು ದಾಟಿ ದಡಕ್ಕೆ ಬಂದಿದ್ದೆವು. ಮೋಗೂವಿನ ಪ್ರಕಾರ ಇಲ್ಲಿಂದ ಏಳೂವರೆಯ ಲೋಕಲ್ ಟ್ರೈನ್ ಹಿಡಿದು ಬೆಳಗ್ಗೆ ಕಲ್ಕತ್ತಾಕ್ಕೆ ಹೋಗಬಹುದಿತ್ತು. ಕಲ್ಕತ್ತೆಯಿಂದ ಮೇಲ್ ಹಿಡಿದು ಮುಂಬಯಿ ಮಾರ್ಗವಾಗಿ ಎಲ್ಲಿಗೆ ಬೇಕಾದರೂ ಹೋಗಬಹುದಿತ್ತು. ಕುಟ್ಟಿಗೆ ಮದ್ರಾಸ್ಗೆ ಹೋಗುವ ಆಸೆಯಿತ್ತು. ಮದ್ರಾಸಿನ ಒಂದು ಸಣ್ಣ ಹಳ್ಳಿಯಲ್ಲಿ ಅವನ ತಂದೆಯ ಹೊಲವಿತ್ತು.
ಸೂರ್ಯ ಯಾವಾಗಲೋ ಮುಳುಗಿದ್ದ. ಹಳ್ಳಿಯ ಮಧ್ಯದಲ್ಲಿ ನಿಂತಿದ್ದ ಟಾವರ್ ಗಡಿಯರಾರ ಏಳು ಸಲ ಬಾರಿಸಿತು. ನಾವು ನಡಿಗೆಯನ್ನು ಚುರುಕುಗೊಳಿಸಿದವು. ಇಲ್ಲಿಂದ ರೈಲು ನಿಲ್ದಾಣ ಇನ್ನೂ ಒಂದರ್ಧ ಮೈಲಿಯಿತ್ತು. ಮಾರ್ಗದಲ್ಲಿ ಒಂದು ಜಟಕಾಗಾಡಿ ಸಿಕ್ಕಿತು. ನಾವು ಅದರಲ್ಲಿ ಹತ್ತಿದವು.
ಚೀಲದಿಂದ ನೋಟಿನ ಕಟ್ಟನ್ನು ತೆಗೆದು, ಹತ್ತು ರೂಪಾಯಿಯ ನೋಟನ್ನು ಎಳೆದು ಗಾಡಿಯವನಿಗೆ ಕೊಡುತ್ತಾ ಹೇಳಿದೆ “ನೋಡಪ್ಪಾ! ಏಳೂವರೆಯ ಲೋಕಲ್ ಟ್ರೈನನ್ನು ನಾವು ಹಿಡಿಯಬೇಕು. ಸಮಯಕ್ಕೆ ಸರಿಯಾಗಿ ನೀನು ಹೋದರೆ ಈ ನೋಟು ನಿನಗೆ!”
ಕುದುರೆ ಗಾಳಿಯ ವೇಗದಲ್ಲಿ ಓಡಿತು. ಹಳ್ಳ-ದಿಣ್ಣೆಗಳ ಮೇಲೆ ಸಾಗುತ್ತಾ ಜಟಕಾ ಹಳ್ಳಿಯ ಮಧ್ಯಭಾಗದಿಂದ ಹೋಗುತ್ತಿತ್ತು. ಹಳ್ಳಿಯ ಹೆಸರು ‘ಸೋನಾಪಟ್ಟಿ’ಯಾಗಿತ್ತು. ಇಪ್ಪತ್ತೆರಡು ಕ್ಯಾರೆಟ್ನ ಬಂಗಾರದಂತೆ ಈ ಹಳ್ಳಿ ಸ್ವಚ್ಛವಾಗಿತ್ತು. ಮಣ್ಣಿನ ರಸ್ತೆಗಳಾಗಿದ್ದರೂ ಅಗಲವಾಗಿದ್ದವು. ರಸ್ತೆಯ ಎರಡೂ ಬದಿ ಸ್ವಲ್ಪ-ಸ್ವಲ್ಪವೇ ಅಂತರದಲ್ಲಿ ಮರಗಳೂ ಇದ್ದವು.
ಜಟಕಾ ಸರ್ಕಲ್ನಿಂದ ಹೊರಳಿದಾಗ ಹೆಚ್ಚು ಮನಗಳು ತುಂಬಾ ಕುಳ್ಳಗಿರುವುದನ್ನು ಕಂಡೆ. ಒಂದಂತಸ್ತಿನ ಕೆಲವು ಬಂಗ್ಲೆಗಳೂ ಕಾಣಿಸಿದವು. ಮೂರು ಅಂತಸ್ತಿನ ಒಂದು ಬಂಗ್ಲೆಯೂ ತಲೆಯೆತ್ತಿತ್ತು. ಇದು ಈ ಹಳ್ಳಿಯ ಭವ್ಯ ಹೋಟೆಲ್, ಇಲ್ಲಿ ಕೂತು ಮದ್ಯವನ್ನು ಸೇವಿಸಬಹುದೆಂದು ಗಾಡಿಯವನು ಹೇಳಿದ.
ರೈಲ್ವೆ ಸ್ಟೇಷನ್ ಬಂದಾಗ ನಾವು ಮೂವರು ಜಟಕಾರಿಂದ ಕೆಳಗೆ ಹಾರಿದೆವು. ಝಾಬಾ ಮತ್ತೆ ಎರಡು ಚೀಲಗಳನ್ನೂ ಹೆಗಲ ಮೇಲೆ ಹೊತ್ತುಕೊಂಡ. ನಾವು ಓಡಿ ಟಿಕೇಟ್ ಕೌಂಟರ್ ಬಳಿ ಹೋದಾಗ ಎದೆ ಧಸಕ್ಎಂದಿತ್ತು. ಕಲ್ಕತ್ತಾ ಲೋಕಲ್ ಟ್ರೈನ್ ಇಂದು ಆರು ಗಂಟೆ ತಡವಾಗಿ ಬರುತ್ತಿತ್ತು!
ನಮ್ಮ ಮುಖಗಳು ಹಳದಿಯಾದವು. ಕಾಲುಗಳು ಸಡಿಲಗೊಂಡವು. ಈ ಆರು ಗಂಟೆಗಳಲ್ಲಿ ಬ್ಯಾನರ್ಜಿಗೆ ನಮ್ಮನ್ನು ಹುಡುಕುವುದು ಸುಲಭವಾಗಿತ್ತು. ಅವನಿಗೂ, ನಾವು ಕಲ್ಕತ್ತಾದ ಲೋಕಲ್ ಟ್ರೈನ್ ಹಿಡಿದು ಸುರಕ್ಷಿತವಾಗಿ ತಪ್ಪಿಸಿಕೊಳ್ಳುವ ಪ್ಲಾನ್ ಮಾಡಿದ್ದೇವೆಂಬ ವಿಚಾರ ತಿಳಿದಿರಬೇಕು!
ನಾವು ಟಿಕೇಟ್ ಖರೀದಿಸಿ ಗಂಭೀರವಾಗಿ ಯೋಚಿಸಿದೆವು. ಈ ಹಳ್ಳಿಯಲ್ಲಿ ಸುರಕ್ಷಿತವಾದ ಜಾಗವೊಂದನ್ನು ನಾವು ಹುಡುಕಬೇಕಿತ್ತು. ಯಾಕೆಂದರೆ, ಬ್ಯಾನರ್ಜಿಯೂ ಈ ಹಳ್ಳಿಗೆ ಬಂದು, ಓಡೋಡಿ ಸ್ಟೇಷನ್ಗೆ ಬರುವವನಿದ್ದ. ಟ್ರೈನ್ ತಡವಾದ ಬಗ್ಗೆ ನಮಗೆಷ್ಟು ದುಃಖವಾಗಿತ್ತೋ, ಅಪ್ಪೇ ಸಂತೋಷ ಅವನಿಗಾಗುತ್ತಿತ್ತು.
ಇಲ್ಲಿಂದ ಅವನು ಹೊಸದಾಗಿ ನಮ್ಮನ್ನು ಹುಡುಕುವ ಪ್ರಯತ್ನ ಮಾಡುತ್ತಿದ್ದ. ಸಹಜವಾಗಿ ಅವನು ಧರ್ಮಛತ್ರಗಳಲ್ಲಿ ಮತ್ತು ಚಿಕ್ಕ ಚಿಕ್ಕ ಹೋಟೆಲುಗಳಲ್ಲಿ ಹುಡುಕಬಹುದು. ಇಲ್ಲಿ ನಮಗೆ ಆಶ್ರಯ ಕೊಡುವಂತಹ ಯಾವ ಮನೆಯೂ ಇರಲಿಲ್ಲ.
“ಕೋಬರ್, ಇಲ್ಲಿ ನಮಗೆ ಆಶ್ರಯ ಕೊಡುವಂತಹ ಮನೆ ಇರಲೇಬೇಕು.”
ಕುಟ್ಟಿಯ ಮಾತಿನ ಅರ್ಥ ನನಗೆ ತಿಳಿಯಿತು.
ಜಟಕಾ ಗಾಡಿಯವನು ಕುದುರೆಗೆ ಹುಲ್ಲುಹಾಕಿ ಬೀಡಿ ಸೇದುತ್ತಾ ನಿಂತಿದ್ದ. ಅವನು ಲಖನೌ-ಟೋಪಿ, ಬಿಳಿ ಅಂಗಿ ಮತ್ತು ಕಸೂತಿಯುಳ್ಳ ಚಪ್ಪಲಿಗಳನ್ನು ಧರಿಸಿದ್ದ. ಆದರೆ ಬಟ್ಟೆ ಕೊಳಕಾಗಿದ್ದವು. ಯೂನಿಯನ್ ಜಾಕ್ ಜಾಗದಲ್ಲಿ ಅವನು ತ್ರಿವರ್ಣ ದ್ವಜವನ್ನು ನೋಡಿದ್ದ. ವಯಸ್ಸು ಅರವತ್ತು ದಾಟಿತ್ತು.
“ನಿನ್ನ ಹೆಸರೇನು?” ಅವನ ಬಳಿ ಬಂದೆ.
“ಸೇವಕನಿಗೆ, ‘ನವಾಬ್ ನಜಾಕತ್ ಅಲಿ ಖಾನ್’ ಎನ್ನುತ್ತಾರೆ. ಆದರೆ ನನ್ನ ಈ ಕಷ್ಟದ ದಿನಗಳಲ್ಲಿ ನಾನು ಅಲಿ ಎಂದೇ ಪರಿಚಿತ.” ಅವನು ಬೀಡಿಯ ಧಂ ಎಳೆದ.
“ನೋಡು ಅಲಿ! ನಾವು, ಅರ್ಧ ರಾತ್ರಿಯನ್ನು ಮಜವಾಗಿ ಕಳೆಯುವಂತಹ ಸ್ಥಳ ಇಲ್ಲಿದೆಯಾ?” ನಾನು ಹತ್ತರ ಮತ್ತೊಂದು ನೋಟನ್ನು ಅವನೆದುರಿಗೆ ಹಿಡಿದೆ.
