ಯದುವಿಜಯ

‘ಯದುವಿಜಯ’ಕ್ಕೆ ಪ್ರಸ್ತಾವನೆ
ಕರ್ನಾಟಕದ ರಾಜಕೀಯ ಮತ್ತು ಸಾಂಸ್ಕೃತಿಕ ಇತಿಹಾಸವು ಇಂದಿಗೆ ಸುಮಾರು
1560 ವರ್ಷಗಳಷ್ಟು ಹಿಂದಿನದು. ಕದಂಬ ಮಯೂರ ವರ್ಮನನ್ನು ಕನ್ನಡ
ರಾಜವಂಶದ ಮೊದಲ ದೊರೆಯೆಂದು ನಾವು ಗುರ್ತಿಸುತ್ತೇವೆ. ಕದಂಬರ ಜೊತೆ
ಜೊತೆಗೆ ಗಂಗರು, ಆನಂತರದಲ್ಲಿ ಚಾಲುಕ್ಯರು, ರಾಷ್ಟ್ರಕೂಟರು, ದೇವಗಿರಿಯ
ಯಾದವರು, ಹೊಯ್ಸಳ ಬಲ್ಲಾಳರು, ಕಲ್ಯಾಣ ಚಾಲುಕ್ಯರು, ಕಳಚೂರಿಗಳು,
ವಿಜಯನಗರದ ಸಂಗಮ, ಸಾಳ್ವ, ತುಳುವ ಮತ್ತು ಅರವೀಡು ವಂಶಗಳ ಅರಸರು
ಆದಿಲ್ ಶಾಹಿ-ಬಹಮನಿ ಸುಲ್ತಾನರು, ಮೈಸೂರಿನ ಒಡೆಯರು, ಹೈದರಾಲಿ ಟಿಪ್ಪು
ಸುಲ್ತಾನರು – ಹೀಗೆ ಅನೇಕರು ಈ ನಾಡನ್ನು ಸಮಗ್ರವಾಗಿ ಇಲ್ಲವೇ ಭಾಗಶಃ
ಆಳಿದ್ದಾರೆ. ಕರ್ನಾಟಕದ ದಕ್ಷಿಣಭಾಗವೆನಿಸಿದ ಮೈಸೂರನ್ನು ಆಳಿದ ಒಡೆಯರುಈ
ನಾಡಿಗೆ ನೀಡಿದ ಕೊಡುಗೆ ಅಪಾರವಾದದು. ಈ ವಂಶಾವಳಿಯು ಯದುರಾಯ
ಮತ್ತು ಕೃಷ್ಣರಾಯ ಎಂಬ ಯದುಕುಲ ಸೋದರರಿಂದ ಆರಂಭವಾಯಿತೆಂಬುದು
ಎಲ್ಲರಿಗೂ ತಿಳಿದಸಂಗತಿಯೇ ಆಗಿದೆ.
ಯದುರಾಯನ ಮೂಲ ಹೆಸರು ‘ವಿಜಯ’ ಆತನ ಕಿರಿಯ ಸೋದರ ಕೃಷ್ಣರಾಯ
ಈ ಇಬ್ಬರೂ ಆಗಷ್ಟೇ ಪತನ ಹೊಂದಿದ್ದ ಹೊಯ್ಸಳ ರಾಜ್ಯದಿಂದ ಬಂದರೆಂದು
ಊಹಿಸಲಾಗಿದೆ. ಆ ಬಗ್ಗೆ ಹೆಚ್ಚಿನ ವಿವರಗಳು ತಿಳಿದು ಬಂದಿಲ್ಲ. ಕ್ರಿ.ಶ. 1399ರ
ವೇಳೆಗೆ ಈ ಸೋದರರು ಮಹೀಸೂರಿಗೆ ಬರುತ್ತಾರೆ. ಆಗ ನವರಾತ್ರಿ ಸಮಯ. ಆ
ವೇಳೆಗಾಗಲೇ ಮಹೀಸೂರು ನಾಡಿನ ಆಡಳಿತಗಾರ ( ಪ್ರಭು)
ತೀರಿಕೊಂಡಿರುತ್ತಾನೆ. ಆತನಿಗೆ ಮಕ್ಕಳಿರುವುದಿಲ್ಲ. ಆ ಪ್ರಭುವಿನ ಸೋದರಿಯಾದ
ದೊಡ್ಡ ದೇವಾಂಬೆಯನ್ನು ಹದಿನಾಡಿನ ಪ್ರಭುವಾಗಿದ್ದ ಚಾಮರಾಜನಿಗೆ ಕೊಟ್ಟು
