ಮಾದಪ್ಪನ ಸಾವು – Madappana Saavu

ಕತೆಗಾರನ ಮಾತು
ಎದೆಯಲ್ಲಿ ಅಚ್ಚು ಮೂಡುವ, ಕಾಡುವ ಅನುಭವದ ಪ್ರಾಮಾಣಿಕ ತಿರುಳುಗಳನ್ನ ಒಂದು ಆಶಯದ ಮೂಲಕ ಹೇಳಿಕೊಳ್ಳಲು, ಅವುಗಳ ಹಲವು ಮಗ್ಗಲು, ಬಣ್ಣ, ರೂಪಗಳನ್ನು ತೆರೆದಿಟ್ಟು ನೋಡಲು ಆಪ್ತವಾಗುವ ಕಥೆ-ಕಥಾಲೋಕ ನನ್ನ ಬರೆಣಿಗೆಗೆ ಸೆಳೆದು ಕೊಂಡಿವೆ… ಬರೆದಷ್ಟೂ ಇನ್ನೂ ಬರೆಯಬೇಕೆಂಬ ಬರೆವಣಿಗೆಯ ಹಸಿವು ನನ್ನ ಬೆನ್ನು ಬಿದ್ದಿವೆ…
ಕತೆಗಳ ಹೆಗಲಮೇಲೆ ಕೈ ಹಾಕಿ ಒಂದೊಂದೇ ಹೆಜ್ಜೆ ಹಾಕುವ ದಿನಗಳಲ್ಲಿ ಮೂಡಿದ ಹೆಜ್ಜೆಗಳು ಹಲವಾರು… ಮಸುಕಾಗಿದ್ದರೂ, ಎಡವು-ತೊಡರುಗಳು ಕಂಡರೂ… ಈತನಕ ಕ್ರಮಿಸಿರುವೆನಲ್ಲ ಎಂಬ ತೃಪ್ತಿಯನ್ನ ಕಥಾಲೋಕ ನನಗೆ ತಂದಿದೆ.
ಅದೇ ಕಾರಣಕ್ಕೆ, ಆರಂಭದಲ್ಲಿ ಹಾಗೂ ಆ ದಿನಗಳ ನಂತರದಲ್ಲಿ ಬರೆದ ಕೆಲವು ಕತೆಗಳು ಬೆಳಕು ಕಾಣದೆ ಉಳಿಯದಿರಲೆಂದು, ಅವುಗಳಲ್ಲೊಂದಿಷ್ಟನ್ನ ಸಂಕಲಿಸಿ- ತಿದ್ದಿ-ತೀಡಿ ಪುಸ್ತಕ ರೂಪದಲ್ಲಿ ನಿಮ್ಮ ಮುಂದಿಡುತ್ತಿದ್ದೇನೆ.
ಇಲ್ಲಿಯ ಕತೆಗಳು ನನ್ನ ಮುಂದಿನ ಮಾರ್ಗಕ್ಕೆ ಒಂದು ಹಿನ್ನೆಲೆಯನ್ನೋ… ತಳಹದಿಯನ್ನೋ ನೀಡಿರಬಹುದೆಂಬ ನಂಬಿಕೆ ಮನದಲ್ಲೆಲ್ಲೋ ಒಂದಿಷ್ಟು ಉಳಿದಿರುವಿದರಿಂದ ಅವುಗಳ ಮೇಲಿನ ಪ್ರೀತಿ ಅವುಗಳನ್ನ ಪ್ರಕಟಿಸುವಂತೆ ಮಾಡಿದೆ… ಆದರದಿಂದ ಸ್ವೀಕರಿಸುತ್ತೀರೆಂಬ ವಿಶ್ವಾಸವೂ ಇದೆ.
ಕುಮಾರ ಬೇಂದ್ರೆ
Book Details
- Stories 10
- Quizzes 0
- Duration 50 hours
- Language English
3 Comments