“ಅನ್ನದಾತ! ನೀವು ಬೆಳಗಾಗುವವರೆಗೂ ಮಜ ಮಾಡುವ ಸ್ಥಳವೂ ನನಗ್ಗೊತ್ತು.” ಅಲಿ ಖುಷಿಯಾಗಿ ನೋಟನ್ನು ಜೇಬಿಗಿಳಿಸಿ ನಮಗೆ ಸಂಜ್ಞೆ ಮಾಡಿದ. ನಾವು ಕೂಡಲೇ ಜಟಕಾ ಹತ್ತಿದೆವು. ರೈಲ್ವೆ ಸ್ಟೇಷನ್ನಿನ ಬಯಲಲ್ಲಿ ನಿಂತಿದ್ದ ಜಟಕಾ ಗಾಡಿ ಎಡಗಡೆಯ ಗೇಟಿನಿಂದ ಹೊರ ಹೋಯಿತು. ಆ ಕ್ಷಣವೆ ಬಲಗಡೆಯ ಗೇಟಿನಲ್ಲಿ ಇನ್ನೊಂದು ಜಟಕಾ ಅವಸರದಿಂದ ಒಳನುಗ್ಗುತ್ತಿರುವುದು ಕಂಡಿತು. ನಾವು ಮೂವರೂ ಆ ಕಡೆಗೇ ನೋಡಿದೆವು. ಬ್ಯಾನರ್ಜಿ ಬಂದೂಕು ಹಿಡಿದು ಜಟಕಾದಿಂದ ಹಾರಿ ಪ್ಲಾಟ್ ಫಾರಂ ಕಡೆಗೆ ಹೋಗ್ತಿದ್ದ.
ಅಗಲ ರಸ್ತೆಯಿಂದ ಹೊರಳಿದ ನಮ್ಮ ಜಟಕಾಗಾಡಿ ಮರಳಿ ಸರ್ಕಲ್ಗೆ ಬಂದು, ಚಿಕ್ಕಪುಟ್ಟ ಗಲ್ಲಿಗಳಿಂದ ಹಾಯ್ದು ಒಂದು ಸಂಕೀರ್ಣ ಗಲ್ಲಿಯಲ್ಲಿದ್ದ ಅಂಧಕಾರವಿದ್ದ ಮನೆಯೆದುರು ನಿಂತಿತು. ನಾವು ಗಾಡಿಯಲ್ಲಿ ಕೂತೆವು. ಅಲಿ, ಆರಿದ ಬೀಡಿಯನ್ನು ಮತ್ತೆ ಹೊತ್ತಿಸಿಕೊಂಡು ಮನೆಯ ಬಾಗಿಲನ್ನು ತಟ್ಟಿದ.
ಸುತ್ತಮುತ್ತ ಅಂಧಕಾರವಿತ್ತು, ಆಕಾಶ ಕೊಳಕಾಗಿತ್ತು. ನಮ್ಮ ಶರೀರ ಮತ್ತೂ ಹೆಚ್ಚು ಕೊಳಕಾಗಿತ್ತು.
ಕಚ-ಕಚ ಶಬ್ದಮಾಡುತ್ತಾ ಬಾಗಿಲು ಸ್ವಲ್ಪ ತೆರೆದುಕೊಂಡಿತು. ಅಲಿ, ಎದುರಿಗೆ ನಿಂತಿದ್ದ ನೆರಳಿನೊಂದಿಗೆ ಪಿಸುಗುಟ್ಟಿದ. ಕತ್ತಲಲ್ಲಿ ನಮಗೆ ಇಬ್ಪರ ಮುಖವೂ ಕಾಣಿಸುತ್ತಿರಲಿಲ್ಲ. ಮಿಂಚುಹುಳದಂತೆ ಕತ್ತಲಿನಲ್ಲಿ ಅವನ ಬೀಡಿ ಮ್ರಾತ ಮಿನುಗುತ್ತಿತ್ತು.
ಸ್ವಲ್ಪ ಹೊತ್ತಿನ ಅನಂತರ ಅಲಿ ನನ್ನ ಬಳಿ ಬಂದು ಹೇಳಿದ, ‘ಸಾಹೇಬ್ರೆ! ಮನೆಯೊಡತಿ ಮೂರು ಹುಡುಗಿಯರಿಗೆ ಮುನ್ನೂರು ರೂಪಾಯಿ ಕೇಳ್ತಿದ್ದಾಳೆ.
ನಾನು ಇನ್ನೂರು ಕೊಡ್ತೀನಿ ಅಂತ ಹೇಳ್ದೆ! ನೀವು ಒಪ್ಪಿದರೆ…
ಯೋಚಿಸಲು ಸಮಯವಿರಲಿಲ್ಲ. ಚೌಕಾಸಿ ಮಾಡಲು ಸಮಯವಿರಲಿಲ್ಲ. ಕುಲೀನಸ್ತ ಗಿರಾಕಿಗಳು ದುಡ್ಡು ನೋಡಲ್ಲ! ಸರಿ, ನಾವು ಜಟಕಾರಿಂದ ಕೆಳಗೆ ಹಾರಿದವು.
ಅಲಿಗೆ ನಾನು ಮತ್ತೆ ಹತ್ತರ ನೋಟನ್ನು ಉಡುಗೊರೆಯಾಗಿ ಕೊಟ್ಟು ಅರ್ಧ ರಾತ್ರಿಗೆ ಮತ್ತೆ ಇಲ್ಲಿಗೇ ಬರುವಂತೆ ಆದೇಶಿಸಿದೆ. ಝಾಬಾ ಮತ್ತೆ ಎರಡು ಚೀಲಗಳನ್ನು ಹೆಗಲ ಮೇಲೆ ಹೊತ್ತುಕೊಂಡ. ನಾವು ಬಾಗಿಲ ಬಳಿಗೆ ಬಂದು ನಿಂತಾಗ ಮನೆಯೊಡತಿ ಒಳಗಿನಿಂದ ಲಾಂದ್ರ ಹಚ್ಚಿ ತಂದಳು. ಇವಳಿಗೂ, ನಮ್ಮ ದುಲಈಗೂ ಯಾವ ವ್ಯತ್ಯಾಸವಿರಲಿಲ್ಲ ಕ್ಷಣಕಾಲ ನನಗೆ ದುಲಈಯ ನೆನಪಾಯಿತು.
ಮನೆಯೊಡತಿಯನ್ನು ಹಿಂಬಾಲಿಸುತ್ತಾ ನಾವು ವರಾಂಡ ದಾಟಿ ಒಂದು ಕೋಣೆಗೆ ಬಂದೆವು. ಅವಳು ಒಂದು ಕೋಣೆಯಿಂದ ಇನ್ನೊಂದು ಕೋಣೆಗೆ, ಇನ್ನೊಂದರಿಂದ ಮಗುದೊಂದು ಕೋಣೆಗೆ ಹೋದಳು. ಲಾಂದ್ರದ ಮಂದ ಬೆಳಕನ್ನು ಹೊರತುಪಡಿಸಿ ಇನ್ಯಾವ ಬೆಳಕೂ ನಮಗೆ ಕಾಣಿಸಲಿಲ್ಲ.
ಮನೆಯೊಡತಿ ಈಗ ಅಟ್ಟದ ಮೆಟ್ಟಲುಗಳನ್ನು ಹತ್ತಿದಳು. ನಾವೂ ಅವಳ ಹಿಂದ ಬಂದೆವು. ಮತ್ತೊಂದು ಬಾಗಿಲು ತೆರೆಯಿತು ಇಲ್ಲಿ ಕೂರಲು ಜಮಖಾನದ ಮೇಲೆ ಮೆತ್ತನೆ ಹಾಸಿಗೆ ಮತ್ತು ತಲೆದಿಂಬುಗಳನ್ನು ಇಡಲಾಗಿತ್ತು. ತಲೆಯ ಮೇಲೆ ಅರುವತ್ತು ಕ್ಯಾಂಡಲ್ನ ಬಲ್ಬ್ ಉರಿಯುತ್ತಿತ್ತು. ಬಲಗಡೆಗೆ ಇನ್ನೆರಡು ಕಿಟಕಿಗಳಿದ್ದು, ಅವುಗಳಿಗೆ ಪರದೆಗಳನ್ನು ಹಾಕಲಾಗಿತ್ತು. ಮನೆಯೊಡತಿ ಫ್ಯಾನಿನ ಸ್ವಿಚ್ ಒತ್ತಿದಳು. ಚರ-ಚರ ಎನ್ನುತ್ತಾ ಫ್ಯಾನ್ ತಿರುಗಲಾರಂಭಿಸಿತು.
ಮನೆಯೊಡತಿ ಲಾಂದ್ರ ಆರಿಸಿ ಪ್ರಥಮ ಬಾರಿಗೆ ನಮ್ಮನ್ನು ನೋಡಿದಳು. ಮಂಗಳ ಗ್ರಹದ ಮೂರು ಪ್ರಾಣಿಗಳಂತೆ ಆಶ್ಚರ್ಯದಿಂದ ನೋಡುತ್ತಲೇ ನಿಂತುಬಿಟ್ಟಳು! ನಮ್ಮ ಆಕಾರ-ರೂಪ ಹೇಗಿತ್ತೆಂದರೆ ಕತ್ತಲೆಯಲ್ಲಿ ಯಾವುದಾದರೂ ಮಗು ನಮ್ಮನ್ನು ನೋಡಿದ್ದರೆ ಹೆದರಿಕೊಂಡು ಬಿಡುತ್ತಿತ್ತು. ಕೆದರಿದ ನಮ್ಮ ತಲೆಗೂದಲುಗಳು, ಕುಟ್ಟಿಯ ಕೆದರಿದ್ದ, ಗಾಳಿಗೆ ಅಲ್ಲಾಡುತ್ತಿದ್ದ ಗಡ್ಡ, ಎದೆಯನ್ನು ಮುಟ್ಟುತ್ತಿದ್ದ ನನ್ನ ಗಡ್ಡ, ಜೇನುಗೂಡಿನಂತಹ ಝಾಬಾನ ಗಡ್ಡ, ಅರ್ಧ ನಗ್ನ, ಗಾಯಗೊಂಡ ಶರೀರ, ಸೊಂಟಕ್ಕೆ ಕೇವಲ ನಿಕ್ಕರ್, ಹೊಟ್ಟೆಯಲ್ಲಿ ಹಸಿವು ಮತ್ತು ಜತೆಯಲ್ಲಿ ಎರಡು ಚೀಲಗಳು!
ಝಾಬಾ, ಮನೆಯೊಡತಿಯನ್ನು ಲೆಕ್ಕಿಸದೆ ಎರಡೂ ಚೀಲಗಳನ್ನು ಕೋಣೆಯಲ್ಲಿ ಎಸೆದು ಹಾಸಿಗೆಮೇಲೆ ಕಾಲುಗಳನ್ನು ಚಾಚಿ ಮಲಗಿದ. ನೋಡು- ನೋಡುತ್ತಿದಂತೆಯೇ ಅವನು ಗೊರಕೆ ಹೊಡೆಯಲೂ ಪ್ರಾರಂಭಿಸಿದ್ದ!
“ಮೊದ್ಲು, ನಾವು ಸ್ನಾನಮಾಡ್ತೀವಿ ಬಿಸಿನೀರು ಸಿಗುತ್ತಾ?” ನೂರು ರೂಪಾಯಿಯ ನೋಟನ್ನು ನಾನು ಮನೆಯೊಡತಿಯೆದುರು ಹಿಡಿದೆ.