ವಿವಾಹವಾಗಿರುತ್ತದೆ. ಅವರ ಪುತ್ರಿ ಚಿಕ್ಕ ದೇವಾಂಬೆ ಮದುವೆ ವಯಸ್ಸಿಗೆ
ಬಂದಿರುತ್ತಾಳೆ. ಆ ಸಮಯದಲ್ಲಿ ಚಾಮರಾಜ ಕಾಯಿಲೆಯಿಂದ
ತೀರಿಕೊಳ್ಳುತ್ತಾನೆ. ಕಾರುಗಳ್ಳಿಯ ಮಾರನಾಯಕನೆಂಬ ಪಾಳೆಯಗಾರ
ಪರಿಸ್ಥಿತಿಯ ಲಾಭ ಪಡೆದು ಮಹೀಸೂರು ಮತ್ತು ಹದಿನಾಡು – ಎರಡನ್ನು
ವಶಪಡಿಸಿಕೊಂಡು ರಾಜನಾಗಲು ಸಂಚು ನಡೆಸುತ್ತಾನೆ. ತನಗೆ
ರಾಜಕುಮಾರಿಯನ್ನು ಮದುವೆಮಾಡಿಕೊಡಬೇಕೆಂದು ದೊಡ್ಡ ದೇವಾಂಬೆಯನ್ನು
ಒತ್ತಾಯಿಸುತ್ತಿರುತ್ತಾನೆ. ಅವನು ಹೀನ ಕುಲದವನೆಂದೂ, ಸ್ವಭಾವದಿಂದ
ದುಷ್ಟನೆಂದೂ ತಿಳಿದ ದೇವಾಂಬೆ ಅದಕ್ಕೊಪ್ಪುವುದಿಲ್ಲ. ಮಗಳು ಚಿಕ್ಕ
ದೇವಾಂಬೆಗೂ ಮಾರನಾಯಕರನ್ನು ಕಂಡರಾಗದು. ದುಷ್ಟನನ್ನು ಎದುರು
ಹಾಕಿಕೊಳ್ಳಲು ಧೈರ್ಯ ಸಾಲದ ದೇವಾಂಬೆ ನವರಾತ್ರಿಯ ನೆಪ ಮಾಡಿಕೊಂಡು
ತೌರೂರಾದ ಮಹೀಸೂರಿಗೆ ಮಗಳೊಂದಿಗೆ ಬರುತ್ತಾಳೆ. ಜಂಗಮ ಒಡೆಯರು
ಹೊಯ್ಸಳ ನಾಡಿನಿಂದ ಬಂದಿದ್ದಯದು ಸೋದರರ ಪರಿಚಯ ಮಾಡಿಕೊಂಡು,
ರಾಣೀವಾಸದ ಸಂಕಷ್ಟವನ್ನೆಲ್ಲ ಹೇಳಿಕೊಳ್ಳುತ್ತಾರೆ. ಆ ನಂತರ ಜಂಗಮ
ಒಡೆಯರೊಂದಿಗೆ ತೆರಳಿದ ಯದು ಸೋದರರು ದೊಡ್ಡ ದೇವಾಂಬೆಯನ್ನು
ಭೇಟಿಯಾಗಿ ಮಾರನಾಯಕನನ್ನು ಮುಗಿಸಲು ಯೋಜನೆ ಹಾಕಿಕೊಳ್ಳುತ್ತಾರೆ.
ಅದರಂತೆ ದೇವಾಂಬೆ ತಮ್ಮ ಕುಮಾರಿಯನ್ನು ಕೊಟ್ಟು ವಿವಾಹ
ನಡೆಸಿಕೊಡುವುದಾಗಿ ಮಾರನಾಯಕನಿಗೆ ತಿಳಿಸಿ ವಿಜಯದಶಮಿ ದಿನವೇ
ಮುಹೂರ್ತ ಗೊತ್ತು ಮಾಡುತ್ತಾರೆ. ಸಂತಸಗೊಂಡ ಮಾರನಾಯಕ
ಸೈನ್ಯದೊಂದಿಗೆ ಬರುವುದಿಲ್ಲ. ಬದಲಾಗಿ ಮದುವೆ ದಿಬ್ಪಣದಲ್ಲಿ ವರನಾಗಿ
ಬರುತ್ತಾನೆ. ಸಮಯ ನೋಡಿ ವಿಜಯ(ಯದುರಾಯ) ಮಾರನಾಯಕನೊಡನೆ
ಕತ್ತಿ ಕಾಳಗಕ್ಕಿಳಿಯುತ್ತಾನೆ. ಪ್ರಬಲ ಹೋರಾಟದಲ್ಲಿ ಮಾರನಾಯಕ ಸಾಯುತ್ತಾನೆ.
