ಎಂ.ಎಸ್. ನರಸಿಂಹಮೂರ್ತಿಯವರ ‘ಸ್ವ-ವಿವರ’ ನೋಡುತ್ತಿದ್ದಾಗ
ಹೀಗನ್ನಿಸಿತು , ಇಲ್ಲಿಯವರೆಗೆ ಎಂ.ಎಸ್.ಎನ್ ಅವರ 49 ಕ್ತ್ರತಿಗಳು
ಪ್ರಕಟವಾಗಿದ್ದು ‘ಮದಗಜಗಮನೆ’ಯ ಮೂಲಕ ಅರ್ಧ ಶತಕ ಬಾರಿಸುತ್ತಿದ್ದಾರೆ.
ಹಲವು ಪತ್ರಿಕೆಗಳಿಗೆ ನಿರಂತರವಾಗಿ ಅಂಕಣ ಬರಹಗಳು; ಟಿ.ವಿ.
ಧಾರವಾಹಿಗಳಿಗಾಗಿ 8000 ಕ್ಕೂ ಹೆಚ್ಚು ಅಧಿಕ ಸಂಚಿಕೆಗಳು ಜೊತೆಗೆ ದೇಶ –
ವಿಧೇಶಗಳಲ್ಲಿ ಭಾಷಣಗಳು| ಒಬ್ಜ ವ್ಯಕ್ತಿಯಿಂದ ಇದೆಲ್ಲಾ ಸಾಧ್ಯವೇ ತುಂಬಾ, ಕಷ್ಟ,
ಇದೆಲ್ಲಾ ಸಾಧನೆ ಮಾಡಿಯೂ, ಈ ಜಂಭ ಕೊಚ್ಚಿಕೊಳೃದ ಎಂ.ಎಸ್ಎನ್
ಅವರ ಹಾಗೆ ವಿನಯವಂತರಾಗಿರುವುದು ಇನ್ನೂ ಕಠಿಣ.
ಎಂ.ಎಸ್.ಎನ್.ಅವರ ಐವತ್ತನೆ ಕೃತಿ ಮದಗಜಗಮನೆಯಲ್ಲಿ ಆರೋಗ್ಯಕರ
ಹಾಸ್ಯ ಮತ್ತು ವಿಡಂಬನೆಗೆ ಮಾದರಿಯಾಗುವಂತಹ 34 ಉತ್ತಮ ಲೇಖನಗಳಿವೆ
ರಮ್ ಕುಡಿಯುವ ಆನೆಯಿಂದ ಆರಂಭಿಸಿ, ನೀರಲ್ಲಿ ನೆನೆಹಾಕಿ ತಿನ್ನಬೇಕಾದ ಗಟ್ಟಿ
ಚಕ್ಲಿಯೊಂದಿಗೆ ಕೊನೆಗೊಳೃವ ಇಲ್ಲಿನ ಬರಹಗಳಲ್ಲಿ ವಸ್ತು ವೈವಿಧ್ಯವಿದೆ ನೋಟು
ರದ್ದತಿ ಎಂಬ ಇತ್ತೀಚಿನ ವಿದ್ಯಮಾನವನ್ನೂಎಂ.ಎಸ್.ಎನ್. ಬಿಟ್ಟಿಲ್ಲ.
ಎಂ.ಎಸ್.ಎನ್ ಅವರ ಲೇಖನಗಳು ನಗೆಯ ಕಾರಂಜಿಯನ್ನೆ ಚಿಮ್ಮಿಸಿದರೂ,
ಅವುಗಳ ಉದ್ದೇಶ ಕೇವಲ ನಗೆಯಲ್ಲ. ಹಾಸ್ಯ ಅವರಿಗೆ ಒಂದು ಮಾರ್ಗ, ಅದರ
ಮೂಲಕ ಆರೋಗ್ಯಕರ ಪರಿಸರ, ಸ್ವಸ್ಥ ಸಮಾಜ ಮತ್ತು ಉನ್ನತ ಮೌಲ್ಯಗಳ
ರಕ್ಷಣೆಗೆ ಸಹಕಾರಿಯಾಗುವಂತಹ ಚಿಂತನೆಗಳನ್ನು ಬಿತ್ತುವುದು ಅವರ ಗುರಿ.ಈ
ಕಾರಣಕ್ಕಾಗಿಯೇ ಅವರು ಕನ್ನಡದ ಹಾಸ್ಯ ಲೇಖಕರಲ್ಲಿ ಮುಖ್ಯರಾಗುತ್ತಾರೆ
ನಗುವಿನ ನಡುವೆ ಅವರ ಅಪಾರ ಜ್ಞಾನ ಹಾಗೂ
ಜೀವಾನಾನುಭವಗಳು ಅವರ ಕೃತಿಗಳಲ್ಲಿ ಎದ್ದು
ತೋರುತ್ತವೆ. ಸಾಹಿತ್ಯದಲ್ಲಿ ಅರ್ಧ ಶತಕ ಬಾರಿಸಿರುವ
ಗೆಳೆಯ ಎಂ.ಎಸ್.ಎನ್. ಬೇಗ ಶತಕವನ್ನು ಬಾರಿಸಲಿ ದಾಖಲೆಗೈಯಲಿ ಎಂಬ ಶುಭಕಾಮನೆಗಳೊಂದಿಗೆ…
ಎಚ್. ದುಂಡಿರಾಜ್
Sale!
ಮದಗಜಗಮನೆ (ಸ.ಕ) -ಎಂ.ಎಸ್.ನರಸಿಂಹ ಮೂರ್ತಿ
₹140.00 ₹119.00
You must be logged in to post a review.
Reviews
There are no reviews yet.