“ಪೂರ್ತಿ ಹಣವನ್ನು ನೀವು ಅಡ್ವಾನ್ಸ್ ಕೊಡ್ಪೇಕು” ಮನೆಯೊಡತಿ ನಮ್ಮಡೆಗೆ ನೋಡಿದಳು.
“ನಾವು ಗೌರವಸ್ಥರು” ಕುಟ್ಟಿ ಗೇಲಿಮಾಡಿದ, ಅವಳಿಗರಿವಾಗದಂತೆ!
“ಗೌರವಸ್ಥರಿಂದಲೇ ನಾವೂ ಪೂರ್ತಿ ಹಣ ಅಡ್ವಾನ್ಸ್ ತಗೋಳ್ಳೋದು” ಮನೆಯೊಡತಿ ತತ್ಕ್ಷಣ ಹೇಳಿದಳು.
ಬೆನ್ನಿಗೆ ಬಾರುಕೋಲಿನ ಹೊಡೆತ ಬಿದ್ದಂತೆ ಕುಟ್ಟಿ ತಳಮಳಿಸಿದ.
ನಾನು ಇನ್ನೊಂದು ನೋಟು ತೆಗೆದು, ಎರಡೂ ನೋಟುಗಳನ್ನು ಅವಳಿಗೆ ಕೊಟ್ಟೆ. ಈಗ ಅವಳು ನಿಶ್ಜಿಂತಳಾದಳು. ಇದುವರೆಗೆ ಅವಳು ನಮ್ಮನ್ನು ಕಳ್ಳರು, ದರೋಡೆಕೋರರು ಎಂದು ತಿಳಿದಿದ್ದಳು. ಎರಡೂ ನೋಟುಗಳನ್ನು ಬಲ್ಪ್ನೆದುರು ಹಿಡಿದು ಪರೀಕ್ಷಿಸಿ ಅನಂತರ ಮುಗುಳ್ನಕ್ಕಳು.
“ಬಹುಶಃ ನಿಮಗೆ ಗೊತ್ತಿರಲಿಕ್ಕಿಲ್ಲ” ಎರಡೂ ನೋಟುಗಳನ್ನು ತನ್ನ ರವಿಕೆಯೊಳಗೆ ತೂರಿಸಿಕೊಳ್ಳುತ್ತಾ ಅವಳು ಗರ್ವದಿಂದ ಹೇಳಿದಳು, “ಈ ಹಳ್ಳಿಯಲ್ಲಿ ನಮ್ಮ ಮನೆ ಶ್ರೇಷ್ಠ. ಇಲ್ಲಿಗೆ ಮಂತ್ರಿಗಳು, ಲಾಯರ್ಗಳೂ ಬರ್ತಾರೆ. ಒಮ್ಮೆ ಬಂದ ಗಿರಾಕಿ ಮತ್ತೆಲ್ಲೂ ಹೋಗೋದಕ್ಕೆ ಯೋಚ್ನೆ ಸಹ ಮಾಡಲ್ಲ! ನೀವು ಕಾಫಿ-ತಿಂಡಿ ತಗೊಳ್ತೀರಾ”?
“ಸ್ನಾನವಾದ ಮೇಲೆ ಒಳ್ಳೆಯ ಭೋಜನ ತೆಗೆದುಕೊಳ್ತೀವಿ!”
“ಅದಕ್ಕೆ ಬೇರೆ ಬಿಲ್ ಆಗುತ್ತೆ.”
ನೂರರ ಇನ್ನೊಂದು ನೋಟನ್ನು ಅವಳ ಕೈಗೆ ಹಾಕಿದೆ. ಅವಳಿಗೆ ಆಶ್ಚರ್ಯವಾಯಿತು.
“ನೀವು ಯುವುದಾದ್ರೂ ಬ್ಯಾಂಕನ್ನು ಲೂಟಿ ಮಾಡಿಲ್ಲತಾನೆ?” ಎಂದು ಮತ್ತೆ ಮುಂದುವರಿಸಿದಳು. “ಲೂಟಿಮಾಡಿದ್ದರೂ ನಿಶ್ಚಿಂತೆಯಿಂದಿರಿ. ಸಾಹಸದ ಆಟ ಆಡುವವರನ್ನು ನಾವು ಗೌರವಿಸ್ತೇವೆ ನೀವೀಗ ಐದ್ಹತ್ತುನಿಮಿಷ ಹರಟೆ ಹೊಡೆಯುತ್ತಿರಿ. ನಾನು ಸ್ನಾನಕ್ಕೆ ನೀರು ರೆಡಿಮಾಡಿ ಹುಡುಗಿಯರನ್ನು ಕಳಿಸ್ತೀನಿ. ಅವರೇ ನಿಮಗೆ ಸ್ನಾನ ಮಾಡಿಸ್ತಾರೆ. ಆದರೆ ಒಂದು ಮಾತು ಮರೆಯಬೇಡಿ. ನಮ್ಮ ಹುಡುಗಿಯರು ಎಷ್ಟು ಕೋಮಲೆಯರೋ ಅಷ್ಟೇ ಸ್ವಾಮಿನಿಷ್ಟಾ ಸೇವಕಿಯರು. ಎಷ್ಟೋ ವರ್ಷಗಳ ಪರಿಶ್ರಮದ ಅನಂತರ ಇಲ್ಲಿ ಒಬ್ಪ ಹುಡುಗಿ ಅತಿಥಿಯ ಸೇವೆ ಮಾಡಲು ಸಿದ್ಧಳಾಗ್ತಾಳೆ. ನಮ್ಮ ಹುಡುಗಿಯರು ಕೊಡುವಷ್ಟು ಪ್ರೀತಿ-ಸುಖ ನಿಮಗೆ ಇನ್ನೆಲ್ಲೂ ಸಿಗಲ್ಲ. ನೀವು ಆ ಹುಡುಗಿಯರ ಸೇವೆಯನ್ನು ಗೌರವಿಸ್ತೀರ ಅಂತ ನಾನು ತಿಳಿದುಕೊಂಡಿದ್ದೀನಿ”.
ಮನೆಯೊಡತಿ ಹಿಂದಿನ ಬಾಗಿಲಿನ ವರದೆಯೊಳಗೆ ಹೋದಾಗ ನಾನು ಮತ್ತು ಕುಟ್ಟಿ ಸೋಪಾದ ಮೇಲೆ ಕೂತೆವು. ಝಾಬಾ ಗೊರಕೆ ಹೊಡೆಯುತ್ತಿದ್ದ. ಹಸಿದ ಹೊಟ್ಟೆಯಲ್ಲೂ ಇಷ್ಟು ನಿಶ್ಚಿಂತೆಯಿಂದ ನಿದ್ದೆಮಾಡುತ್ತಿದ್ದ ಅವನನ್ನು ಕಂಡು ನನಗೆ ಹೊಟ್ಟೆ ಉರಿಯಿತು. ಅವನು ಪ್ರಯಾಣದಲ್ಲಿ ಪ್ರಾಣಿಯಂತೆ ಭಾರ ಹೊತ್ತಿದ್ದಾನೆ. ಅವನಿಗೆ ಹೀಗೆ ನಿದ್ರಿಸುವ ಹಕ್ಕಿದೆ ಎಂಬ ಯೋಚನೆಯೂ ಬಂದಿತು.
“ಕುಟ್ಟಿ, ನಾವೇನು ಯೋಚ್ನೆ ಮಾಡಿದ್ದೆವು? ಏನಾಗಿ ಬಿಡ್ತು? ಫಿಲ್ಮ್ ಪೂರ್ಣ ಮಾಡುವ ಹುಚ್ಚು ನಮ್ಮನ್ನು ಮನುಷ್ಯರಿಂದ ಮೃಗ ಮಾಡಿಬಿಡ್ತು ಅಂತ ನಿನಗನ್ನಿಸಲ್ಲವಾ?” ನಾನು ಪಕ್ಕದಲ್ಲೇ ಇದ್ದ ಗೋಡೆಗೆ ದಿಂಬಿಟ್ಟು ಒರಗಿದೆ.
ಕುಟ್ಟಿ ಸುಲಭವಾಗಿ ‘ಇಲ್ಲ’ವೆನ್ನುತ್ತಾ ತಲೆಯಾಡಿಸಿ ಹೇಳಿದ, “ನಾವೀಗಲೂ ಮನುಷ್ಯರೇ. ಇವತ್ತಿಗೂ, ನಮ್ಮಲ್ಲಿ ಸೃಜನಾತ್ಮಕ ಶಕ್ತಿಯಿದೆ. ಪ್ರಾಣಿಗಳಿಗೆ ವಿಶೇಷ ಸಂವೇದನ ಇರಲ್ಲ. ನಮ್ಮಲ್ಲಿ ಇಂದಿಗೂ ಸಂವೇದನೆಯ ಸ್ರೋತವಿದೆ.”
“ಬಹುಶಃ ಅದಕ್ಕಾಗಿಯೇ ನಾವು ಲಬಂಗಿಯ ಸಾವಿಗೆ ಒಂದು ಹನಿ ಕಣ್ಣೀರನ್ನೂ ಹಾಕದಾದೆವು.”
ಲಬಂಗಿಯ ಹೆಸರನ್ನು ಕೇಳಿ ಕುಟ್ಟಿ ಗಂಭೀರನಾದ, “ಕೋಬರ್, ನಮ್ಮ ಜೀವನದ ವಿಶೇಷತೆಯೇನೆಂದರೆ ನಾವು ‘ಕ್ಷಣ’ದಲ್ಲಿ ಜೀವಿಸುತ್ತೇವೆ, ಬದುಕುತ್ತೇವೆ. ಯಾವ ‘ಕ್ಷಣ’ ಕಳೆದುಹೋಯಿತೋ ಅದಕ್ಕೆ ಕಣ್ಣೀರು ಹರಿಸುವುದರಿಂದ ಏನು ಲಾಭ?”
“ನಾನು ಪ್ರತಿಯೊಂದರಲ್ಲೂ ಲಾಭ ಹುಡುಕಲ್ಲ. ಒಂದು ಮೂಕ ಪ್ರಾಣಿಯೂ ಕೆಲವು ದಿನ ನಮ್ಮೊಂದಿಗಿದ್ದರೆ ಅದರ ಬಗ್ಗೆ ನಮಗೆ ಮಮತೆ ಹುಟ್ಟುತ್ತೆ. ಲಬಂಗಿ ಮೂಕಿಯಾಗಿರಲಿಲ್ಲ.”
“ಲಬಂಗಿಯನ್ನು ಮರೆತುಬಿಡು. ಹೊಸದಾಗಿ ಬದುಕನ್ನು ಪ್ರಾರಂಭಿಸು. ಈಗ ನಮ್ಮ ಸಮಸ್ಯೆ ಲಬಂಗಿಯಲ್ಲ. ಅವಳ ಗಂಡ! ಯಾರಿಗೆ ಗೊತ್ತು, ಇನ್ನು ಕೆಲವೇ ಗಂಟೆಗಳ ಅನಂತರ ನಾವು ಒಟ್ಟಿಗೆ ಇರ್ತೇವೋ, ಇಲ್ವೋ?”
“ನೀನೇನು ಹೇಳಬೇಕೆಂದದ್ದೀಯಾ?” ನಾನು ಅವನ ಮುಖವನ್ನೇ ಗಮನಿಸಿದೆ.