ಯದುರಾಯನು ಮೂರು ನಾಡುಗಳ ಅರಸನಾಗಿ ಪಟ್ಟಾಭಿಷಿಕ್ತನಾಗುತ್ತಾನೆ.
ಹಾಗೆಯೇ ಚಿಕ್ಕ ದೇವಾಂಬೆಯನ್ನು ವರಿಸುತ್ತಾನೆ. ಕೃಷ್ಣರಾಯ ದೊಡ್ಡ
ದೇವಾಂಬೆಯ ತಂಗಿಯ ಮಗಳಾದ ಕೆಂಪಾಂಬೆಯ ಕೈ ಹಿಡಿಯುತ್ತಾನೆ. ಇದು
ಮೂಲ ಇತಿಹಾಸದ ಕಥಾವಸ್ತು ಈ ಕಥೆಯನ್ನು ಕುರಿತಂತೆ ಶ್ರೀ ಎಂ. ರಾಮಸ್ವಾಮಿ
ಎಂಬುವರು ‘ಯದುರಾಯ ವಿಜಯಂ’ ಎಂಬ ಹೆಸರಿನ ನಾಟಕವನ್ನು
ಬರೆದಿದ್ದಾರೆಂದು, ಸಂಸರ ‘ವಿಗಡ ವಿಕ್ರಮರಾಯ’ ನಾಟಕ ಕೃತಿಗೆ ಮುನ್ನುಡಿ
ಬರೆದಿರುವ ಡಾII ಜಿ.ಪಿ. ರಾಜರತ್ನಂ ತಿಳಿಸುತ್ತಾರೆ. ಆ ನಾಟಕವನ್ನು ನಾನು ಓದಿಲ್ಲ
ಹಾಗೂ ರಂಗದ ಮೇಲೆ ಅಭಿನಯಿಸಿದ್ದನ್ನೂ ಕಂಡಿಲ್ಲ.
ನಾನು ಕನ್ನಡ ಎಂ. ಎ ಪರೀಕ್ಷೆಗಾಗಿ ವ್ಯಾಸಂಗ ಮಾಡುತ್ತಿದ್ದಾಗ, ಎರಡನೇ
ವರ್ಷದಲ್ಲಿ ವಿಶೇಷ ಕವಿಯಾಗಿ ಮಾಸ್ತಿಯವರ ಜೀವನ ಮತ್ತು ಸಾಹಿತ್ಯವನ್ನು
ಅಭ್ಯಾಸ ಮಾಡಿದ್ದೆ. ಸಣ್ಣ ಕತೆಗಳ ಆದ್ಯ ಪ್ರವರ್ತಕರೆಂದೇ ಗುರ್ತಿಸಲಾಗುವ
ಮಾಸ್ತಿಯವರು ಕಾವ್ಯ, ನಾಟಕ, ಕಾದಂಬರಿ, ವಿಮರ್ಶೆ, ಆತ್ಮಕಥೆ, ಜೀವನ ಚರಿತ್ರೆ
ಹೀಗೆ ಸಾಹಿತ್ಯದ ಬಹುತೇಕ ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ. ಅದರಲ್ಲೂ ಕಥನ
ಕವನಗಳೆಂಬುದು ಅವರ ವಿಶಿಷ್ಠ ಬಗೆಯ ಸಾಹಿತ್ಯ ಪ್ರಕಾರ. ಆ ಪೈಕಿ ನವರಾತ್ರಿ
ಭಾಗ-2ರ ಮೊದಲ ಕವನವೇ ‘ಯದುವಿಜಯ’. ಶ್ರೀ ಎಂ. ರಾಮಸ್ವಾಮಿ ಅವರ
‘ ಯದುರಾಯ ವಿಜಯಂ’ ನಲ್ಲಿರುವಂತೆ ಮಾರನಾಯಕನ ಹತ್ಯೆಯ
