ಕರ್ಮಣ್ಯೇವಾಧಿಕಾರಸ್ತೇ – Karmanye Vadikaraste

ಕರ್ಮಣ್ಯೇವಾಧಿಕಾರಸ್ತೇ
(ಕಾದಂಬರಿ)
ಉಪೋದ್ಘಾತ
ಇದು ನಾನು 1973ರಲ್ಲಿ ಇಥಿಯೋಪಿಯದ ನೆಲದಲ್ಲಿ ಕುಳಿತು ಬರೆದ ಮೊದಲ ಕಾದಂಬರಿ. 1973ರಲ್ಲಿ ಬರೆದ ನನ್ನ ಮೊದಲ ಕಾದಂಬರಿ ‘ಶಬ್ದಗಳು’ ‘ಸುಧಾ’ ವಾರಪತ್ರಿಕೆಯ ಧಾರಾವಾಹಿ ಪೂರ್ಣಗೊಂಡ ಬೆನ್ನಲ್ಲೇ (1974ರಲ್ಲಿ) ‘ಕರ್ಮಣ್ಯೇ ವಾಧಿಕಾರಸ್ತೇ’ ‘ಸುಧಾ’ದಲ್ಲಿ
ಧಾರಾವಾಹಿಯಾಗಿ ಪ್ರಕಟವಾಯಿತು. ಆದರೆ ಅದು ಪುಸ್ತಕವಾಗಿ ಹೊರಬಂದುದು 1982ರಲ್ಲಿ, ಇಥಿಯೋಪಿಯಾ ಬಿಟ್ಟು ಬಂದ ಬಳಿಕ. ಅನಂತರ, ಎರಡನೆಯ ಮುದ್ರಣ ಕಂಡದ್ದು 1987ರಲ್ಲಿ.
ಈ ಕಾದಂಬರಿಯ ವಸ್ತು ಒಂದು ಚಲನಚಿತ್ರದಂತೆ ನನ್ನ ಮನದಲ್ಲಿ ಮೂಡಿದ್ದು 1971ರಲ್ಲಿ; ಹೇಗೆ ಎಲ್ಲಿ ಎನ್ನುವುದನ್ನು ಈ ಕಾದಂಬರಿಯ ಆರಂಭದ ಮೂವತ್ತು ಸಾಲುಗಳು ಹೇಳುತ್ತವೆ. ವಾಸ್ತವದಲ್ಲಿ, ಭೌತಿಕವಾಗಿ ಅಲ್ಲಿ ಇರದ ಅಭಯಾನಂದನ ಆತ್ಮದೊಳಹೊಕ್ಕು ಈ ಲೇಖಕ ನಿದ್ರೆ, ಕನಸು ಮತ್ತು ಎಚ್ಚರದಲ್ಲಿ ಇಡೀ ರಾತ್ರಿ ಮಿಸುಕಾಡುತ್ತಿದ್ದ. ಆ ಮಿಸುಕಾಟದಲ್ಲಿ ಹುಟ್ಟಿದ್ದು ಈ ಕಾಂಬರಿಯ ಮೂಲ ವಸ್ತು.
ಈಗ ಮೊದಲ ಮುದ್ರಣದ 30 ವರ್ಷಗಳ ಬಳಿಕ ಒಬ್ಬ ಸಾಹಿತ್ಯಪ್ರಿಯ ಪ್ರಕಾಶಕರ ಪ್ರೀತಿಯಿಂದ ಮೂರನೆಯ ಮುದ್ರಣ ಕಾಣುತ್ತಿದೆ ಸಂತೋಷಪಡದಿರಲು ಸಾಧ್ಯವೆ? ಮರುಮುದ್ರಣವೆನ್ನುವುದು ಯಾವನೇ ಲೇಖಕ ಸ್ವಾಭಾವಿಕವಾಗಿ ಪಡೆಯುವ ಒಂದು ಪ್ರಶಸ್ತಿ, ಮಾತ್ರವಲ್ಲ, ನಿಜವಾದ ಶ್ರೇಷ್ಟ ಪ್ರಶಸ್ತಿ ಎಂದು ನಾನು ಭಾವಿಸುತ್ತೇನೆ. ಆದ್ದರಿಂದ ಒಬ್ಬ ಉತ್ತಮ ಪ್ರಕಾಶಕ ಲೇಖಕನಷ್ಟೇ ಮುಖ್ಯ ಎಂದು ನಾನು ನಂಬುತ್ತೇನೆ. ಆದ್ದರಿಂದ ಇವರಲ್ಲಿ ಯಾರಿಗೆ ಯಾರು ಕೃತಜ್ಞ ಎಂದು ಹೇಳುವುದರಲ್ಲಿ ದೊಡ್ಡ ಅರ್ಥವಿಲ್ಲ. ವಾಸ್ತವದಲ್ಲಿ, ನಿಜವಾದ ಕೃತಜ್ಞತೆ ಲೇಖಕನಿಂದಲೂ ಪ್ರಕಾಶಕನಿಂದಲೂ ಓದುಗನಿಗೆ ಸಲ್ಲಬೇಕು. ಒಂದು ಮಹಾನ್ ಮಾನವ ಚೇತನವನ್ನು ನೆನಪಿಸಿಕೊಂಡು ಈ ಕೃತಜ್ಞತಾಭಾವವನ್ನು ಪ್ರಕಟಿಸುವುದಾದರೆ ಓದುಗರನ್ನೂ ‘ಓದುಗ ದೇವರುಗಳು’ ಎಂದು ಹೇಳಬಹುದು.
ಈ ಕೃತಿಯನ್ನು ಪ್ರಕಟಣೆಗೆ ಎತ್ತಿಕೊಂಡಿರುವ ‘ಅಂಕಿತ’ ಪ್ರಕಾಶನದ ಶ್ರೀ ಪ್ರಕಾಶ ಕಂಬತ್ತಳ್ಳಿಯವರಿಗೆ ನಾನು ಆಭಾರಿಯಾಗಿದ್ದೇನೆ.
* ಕೆ. ಟಿ. ಗಟ್ಟಿ
Book Details
- Stories 3
- Quizzes 0
- Duration 50 hours
- Language Kannada