ಬ್ಯಾನರ್ಜಿ ನಮಗೆ ರೈಲ್ವೆ ಸ್ಟೇಷನ್ನಲ್ಲಿ ಎದುರಾಗ್ತಾನೆ. ಆ ಭೇಟಿಯೇ ಕೋನೆಯದಾಗುತ್ತೆ ಅಂತ ನನ್ನ, ಮನಸ್ಸು ಹೇಳ್ತಿದೆ. ಆ ಕೊನೆಯ ಹೋರಾಟದಲ್ಲಿ ಬಹುಶಃ ಅವನಿರಲ್ಲ ಅಥವಾ ನಾವಿರಲ್ಲ! ಆದ್ರೆ ನನಗೆ ಭಯವಿಲ್ಲ. ಯಾಕೆಂದ್ರೆ, ನಾನು ಉಸಿರಾಡುತ್ತಿರುವ ಆ ಕ್ಷಣ ಇದಲ್ಲ.”
ಆಗಲೇ ಹದಿನೇಳರಿಂದ ಇಪ್ಪತ್ತೈದು ವರ್ಷದ ಏಳು ಹುಡುಗಿಯರು ಬಾಗಿಲ ಪರದೆಯಿಂದ ಬಂದು ನಮ್ಮೆದುರು ಮಂದ-ಮಂದವಾಗಿ ಮುಗುಳ್ನಗುತ್ತಾ ನಿಂತರು. ಮನೆಯೊಡತಿಯೂ ಅವರೊಂದಿಗಿದ್ದಳು. ಕುಟ್ಟಿ ನನ್ನನ್ನು ನೋಡಿದ. ನಾನು ಆ ಏಳು ಹುಡುಗಿಯರನ್ನು ನೋಡಿ ಅವರಲ್ಲಿ ಮೂವರನ್ನು ಆರಿಸಿದೆ. ಉಳಿದ ಹುಡುಗಿಯರು ಮನೆಯೊಡತಿಯೊಂದಿಗೆ ಮರಳಿ ಹೋದರು.
ಸ್ನಾನದ ನೀರು ಸಿದ್ಧವಾಗಿತ್ತು. ನಾನು ಝಾಬಾನನ್ನು ಎಬ್ಪಿಸಲು ಪ್ರಯತ್ನಿಸಿದರೂ ಅವನು ಹೊರಳಿ ಮತ್ತೆ ಮಲಗಿದ. ಎಷ್ಟೋ ವರ್ಷಗಳ ಅನಂತರ ಇಂದು ಮೊದಲ ಬಾರಿಗೆ ಅವನಿಗೆ ನಿದ್ರೆ ಬಂದಂತಿತ್ತು. ಕಡೆಗೆ ಮೂವರು ಹುಡುಗಿಯರ ಸಹಾಯದಿಂದ ಅವನನ್ನೆತ್ತಿಕೊಂಡು ಬಾತ್ರೂಮಿಗೆ ತಂದು, ನೀರಿನ ಟಬ್ಗೆ ಹಾಕಿದೆವು.
“ಇದೇನು? ಇದೇನು?” ಕಣ್ಣುಜ್ಜಿಕೊಳ್ಳುತ್ತಾ ಝಾಬಾ ಪ್ರಶ್ನಿಸಿದ. ಅವನ ಕಣ್ಣುಗಳು, ಮೂಗು ಮತ್ತು ಬಾಯಿಯಲ್ಲಿ ನೀರು ನುಗ್ಗಿತ್ತು. ಎದುರಿಗೆ ಹುಡುಗಿಯರನ್ನು ಕಂಡು ಆಶ್ಚರ್ಯಗೊಂಡ.
“ಝಾಬಾ, ನೀನೀಗ ಬಾಲಬ್ರಹ್ಮಚಾರಿಯಾಗಿ ಉಳಿದಿಲ್ಲ! ಈ ಮೂವರಲ್ಲಿ ಒಬ್ಪ ಕನ್ಯೆ ನಿನ್ನವಳು. ಆರಿಸಿಕೋ!” ಎಂದೆ.
ಸಾವಿನ ನೆರಳು ಅಧ್ಯಾಯ -24
ಮೂರು ಹಗಲು ಮತ್ತು ರಾತ್ರಿ ನಾವು ಅಂಜುಬುರುಕರಂತೆ ಕಾಡಿನಲ್ಲಿ ಓಡುತ್ತಿದ್ದೆವು. ಬೆಟ್ಟಗಳಲ್ಲಿ ಅಲೆದಿದ್ದವು ನಮ್ಮ ದೇಹದ ಮೇಲೆ ಕೊಳಕಿನ ಮೇಲ್ಮೈ ಜಮಾಯಿಸಿತ್ತು. ಬಿಸಿ ನೀರಿನಲ್ಲಿ ಸ್ನಾನ ಮಾಡಿದ ಅನಂತರ ನಮ್ಮ ಶರೀರ ಹತ್ತಿಯಂತೆ ಹಗುರವಾಯಿತು. ಮೈಯನ್ನು ಒರೆಸಿಕೊಂಡು, ಸೊಂಟಕ್ಕೆ ಟವೆಲ್ ಸುತ್ತಿಕೊಂಡು ಹೊರಬಂದಾಗ ಊಟ ಸಿದ್ಧವಾಗಿತ್ತು. ಆದರೆ ತಟ್ಟೆಗಳಿಗೆ ಬಡಿಸಿರಲಿಲ್ಲ. ಇದಕ್ಕೆ ಕಾರಣ ಬೀರ್ನ ಆರು ಬಾಟ್ಲಿಗಳಾಗಿತ್ತು. ನಾನು ಮನೆಯೊಡತಿಯ ಬುದ್ದಿವಂತಿಕೆಯನ್ನು ಮನದಲ್ಲೇ ಹೊಗಳಿದೆ. ನಾವು ಮೂವರು ಬೀರ್ ನ ಎರಡೆರಡು ಬಾಟಲಿಗಳು ಮತ್ತು ಗ್ಲಾಸ್ಗಳನ್ನು ತೆಗೆದುಕೊಂಡು ಬೇರೆ-ಬೇರೆ ಕೋಣೆಗಳಿಗೆ ಹೋದೆವು.
ಕೋಣೆ ಚಿಕ್ಕದಾಗಿತ್ತು. ಅದನ್ನು ಕ್ಯಾಬಿನ್ ಎಂದು ಹೇಳಬಹುರಿತ್ತು. ಅಗತ್ಯದ ವಸ್ತುಗಳೆಲ್ಲವೂ ಅಲ್ಲಿದ್ದವು. ಒಂದು ಮೂಲೆಯಲ್ಲಿ ಸ್ಟೂಲ್ನ ಮೇಲೆ ಟೇಬಲ್ ಫ್ಯಾನಿತ್ತು. ಕಿಟಕಿ ಬಳಿ ಮಂಚವಿತ್ತು. ಕೋಣೆಯ ಮಧ್ಯೆ ಒಂದು ತಿವಟಿಗೆ ಮತ್ತು ಕುರ್ಚಿಯಿತ್ತು. ನನ್ನ ಕೋಣೆಯ ಬಾಗಿಲನ್ನು ಮುಚ್ಜಿ ಮಂಚದ ಮೇಲೆ ಕೂರುತ್ತಾ ನನ್ನೊಂದಿಗೆ ಬಂದ ಹುಡುಗಿಯನ್ನು “ನೀನು ಕುಡೀತೀಯಾ?” ಎಂದೆ, ಅವಳು “ಇಲ್ಲ” ಎಂದು ಅನ್ನಲಿಲ್ಲ ಅವಳು ನನ್ನ ಕೈಯಿಂದ ಬಾಟ್ಲಿಯನ್ನು ತೆಗೆದುಕೊಂಡು ತಿವಟಿಗೆಯ ಮೇಲಿಟ್ಟಳು. ಅನಂತರ ಕುರ್ಚಿಯಲ್ಲಿ ಕೂತು ಎರಡು ಗ್ಲಾಸಿಗೆ ಬೀರನ್ನು ಸುರಿದಳು.
“ನಿನ್ನ ಹೆಸರೇನು?” ಅವಳ ಕೈಯಿಂದ ಒಂದು ಗ್ಲಾಸನ್ನು ತೆಗೆದುಕೊಂಡು ಪ್ರಶ್ನಿಸಿದೆ.
“ಲಬಂಗಿ ಲತಾ !” ಅವಳು ಮೃದುವಾಗಿ ನಕ್ಕಳು ಅವಳನ್ನೇ ದುರುಗುಟ್ಟುತ್ತಾ ನಾನು ಮತ್ತೆ ಪ್ರಶ್ನಿಸಿದೆ. ಅವಳು ಮತ್ತೆ ಇದೇ ಹೆಸರನ್ನು ಪುನರುಚ್ಚರಿಸುತ್ತಾ “ಯಾಕೆ, ಹಿಡಿಸಲಿಲ್ವಾ?” ಎಂದಳು.
ಉತ್ತರದಲ್ಲಿ ನಾನು ಬೀರಿನ ಇಡೀ ಗ್ಲಾಸನ್ನು ಒಂದೇ ಉಸುರಿಗೆ ಕುಡಿದು ಇನ್ನೊಂದು ಸಲ ತುಂಬಿಸಿಕೊಂಡೆ ಕುಡಿಯುತ್ತಲೇ ಹುಡುಗಿಯನ್ನು ಗಮನವಿಟ್ಟು ನೋಡಿದೆ. ಅವಳು ತನ್ನ ಸೀರೆಯನ್ನು ಬಾತ್ರೂಮಿನಲ್ಲಿ ಕಳಚಿದ್ದಳು. ಉಳಿದ ಬಟ್ಟೆಗಳನ್ನು ನನ್ನೆದುರೇ ಕಳಚಿ, ಬಟನ್ ಒತ್ತಿ ದೀಪವಾರಿಸಿ, ಗ್ಲಾಸನ್ನು ಬರಿದು ಮಾಡಿ ನನ್ನ ಬೆನ್ನ ಹಿಂದೆ ಮಲಗಿದಳು.
ನಾನು ಎರಡನೆಯ ಗ್ಲಾಸನ್ನು ಖಾಲಿ ಮಾಡಬೇಕೆಂದಿದ್ದೆ, ಆಗಲೇ ಅವಳು ಮಲಗಿದ್ದಲ್ಲಿಯೇ ಕೈಚಾಚಿ ನನ್ನ ಕೈಯಿಂದ ಗ್ಲಾಸನ್ನು ಕಸಿದುಕೊಂಡಳು. ನಾನು ಅವಳ ಪಕ್ಕದಲ್ಲಿ ಮಲಗಿದೆ. ನನ್ನ ಗ್ಲಾಸನ್ನು ಕಿಟ್ಕಿಯ ಚೌಕಟ್ಟಿನಲ್ಲಿಟ್ಟು ಅವಳು ಬಳ್ಳಿಯಂತೆ ನನ್ನನ್ನು ತಬ್ಬಿಕೊಂಡಳು.
ಅಕಸ್ಮಾತ್ ಕೆಮ್ಮು ಬಂದಿದ್ದರಿಂದಾಗಿ ನಾನೆದ್ದು ಕೂತೆ. ಸ್ವಲ್ಪಹೊತ್ತು ಒಂದೇ ಸಮನೆ ಕೆಮ್ಮು ಸತಾಯಿಸಿತು. ಹುಡುಗಿ ನನ್ನ ಬೆನ್ನನ್ನು ಸವರುತ್ತಿದ್ದಳು. ನಾನು ಯೋಚಿಸುತ್ತಿದ್ದೆ. ಹೆಸರು ಒಂದೇ ಆಗಿತ್ತು. ನಡೆನುಡಿಯೂ ಒಂದೇ ಆಗಿತ್ತು. ಆದರೆ ಮುಖ ಮಾತ್ರ ಬೇರೆ ಇಲ್ಲ. ಕತ್ತಲಿನಿಂದಾಗಿ ನನಗೆ ಭ್ರಮೆಯಾಯಿತು. ಮುಖವೂ ಅದೇ ಆಗಿತ್ತು.
