ಅಶ್ರುತಗಾನ – Ashrutha Gaana

ಕೆ. ಟಿ. ಗಟ್ಟಿ
ಅಶ್ರುತಗಾನ
(ಕಾದಂಬರಿ)
ಕೊನೆಯ ಪುಟದ ಬ್ಲರ್ಬ್
ಕೆ. ಟಿ. ಗಟ್ಟಿ
1957ರಲ್ಲಿ `ಮುಂಗಾರ ಮುಗಿಲು’ ಎಂಬ ಚಿಕ್ಕ ಕತೆಯ ಮೂಲಕ ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸಿದ ಕೆ.ಟಿ.ಗಟ್ಟಿ ಸೃಜನಶೀಲತೆ ಮತ್ತು ವೈಚಾರಿಕತೆ ಒಂದು ಇನ್ನೊಂದರ ಪ್ರತಿಸ್ಪರ್ಧಿ ಅಲ್ಲ, ಒಂದರ ಬೇರು ಇನ್ನೊಂದರಲ್ಲಿ ಎನ್ನುವ ತನ್ನ ಸಾಹಿತ್ಯಿಕ ನಿಲುವನ್ನು ತನ್ನ ಮೊದಲ ಕಾದಂಬರಿ `ಶಬ್ದಗಳು'(1973)ವಿನಿಂದ ಇತ್ತೀಚೆಗಿನ ಅವರ 45ನೇ ಕಾದಂಬರಿ `ನಿನ್ನೆ ಇಂದು ನಾಳೆ'(2008)ಯ ವರೆಗೆ ಎಲ್ಲಿಯೂ ಬಿಟ್ಟುಕೊಟ್ಟಿಲ್ಲ. ಕಾದಂಬರಿ ಬರವಣಿಗೆಯಲ್ಲದೆ, ಸಣ್ಣ ಕತೆ, ಕಾವ್ಯ, ಪ್ರಬಂಧ, ನಾಟಕ, ಬಾನುಲಿ ನಾಟಕ, ಪ್ರವಾಸ ಕಥನ, ಮಕ್ಕಳ ಸಾಹಿತ್ಯ, ಅನುವಾದ, ಭಾಷಾ ಶಾಸ್ತ್ರ, ಶಿಕ್ಷಣ ಮುಂತಾದ ವಿವಿಧ ಪ್ರಕಾರಗಳಲ್ಲಿ ಕನ್ನಡದಲ್ಲಿ, ಇಂಗ್ಲಿಷಿನಲ್ಲಿ ಮತ್ತು ತುಳು ಭಾಷೆಯಲ್ಲಿ ಗಟ್ಟಿಯವರ ತೊಂಬತ್ತಕ್ಕೂ ಹೆಚ್ಚು ಕೃತಿಗಳು ಪ್ರಕಟವಾಗಿವೆ.
ಪ್ರೀತಿಯ ದಾಹ ಇಂಗುವಂಥದಲ್ಲ. ಪ್ರೀತಿಯ ಹುಡುಕಾಟ ಮತ್ತು ದೇವರ
ಹುಡುಕಾಟ ಎರಡೂ ಒಂದೇ. `ಪ್ರೀತಿಯೇ ದೇವರು, ದೇವರೇ ಪ್ರೀತಿ’ ಎನ್ನುವ ಕವಿವಾಣಿ ಇದನ್ನೇ ಹೇಳುತ್ತದೆ. ಪಂಚೇಂದ್ರಿಯಗಳಿಗೆ ಏನೋ ಒಂದು ಸಿಕ್ಕಿ, `ಇದು!’ ಎಂದನಿಸಿಬಿಡುತ್ತದೆ. ಮರುಕ್ಷಣವೇ, `ಇದಲ್ಲ’ ಎಂದು ಚಿತ್ತ ಹೇಳುತ್ತದೆ. ಯಾವತ್ತೂ ಸಿಗುವಂಥದಲ್ಲ ಎಂದು ಗೊತ್ತಿದ್ದರೂ ಸಿಗುತ್ತದೆ ಎಂಬ ಹುಡುಕಾಟವೇ ಬದುಕಾಗುತ್ತದೆ. `ಸಿಗುವುದಿಲ್ಲ’ ಎಂದು ಹುಡುಕಾಟವನ್ನು ನಿಲ್ಲಿಸಿಬಿಡುವುದು ಬದುಕಿನ `ಕಾಣುವ’ ಕೊನೆ. ಬದುಕಿನ ನಿಜವಾದ ಕೊನೆಯನ್ನು ಹೇಗೆ ಕಾಣಲು ಸಾಧ್ಯವಿಲ್ಲವೋ ಹಾಗೆಯೇ ಪ್ರೀತಿ ಮತ್ತು ದೇವರು ಎನ್ನುವ ಅಮೂರ್ತವನ್ನು ಸಹ ಕಾಣಲು ಸಾಧ್ಯವಿಲ್ಲ. ಇಂಥ ಹುಡುಕಾಟದ ಹಾದಿಯಲ್ಲಿ ನಡೆಯುತ್ತಲೇ ಇರುವ ಎರಡು ಜೀವಗಳ ಕಥೆ.
ಕಾದಂಬರಿಯಾಗಿಯೂ, ರಂಗ ನಾಟಕವಾಗಿಯೂ ಹೃದಯವಂತರನ್ನು ಆಕರ್ಷಿಸಿದ ಕೃತಿ
ಅಶ್ರುತಗಾನ
Book Details
- Stories 2
- Quizzes 0
- Duration 50 hours
- Language Kannada