ಸಂಚಿನಿಂದಾಯಿತು ಎಂಬುದನ್ನು ಮಾಸ್ತಿಯವರು ಒಪ್ಪುವುದಿಲ್ಲ. ಹಲವು ನೂರು
ವರ್ಷಗಳ ಕಾಲ ಈ ನಾಡನ್ನಾಳಿದ ಘನ ಸಂಸ್ಕೃತಿಯ ಅರಸು ಮನೆತನದ
ಸ್ಥಾಪನೆಯು ವೀರ ರಸಭರಿತವಾಗಿಯೇ ಇದ್ದಿರಬೇಕು ಎಂಬುದು ಅವರ
ಅಭಿಮಾನ ಪ್ರಜ್ಞೆ. ಅದರಂತೆಯೇ ನವರಾತ್ರಿಯ ‘ಯದುವಿಜಯ’ ಸ್ವಲ್ಪ
ಮಾರ್ಪಾಟು ಹೊಂದಿದೆ. ಇದನ್ನು ಕೆಲವರು ಒಪ್ಪುವುದಿಲ್ಲ. ಆ ಬಗ್ಗೆ
ಮಾಸ್ತಿಯವರಿಗೆ ಅಸಮಾಧಾನವೂ ಇಲ್ಲ. ಏಕೆಂದರೆ ಚರಿತ್ರೆ ಎಂಬುದೇ ಅರ್ಧಸತ್ಯ
ಎಂಬುದಾಗಿ ಖ್ಯಾತ ಇತಿಹಾಸಜ್ಞರೇ ಅಭಿಪ್ರಾಯ ಪಡುತ್ತಾರೆ. ನಾನಂತೂ
ಮಾಸ್ತಿಯವರ ಯದುವಿಜಯವನ್ನು ಮೆಚ್ಚಿಕೊಂಡವನು. ಅದರಿಂದಾಗಿ ಈ
ಕಥನವನ್ನೇ ನಾಟಕವಾಗಿ ರೂಪಾಂತರಿಸಲು ಪ್ರಯತ್ನಿಸಿದ್ದೇನೆ.
‘ಯದುವಿಜಯ’ದಲ್ಲಿ ಬರುವ ಮುಖ್ಯ ಪಾತ್ರಗಳು – ಯದು ಸೋದರರು,
ಮಾರನಾಯಕ, ದೊಡ್ಡ ದೇವಾಂಬೆ, ಚಿಕ್ಕ ದೇವಾಂಬೆ, ಸುಗ್ಗಯ್ಯ ಶೆಟ್ಟಿ ಮತ್ತು
ಜಂಗಮ ಒಡೆಯರು – ಇಷ್ಟೇ . ಉಳಿದಂತೆ ಮಾತಿಲ್ಲದ ಸುವಾಸಿನಿಯರು,
ಸೈನಿಕರು, ಜೋಯಿಸರು ಇತ್ಯಾದಿ. ದೊಡ್ಡದೇವಾಂಬೆ ಮತ್ತು ಆಕೆಯ ಮಗಳು
ಚಿಕ್ಕ ದೇವಾಂಬೆ- ಎಂಬ ಎರಡು ಹೆಸರು ಸ್ವಲ್ಪಗೊಂದಲ ಮೂಡಿಸಬಹುದೆಂಬ
ಆಲೋಚನೆಯಿಂದ ‘ದೊಡ್ಡ ದೇವಾಂಬೆಯನ್ನು ದೇವಾಂಬೆ’ ಯೆಂದೂ, ‘ಚಿಕ್ಕ
ದೇವಾಂಬೆಯನ್ನು ಚಿನ್ನಾಂಬೆ ‘ಯೆಂದೂ ಸಂಕ್ಷಿಪ್ತಗೊಳಿಸಿದ್ದೇನೆ. ಹಾಗೆಯೇ
‘ಕೆಂಪಾಂಬೆಯಮ್ಮಣ್ಣಿಯೆಂಬುದನ್ನು ಕೆಂಪಾಂಬೆ’ಯೆಂಬುದಾಗಿ ಬದಲಿಸಿದ್ದೇನೆ.