“ಲಬಂಗಿ! ನೀನಿಲ್ಲಿಗೆ ಬಂದು ಎಷ್ಟು ವರ್ಷವಾಯ್ತು?” ಕೆಮ್ಮನ್ನು ತಡೆದುಕೊಂಡು ಪ್ರಶ್ನಿಸಿದೆ.
“ನನಗ್ಗೊತ್ತಿಲ್ಲ.”
“ಯಾಕೆ?”
“ನನಗೆ ತಿಳಿವಳಿಕೆ ಬಂದಾಗಿನಿಂದಲೂ ಇಲ್ಲೇ ಇದ್ದೀನಿ. ನಾನು ಒಂದೂವರೆ ವರ್ಷದವಳಿದ್ದಾಗ ನನ್ನ ಅಮ್ಮ ನನ್ನನ್ನು ಎರಡೂವರೆ ರೂಪಾಯಿಗೆ ಮಾರಿ ಹೊರಟುಹೋಗಿದ್ದಳು ಅಂತ ಮವೆಯೊಡತಿ ಹೇಳ್ತಾಳೆ…. ನಿಮ್ಮ ಅರೋಗ್ಯ ಸರಿಯಿದೆಯಲ್ವಾ?”
“ಯಾಕೋ ಏನೋ ಇವತ್ತು ಕೆಮ್ಮು ಹಿಡಿದುಬಿಡ್ತು.” ಮತ್ತೆ ಕೆಮ್ಮು ಪ್ರಾರಂಭವಾಯಿತು. ಈ ಕೆಮ್ಮು ನನ್ನ ಬದುಕಿನ ಕೊನೆ ಕ್ಷಣದವರೆಗೂ ಜತೆಗಿರುವುದಿತ್ತು.
ರಾತ್ರಿಯ ಸುಮಾರು ಒಂದು ಗಂಟೆಗೆ ನಾವು ನಮ್ಮ ಅದೇ ನಿಕ್ಕರ್ ನಲ್ಲಿ ಸಿದ್ದರಾಗಿ ಬಾಗಿಲಿನಿಂದ ಹೊರ ಬಂದೆವು. ನಮ್ಮ ಜಟಕಾವಾಲ ಅಲಿ, ನಮ್ಮ ಆಜ್ಞೆಯಂತೆ ನಮ್ಮನ್ನು ನಿರೀಕ್ಷಿಸುತ್ತಾ ಕತ್ತಲು ಗಲ್ಲಿಯಲ್ಲಿ ನಿಂತಿದ್ದ. ನಾವು ಛೀಲದೊಂದಿಗೆ ಜಟಕಾ ಹತ್ತಿದೆವು. ಜಟಕಾ ಮುಂದುವರಿಯಿತು. ನಾನು ಹೊರಳಿ ನೋಡಿದೆ- ಕಿಟಕಿಯಲ್ಲಿ ಮೂವರು ಹುಡುಗಿಯರೂ ನೆರಳಿನಂತೆ ನಿಂತಿದ್ದರು. ಮೂವರಿಗೂ ಖುಷಿಯಾಗಿತ್ತು. ಮೂವರಿಗೂ ಐವತ್ತು-ಐವತ್ತು ರೂಪಾಯಿಗಳ ಒಂದೊಂದು ನೋಟನ್ನು ಉಡುಗೊರೆಯಾಗಿ ಕೊಟ್ಟಿದ್ದೆವು.
ರೈಲ್ವೇಸ್ಟೇಷನ್ ಸಮೀಪಿಸುತ್ತಿರುವಂತೆಯೇ ನಮ್ಮೆದೆಬಡಿದುಕೊಳ್ಳಲಾರಂಭಿಸಿತು. ನಾವು ಮೊದಲೇ ಟಿಕೆಟ್ ಬುಕ್ ಮಾಡಿಸಿದ್ದೆವು. ಆದರೂ ಭಯವೊಂದಿತ್ತು. ಟ್ರೈನ್ ಹೆಚ್ಚು ತಡವಾದರೆ?
“ಅಲಿ! ಜಟಕಾ ಗಾಡಿಯನ್ನು, ಸ್ಪೇಷನ್ನಿನ ಕಾಂಪೌಂಡಿನೊಳಗೆ ಒಯ್ಯಬೇಡ” ನಾನು ಅಲಿಗೆ ಸೂಚಿಸಿದೆ.
“ಮತ್ತೆ?” ಲಗಾಮನ್ನು ಎಳೆದು ಹಿಡಿದು ಅಲಿ ಹಿಂದಕ್ಕೆ ತಿರುಗಿ ನೋಡಿದ.
“ಟ್ರೈನ್ ಕೊನೆ ಡಬ್ಬ ನಿಲ್ಲುತ್ತಲ್ಲ. ಅಲ್ಲಿಗೆ ಹೋಗು.”
“ಹಾಗೇ ಆಗ್ಲಿ ಸ್ವಾಮಿ.” ಕುದುರೆ ಬಲಗಡೆಗೆ ಹೊರಳಿತು.
ನಮ್ಮ ಅದೃಷ್ಟ ಚೆನ್ನಾಗಿತ್ತು. ಹೀಗಾಗಿ ಲೋಕಲ್ ಟ್ರೈನ್ ಬರುವ ವೇಳೆಯಾಗಿತ್ತು. ಸ್ಟೇಷನ್ನಿನ ಕಾಂಪೋಂಡಿನಲ್ಲಿ ಪ್ಯಾಸೆಂಜರ್ ಗಳ ಗುಂಪು ಕಾಣಿಸುತ್ತಿತ್ತು. ಒಂದಾದ ಮೇಲೆ ಒಂದರಂತೆ ಜಟಕಾ ಗಾಡಿಗಳು ಮತ್ತು ರಿಕ್ಷಾಗಳು ಬರುತ್ತಿದ್ದವು. ನಮ್ಮ ಜಟಕಾಗಾಡಿ ಪ್ಲಾಟ್ ಫಾರಮ್ ನ ಇನ್ನೊಂದೆಡೆಗೆ ಹೋಗಿ ನಿಂತಿತು. ನಾವು ಜಟಕಾದಲ್ಲೇ ಕೂತೆವು. ಇಲ್ಲಿ ಕತ್ತಲೆಯಿತ್ತು.
ಬ್ಯಾನರ್ಜಿ ಎಲ್ಲಿದ್ದಾನೆಂಬುದು ನನಗೆ ಗೊತ್ತಿರಲಿಲ್ಲ. ಆದರೂ ಅವನು ನಮ್ಮನ್ನು ನಿರೀಕ್ಷಿಸುತ್ತಾ ರೈಲ್ವೆ ಸ್ಟೇಷನ್ ಅಥವಾ ಅದರ ಅಕ್ಕಪಕ್ಕ ಎಲ್ಲೋ ಕೂತಿರಬೇಕೆಂದು ನನಗೆ ನಂಬಿಕೆಯಿತ್ತು. ಅವನ ಪೊಜಿಷನ್ ತಿಳಿಯುವುದು ಅಸಂಭವವಾಗಿತ್ತು. ನಮ್ಮ ಬಳಿ ಅಷ್ಟು ಸಮಯವೂ ಇರಲಿಲ್ಲ. ಇಲ್ಲದಿದ್ದರೆ, ನಾವು ಸ್ವಲ್ಪ ಪ್ರಯತ್ನವನ್ನು ನಮ್ಮ ಸುರಕ್ಷತೆಗಾಗಿ ಖಂಡಿತ ಮಾಡುತ್ತಿದ್ದೆವು.
ದೂರದಿಂದ ಲೋಕಲ್ ಟ್ರೈನಿನ ಧ್ವನಿ ಕೇಳುತ್ತಲೇ ನಮ್ಮ ಮುಖ ಆ ಕಡೆಗೇ ಹೊರಳಿತು. ರೈಲು ವೇಗವಾಗಿ ನಮ್ಮೆಡೆಗೇ ಬರುತ್ತಿತ್ತು.
ಇಂಜಿನ್, ಸ್ಟೇಷನ್ನಿನ ದಾಟಿದಾಗ ನಮ್ಮ ಮತ್ತು ಪ್ಲಾಟ್ ಫಾರಮ್ ನ ನಡುವೆ ಟ್ರೈನ್ ಬರುವುದಿತ್ತು. ಈ ಸಂದರ್ಭವನ್ನು ಉಪಯೋಗಿಸಿಕೊಂಡು ನಾವು ಜಟಕಾ ಗಾಡಿಯಿಂದ ಹಾರಬೇಕಿತ್ತು. ಟ್ರೈನನ್ನೂ ನಾವು ಹಿಂಬಾಗಿಲಿನಿಂದ ಹತ್ತಲು ನಿಶ್ಚಯಿಸಿದ್ದೆವು. ಕಳವಳ ಹೆಚ್ಚಾಗುತ್ತಿತ್ತು. ಟ್ರೈನ್ ಸಮೀಪಿಸುತ್ತಿರುವಂತೆಯೇ ನಮ್ಮೆದೆಯ ಬಡಿತವೂ ಹೆಚ್ಚಾಗುತ್ತಿತ್ತು.
ಅಕಸ್ಮಾತ್ ಮತ್ತೆ ನನಗೆ ಕೆಮ್ಮು ಹಿಡಿಯಿತು. ಕತ್ತಲಲ್ಲಿ ಈ ಕೆಮ್ಮು ಬೇರೆಯವರ ಗಮನವನ್ನು ಈ ಕಡೆಗೆ ಸೆಳೆಯಬಲ್ಲದ್ದಾಗಿತ್ತು. ಕುಟ್ಟಿ ಮತ್ತು ಝಾಬಾ, ನನಗೆ ಕೆಮ್ಮು ತಡೆದುಕೊಳ್ಳುವಂತೆ ಪ್ರಾರ್ಥಿಸುತ್ತಿದ್ದರು. ನಾನು ನನ್ನ ಬಾಯಿಯ ಮೇಲೆ ಕೈಯನ್ನಿಟ್ಟುಕೊಂಡೆ.
ಇಂಜಿನ್ ಸಮೀಪ ಬಂದಿತ್ತು. ಝಾಬಾ, ಎರಡೂ ಚೀಲಗಳೊಂದಿಗೆ ಗಾಡಿಯಿಂದ ಹಾರಿದ, ಆಗಲೇ ಢಂ ಎಂದು ಗುಂಡಿನ ಶಬ್ದವಾಯಿತು. ಕುದುರೆ ಕೆನೆಯಿತು. ಕುದುರೆಯನ್ನು ವಶದಲ್ಲಿಟ್ಟುಕೊಳ್ಳಲು ಅಲಿ ಲಗಾಮನ್ನು ಪೂರ್ಣ ಶಕ್ತಿಯೊಂದಿಗೆ ಎಳೆಯುತ್ತಿದ್ದ. ಝಾಬಾ ಮುದ್ದೆಯಾಗಿ ಬಿದ್ದದ್ದನ್ನು ನಾಷ ನೋಡಿದೆ. ಧಡಧಡ ಶಬ್ದ ಮಾಡುವ ಇಂಜಿನ್, ಕೊಲೆಗಡುಕ ಮತ್ತು ನಮ್ಮ ಮಧ್ಯದಿಂದ ಡಬ್ಪ ಎಳೆದುಕೊಂಡು ಓಡುತ್ತಿತ್ತು. ಝಾಬಾ ಅವಸರ ಮಾಡದಿದ್ದರೆ ಬಹುಶಃ ಪಾರಾಗುತ್ತಿದ್ದ!
