ಕುಂಜಾಲು ಕಣಿವೆಯ ಕೆಂಪು ಹೊವು – Kunjalu Kaniveya Kempu Deepa

ಒಂದೆರಡು ಮಾತು
೧೯೮೭ರಲ್ಲಿ ಈ ಕೃತಿ ಪ್ರಕಟವಾದಾಗ ನಾವು ಪರಿಸರದ ಬಗ್ಗೆ ಒಂದು ಬಗೆಯ
ಅವಜ್ಞೆಯನ್ನ ಬೆಳೆಸಿಕೊಂಡಿದ್ದೆವು. ಇಂದು ಈ ತಿರಸ್ಕಾರ ಮತ್ತೂ ಹೆಚ್ಚಾಗಿದೆ. ಇಂದು
ಗಣಿಗಾರಿಕೆ, ನಗರ ನಿರ್ಮಾಣ, ಅಣೆಕಟ್ಟುಗಳ ನಿರ್ಮಾಣ, ರಸ್ತೆಗಳ ನಿರ್ಮಾಣ,
ವ್ಯವಸಾಯ, ವಿದ್ಯುತ್ ಮಾರ್ಗಗಳು, ಕಾರ್ಖಾನೆಗಳು ಎಂದೆಲ್ಲ ಪರಿಸರದ ಮೇಲೆ
ಅವ್ಯಾಹತವಾದ ದಬ್ಬಾಳಿಕೆ ನಡೆಯುತ್ತಿದೆ. ನಿರಂತರವಾದ ಈ ಪರಿಸರ ನಾಶ ನಮ್ಮ ಪಾಲಿಗೆ
ಪರಿಸರ ಶಾಪವಾಗಿ ಪರಿಣಮಿಸಿದೆ. ನಾವು ಉಳಿಸಿಕೊಂಡುದಕ್ಕಿಂತ ಕಳೆದುಕೊಂಡಿರುವುದೇ
ಅಧಿಕವಾಗಿದೆ.
ಇಂತಹಾ ಸಂದರ್ಭದಲ್ಲಿ ‘ಕುಂಜಾಲು ಕಣಿವೆಯ ಕೆಂಪುಹೂವು’ ಎರಡನೇ
ಮುದ್ರಣದ ಮೂಲಕ ಹೊರಬರುತ್ತಿರುವುದು ಸಾಂಕೇತಿಕವಾಗಿದೆ.
ತಂದೆಯಾದವನು ಕಂಡ ಬದುಕನ್ನ ಮಗ ನೋಡಲು ಹೊರಟಾಗ ಅವನಿಗೆ
ನಿರಾಶೆಯಾಗುತ್ತದೆ. ತನ್ನ ಸುತ್ತ ಒಂದು ವಿಷಾದದ ಛಾಯೆಯೇ ಕವಿದಿರುವುದನ್ನ ಆತ
ಕಾಣುತ್ತಾನೆ. ನಮ್ಮೆಲ್ಲರ ಕತೆಯೂ ಇದೇ ಆಗಿದೆ ಅನ್ನುವುದು ಈ ಕಾದಂಬರಿಯ ಆಶಯ
ಕೂಡ. ‘ತರಂಗ’ ಪತ್ರಿಕೆಯ ವಿಶೇಷಾಂಕದಲ್ಲಿ ಈ ಕಾದಂಬರಿ ಪ್ರಕಟವಾದಾಗ ಓದಿ
ಮೆಚ್ಚಿಕೊಂದವರು ಇಂದಿಗೂ ಇದನ್ನ ಮರೆತಿಲ್ಲ. ಆದರೆ ನಾವು ನಮ್ಮ ಪರಿಸರವನ್ನ ಮಾತ್ರ
ಉಳಿಸಿಕೊಂಡು ಬಂದಿಲ್ಲ ಅನ್ನುವುದು ಒಂದು ದುರಂತವೇ ಸರಿ ಅನಿಸುತ್ತದೆ ನನಗೆ
ಈ ಕಾದಂಬರಿ ತೆಲುಗು ಭಾಷೆಗೆ ‘ಕೆಂಜಿಯ ಕುಸುಮಂ’ ಅನ್ನುವ ಹೆಸರಿನಲ್ಲಿ ಶ್ರೀಮತಿ
ಉಮಾ ದೇವಿಯವರಿಂದ ಅನುವಾದಗೊಂಡಿದೆ. ಮಿತ್ರರು ಇದರ ನಾಟಕ ರೂಪವನ್ನ
ರವೀಂದ್ರ ಕಲಾಕ್ಷೇತ್ರದಲ್ಲಿ ಅಭಿನಯಿಸಿರುತ್ತಾರೆ. ಅಲ್ಲದೆ ಭದ್ರಾವತಿ ಆಕಾಶವಾಣಿಯ
ಮೂಲಕ ಇದರ ರೇಡಿಯೋ ನಾಟಕ ರೂಪ ಕೂಡ ಪ್ರಸಾರವಾಗಿರುತ್ತದೆ.
ಇದೀಗ ರವೀಂದ್ರ ಪುಸ್ತಕಾಲಯದ ಮಿತ್ರರು ಇದರ ಎರಡನೆಯ ಮುದ್ರಣಕ್ಕೆ
ಮುಂದಾಗಿದ್ದಾರೆ. ಅವರಿಗೆ, ಸುಂದರವಾಗಿ ಮುದ್ರಿಸಿದ ಲಕ್ಷೀ ಮುದ್ರಣಾಲಯದವರಿಗೆ,
ಅರ್ಥಪೂರ್ಣವಾದ ಮುಖಚಿತ್ರ ರಚಿಸಿದ ಕಲಾವಿದ ಚಂದ್ರನಾಥ ಆಚಾರ್ಯ ಅವರಿಗೆ
ನಾನು ಕೃತಜ್ಞ.
ನೆಹರು ನಗರ ಡಾ. ನಾ. ಡಿಸೋಜ
Book Details
- Stories 8
- Quizzes 0
- Duration 50 hours
- Language Kannada