ಇವು ಮೂಲಸ್ವರೂಪಕ್ಕಿಂತ ಹೆಚ್ಚುಭಿನ್ನವಾಗಿಲ್ಲ. ನಾಟಕದ ಗಂಭೀರತೆಯ ನಡುವೆ
ಒಂದಿಷ್ಟುರಂಜನೀಯವಾಗಿಯೂ ಇರಲೆಂಬ ದೃಷ್ಟಿಯಿಂದ ‘ಭಟ್ಟಿ’ ಎಂಬ ಹೊಸ
ಪಾತ್ರವೊಂದನ್ನುತಂದಿದ್ದೇನೆ. ಈತನು ಮಾರನಾಯಕನ ಆಪ್ತ ಸಲಹೆಗಾರ. ಇಷ್ಟು
ವಿಸ್ತತಗೊಂಡಿದ್ದರೂ ಸಹ, ಇದನ್ನುಐತಿಹಾಸಿಕ ನಾಟಕವೆಂದು ಭಾವಿಸುವುದರಲ್ಲಿ
ತಪ್ಪೇನೂ ಇಲ್ಲವೆಂದು ನಾನು ನಂಬುತ್ತೇನೆ. ಇತಿಹಾಸ ಮತ್ತು ಕಲ್ಪನೆ ಎರಡರ
ಸಂಯೋಗ ಹೊಂದಿದ ಮೂಲಕತೆಯೊಂದನ್ನುಸಾಹಿತ್ಯಾಸ್ತಕರಿಗೆ ನೀಡಿದ ಮಾಸ್ತಿ
ಅಭಿನಂದನಾರ್ಹರು.
ನನ್ನ ಅನಿಸಿಕೆ – ಅಂದಾಜಿನಂತೆ ನಾಟಕದ ಅವಧಿ ತೊಂಭತ್ತು ನಿಮಿಷಗಳು,
ನಾಡದೇವಿಯ ಸ್ತುತಿಗೀತೆಯಾದ ‘ರಕ್ಷಿಸು ಕರ್ನಾಟಕ ದೇವಿ’… ಎಂಬುದು
ಶಾಂತಕವಿ (ಸಕ್ರಿ ಬಾಳಾಚಾರ್ಯ) ಅವರಿಂದ ವಿರಚಿತವಾಗಿ ಸಂಗೀತ
ವಲಯದಲ್ಲೂಈಗಾಗಲೇ ಪ್ರಸಿದ್ಧವಾಗಿರುವುದು. ನಾಟಕದ ರಚನೆಯಲ್ಲಿಇದು
ನನ್ನ ಮೊದಲ ಪ್ರಯತ್ನವಾದ್ದರಿಂದ ಸಣ್ಣ ಪುಟ್ಟ ದೋಷಗಳು ಇರುವುದನ್ನು
ಗುರ್ತಿಸಿದಲ್ಲಿ, ಪತೃದಯರು ನಾಡು- ನುಡಿಯ ಅಭಿವೂಪದಿಂದ
ಮನ್ನಿಸುತ್ತಾರೆಂಬ ನಂಬಿಕೆ ನನ್ನದು. ನಾಟಕವೊಂದನ್ನು ರಚಿಸಬೇಕೆಂಬ ತುಡಿತ
ನನ್ನಲ್ಲಿ ಬಹು ವರ್ಷಗಳಿಂದ ಮನೆ ವೂಡಿತ್ತಾದರೂ, ಕೈಗೂಡಲು
ಸಾಧ್ಯವಾಗಿರಲಿಲ್ಲ. ಎಚ್.ಎ.ಎಲ್ ಕಾರ್ಖಾನೆಯ ಮಿತ್ರರಾದಜಿ.ಪಿ. ರಾಮಣ್ವ
ಎ.ಎಸ್. ಪ್ರಕಾರ್, ರಾಜು ಹಾಸನ್, ರಕ್ಷಿತ್ ಮೋಹನ್ ಮುಂತಾದವರು
ಆಗಿಂದಾಗ್ಗೆ ಈ ಬಗ್ಗೆ ಪ್ರಶ್ನಿಸುತ್ತಾ ಬಂದಿದ್ದರು. ಇದು ಹಸ್ತಪ್ರತಿಯ
ರೂಪದಲ್ಲಿರುವಾಗಲೇ ರಂಗದ ಮೇಲೆ ತರುವ, ಇಲ್ಲವೇ ರೇಡಿಯೋ
ನಾಟಕವಾಗಿ ಬಿತ್ತರಿಸುವ ಆಸ್ತಕಿ ಹೊಂದಿರುವ ಅವರಿಗೆ ನಾನು ವಿಶೇಷ
ಆಭಾರಿಯಾಗಿದ್ದೇನೆ.
ಕೆ. ಎನ್. ಭಗವಾನ್
Book Details
- Stories 1
- Quizzes 0
- Duration 50 hours
- Language English