ಸಮಯ ಹೆಚ್ಚು ವ್ಯರ್ಥಮಾಡುವುದರಲ್ಲಿ ಅರ್ಥವಿರಲಿಲ್ಲ. ಗುಂಡು ಝಾಬಾನ ಎದೆಗೆ ನಾಟಿತ್ತು. ಇನ್ನು ಅವನಿಂದ ಏಳಲು ಸಾಧ್ಯವಿರಲಿಲ್ಲ. ಟ್ರೈನಿನ ಡಬ್ಬ ಮೆಲ್ಲ-ಮೆಲ್ಲನೆ ಬಂದು ಪ್ಲಾಟ್ ಫಾರಂ ಮೇಲೆ ನಿಂತಿತು. ಕೊನೆಯ ಡಬ್ಬ ನಮ್ಮೆದುರಿಗೇ ನಿಂತಿತು. ನಾನು ಮತ್ತು ಕುಟ್ಟಿ ಮಧ್ಯದ ಡಬ್ಬವೊಂದರಲ್ಲಿ ಹತ್ತಲು ಓಡಿದೆವು.
ಅಕಸ್ಮಾತ್ ನನಗೆ ನೆನಪಾಯಿತು – ಎರಡೂ ಚೀಲಗಳನ್ನು ನಾವು ಮರೆತುಬಿಟ್ಟಿದ್ದೆವು. ಆದರೆ ಈಗ ಮರಳಿ ಹೋಗುವುದರಲ್ಲಿ ನಮ್ಮ ಸುರಕ್ಷತೆ ಇರಲಿಲ್ಲ. ಚೀಲಗಳು ಝಾಬಾನ ಮೃತದೇಹದ ಬಳಿ ಬಿದ್ದಿದ್ದವು. ಒಂದರಲ್ಲಿ ಫೋಟೋಗ್ರಫಿಯ ಅಮೂಲ್ಯ ವಸ್ತುಗಳು, ಎಕ್ಸ್ ಪೋಸ್ ಮಾಡಿದ ಫಿಲ್ಮಗಳ ಟಿನ್ನಿತ್ತು. ಇನ್ನೊಂದರಲ್ಲಿ ಸುಮಾರು ಹದಿನೈದು ಸಾವಿರ ನಗದು ಹಣದೊಂದಿಗೆ ಲಬಂಗಿಯ ಒಡವೆಗಳಿದ್ದವು. ಈ ಎರಡನೆಯ ಚೀಲ ನಮ್ಮ ಪಾಲಿಗೆ ಶಾಪವಾಗಿತ್ತು. ಇದು ಝಾಬಾ ಮತ್ತು ಲಬಂಗಿಯ ಪ್ರಾಣವನ್ನು ಬಲಿತೆಗೆದುಕೊಂಡಿತ್ತು.
ನಾವು ಟ್ರ್ಯಾಕ್ ಮೇಲೆ ಓಡುತ್ತಾ ಮಧ್ಯದ ಡಬ್ಪವೊಂದರ ಬಳಿ ಹೋದೆವು. ಒಳಗೆ ಹೋಗುವುದಕ್ಕೂ ಮೊದಲು ಕುಟ್ಟಿ ನನ್ನನ್ನು ತಡೆದ. ನಮ್ಮನ್ನು ಹುಡುಕುತ್ತಾ ಬ್ಯಾನರ್ಜಿಯೂ ಇದೇ ಟ್ರೈನಿನಲ್ಲಿ ಬರುವವನಿದ್ದಾನೆ. ನಾವು ದೂರದ ಪೊದೆಗಳಲ್ಲಿ ಹೋಗಿ, ಅಡಗಿಕೊಳ್ಳುವುದೇ ಕ್ಷೇಮಕರ ಎಂಬುದು ಅವನ ಅಭಿಪ್ರಾಯವಾಗಿತ್ತು.
ತತ್ಕ್ಷಣ ನಾವು ಹೊರಳಿ ಟ್ರೈನಿಗೆ ಹತ್ತದೆ. ಟ್ರ್ಯಾಕ್ ದಾಟಿ ಪೊದಗಳೆಡೆಗೆ ಓಡಿದವು. ನಾವಿನ್ನೂ ಅರ್ಧದಾರಿಗೆ ಹೋಗಿದ್ದೆವು, ಆಗಲೇ ಮತ್ತೊಂದು ಗುಂಡು ಹಾರಿತು. ಓಡುತ್ತಿದ್ದ ಕುಟ್ಟಿಯ ಶರೀರ ಒಮ್ಮೆಲೆ ಕುಸಿದು ಕೆಳಗೆ ಬಿತ್ತು. ನಾನು ಅವನ ಬಳಿ ಕೂತುಬಿಟ್ಟೆ.
“ಕುಟ್ಬಿ! ಕುಟ್ಟಿ!” ಅವನ ರಕ್ತಸಿಕ್ತ ಶರೀರವನ್ನು ಮಡಿಲಲ್ಲಿಟ್ಟುಕೊಂಡು ಅವನ ಮುಖ ನೋಡಿದೆ. ಅವನ ಕಣ್ಣುಗಳು ತೆರೆದುಕೊಂಡಿದ್ದವು. ಅವನು ನನ್ನತ್ತ ನೋಡುತ್ತಲೇ ಇದ್ದುಬಿಟ್ಟ. ಅವನ ಜೀವವೂ ನನ್ನೆದುರೇ ಹಾರಿಹೋಯಿತು.
ಲಬಂಗಿ ಹೋದಳು, ಝಾಬಾ ಹೋದ, ಕುಟ್ಟಿ ಹೋದ, ಜತೆಗೆ ನನ್ನೊಳಗಿದ್ದ ಸಾವಿನ ಭಯವೂ ದೂರವಾಯಿತು. ಕುಟ್ಟಿಯ ಶವ ನನ್ನ ಮಡಿಲಲ್ಲಿತ್ತು. ನನ್ನ ಮನಸ್ಸು ಪ್ರಲಾಪಿಸಿತು. ಮನಸ್ಸಿನಲ್ಲೇ ನಾನು ನಿರ್ಧರಿಸಿದೆ-ನಾನು ಸೇಡು ತೀರಿಸಿಕೊಳ್ಳಬೇಕು! ನಾನು ಇದುವರೆಗೂ ಯಾರನ್ನೂ ಕೊಂದಿರಲಿಲ್ಲ. ಪ್ರಥಮ ಬಾರಿಗೆ ಬ್ಯಾನರ್ಜಿಯನ್ನು ಕೊಂದು ಝಾಬಾನಂತೆ ಎದೆಗೆ ಗುದ್ದಿಕೊಂಡು ಚೀತ್ಕರಿಸುವ ಆಸೆಯಾಯಿತು.
ಮೆಲ್ಲನ ಕುಟ್ಟಿಯ ಶವವನ್ನು ಮಣ್ಣಿಗೆ ಸರಿಸಿ ನಾನೆದ್ದು ನಿಂತೆ, ಆಗಲೇ ಮತ್ತೊಂದು ಗುಂಡು ನನ್ನ ಕಿವಿಯ ಬಳಿಯಿಂದ ಹಾಯ್ದು ಹೋಯಿತು. ನಾನು ಕುಟ್ಟಿಯ ಶವದ ಬಳಿಯೇ ಮಲಗಿದೆ. ಎದ್ದು ನಿಂತರೆ ಅಪಾಯವಿತ್ತು. ಮಲಗಿಯೇ ನನ್ನ ಶರೀರವನ್ನು ಎಳೆದುಕೊಳ್ಳುತ್ತಾ ಪೊದೆಗಳ ಬಳಿ ಹೋದೆ. ನೋಡು- ನೋಡುತ್ತಿರುವಂತೆಯೇ ನಾನು ನರಿಯಂತೆ ಪೊದೆಗಳಲ್ಲಿ ನುಗ್ಗಿಯೂಬಿಟ್ಟೆ.
ನನಗೀಗ ಹೊಟ್ಟೆಯಿಂದ ತೆವಳುವ ಅಗತ್ಯವಿರಲಿಲ್ಲ. ನಾನೆದ್ದು ಸೊಂಟ ಬಗ್ಗಿಸಿ, ಪೊದಗಳಲ್ಲಿ ಮಾರ್ಗ ಮಾಡಿಕೊಳ್ಳುತ್ತಾ ಮುಂದುವರಿಯಲಾರಂಭಿಸಿದೆ. ಸ್ವಲ್ಪ ದೂರ ಹೋದಮೇಲೆ ನಡಿಗೆಯನ್ನು ತೀವ್ರಗೊಳಿಸಿ ಹೊಲವೊಂದಕ್ಕೆ ಹೋದೆ.
ನಾನು ತುಂಬಾ ಬುದ್ಧಿವಂತಿಕೆಯಿಂದ ಯೋಚಿಸುತ್ತಿದ್ದೆ. ಬ್ಯಾನರ್ಜಿ ನನ್ನನ್ನೇ ಹಿಂಬಾಲಿಸುತ್ತಿದ್ದಾನೆಂಬ ನಂಬಿಕೆ ನನಗಿತ್ತು. ನನ್ನ ಬಳಿ ಸುರಕ್ಷತೆಗಾಗಿ ಯಾವ ಅಸ್ತ್ರವೂ ಇರಲಿಲ್ಲ. ಅವನ ಬಳಿ ರೈಫಲ್ ಇತ್ತು. ಇದೇ ಅವನ ಶಕ್ತಿಯಾಗಿತ್ತು. ಅವನ ಈ ಶಕ್ತಿಯ ಲಾಭವನ್ನು ನಾನು ಪಡೆಯಬೇಕಿತ್ತು.
ಸ್ವಲ್ಪದೂರ ಹೋದ ಮೇಲೆ ನಾನೊಂದು ಬಾವಿಯ ಸಮೀಪಕ್ಕೆ ಹೋದೆ. ಬಾವಿಯ ಕಟ್ಟೆಯ ಮೇಲೆ ಒಂದು ಉದ್ದ ಹಗ್ಗದೊಂದಿಗೆ ಒಂದು ಬಕೀಟೂ ಇತ್ತು. ತತ್ಕ್ಷಣ ನಾನು ಕಾರ್ಯೋನ್ಮುಖನಾದೆ. ಒಂದು ದೊಡ್ಡ ಕಲ್ಲನ್ನು ಹುಡುಕಿ ಆ ಬಕೀಟಿನೊಳಗಿಟ್ಟೆ. ಹಗ್ಗದ ಇನ್ನೊಂದು ತುದಿಯನ್ನು ಬಾವಿಯ ಕಟ್ಟೆಗೆ ಗಟ್ಟಿಯಾಗಿ ಕಟ್ಟಿದೆ. ಅನಂತರ ಬಕೀಟನ್ನು ಮೆಲ್ಲ-ಮೆಲ್ಲನೆ ಒಳಗೆ ಇಳಿಬಿಟ್ಟೆ. ಬ್ಯಾನರ್ಜಿಯ ಬುದ್ಧಿಶಕ್ತಿಗೆ ಕೈಕೊಡುವುದಕ್ಕೆ ಈ ಉಪಾಯ ಅಪ್ರತಿಮವಾಗಿತ್ತು.
ಸುಮಾರು ಅರ್ಧ ಗಂಟೆಯ ಅನಂತರ ಹೊಲದಲ್ಲಿ ಹೆಜ್ಜೆಗಳ ಸದ್ದು ಕೇಳಿಸಿತು. ಬಾವಿಯ ಬಳಿಯ ಒಂದು ದಟ್ಟ ಮರದ ಹಿಂದೆ ನಾನು ಅಡಗಿ ನಿಂತಿದ್ದ. ನನ್ನ ಕಿವಿಗಳು ಚುರುಕಾಗಿದ್ದವು. ನನ್ನ ಕಣ್ಣುಗಳೂ ಶಬ್ದ ಬಂದ ದಿಕ್ಕಿನೆಡೆಗೆ ಕತ್ತಲನ್ನು ಭೇದಿಸಲು ಪ್ರಯತ್ನಿಸುತ್ತಿದ್ದವು. ಆದರೆ ಏನೂ ಕಾಣಿಸುತ್ತಿರಲಿಲ್ಲ.
ಸ್ವಲ್ಪ ಹೊತ್ತಿನ ಅನಂತರ ಬಹು ಎಚ್ಚರಿಕೆಯಿಂದ ಹೆಜ್ಜೆಗಳನ್ನಿಡುತ್ತಾ ಬ್ಯಾನರ್ಜಿ ಪ್ರೇತದಂತೆ ನನ್ನೆದುರಿನಿಂದ ಹಾಯ್ದುಹೋದ. ನನ್ನ ಹೃದಯದ ಬಡಿತವೇ ನಿಂತಂತಾಯಿತು. ನಾನು ಮರದ ಹಿಂದಿನಿಂದ ಅವನ ಬೆನ್ನನ್ನು ನೋಡುತ್ತಿದ್ದೆ. ಅವನು ಬಾವಿಯ ಬಳಿ ನಿಂತು ಬಾವಿಕಟ್ಟೆಗೆ ಕಟ್ಟಿದ್ದ ಹಗ್ಗವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ. ಹಗ್ಗ ಬಕೀಟಿನೊಂದಿಗೆ ಬಾವಿಯೊಳಗೆ ಇಳಿದಿತ್ತು.
ಕ್ಷಣಕಾಲ ಏನೋ ನಿರ್ಧರಿಸಿ ಅವನು ರೈಫಲನ್ನು ಬಾವಿಕಟ್ಟೆಯ ಮೇಲಿಟ್ಟು ಹಗ್ಗವನ್ನು ಎಳೆದುಕೊಂಡು ನೋಡಿದ. ಬಕೀಟಿನಲ್ಲಿದ್ದ ಭಾರದಿಂದ, ನಾನು ಬಾವಿಯೊಳಗೆ ಅಡಗಿಕೊಂಡಿದ್ದನೆಂದು ಅವನು ಅನುಮಾನಿಸಿ ಬಾವಿಯೊಳಗೆ ಇಣಿಕಿ ನೋಡಿದ. ಆದರೆ ಕತ್ತಲಿನಿಂದಾಗಿ ಬಹುಶಃ ಏನೂ ಕಾಣಿಸಲಿಲ್ಲ.
ಬಾವಿಕಟ್ಟೆಯ ಮೇಲೆ ನಿಂತು ಅವನು ಹಗ್ಗ ಎಳೆಯಲು ಪ್ರಾರಂಭಿಸಿದ. ನನಗೆ ಇದು ಒಳ್ಳೆಯ ಅವಕಾಶವಾಗಿತ್ತು. ಈ ಅವಕಾಶ ತಪ್ಪಿದರೆ ನನ್ನ ಹೆಣವೂ ಇಲ್ಲೇ ಬೀಳುವುದರಲ್ಲಿತ್ತು. ನಾನು ಮರದ ಹಿಂದಿನಿಂದ ಮೆಲ್ಲನೆ ಬಂದು ರೈಫಲ್ ಎತ್ತಿಕೊಂಡೆ. ಸ್ವಲ್ಪ ಶಬ್ದವಾಯಿತು. ಬ್ಯಾನರ್ಜಿ ಗಾಬರಿಯಿಂದ ಹಿಂದಕ್ಕೆ ನೋಡಿದ. ನಾನು ರೈಫಲ್ನ ನಳಿಗೆಯನ್ನು ಗುರಿಯಿಟ್ಟು ಅವನೆದುರು ನಿಂತಿದ್ದೆ. ಅವನ ಕೈಯಿಂದ ಹಗ್ಗ ಜಾರಿತು. ಅರ್ಧಕ್ಕೆ ಬಂದಿದ್ದ ಬಕೀಟು ಮರಳಿ ದಡಾರನೆ ಬಾವಿಗೆ ಬಿತ್ತು.
ಎರಡು ಹೆಜ್ಜೆ ಹಿಂದೆ ಸರಿದು ‘ಸುರಕ್ಷಿತ-ದೂರ’ದಲ್ಲಿ ನಾನು ನಿಂತಿದ್ದೆ. ಅವನು ತನ್ನೆರಡೂ ಕೈಗಳನ್ನತ್ತಿ ಬಾವಿಯ ಕಟ್ಟೆಯ ಮೇಲೆ ನಿಂತಿದ್ದ. ನಾವಿಬ್ಪರೂ ಮೌನವಾಗಿದ್ದೆವು. ನಾನು, ನಮ್ಮ ಕೊಲೆಗಡುಕನನ್ನು ಮನಸಾರೆ ನೋಡಲು ಬಯಸುತ್ತಿದ್ದೆ. ದುಂಡನೆ ಮುಖ, ದುಂಡನೆ ಕಣ್ಣುಗಳು, ಕಣ್ಣುಗಳ ಮೇಲೆ ಬೆಳ್ಳಿ ಫ್ರೇಮಿನ ಕನ್ನಡಕ ಧರಿಸಿದ್ದ ಅವನಿಗೆ ಕತ್ತೇ ಇದ್ದಂತಿರಲಿಲ್ಲ. ಕತ್ತುರಹಿತ ತಲೆ ಹೊಸ್ತಿಲ ಮೇಲೆ ಬಿದ್ದಿದ್ದ ಮಡಿಕೆಯಂತೆ ಕಾಣಿಸುತ್ತಿತು. ಅವನ ಆಕಾಶ ವರ್ಣದ ಬ್ಲೂ-ಸ್ಯೂಟ್ ಕತ್ತಲಲ್ಲಿ ದಟ್ಟ ‘ಬ್ಲೂ’ ಆಗಿ ಕಾಣಿಸುತ್ತಿತ್ತು. ಕಾಲುಗಳಲ್ಲಿ ಸೈನಿಕರಂತಹ ಬೂಟುಗಳಿದ್ದವು.
“ಬ್ಯಾನರ್ಜಿ! ನಾನು ನಿನ್ನ ಹತ್ರ ಒಂದು ಪ್ರಶ್ನೆ ಕೇಳಬೇಕೆಂದಿದ್ದೆ. ಲಬಂಗಿ ಯಾರಾಗಿದ್ದಳು?” ನಾನು ಅವನನ್ನೇ ನೋಡಿದೆ.
“ಇದನ್ನು ತಿಳಿದು ನಿನಗೇನು ಪ್ರಯೋಜನ?”
ಅವನು ನನ್ನನ್ನೇ ಪ್ರಶ್ನಿಸಿದ. ಬಂದೂಕಿನ ನಳಿಗೆಯನ್ನು ಅವನಿಗೆ ಗುರಿಯಾಗಿಟ್ಟಿದ್ದೆ.
“ಹಾನಿಯೂ ಆಗಲ್ಲ”.
“ಲಬಂಗಿ ಓರ್ವ ಸೂಳೆಯಾಗಿದ್ದಳು. ಆದ್ರೆ ನಾನವಳಿಗೆ ಹೆಂಡತಿಯ ಸ್ಥಾನವನ್ನು ಕೊಟ್ಟಿದ್ದೆ. ಆದರೂ ಅವಳು ಮತ್ತೆ…” ಆಗಲೇ ನಾನು ಟ್ರಿಗರ್ ಒತ್ತಿದೆ. ಭಯಾನಕ ಸದ್ದು. ಮೌನವನ್ನು ಭೇದಿಸಿತು. ಶವವೊಂದು ಬಾವಿಯ ಕಟ್ಟೆಯಿಂದ ನೆಗೆದು ಬಾವಿಯೊಳಗೆ ಬಿತ್ತು. ಮತ್ತೆ ‘ಚಟಾರ್’ ಎಂದು ಸದ್ದಾಗಿ ಅನಂತರ ವಾತಾವರಣ ಶಾಂತವಾಯಿತು. ಅಲ್ಲಿಂದ ಹೊರಡುವುದಕ್ಕೂ ಮೊದಲು ನಾನು ಬಂದೂಕನ್ನು ಬಾವಿಯೊಳಕ್ಕೆ ಎಸೆದೆ.
ಹೋಗಲು ನನಗೆ ಯಾವುದೇ ನಿಶ್ಚಿತ ದಿಕ್ಕಿರಲಿಲ್ಲ. ಯಾವ ಮಿತ್ರನಾಗಲಿ, ಪರಿಚಿತ ವ್ಯಕ್ತಿಯಾಗಲಿ ಅಥವಾ ಮನೆಯಾಗಲಿ ಇರಲಿಲ್ಲ. ನನ್ನವರಾಗಿದ್ದವರು ಈಗ ಈ ಭೂಮಿಯಲ್ಲಿಲ್ಲ. ಮರಳಿ ಗೋಪಾಲಪುರಕ್ಕೆ ಹೋಗುವುದರಲ್ಲಿ ಯಾವ ಅರ್ಥವೂ ಇರಲಿಲ್ಲ. ಆದರೂ ನಾನು, ಬಂದ ಮಾರ್ಗದಿಂದಲೇ ಮರಳಿ ಹೊರಟೆ
ಸೋನಾವಟ್ಟಿ ರೈಲ್ವೇಸ್ಟೇಷನ್ಗೆ ಬಂದಾಗ ನನಗೆ ಗುಂಪು ಕಲೆತಿರುವುದು ಕಂಡಿತು. ಕುಟ್ಟಿ ಮತ್ತು ಝಾಬಾನ ಶವಗಳು ಪ್ಲಾಟ್ ಫಾರಂ ಮೇಲೆ ಅಕ್ಕಪಕ್ಕದಲ್ಲೇ ಬಿದ್ದಿದ್ದವು. ಈ ಎರಡೂ ಶವಗಳ ಮೇಲೆ ಬಿಳಿಬಟ್ಟೆಯನ್ನು ಮುಚ್ಜಲಾಗಿತ್ತು. ರಕ್ತದ ಕಲೆಗಳು ಬಲ್ಪ್ನ ಹಳದಿ ಬೆಳಕಿನಲ್ಲಿ ಶ್ವೇತ ಪ್ರೇತವಸ್ತ್ರದ ಮೇಲೆ ಮೂಡಿದ್ದು ಕಂಡಿತು ನಾನು ಸುತ್ತ ಮುತ್ತ ನೋಡಿದೆ. ಚೀಲಗಳು ನನಗೆ ಕಾಣಿಸಲಿಲ್ಲ. ಬಹುಶಃ ಯಾರೋ ಭಾಗ್ಯಹೀನನ ಭಾಗ್ಯ ಖುಲಾಯಿಸಿರಬೇಕು. ಒಬ್ಬ ಪೋಲೀಸ್ ಅಧಿಕಾರಿ ಇಬ್ಬರು ಪೋಲೀಸರೊಂದಿಗೆ ನಿಂತು ಆಂಬ್ಯುಲೆನ್ಸ್ಗೆ ಕಾಯುತ್ತಿದ್ದ. ಗುಂಪಿನಲ್ಲಿ ಮೂರ್ನಾಲ್ಕು ಜನ ಕೂಲಿಗಳು ಮತ್ತು ರೈಲ್ವೆ ನೌಕರರೂ ಇದ್ದರು. ಗುಂಪು ಚದುರಿತ್ತು.
ಎರಡು ಹೆಜ್ಜೆ ಮುಂದೆ ಬಂದು ನಾನು ನನ್ನ ಕೈಗಳನ್ನು ಪೋಲೀಸ್ ಅಧಿಕಾರಿ ಎದುರು ಚಾಚಿದೆ. ಕ್ಷಣಕಾಲ ಅವನಗೇನೂ ಅರ್ಥವಾಗಲಿಲ್ಲ. ಅವನ ಬಳಿ ನಿಂತಿದ್ದ ಇಬ್ದರು ಪೋಲೀಸರೂ ಆಶ್ಜರ್ಯದಿಂದ ನನ್ನನ್ನು ನೋಡಿದರು. ಅವರನ್ನು ಹೆಚ್ಚು ಚಿಂತೆಗೆ ಒಳಪಡಿಸದೆ. “ನಾನು ಕೊಲೆಗಡುಕ. ಒಂದು ಕೊಲೆಯನ್ನು ನಾನು ಮಾಡಿದ್ದೇನೆ” ಎಂದೆ.
ನನ್ನ ಕೊನೆಯ ಕ್ಷಣಗಳು ಕಳೆಯುತ್ತಿವೆ. ತಲೆಯ ಮೇಲೆ ತೂಗುತ್ತಿದ್ದ ರೈಲ್ವೆ-ಗಡಿಯಾರದ ದೊಡ್ಡಮುಳ್ಳು ಹನ್ನೆರಡನ್ನು ಮುಟ್ಟಿದೆ. ಸಣ್ಣಮುಳ್ಳು ಹನ್ನೆರಡರ ಮೇಲೆ ಕೂದಲು ಅಧೀರಗೊಳ್ಳುತ್ತದೆ. ನನ್ನ ಕಣ್ಣುಗಳೆದುರು ನನ್ನದೇ ಜೀವನ ಸುಳಿಯುತ್ತಿದೆ. ಜೈಲಿನ ಆ ದಿನಗಳು… ಕೆಮ್ಮಿನ ಆಕ್ರಮಣ…ಟಿ.ಬಿ.ಘೋಷಣೆ… ಬಂಧನದಿಂದ ಬಿಡುಗಡೆ….ಬೊಂಬಾಯಿಗೆ ಆಗಮನ….. ಆಸ್ಪತ್ರೆಗೆ ದಾಖಲಾಗಲು ಪ್ರಯತ್ನಗಳು…. ಕೊನೆಗೆ ಬೋರಿಬಂದರ್ ಸ್ಟೇಷನ್ನಿನ ಪ್ಲಾಟ್ ಫಾರಂ ನಲ್ಲಿ ಜೀವನದ ಕೊನೆ ಡೇರೆ.
ಅಮೃತಸರ ಎಕ್ಸ್ ಪ್ರೆಸ್ ಯಾವಾಗಲೋ ಹೊರಟು ಹೋಗಿದೆ. ಪ್ಲಾಟ್ ಫಾರಂ ಸುಮಾರಾಗಿ ಖಾಲಿಯಾಗಿದೆ. ಕೂಲಿಗಳು ಮಲಗುವಸಿದ್ಧತೆಯಲ್ಲಿದ್ದಾರೆ. ಈ ಕೂಲಿಗಳು ಬೆಳಗ್ಗೆ ಹೋಗುವ ಪ್ರಯಾಣಿಕರ ಭಾರ ಹೊರಲು ಪ್ಲಾಟ್ ಫಾರಮ್ ನಲ್ಲಿ ನಿದ್ರಿಸುತ್ತಾರೆ. ನಾನು ಕಾಲುಚಾಚಿ ಒಂದು ಬೆಂಚಿಗೊರಗಿ ಪ್ಲಾಟ್ ಫಾರಮ್ ನಲ್ಲೇ ಕೂತಿದ್ದೇನೆ. ಇಂದಿನ ಕೊನೆಯ ಬೀಡಿಯನ್ನು ಸೇದುತ್ತಿದ್ದ ಕೂಲಿಯೊಬ್ಬ ಸ್ವಲ್ಪ ದೂರದಲ್ಲಿ ಕೂತು ನನ್ನನ್ನೇ ನೋಡುತ್ತಿದ್ದಾನೆ. ಅವನ ಭಾವನೆಗಳನ್ನು ನಾನು ಓದಬಲ್ಲೆ…ಪಾಪ ಯಾರೋ ಮನೆ-ಮಠ ಇಲ್ಲದವ… ವಿವಶಿತ, ರೋಗಿ, ಮುಖ ನೋಡಿದರೆ ಒಳ್ಳೆಯ ಮನೆತನದವನ ಹಾಗೆ ಕಾಣಿಸುತ್ತಾನೆ… ಅಯ್ಯೋ ದೇವರೇ, ಎಂಥೆಂಥವರಿಗೆ ಭಿಕೆ ಬೇಡುವ ಕಾಲ ಬರುತ್ತೆ… ಪಾಪ… ಇವನ ಅಮ್ಮ ಎಲ್ಲಿದ್ದಾಳೋ… ಇವನ ಹೆಂಡ್ತಿ ಎಲ್ಲಿದ್ದಾಳೋ… ಪಾಪ!
ಮಾತನಾಡದೆ ಮುಂದೆ ಬಂದು ಅವನು ಹತ್ತು ಪೈಸೆಯ ನಾಣ್ಯವನ್ನು ನನ್ನ ಕೈಗೆ ಹಾಕುತ್ತಾನೆ. ನನ್ನ ಪಕ್ಕದಲ್ಲಿ ಕೂತ ನಾಯಿಯು ಜಾಗೃತಗೊಂಡು ಬಾಲವಾಡಿಸುತ್ತದೆ. ನಾನು ಭಿಕ್ಷುಕನೆಂಬುದು ನನ್ನ ಅರಿವಿಗೆ ಬರುತ್ತದೆ. ವಾಸ್ತವವಾಗಿಯೂ, ನಾನು ಭಿಕ್ಷೆ ಬೇಡುತ್ತಿದ್ದೆ. ಆಗಜನ ನನ್ನನ್ನು ತಿರಸ್ಕಾರದಿಂದ ನೋಡುತ್ತಿದ್ರು. ನನಗೆ ಹಣದ ಅಗತ್ಯವಿದ್ದಾಗ ಜನ ನನ್ನನ್ನು ತಿರಸ್ಕಾರದಿಂದ ನೋಡುತ್ತಿದ್ದರು. ನನಗೆ ಹಣದ ಅಗತ್ಯವಿದ್ದಾಗ ಜನ ನನ್ನನ್ನು ನಿಂದಿಸುತ್ತಿದ್ದರು. ನನಗೆ ಜೀವನದ ಬಗ್ಗೆ ಆಸೆ-ಆಕಾಂಕ್ಷೆಗಳಿದ್ದಾಗ, ಸಾವಿನ ಆಶ್ರಯ ಪಡೆಯುವ ಉಪದೇಶ ಸಿಗುತ್ತಿತ್ತು. “ನೀವು ಮೂವರೂ ಹುಚ್ಚರು. ನಿಮ್ಮ ಬದುಕಿನಿಂದ ಯಾರಿಗೂ ಲಾಭವಿಲ್ಲ. ನಿಮ್ಮ ಸಾವಿನಿಂದ ಪ್ರಪಂಚಕ್ಕೆ ಯಾವ ಹಾನಿಯೂ ಇಲ್ಲ!” ಎಂದು ದುಲಈಯೇ ಹೇಳುತ್ತಿದ್ದಳು. ಅವಳಿಗೆ ಬಾ ಮತ್ತು ಕುಟ್ಟಿ ಇಹಲೋಕ ತ್ಯಜಿಸಿರುವ ವಿಚಾರ ತಿಳಿದರೆ? ನಾನೂ ಇರುವುದಿಲ್ಲವೆಂಬುದು ತಿಳಿದರೆ?
ಬಹುಶಃ ಅವಳು ರೋಧಿಸಬಹುದು. ಅವಳ ಬೈಯ್ಗುಳದಲ್ಲಿ ಪ್ರೀತಿಯಿತ್ತು. ಮಮತೆಯಿತ್ತು. ಅವಳ ತಿರಸ್ಕಾರದಲ್ಲಿಯೂ ನಮಗೆ ಒಮ್ಮೊಮ್ಮೆ ಸ್ನೇಹ ಸಿಗುತ್ತಿತ್ತು. ಅದೇ ಸ್ನೇಹವನ್ನು ನಾನು ನನ್ನ ಪಕ್ಕದಲ್ಲಿ ಕೂತ ನಾಯಿಯ ಮುಖದಲ್ಲಿ ನೋಡುತ್ತೇನೆ. ಯಾತನೆ, ವಿವಶತೆ ಮತ್ತು ನೋವನ್ನು ನೋಡುತ್ತೇನೆ. ನನ್ನ “ನಿಶ್ಚಿತ” ಸಾವಿನ ದುಃಖ ಅದರ ಕಣ್ಣುಗಳಲ್ಲಿ ಗೋಚರಿಸುತ್ತಿದೆ. ಯಾಕೆಂದರೆ. ಎಲ್ಲಿ ಸ್ನೇಹವಿರುವುದೋ ಅಲ್ಲಿ ದುಃಖವ್ರಾ ಇರುತ್ತದೆ!
“ಅಯ್ಯೋ ನಾಯಿ!” ನಾನು ಮಾತನಾಡಲು ಪ್ರಯತ್ನಿಸುತ್ತೇನೆ. “ಅಯ್ಯೋ ನಾಯಿ! ನೀನು ದುಃಖಪಡಲು ಕಾರಣವಿಲ್ಲ. ನೀನು ಅಳಬೇಡ, ನಿನ್ನ ಕಣ್ಣೀರು ನನ್ನ ಸಾವನ್ನು ತಡೆಯಲಾರದು! ನೋಡು, ಆ ರೇಖೆಗಳು ಹೇಗೆ ನೃತ್ಯಿಸುತ್ತಿವೆ! ಮತ್ತೆ ಆ ನೆರಳು ಯಾರದು? ಆ ನೆರಳೂ-ಸಾವಿನ ಹೆಸರಿನಿಂದ ಗುರುತಿಸಲ್ಪಡುವ ನೆರಳೂ-ಬಿಳುಪಾಗಿದೆ. ಅದು ಇದೇ! ಇದೇ ನೆರಳು! ಆಕಾರವಿಲ್ಲದ ನೆರಳು!!